ಗ್ರಾಮೀಣಾಭಿವೃದ್ಧಿ ಸಚಿವಾಲಯ
azadi ka amrit mahotsav

ವಿಜಿ-ಜಿರಾಮ್ ಜಿ ಜಾರಿಯನ್ನು ಬೆಂಬಲಿಸಲು 100ಕ್ಕೂ ಅಧಿಕ ಕ್ಷೇತ್ರಾಧಿಕಾರಿಗಳ ನಿಯೋಜನೆ


ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸಹಾಯ ಮಾಡಲು, ಸಾಮರ್ಥ್ಯವೃದ್ಧಿಸಲು, ಸುಗಮ ಕಾರ್ಯಾಚರಣೆಗೆ ನೆರವಾಗಲಿರುವ ಅಧಿಕಾರಿಗಳು

ವಿಜಿ-ಜಿರಾಮ್ ಜಿ ಅನುಷ್ಠಾನಕ್ಕೆ ವೇಗ ಪಡೆಯುತ್ತಿರುವ ಸಿದ್ಧತೆಗಳು; 27 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಬಜೆಟ್ ಹಂಚಿಕೆ, ಕೇಂದ್ರ ಪಾಲಾಗಿ 95,692 ಕೋಟಿ ರೂ. ಹಂಚಿಕೆ

प्रविष्टि तिथि: 19 JUN 2026 10:40AM by PIB Bengaluru

ವಿಕಸಿತ ಭಾರತ-ಖಾತರಿ ರೋಜ್ಗಾರ್ ಮತ್ತು ಅಜೀವಿಕಾ ಮಿಷನ್ (ಗ್ರಾಮೀಣ) (ವಿಬಿಜಿ ರಾಮ್ ಜಿ) ಕಾಯ್ದೆ 2025 ರ ಸುಗಮ ಜಾರಿಯನ್ನು ಖಾತ್ರಿಪಡಿಸಿಕೊಳ್ಳುವತ್ತ ಒಂದು ಪ್ರಮುಖ ಹೆಜ್ಜೆಯಾಗಿ ಗ್ರಾಮೀಣಾಭಿವೃದ್ಧಿ ಸಚಿವಾಲಯವು 2026ರ ಜುಲೈ 1 ರಿಂದ ಕಾಯ್ದೆ ಜಾರಿಗೆ ಬರುವ ಮೊದಲು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನೆರವು ನೀಡಲು ದೇಶಾದ್ಯಂತ 100 ಕ್ಕೂ ಅಧಿಕ ಕ್ಷೇತ್ರಾಧಿಕಾರಿಗಳನ್ನು ನಿಯೋಜಿಸಲಿದೆ.

ಯೋಜನೆಯ ಜಾರಿಯ ಹಂತದಲ್ಲಿ ಕ್ಷೇತ್ರಾಧಿಕಾರಿಗಳು ಸಹಾಯಕರು ಮತ್ತು ಸಂಪನ್ಮೂಲ ವ್ಯಕ್ತಿಗಳಾಗಿ ಕಾರ್ಯನಿರ್ವಹಿಸುತ್ತಾರೆ, ಜಾರಿಯನ್ನು ಬೆಂಬಲಿಸಲು, ಸ್ಥಳೀಯ ಸಾಮರ್ಥ್ಯಗಳನ್ನು ಬಲಪಡಿಸಲು, ಜ್ಞಾನ ಹಂಚಿಕೆಯನ್ನು ಸುಗಮಗೊಳಿಸಲು, ಕಾರ್ಯಾಚರಣೆಯ ಸವಾಲುಗಳನ್ನು ಪರಿಹರಿಸಲು ಮತ್ತು ಉತ್ತಮ ಪದ್ಧತಿಗಳ ಅಳವಡಿಕೆಗೆ ಸಹಾಯ ಮಾಡಲು ರಾಜ್ಯ ಸರ್ಕಾರಗಳು ಮತ್ತು ಜಿಲ್ಲಾಡಳಿತಗಳೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸಲಿದ್ದಾರೆ.  

ಈ ಕಾರ್ಯಕ್ಕಾಗಿ ಅಧಿಕಾರಿಗಳನ್ನು ಸಜ್ಜುಗೊಳಿಸಲು ಗ್ರಾಮೀಣಾಭಿವೃದ್ಧಿ ಇಲಾಖೆಯು ಕಾಯಿದೆಯ ಪ್ರಮುಖ ಲಕ್ಷಣಗಳು, ಅನುಷ್ಠಾನ ಚೌಕಟ್ಟು, ಸಾಂಸ್ಥಿಕ ವ್ಯವಸ್ಥೆಗಳು, ತಂತ್ರಜ್ಞಾನ ಆಧರಿಸಿದ ಆಡಳಿತ ವ್ಯವಸ್ಥೆಗಳು ಮತ್ತು ರಾಜ್ಯಗಳು ಮತ್ತು ಜಿಲ್ಲೆಗಳಿಗೆ ಲಭ್ಯವಿರುವ ಬೆಂಬಲ ಕಾರ್ಯವಿಧಾನಗಳನ್ನು ಒಳಗೊಂಡ  ನಿರ್ದಿಷ್ಟ ಪುನರ್ ಮನನ ಕಾರ್ಯಕ್ರಮವನ್ನು ಆಯೋಜಿಸಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮೀಣಾಭಿವೃದ್ಧಿ ಕಾರ್ಯದರ್ಶಿ ಶ್ರೀ ರೋಹಿಣಿ ಕನ್ಸಾಲ್ ವಹಿಸಿದ್ದರು. ಜಂಟಿ ಕಾರ್ಯದರ್ಶಿ ಶ್ರೀಮತಿ ರೋಹಿಣಿ ಆರ್. ಭಜಿಭಾಕರೆ ಅವರು ಪುನರ್ ಮನನ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

ತಮ್ಮ ಭೇಟಿಗಳ ಸಮಯದಲ್ಲಿ, ಜಾರಿಯ ಅವಶ್ಯಕತೆಗಳನ್ನು ಅರ್ಥಮಾಡಿಕೊಳ್ಳಲು, ಅನುಭವಗಳು ಮತ್ತು ಉತ್ತಮ ಪದ್ಧತಿಗಳ ವಿನಿಮಯವನ್ನು ಸುಗಮಗೊಳಿಸಲು, ಸಾಮರ್ಥ್ಯ ವೃದ್ಧಿ ಪ್ರಯತ್ನಗಳನ್ನು ಬೆಂಬಲಿಸಲು ಮತ್ತು ಕಾರ್ಯಾಚರಣೆಯ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಸಹಾಯ ಮಾಡಲು ಕ್ಷೇತ್ರಾಧಿಕಾರಿಗಳು ರಾಜ್ಯ ಸರ್ಕಾರಗಳು, ಜಿಲ್ಲಾಡಳಿತಗಳು ಮತ್ತು ಕ್ಷೇತ್ರ ಮಟ್ಟದ ಕಾರ್ಯಕರ್ತರೊಂದಿಗೆ ಸಂವಹನ ನಡೆಸುತ್ತಾರೆ. ಅವರ ಒಳಗೊಳ್ಳುವಿಕೆಯು ವಿವಿಧ ಪಾಲುದಾರರ ನಡುವೆ ಸಮನ್ವಯವನ್ನು ಬಲಪಡಿಸಲು ಮತ್ತು ಹೊಸ ಚೌಕಟ್ಟಿಗೆ ಪರಿವರ್ತನೆಯ ಸಮಯದಲ್ಲಿ ಪರಿಣಾಮಕಾರಿ ಅನುಷ್ಠಾನವನ್ನು ಬೆಂಬಲಿಸಲು ಸಹಾಯ ಮಾಡುತ್ತದೆ. ಈ ಉಪಕ್ರಮವು ದೇಶಾದ್ಯಂತ ಕಾಯಿದೆಯ ಸಾಂಸ್ಥಿಕ ಹಿಡಿತವನ್ನು ಒದಗಿಸಲು ಮತ್ತು ಸುಗಮ ಕಾರ್ಯಾಚರಣೆಯನ್ನು ಸುಗಮಗೊಳಿಸಲು ರೂಪಿಸಲಾಗಿದೆ.

ಕ್ಷೇತ್ರಾಧಿಕಾರಿಗಳನ್ನು ನಿಯೋಜಿಸುವ ಈ ಉಪಕ್ರಮವು ಸಮನ್ವಯವನ್ನು ಸುಗಮಗೊಳಿಸುವ ಮೂಲಕ ಜಾರಿಯ ಅನುಭವಗಳನ್ನು ಹಂಚಿಕೊಳ್ಳುವ ಮೂಲಕ ಮತ್ತು ನಿರಂತರ ಸಾಂಸ್ಥಿಕ ಬೆಂಬಲವನ್ನು ಒದಗಿಸುವ ಮೂಲಕ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಬೆಂಬಲಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ನಿರೀಕ್ಷೆಯಿದೆ. ಇದರಿಂದಾಗಿ ವಿಬಿ-ಜಿರಾಮ್ ಜಿ ಚೌಕಟ್ಟಿಗೆ ಸುಗಮ ಮತ್ತು ಪರಿಣಾಮಕಾರಿ ಪರಿವರ್ತನೆಯನ್ನು ಖಾತ್ರಿಪಡಿಸಿಕೊಳ್ಳಲು ಸಹಾಯ ಮಾಡುತ್ತದೆ.

ವಿಬಿ-ಜಿರಾಮ್ ಜಿ ಕಾಯಿದೆ, 2025 ಗ್ರಾಮೀಣ ಉದ್ಯೋಗವನ್ನು ಜೀವನೋಪಾಯ ಪ್ರಚಾರ, ಹವಾಮಾನ ಸ್ಥಿತಿಸ್ಥಾಪಕತ್ವ, ಗ್ರಾಮೀಣ ಮೂಲಸೌಕರ್ಯ ಸೃಷ್ಟಿ ಮತ್ತು ತಂತ್ರಜ್ಞಾನ ಆಧರಿಸಿದ ಆಡಳಿತದೊಂದಿಗೆ ಖಾತರಿಪಡಿಸಿದ ವೇತನ ಉದ್ಯೋಗವನ್ನು ಸಂಯೋಜಿಸುವ ಮೂಲಕ ಸುಸ್ಥಿರ ಮತ್ತು ಅಂತರ್ಗತ ಗ್ರಾಮೀಣ ಅಭಿವೃದ್ಧಿಯ ಎಂಜಿನ್ ಆಗಿ ಪರಿವರ್ತಿಸಲು ಪ್ರಯತ್ನಿಸುತ್ತದೆ. ವಿಕಸಿತ ಗ್ರಾಮ ಪಂಚಾಯತ್ ಯೋಜನೆಗಳು (ವಿಜಿಪಿಪಿಗಳು), ಜಿಐಎಸ್-ಆಧಾರಿತ ಯೋಜನೆ ಮತ್ತು ಯೋಜನೆಗಳಾದ್ಯಂತ ಸಂಯೋಜನೆಯ ಮೂಲಕ ಕಾಯಿದೆಯು ವಿಕಸಿತ ಭಾರತ @2047 ದೂರದೃಷ್ಟಿಯನ್ನು ಮುನ್ನಡೆಸುತ್ತದೆ.

ದೇಶಾದ್ಯಂತ ಸಿದ್ಧತೆಯನ್ನು ಖಾತ್ರಿಪಡಿಸಿಕೊಳ್ಳಲು ಸಚಿವಾಲಯವು ಏಕಕಾಲದಲ್ಲಿ ವ್ಯಾಪಕವಾದ ಪೂರ್ವಸಿದ್ಧತಾ ಕ್ರಮಗಳನ್ನು ಕೈಗೊಂಡಿದೆ. ಅವುಗಳಲ್ಲಿ 2026–27ನೇ ಹಣಕಾಸು ವರ್ಷಕ್ಕೆ 95,692 ಕೋಟಿ ರೂ.ಗಳ ಮಧ್ಯಂತರ ಹಂಚಿಕೆಗೆ ಅನುಮೋದನೆ, ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಡಿಬಿಟಿ-ಸ್ಪರ್ಶ್‌ (DBT-SPARSH)ವೇದಿಕೆಯಲ್ಲಿ ಸೇರ್ಪಡೆ. ಸುಮಾರು ಶೇಕಡಾ 93 ರಷ್ಟು ಸಕ್ರಿಯ ಕಾರ್ಮಿಕರಿಗೆ ಇ-ಕೆವೈಸಿ ಪೂರ್ಣಗೊಳಿಸುವುದು, ರಾಷ್ಟ್ರವ್ಯಾಪಿ ಮುಖ ದೃಢೀಕರಣ ಆಧಾರಿತ ಹಾಜರಾತಿ ವ್ಯವಸ್ಥೆಯನ್ನು ಜಾರಿಗೊಳಿಸುವುದು, ಮೀಸಲಾದ ಡಿಜಿಟಲ್ ವೇದಿಕೆಗಳ ಅಭಿವೃದ್ಧಿ ಮತ್ತು ದೊಡ್ಡ ಪ್ರಮಾಣದ ಸಾಮರ್ಥ್ಯ ವೃದ್ಧಿ ಉಪಕ್ರಮಗಳು ಸೇರಿವೆ.

ಈವರೆಗೆ ಸಾಧಿಸಿದ ಪ್ರಗತಿಯನ್ನು ಪ್ರತಿಬಿಂಬಿಸುತ್ತಾ 27 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಈಗಾಗಲೇ ಕಾಯ್ದೆಯ ಅನುಷ್ಠಾನಕ್ಕಾಗಿ ಬಜೆಟ್ ನಿಬಂಧನೆಗಳನ್ನು ಮಾಡಿವೆ. ಆದರೆ ಆರು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ವಿಬಿ–ಜಿ ರಾಮ್ ಜಿ ಚೌಕಟ್ಟಿನಡಿಯಲ್ಲಿ ತಮ್ಮ ರಾಜ್ಯ ಯೋಜನೆಗಳನ್ನು ಸೂಚಿಸಿವೆ. ಉಳಿದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ತಮ್ಮ ಯೋಜನೆಗಳನ್ನು ಅಂತಿಮಗೊಳಿಸುವ ಹಂತಗಳಲ್ಲಿವೆ.

 

*****


(रिलीज़ आईडी: 2275229) आगंतुक पटल : 13
इस विज्ञप्ति को इन भाषाओं में पढ़ें: Odia , Odia , English , Urdu , हिन्दी , Bengali-TR , Bengali , Gujarati , Tamil , Telugu