ಪ್ರಧಾನ ಮಂತ್ರಿಯವರ ಕಛೇರಿ
ಪಶ್ಚಿಮ ಬಂಗಾಳ ದಿನಕ್ಕೆ ಶುಭಾಶಯ ಕೋರಿದ ಪ್ರಧಾನಮಂತ್ರಿ, ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಅವರ ಕೊಡುಗೆಯ ಸ್ಮರಣೆ
प्रविष्टि तिथि:
20 JUN 2026 8:30AM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪಶ್ಚಿಮ ಬಂಗಾಳ ದಿನದ ಅಂಗವಾಗಿ ಪಶ್ಚಿಮ ಬಂಗಾಳದ ಜನರಿಗೆ ಆತ್ಮೀಯ ಶುಭಾಶಯಗಳನ್ನು ತಿಳಿಸಿದ್ದಾರೆ.
ಸಾಹಿತ್ಯ. ಸಂಗೀತ, ಕಲೆ, ಆಧ್ಯಾತ್ಮಿಕತೆ, ವಿಜ್ಞಾನ, ವ್ಯಾಪಾರ ಮತ್ತು ವಾಣಿಜ್ಯ, ಸಾಮಾಜಿಕ ಸುಧಾರಣೆ ಮತ್ತು ಇತರ ವಲಯಗಳಿಗೆ ನೀಡಿದ ಕೊಡುಗೆಗಳ ಮೂಲಕ ಭಾರತದ ಇತಿಹಾಸವನ್ನು ಗಾಢವಾಗಿ ರೂಪಿಸಿದ ರಾಜ್ಯವನ್ನು ಈ ದಿನ ಆಚರಿಸುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು. ಪಶ್ಚಿಮ ಬಂಗಾಳವು ಭಾರತದ ರಾಷ್ಟ್ರೀಯ ಪ್ರಜ್ಞೆಯನ್ನು ಲೆಕ್ಕವಿಲ್ಲದಷ್ಟು ರೀತಿಯಲ್ಲಿ ಶ್ರೀಮಂತಗೊಳಿಸಿದೆ ಎಂದು ಅವರು ಉಲ್ಲೇಖಿಸಿದರು.
ಜೂನ್ 20 ರಂದು ಪಶ್ಚಿಮ ಬಂಗಾಳವು ಭಾರತದ ಅವಿಭಾಜ್ಯ ಅಂಗವಾಗಿ ಉಳಿಯುವಂತೆ ಮಾಡಿದ ದಿನವಾಗಿರುವುದರಿಂದ ಅದು ಪಶ್ಚಿಮ ಬಂಗಾಳದ ಇತಿಹಾಸದಲ್ಲಿ ಅತ್ಯಂತ ಮಹತ್ವದ್ದಾಗಿದೆ ಎಂದು ಶ್ರೀ ನರೇಂದ್ರ ಮೋದಿ ಹೇಳಿದರು. ಆ ನಿಟ್ಟಿನಲ್ಲಿ ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಅವರ ಪಾತ್ರ ಅಮೂಲ್ಯವಾದುದು ಎಂದು ಹೇಳಿದರು ಮತ್ತು 2026ರಲ್ಲಿ ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಅವರ 125ನೇ ಜಯಂತಿ ಆಚರಿಸಲಾಗುತ್ತಿದೆ ಎಂದು ಪ್ರಧಾನಮಂತ್ರಿ ತಿಳಿಸಿದರು.
ಜನರ ಕನಸುಗಳು ಮತ್ತು ಆಶೋತ್ತರಗಳನ್ನು ಈಡೇರಿಸಲು ಕೇಂದ್ರ ಸರ್ಕಾರವು ಪಶ್ಚಿಮ ಬಂಗಾಳ ಸರ್ಕಾರದ ಜತೆ ಸೇರಿ ಕಾರ್ಯನಿರ್ವಹಿಸಲಿದೆ ಎಂದು ಪ್ರಧಾನಮಂತ್ರಿ ಹೇಳಿದರು.
ಪಶ್ಚಿಮ ಬಂಗಾಳದ ಪ್ರಗತಿ ಮತ್ತು ಅದರ ಜನರ ಸಮೃದ್ಧಿಗಾಗಿ ಶ್ರೀ ನರೇಂದ್ರ ಮೋದಿ ಪ್ರಾರ್ಥಿಸಿದರು.
ಪ್ರಧಾನಮಂತ್ರಿ ತಮ್ಮ ಸಾಮಾಜಿಕ ಜಾಲತಾಣ Xಪೋಸ್ಟ್ ನಲ್ಲಿ ಹೀಗೆ ಬರೆದಿದ್ದಾರೆ;
“ಪಶ್ಚಿಮ ಬಂಗಾಳದ ನನ್ನ ಸಹೋದರ ಸಹೋದರಿಯರಿಗೆ ಪಶ್ಚಿಮ ಬಂಗಾಳ ದಿನದ ಶುಭಾಶಯಗಳು.
ಸಾಹಿತ್ಯ. ಸಂಗೀತ, ಕಲೆ, ಆಧ್ಯಾತ್ಮಿಕತೆ, ವಿಜ್ಞಾನ, ವ್ಯಾಪಾರ ಮತ್ತು ವಾಣಿಜ್ಯ, ಸಾಮಾಜಿಕ ಸುಧಾರಣೆ ಮತ್ತು ಇತರ ವಲಯಗಳಿಗೆ ನೀಡಿದ ಕೊಡುಗೆಗಳ ಮೂಲಕ ಭಾರತದ ಇತಿಹಾಸವನ್ನು ಗಾಢವಾಗಿ ರೂಪಿಸಿದ ರಾಜ್ಯವನ್ನು ಈ ದಿನ ಆಚರಿಸುತ್ತದೆ. ಪದೇ ಪದೇ ಪಶ್ಚಿಮ ಬಂಗಾಳವು ಭಾರತದ ರಾಷ್ಟ್ರೀಯ ಪ್ರಜ್ಞೆಯನ್ನು ಲೆಕ್ಕವಿಲ್ಲದಷ್ಟು ರೀತಿಯಲ್ಲಿ ಶ್ರೀಮಂತಗೊಳಿಸಿದೆ ಎಂದರು.
ಇಂದು ಜೂನ್ 20 ಪಶ್ಚಿಮ ಬಂಗಾಳದ ಇತಿಹಾಸದಲ್ಲಿ ಅತ್ಯಂತ ಮಹತ್ವದ್ದಾಗಿದೆ. ಪಶ್ಚಿಮ ಬಂಗಾಳವು ಭಾರತದ ಅವಿಭಾಜ್ಯ ಅಂಗವಾಗಿ ಉಳಿಯುವುದನ್ನು ಖಾತ್ರಿಪಡಿಸಿದ ದಿನ ಇದು. ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಅವರ ಪಾತ್ರವು ಇದರಲ್ಲಿ ಅಮೂಲ್ಯವಾದುದು. ಈ ವರ್ಷ 2026ರಲ್ಲಿ, ನಾವು ಡಾ. ಮುಖರ್ಜಿ ಅವರ 125ನೇ ಜಯಂತಿಯನ್ನು ಸಹ ಆಚರಿಸುತ್ತಿದ್ದೇವೆ.
ಜನರ ಕನಸುಗಳು ಮತ್ತು ಆಕಾಂಕ್ಷೆಗಳನ್ನು ಈಡೇರಿಸಲು ಕೇಂದ್ರ ಸರ್ಕಾರವು ಪಶ್ಚಿಮ ಬಂಗಾಳ ಸರ್ಕಾರದೊಂದಿಗೆ ಸೇರಿ ಕಾರ್ಯನಿರ್ವಹಿಸುತ್ತದೆ. ಪಶ್ಚಿಮ ಬಂಗಾಳದ ಪ್ರಗತಿ ಮತ್ತು ಅದರ ಜನರ ಸಮೃದ್ಧಿಗಾಗಿ ನಾನು ಪ್ರಾರ್ಥಿಸುತ್ತೇನೆ.’’
*****
(रिलीज़ आईडी: 2275601)
आगंतुक पटल : 4