MIFF banner

ಛಾಯಾಗ್ರಹಣ ಎನ್ನುವುದು ಪ್ರೇಕ್ಷಕರು ಒಂದು ಜಗತ್ತನ್ನು ನಂಬುವಂತೆ ಮಾಡುವ ಕಲೆ: 19ನೇ ಎಂ ಐ ಎಫ್ ಎಫ್ ಕಾರ್ಯಾಗಾರದಲ್ಲಿ ಮೊಧುರಾ ಪಾಲಿತ್


ಬೆಳಕಿನಿಂದ ಮಸೂರದವರೆಗೆ: ಎಂ ಐ ಎಫ್ ಎಫ್ ನಲ್ಲಿ ಛಾಯಾಗ್ರಹಣದ ಆತ್ಮವನ್ನು ಅನ್ವೇಷಿಸಿದ ಮೊಧುರಾ ಪಾಲಿತ್

19ನೇ ಎಂಐಎಫ್ ಎಫ್  ನಲ್ಲಿ “ಕೋರ್ ಕ್ರಾಫ್ಟ್ ಅಂಡ್ ವಿಶುವಲ್ ಲ್ಯಾಂಗ್ವೇಜ್: ದಿ ಸೋಲ್ ಆಫ್ ಸಿನಿಮಾಟೋಗ್ರಫಿ” “ಮುಖ್ಯ ಕರಕುಶಲತೆ ಮತ್ತು ದೃಶ್ಯ ಭಾಷೆ: ಛಾಯಾಗ್ರಹಣದ ಆತ್ಮ (“Core Craft & Visual Language: The Soul of Cinematography”) ಎಂಬ ಶೀರ್ಷಿಕೆಯ ಕಾರ್ಯಾಗಾರ ನಡೆಯಿತು. ಕಾನ್ ಚಲನಚಿತ್ರೋತ್ಸವದಲ್ಲಿ ಪ್ರತಿಷ್ಠಿತ 'ಪಿಯರೆ ಅಂಜೆನಿಯುಕ್ಸ್ ಎಕ್ಸೆಲ್ಲೆನ್ಸ್' ಪ್ರಶಸ್ತಿ ಪಡೆದ ಮೊದಲ ಭಾರತೀಯರೆಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಖ್ಯಾತ ಛಾಯಾಗ್ರಾಹಕಿ ಮತ್ತು ನಿರ್ದೇಶಕಿ ಮೊಧುರಾ ಪಾಲಿತ್ ಈ ಕಾರ್ಯಾಗಾರವನ್ನು ನಡೆಸಿಕೊಟ್ಟರು.

ಚಲನಚಿತ್ರ ನಿರ್ಮಾಪಕರು, ವಿದ್ಯಾರ್ಥಿಗಳು ಮತ್ತು ಸಿನಿಮಾ ಪ್ರೇಮಿಗಳನ್ನು ಉದ್ದೇಶಿಸಿ ಮಾತನಾಡಿದ ಪಾಲಿತ್ ಅವರು, ಛಾಯಾಗ್ರಹಣವನ್ನು ಪ್ರೇಕ್ಷಕರಿಗೆ ನಂಬಲರ್ಹವಾದ ಜಗತ್ತನ್ನು ಸೃಷ್ಟಿಸುವ ಕಲೆ ಎಂದು ಬಣ್ಣಿಸಿದರು. ಛಾಯಾಗ್ರಹಣ ಎನ್ನುವುದು ಕೇವಲ ಚಿತ್ರಗಳನ್ನು ರೆಕಾರ್ಡ್ ಮಾಡುವುದಕ್ಕಿಂತ ಮಿಗಿಲಾದುದು; ಇದು ಕಥೆ ಹೇಳುವಿಕೆಯನ್ನು ಬೆಂಬಲಿಸಲು ಮತ್ತು ಭಾವನೆಗಳನ್ನು ಜಾಗೃತಗೊಳಿಸಲು ಚಲನವಲನ, ಬೆಳಕು, ಫ್ರೇಮಿಂಗ್ ಮತ್ತು ಸಂಯೋಜನೆಯನ್ನು   ಬಳಸಿಕೊಳ್ಳುವುದನ್ನು ಒಳಗೊಂಡಿರುತ್ತದೆ ಎಂದು ಅವರು ತಿಳಿಸಿದರು.

ಛಾಯಾಗ್ರಾಹಕರ ಪಾತ್ರವನ್ನು ವಿವರಿಸಿದ ಅವರು, ನಿರ್ದೇಶಕರ ಕಲ್ಪನೆಯನ್ನು ದೃಶ್ಯ ಭಾಷೆಗೆ ಪರಿವರ್ತಿಸುವ ಕೆಲಸವನ್ನು ಛಾಯಾಗ್ರಾಹಕರು ಮಾಡುತ್ತಾರೆ ಎಂದು ಹೇಳಿದರು. ಕ್ಯಾಮೆರಾ ಚಲನೆಯಿಂದ ಹಿಡಿದು ಲೆನ್ಸ್ ಆಯ್ಕೆಯವರೆಗಿನ ಪ್ರತಿಯೊಂದು ಸೃಜನಾತ್ಮಕ ನಿರ್ಧಾರವು ಪ್ರೇಕ್ಷಕರು ಕಥೆಯನ್ನು ಹೇಗೆ ಅನುಭವಿಸುತ್ತಾರೆ ಮತ್ತು ಅದರ ಪಾತ್ರಗಳೊಂದಿಗೆ ಹೇಗೆ ಸಂಪರ್ಕ ಸಾಧಿಸುತ್ತಾರೆ ಎಂಬುದನ್ನು ರೂಪಿಸಲು ಸಹಾಯ ಮಾಡುತ್ತದೆ.

ದೃಶ್ಯದ ಅಂಶಗಳು ಪ್ರೇಕ್ಷಕರ ಗ್ರಹಿಕೆಯ ಮೇಲೆ ಹೇಗೆ ಪ್ರಭಾವ ಬೀರುತ್ತವೆ ಎಂಬುದನ್ನು ಈ ಕಾರ್ಯಾಗಾರವು ಅನ್ವೇಷಿಸಿತು. ವಿಭಿನ್ನ ಕ್ಯಾಮೆರಾ ಚಲನೆಗಳು ಹೇಗೆ ವಿಭಿನ್ನ ಭಾವನಾತ್ಮಕ ಪರಿಣಾಮಗಳನ್ನು ಸೃಷ್ಟಿಸುತ್ತವೆ ಎಂಬುದನ್ನು ಉದಾಹರಣೆಗಳ ಮೂಲಕ ಪಾಲಿತ್ ಪ್ರದರ್ಶಿಸಿದರು. ಅದೇ ರೀತಿ ಫ್ರೇಮಿಂಗ್, ಸಂಯೋಜನೆ ಮತ್ತು ಸ್ಥಳದ ಬಳಕೆ ಹೇಗೆ ಸಂಬಂಧಗಳು, ಪ್ರತ್ಯೇಕತೆ ಅಥವಾ ಉದ್ವೇಗವನ್ನು ಸೂಕ್ಷ್ಮವಾಗಿ ಸಂವಹನ ಮಾಡಬಲ್ಲದು ಎಂಬುದನ್ನು ತೋರಿಸಿಕೊಟ್ಟರು. ಮನಸ್ಥಿತಿಯನ್ನು ರೂಪಿಸುವಲ್ಲಿ ಮತ್ತು ಪಾತ್ರದ ಆಂತರಿಕ ಸ್ಥಿತಿಯನ್ನು ಬಹಿರಂಗಪಡಿಸುವಲ್ಲಿ ಬೆಳಕಿನ ಪ್ರಾಮುಖ್ಯತೆಯನ್ನು ಅವರು ಎತ್ತಿ ತೋರಿಸಿದರು.

ಛಾಯಾಗ್ರಹಣವು ತಂತ್ರಜ್ಞಾನಕ್ಕಿಂತ ಹೆಚ್ಚಾಗಿ ಕಲಾತ್ಮಕ ಉದ್ದೇಶದಿಂದ ಪ್ರೇರಿತವಾಗಿದೆ ಎಂದು ಒತ್ತಿ ಹೇಳಿದ ಅವರು, ಕ್ಯಾಮೆರಾಗಳು ಮತ್ತು ಉಪಕರಣಗಳು ಕೇವಲ ಸಾಧನಗಳಷ್ಟೇ, ಆದರೆ ಸೃಜನಶೀಲತೆ ಮತ್ತು ವೀಕ್ಷಣೆ  ದೃಶ್ಯ ಕಥೆಗಾರಿಕೆಯ ಹೃದಯಭಾಗವಾಗಿ ಇರುತ್ತವೆ ಎಂದರು.

ವೇದಿಕೆಗಳ ನಿರ್ವಹಣೆ, ಉಪಕರಣಗಳು, ಹವಾಮಾನ ಪರಿಸ್ಥಿತಿಗಳು ಮತ್ತು ನಿರ್ಮಾಣದ ಸವಾಲುಗಳು ಸೇರಿದಂತೆ ಚಲನಚಿತ್ರ ನಿರ್ಮಾಣದ ಪ್ರಾಯೋಗಿಕ ವಾಸ್ತವಗಳ ಬಗ್ಗೆಯೂ ಪಾಲಿತ್ ಮಾತನಾಡಿದರು. ತಮ್ಮ ವೃತ್ತಿಪರ ಅನುಭವದಿಂದ ಉದಾಹರಿಸಿದ ಅವರು, ಹೊಂದಿಕೊಳ್ಳುವಿಕೆ   ಮತ್ತು ಪ್ರತಿ ಸ್ಥಳದ ವಿಶಿಷ್ಟ ದೃಶ್ಯ ಗುಣಲಕ್ಷಣವನ್ನು ಅರ್ಥಮಾಡಿಕೊಳ್ಳುವ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದರು.

ಪ್ರಶ್ನೋತ್ತರ ಅವಧಿಯಲ್ಲಿ, ಭಾಗವಹಿಸಿದವರು ಹ್ಯಾಂಡ್ ಹೆಲ್ಡ್ ಸಿನಿಮಾಟೋಗ್ರಫಿ, ನಿರ್ದೇಶಕರೊಂದಿಗಿನ ಸಹಯೋಗ ಮತ್ತು ಚಲನಚಿತ್ರ ನಿರ್ಮಾಣದಲ್ಲಿ ಸ್ಮಾರ್ಟ್ ಫೋನ್ ಕ್ಯಾಮೆರಾಗಳ ಹೆಚ್ಚುತ್ತಿರುವ ಬಳಕೆಯಂತಹ ವಿಷಯಗಳ ಬಗ್ಗೆ ಚರ್ಚಿಸಿದರು. ತಂತ್ರಜ್ಞಾನದ ಕುರಿತಾದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಸ್ಮಾರ್ಟ್ ಫೋನ್ ಗಳು ಚಲನಚಿತ್ರ ನಿರ್ಮಾಣವನ್ನು ಹೆಚ್ಚು ಸುಲಭವಾಗಿಸಿವೆಯಾದರೂ, ಸಿನಿಮಾಟೋಗ್ರಫಿ ಎನ್ನುವುದು ಇಂದಿಗೂ ಉದ್ದೇಶ, ಅರ್ಥ ಮತ್ತು ಕಥೆ ಹೇಳುವಿಕೆಯಿಂದಲೇ ವ್ಯಾಖ್ಯಾನಿಸಲ್ಪಡುತ್ತದೆ ಎಂದು ಅಭಿಪ್ರಾಯಪಟ್ಟರು.

ಉದಯೋನ್ಮುಖ ಚಲನಚಿತ್ರ ನಿರ್ಮಾಪಕರು ಛಾಯಾಗ್ರಹಣವನ್ನು ಸೃಜನಶೀಲತೆ, ವೀಕ್ಷಣೆ ಮತ್ತು ಭಾವನಾತ್ಮಕ ತಿಳುವಳಿಕೆಯನ್ನು ಸಂಯೋಜಿಸಿ ಅರ್ಥಪೂರ್ಣ ಸಿನಿಮಾ ಅನುಭವಗಳನ್ನು ಸೃಷ್ಟಿಸುವ ಒಂದು ಕಲೆಯಾಗಿ ನೋಡಬೇಕು ಎಂಬ ಉತ್ತೇಜನಕಾರಿ ಸಂದೇಶದೊಂದಿಗೆ ಈ ಸೆಷನ್ ಮುಕ್ತಾಯಗೊಂಡಿತು.

 

*****

 


Great films resonate through passionate voices. Share your love for cinema with #MIFF2026. Tag us @pibmumbai on X, and we'll help spread your passion! For journalists, bloggers, and vloggers wanting to connect with filmmakers for interviews/interactions, reach out to us at miff.mediadesk@pib.gov.in with the subject line: Take One with PIB.


रिलीज़ आईडी: 2274976   |   Visitor Counter: 44