ಮಾಧ್ಯಮ ನೋಂದಣಿಗೆ ಅಂತಿಮ ಆಹ್ವಾನ: ಕೊನೆಯ ಕ್ಷಣದ ಅರ್ಜಿಗಳನ್ನು ಸ್ವೀಕರಿಸಲು ಎಂಐಎಫ್ ಎಫ್ 2026 ಮಾಧ್ಯಮ ಮಾನ್ಯತೆ ಪೋರ್ಟಲ್ ನಿಂದ ಎರಡು ದಿನಗಳ ಅವಕಾಶ
ದೇಶಾದ್ಯಂತ ಪತ್ರಕರ್ತರು, ಮಾಧ್ಯಮ ವೃತ್ತಿಪರರು ಮತ್ತು ಚಲನಚಿತ್ರ ವಿಮರ್ಶಕರಿಂದ ಬಂದ ವ್ಯಾಪಕ ಮನವಿಗಳನ್ನು ಗಮನದರಿಸಿಕೊಂಡು ಹೆಚ್ಚುವರಿ ನೋಂದಣಿಗಳಿಗೆ ಅನುಕೂಲವಾಗುವಂತೆ 2026ರ ಜೂನ್ 10 ರಿಂದ ಜೂನ್ 11 ರವರೆಗೆ ಎರಡು ದಿನಗಳ ಸೀಮಿತ ಅವಧಿಗೆ 19ನೇ ಮುಂಬೈ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕಾಗಿ (ಎಂಐಐಎಫ್ 2026) ಮಾಧ್ಯಮ ಮಾನ್ಯತೆ ಪೋರ್ಟಲ್ ಅನ್ನು ಮತ್ತೆ ತೆರೆಯಲು ನಿರ್ಧರಿಸಲಾಗಿದೆ.
ಈ ವಿಶೇಷ ಅವಕಾಶವು ಈ ಪ್ರದೇಶದ ಅತ್ಯಂತ ಪ್ರಸಿದ್ಧ ಸಿನಿಮಾ ಕಾರ್ಯಕ್ರಮಗಳಲ್ಲಿ ಒಂದಕ್ಕೆ ತಮ್ಮ ಮಾನ್ಯತೆಯನ್ನು ಪಡೆಯಲು ಹಿಂದಿನ ಗಡುವನ್ನು ತಪ್ಪಿಸಿಕೊಂಡ ಮಾಧ್ಯಮ ವ್ಯಕ್ತಿಗಳಿಗೆ ಅಂತಿಮ ಅವಕಾಶವನ್ನು ನೀಡುತ್ತದೆ. 2026ರ ಜೂನ್ 11ರ ನಂತರ ಅರ್ಜಿ ಸಲ್ಲಿಸಲು ಅವಕಾಶ ವಿಸ್ತರಣೆ ಮಾಡುವುದಿಲ್ಲ.
2026ರ ಜೂನ್ 15 ರಿಂದ 21, 2026 ರವರೆಗೆ ಮುಂಬೈನ ಗೋಪಾಲರಾವ್ ದೇಶಮುಖ್ ಮಾರ್ಗದಲ್ಲಿರುವ ಎನ್ ಎಫ್ ಡಿಸಿ ಆವರಣದಲ್ಲಿ ನಡೆಯಲಿರುವ ಎಂಐಎಫ್ ಎಫ್ ನ 19 ನೇ ಆವೃತ್ತಿಯು ಪ್ರದರ್ಶನಗಳು, ಚರ್ಚೆಗಳು, ಮಾಸ್ಟರ್‌ಕ್ಲಾಸ್‌ಗಳು, ಉದ್ಯಮ ಸಂವಹನಗಳು ಮತ್ತು ಸಾಂಸ್ಕೃತಿಕ ವಿನಿಮಯಗಳು ಒಂದು ವಾರ ಭರಪೂರ ಕಾರ್ಯಕ್ರಮಗಳ ಭರವಸೆ ನೀಡುತ್ತದೆ.
ಉತ್ಸವ ಪ್ರದರ್ಶನಗಳು, ಪತ್ರಿಕಾ ಸಂವಹನಗಳು, ವಿಶೇಷ ಮಾಧ್ಯಮ ಕಾರ್ಯಕ್ರಮಗಳು ಮತ್ತು ನೆಟ್‌ವರ್ಕಿಂಗ್ ಅವಕಾಶಗಳಿಗೆ ಪ್ರವೇಶ ಪಡೆಯಲು ಮಾಧ್ಯಮ ಪ್ರತಿನಿಧಿಗಳು ಪುನರಾರಂಭದ ಅವಧಿಯೊಳಗೆ ತಮ್ಮ ನೋಂದಣಿಯನ್ನು ಪೂರ್ಣಗೊಳಿಸುವಂತೆ ಮನವಿ ಮಾಡಲಾಗುತ್ತಿದೆ.
ಮಾಧ್ಯಮ ಮಾನ್ಯತೆ (ಮೀಡಿಯಾ ಅಕ್ರೆಡಿಟೇಶನ್) ಪೋರ್ಟಲ್ 2026ರ ಜೂನ್ 10 ಮತ್ತು ಜೂನ್ 11 ರಂದು ಮಾತ್ರ ತೆರೆದಿರುತ್ತದೆ. ಮಾಧ್ಯಮ ವೃತ್ತಿಪರರು ಎಂಐಎಫ್ ಎಫ್ 2026 ಕ್ಕೆ ನೋಂದಾಯಿಸಿಕೊಳ್ಳಲು ಇದು ಕೊನೆಯ ಮತ್ತು ಅಂತಿಮ ಅವಕಾಶವಾಗಿದೆ.
ನೋಂದಣಿ ವಿವರಗಳು
ಮಾಧ್ಯಮ ಪ್ರತಿನಿಧಿಗಳು https://accreditation.pib.gov.in/eventregistration/login.aspx ಗೆ ಭೇಟಿ ನೀಡುವ ಮೂಲಕ ಅಥವಾ ಕೆಳಗಿನ QR ಕೋಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕ ಮಾಧ್ಯಮ ಪ್ರತಿನಿಧಿಗಳಾಗಿ ನೋಂದಾಯಿಸಿಕೊಳ್ಳಬಹುದು.

19ನೇ ಎಂಐಎಫ್ ಎಫ್ ಕುರಿತು
ದಕ್ಷಿಣ ಏಷ್ಯಾದ ಅತ್ಯಂತ ಹಳೆಯ ಮತ್ತು ಅತಿ ದೊಡ್ಡ ಚಲನಚಿತ್ರೋತ್ಸವ ಎಂದು ಗುರುತಿಸಲ್ಪಟ್ಟ ಮುಂಬೈ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (ಎಂಐಐಎಫ್) ಸಾಕ್ಷ್ಯಚಿತ್ರ, ಕಿರುಚಿತ್ರ ಮತ್ತು ಅನಿಮೇಷನ್ ಚಲನಚಿತ್ರ ನಿರ್ಮಾಣದ ಸಂಭ್ರಮಕ್ಕಾಗಿ ದೀರ್ಘಕಾಲದಿಂದ ಗುರುತಿಸಲ್ಪಟ್ಟಿದೆ. 1990ರಲ್ಲಿ ಸ್ಥಾಪನೆಯಾದ ಮತ್ತು ಭಾರತ ಸರ್ಕಾರದ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಆಶ್ರಯದಲ್ಲಿ ಆಯೋಜಿಸಲಾದ ಎಂಐಎಫ್ ಎಫ್ ಜಗತ್ತಿನಾದ್ಯಂತ ಚಲನಚಿತ್ರ ನಿರ್ಮಾಪಕರು, ಕಲಾವಿದರು ಮತ್ತು ಸಿನಿಮಾ ಉತ್ಸಾಹಿಗಳನ್ನು ಆಕರ್ಷಿಸುವ ಪ್ರತಿಷ್ಠಿತ ಅಂತಾರಾಷ್ಟ್ರೀಯ ವೇದಿಕೆಯಾಗಿ ಬೆಳೆದಿದೆ.
19ನೇ ಎಂಐಎಫ್ ಎಫ್ ಆವೃತ್ತಿಯು ಮೈ ಮರೆಯುವ ಮತ್ತು ಶ್ರೀಮಂತ ಸಿನಿಮೀಯ ಅನುಭವವನ್ನು ನೀಡುತ್ತದೆ, ಇದು ಉದ್ಯಮ-ಕೇಂದ್ರಿತ ಉಪಕ್ರಮಗಳ ಅತ್ಯಾಕರ್ಷಕ ಶ್ರೇಣಿಯ ಜೊತೆಗೆ ಮೆಚ್ಚುಗೆ ಪಡೆದ ಅಂತಾರಾಷ್ಟ್ರೀಯ ಚಲನಚಿತ್ರಗಳ ಚಿಂತನಶೀಲವಾಗಿ ಸಂಗ್ರಹಿಸಲಾದ ಶ್ರೇಣಿಯನ್ನು ಒಳಗೊಂಡಿದೆ. ಮುಂಬೈ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (ಎಂಐಎಫ್ ಎಫ್) ಸ್ಪರ್ಧಾತ್ಮಕ ವಿಭಾಗದ 19 ನೇ ಆವೃತ್ತಿಯು ಭಾರತ ಸೇರಿ 47 ದೇಶಗಳಿಂದ 1,459 ಚಲನಚಿತ್ರ ಗಳ ಪ್ರವೇಶಗಳನ್ನು ಸ್ವೀಕರಿಸಿದೆ. ಈ ಉತ್ಸವವು 42 ಕ್ಕೂ ಅಧಿಕ ಭಾರತೀಯ ಭಾಷೆಗಳು ಮತ್ತು ಭಾರತದ ಹೊರಗಿನ 30 ಕ್ಕೂ ಅಧಿಕ ಭಾಷೆಗಳ ಚಲನಚಿತ್ರಗಳನ್ನು ಪ್ರದರ್ಶಿಸುತ್ತದೆ, ಇದು ಜಾಗತಿಕ ವ್ಯಾಪ್ತಿ ಮತ್ತು ಸಾಂಸ್ಕೃತಿಕ ವೈವಿಧ್ಯತೆಯನ್ನು ಪ್ರತಿಬಿಂಬಿಸುತ್ತದೆ. ವಿಶ್ವದಾದ್ಯಂತ ಮೆಚ್ಚುಗೆ ಪಡೆದ ಚಲನಚಿತ್ರ ನಿರ್ಮಾಪಕರ ಸಿನಿಮಾಗಳನ್ನು ಒಳಗೊಂಡ ಈ ಉತ್ಸವವು ಕೆಲವು ಅತ್ಯುತ್ತಮ ಸಾಕ್ಷ್ಯಚಿತ್ರಗಳು, ಕಿರುಚಿತ್ರಗಳು, ಅನಿಮೇಷನ್‌ಗಳು, ಚೊಚ್ಚಲ ನಿರ್ದೇಶಕರ ಚಲನಚಿತ್ರಗಳು ಮತ್ತು ವಿದ್ಯಾರ್ಥಿ ಚಲನಚಿತ್ರಗಳನ್ನು ಪ್ರಸ್ತುತಪಡಿಸುತ್ತದೆ. ಪ್ರದರ್ಶನಗಳ ಜೊತೆಗೆ, ಡಾಕ್ ಬಜಾರ್‌ನ 2 ನೇ ಆವೃತ್ತಿ, ಶ್ರೀಮಂತ ಮಾಸ್ಟರ್‌ಕ್ಲಾಸ್‌ಗಳು ಮತ್ತು ಐಡಿಪಿಎ ಯಿಂದ ಮುಕ್ತ ವೇದಿಕೆಯು ಉತ್ಸವದಲ್ಲಿ ಸಿನಿಮೀಯ ಮತ್ತು ಸೃಜನಶೀಲ ವಿನಿಮಯವನ್ನು ಮತ್ತಷ್ಟು ಹೆಚ್ಚಿಸುತ್ತದೆ.
ಎಂಐ ಎಫ್ ಎಫ್ 2026 ರಲ್ಲಿ ಕಥೆ ಹೇಳುವ ರೋಮಾಂಚಕ ಜಗತ್ತಿಗೆ ಹೆಜ್ಜೆ ಹಾಕಿ - ಅಲ್ಲಿ ಪ್ರಬಲ ಸಿನಿಮಾ, ಸೃಜನಶೀಲ ಮನಸ್ಸುಗಳು ಮತ್ತು ಸ್ಪೂರ್ತಿದಾಯಕ ಧ್ವನಿಗಳು ಒಟ್ಟಾಗಿ ಸಾಕ್ಷ್ಯಚಿತ್ರ, ಅನಿಮೇಷನ್ ಮತ್ತು ಕಿರುಚಿತ್ರ ನಿರ್ಮಾಣದ ಮರೆಯಲಾಗದ ಸಂಭ್ರಮವನ್ನು ಸೃಷ್ಟಿಸುತ್ತವೆ.
19ನೇ ಎಂಐ ಎಫ್ ಎಫ್ ಗಾಗಿ ಮಾಧ್ಯಮ ಮಾನ್ಯತೆ ನೀತಿಯನ್ನು ಈ link ಲಿಂಕ್ ಮೂಲಕ ಪಡೆಯಬಹುದು.

*****
रिलीज़ आईडी:
2270824
| Visitor Counter:
19