ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ
azadi ka amrit mahotsav

ಇ-ಆಡಳಿತಕ್ಕಾಗಿ ನೀಡುವ ರಾಷ್ಟ್ರೀಯ ಪ್ರಶಸ್ತಿ2026ಯಲ್ಲಿ “ಇ-ಜಾಗೃತಿ”ಯು ಬೆಳ್ಳಿ ಪ್ರಶಸ್ತಿಯನ್ನು ಪಡೆದಿದೆ



341 ನಾಮನಿರ್ದೇಶನಗಳ ನಡುವೆ ವರ್ಗ I - ಡಿಜಿಟಲ್ ರೂಪಾಂತರಕ್ಕಾಗಿ ತಂತ್ರಜ್ಞಾನದ ಬಳಕೆಯಿಂದ ಸರ್ಕಾರಿ ಪ್ರಕ್ರಿಯೆ ಮರು-ಎಂಜಿನಿಯರಿಂಗ್ ಅಡಿಯಲ್ಲಿ ಪ್ರಶಸ್ತಿಯನ್ನು ಪಡೆದುಕೊಂಡಿದೆ


“ಇ-ಜಾಗೃತಿ” ಗ್ರಾಹಕ ನ್ಯಾಯ ವಿತರಣೆಯನ್ನು ಪರಿವರ್ತಿಸುತ್ತದೆ; ಏಕೀಕೃತ ಡಿಜಿಟಲ್ ಪ್ಲಾಟ್‌ಫಾರ್ಮ್ ಮೂಲಕ 2 ಲಕ್ಷಕ್ಕೂ ಹೆಚ್ಚು ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದೆ


ಎಐ-ಚಾಲಿತ ಗ್ರಾಹಕ ಕುಂದುಕೊರತೆ ವೇದಿಕೆಯು 90.75% ವಿಲೇವಾರಿ ದರವನ್ನು ದಾಖಲಿಸಿದೆ, ವರ್ಚುವಲ್ ವಿಚಾರಣೆಗಳನ್ನು ವಿಸ್ತರಿಸುತ್ತದೆ, ಭಾರತ ಮತ್ತು ವಿದೇಶಗಳಾದ್ಯಂತ ಗ್ರಾಹಕರಿಗೆ ತಡೆರಹಿತ ಪ್ರವೇಶ ಅವಕಾಶವನ್ನು ಸಕ್ರಿಯಗೊಳಿಸಿದೆ

प्रविष्टि तिथि: 07 JUN 2026 2:19PM by PIB Bengaluru

ಆಡಳಿತ ಸುಧಾರಣೆಗಳು ಮತ್ತು ಸಾರ್ವಜನಿಕ ಕುಂದುಕೊರತೆಗಳ ಇಲಾಖೆಯು ನೀಡುವ ಪ್ರತಿಷ್ಠಿತ ರಾಷ್ಟ್ರೀಯ ಇ-ಆಡಳಿತ ಪ್ರಶಸ್ತಿಗಳು (ಎನ್‌.ಎ.ಇ.ಜಿ) 2026 ರಲ್ಲಿ ಗ್ರಾಹಕ ವ್ಯವಹಾರಗಳ ಇಲಾಖೆಯ ಇ-ಜಾಗೃತಿ ವೇದಿಕೆಯು ವರ್ಗ I-ಡಿಜಿಟಲ್ ರೂಪಾಂತರಕ್ಕಾಗಿ ತಂತ್ರಜ್ಞಾನದ ಬಳಕೆಯಿಂದ ಸರ್ಕಾರಿ ಪ್ರಕ್ರಿಯೆ ಮರು-ಎಂಜಿನಿಯರಿಂಗ್ ಅಡಿಯಲ್ಲಿ ಬೆಳ್ಳಿ ಪ್ರಶಸ್ತಿಯನ್ನು ಪಡೆದಿದೆ. ಕೇಂದ್ರ ಸಚಿವಾಲಯಗಳು, ಇಲಾಖೆಗಳು ಮತ್ತು ರಾಜ್ಯ ಸರ್ಕಾರಗಳಿಂದ 341 ನಾಮನಿರ್ದೇಶನಗಳನ್ನು ಒಳಗೊಂಡ ಕಠಿಣ ಮೌಲ್ಯಮಾಪನ ಪ್ರಕ್ರಿಯೆಯ ನಂತರ ಮಾನ್ಯತೆ ಬಂದಿದೆ, ಇದು ತಂತ್ರಜ್ಞಾನ-ಚಾಲಿತ, ನಾಗರಿಕ-ಕೇಂದ್ರಿತ ಸೇವಾ ವಿತರಣೆಯ ಮೂಲಕ ಗ್ರಾಹಕರ ಕುಂದುಕೊರತೆ ಪರಿಹಾರವನ್ನು ಪರಿವರ್ತಿಸುವಲ್ಲಿ ಇ-ಜಾಗೃತಿಯ ಪಾತ್ರವನ್ನು ಪುನರುಚ್ಚರಿಸುತ್ತದೆ.

 

ಜನವರಿ 1, 2025 ರಂದು ಪ್ರಾರಂಭವಾದ ಇ-ಜಾಗೃತಿ ನಾಲ್ಕು ಪರಂಪರೆ ಅಪ್ಲಿಕೇಶನ್‌ ಗಳಾದ ಒಸಿಎಂಎಸ್‌ , ಇ-ದಾಖಿಲ್, ಎನ್‌.ಸಿ.ಡಿ.ಆರ್.ಸಿ  ಸಿಎಂಎಸ್‌  ಮತ್ತು ಕೊನ್ಫೊನೆಟ್ ಅನ್ನು ಒಂದೇ ಎಐ-ಸಕ್ರಿಯಗೊಳಿಸಿದ, ಕಾಗದರಹಿತ ವೇದಿಕೆಯಾಗಿ ಏಕೀಕರಿಸಿದೆ. ಪ್ರಾರಂಭವಾದಾಗಿನಿಂದ, ವೇದಿಕೆಯು 2.29 ಲಕ್ಷಕ್ಕೂ ಹೆಚ್ಚು ಗ್ರಾಹಕ ಪ್ರಕರಣಗಳನ್ನು ಸಲ್ಲಿಸಲು ಮತ್ತು 2.07 ಲಕ್ಷಕ್ಕೂ ಹೆಚ್ಚು ಪ್ರಕರಣಗಳನ್ನು ವಿಲೇವಾರಿ ಮಾಡಲು ಅನುಕೂಲ ಮಾಡಿಕೊಟ್ಟಿದೆ, ಒಟ್ಟಾರೆ 90.75 ಪ್ರತಿಶತದಷ್ಟು ವಿಲೇವಾರಿ ದರವನ್ನು ಸಾಧಿಸಿದೆ ಮತ್ತು ಗ್ರಾಹಕರು ಭಾರತ ಮತ್ತು ವಿದೇಶಗಳಲ್ಲಿ ಎಲ್ಲಿಂದಲಾದರೂ ನ್ಯಾಯವನ್ನು ತಮ್ಮ ಅನುಕೂಲದಂತೆ, ಮನಬಂದಂತೆ ಪಡೆಯಲು ಅನುವು ಮಾಡಿಕೊಡುತ್ತದೆ.

ಪ್ರಾರಂಭವಾದಾಗಿನಿಂದ ಸಾಧಿಸಲಾದ ಪ್ರಮುಖ ಮೈಲಿಗಲ್ಲುಗಳು

 

• ಒಟ್ಟು ನೋಂದಾಯಿತ ಬಳಕೆದಾರರು: 4,15,365

• ದಾಖಲಾದ ಪ್ರಕರಣಗಳು: 2,29,174

• ವಿಲೇವಾರಿಯಾದ ಪ್ರಕರಣಗಳು: 2,07,997

• ಒಟ್ಟಾರೆ ವಿಲೇವಾರಿ ದರ: 90.75%

• ದಾಖಲಾದ ಅನಿವಾಸಿ ಭಾಎತೀಯರ ಬಳಕೆದಾರರು: 3,312

• ದಾಖಲಾದ ಅನಿವಾಸಿ ಭಾಎತೀಯರ ದೂರುಗಳು: 751

 

ಗ್ರಾಹಕ ನ್ಯಾಯ ವಿತರಣೆ ಮತ್ತು ಸೇವಾ ದಕ್ಷತೆಯಲ್ಲಿ ಇಲಾಖೆ ನೇತೃತ್ವದ ಸುಧಾರಣೆಗಳು

2025-26ರ ಹಣಕಾಸು ವರ್ಷದಲ್ಲಿ, ಗ್ರಾಹಕ ಆಯೋಗಗಳು ಕಾರ್ಯಕ್ಷಮತೆಯಲ್ಲಿ ಗಮನಾರ್ಹ ಸುಧಾರಣೆಗಳನ್ನು ದಾಖಲಿಸಿವೆ:

• ದಾಖಲಾದ ಪ್ರಕರಣಗಳು: 1,65,456

• ವಿಲೇವಾರಿಯಾದ ಪ್ರಕರಣಗಳು: 1,52,707

• 2024-25ರ ಹಣಕಾಸು ವರ್ಷದಲ್ಲಿ 89.47% ಕ್ಕೆ ಹೋಲಿಸಿದರೆ ವಿಲೇವಾರಿ ದರವು 92.30% ಕ್ಕೆ ಏರಿದೆ

ವರ್ಚುವಲ್ ವಿಚಾರಣೆ ಸೌಲಭ್ಯಗಳು ಗಣನೀಯ ಬೆಳವಣಿಗೆಯನ್ನು ಕಂಡವು:

• ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ನಿರ್ವಹಿಸಲಾದ ಪ್ರಕರಣಗಳು 14,494 ರಿಂದ 30,683 ಕ್ಕೆ ಏರಿವೆ

• ವಿಚಾರಣೆಗಳನ್ನು ನಡೆಸಲಾಗಿದೆ 24,181 ರಿಂದ 87,083 ಕ್ಕೆ ಏರಿಕೆ

• ವರ್ಚುವಲ್ ವಿಚಾರಣೆಗಳ ಮೂಲಕ ವಿಲೇವಾರಿಯಾದ ಪ್ರಕರಣಗಳು 1,587 ರಿಂದ 4,941 ಕ್ಕೆ ಏರಿಕೆ

ಇತರ ಪ್ರಮುಖ ಸುಧಾರಣೆಗಳು ಈ ಕೆಳಗಿನಂತಿವೆ:

• ದೈನಂದಿನ ಆರ್ಡರ್ ಅಪ್‌ಲೋಡ್‌ಗಳು 16,00,214 ರಿಂದ 18,77,604 ಕ್ಕೆ ಶೇ. 17.3 ರಷ್ಟು ಏರಿಕೆ

• ಎಸ್‌ ಎಂ ಎಸ್‌ ಸೂಚನೆ ಸಂದೇಶಗಳು 19,75,817 ತಲುಪಿವೆ

• ಇಮೇಲ್ ಸೂಚನೆ ಸಂದೇಶಗಳು 1,98,028 ರಿಂದ 37,35,126 ಕ್ಕೆ ಏರಿಕೆ

2025-26ನೇ ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ (ಜನವರಿ-ಮಾರ್ಚ್ 2026) ಸಹ, ಗ್ರಾಹಕ ಆಯೋಗಗಳು ಬಲವಾದ ಕಾರ್ಯಕ್ಷಮತೆಯನ್ನು ಕಾಯ್ದುಕೊಂಡಿವೆ, 38,944 ಫೈಲಿಂಗ್‌ ಗಳಲ್ಲಿ 34,600 ಪ್ರಕರಣಗಳನ್ನು ವಿಲೇವಾರಿ ಮಾಡಿ, 88.84% ವಿಲೇವಾರಿ ದರವನ್ನು ಸಾಧಿಸಿವೆ, ಇದು 2024-25ನೇ ಹಣಕಾಸು ವರ್ಷದ ಅನುಗುಣವಾದ ತ್ರೈಮಾಸಿಕಕ್ಕಿಂತ ಹೆಚ್ಚಾಗಿದೆ.

ನ್ಯಾಯವನ್ನು ವೇಗವಾಗಿ ಮತ್ತು ಸುಲಭವಾಗಿ ಪಡೆಯಲು ಅವಕಾಶ

ಗ್ರಾಹಕರು ಈಗ ಭಾರತದಲ್ಲಿ ಅಥವಾ ವಿದೇಶದಲ್ಲಿ ಎಲ್ಲಿಂದಲಾದರೂ ಆನ್‌ಲೈನ್‌ ನಲ್ಲಿ ದೂರುಗಳನ್ನು ಸಲ್ಲಿಸಬಹುದು, ನೈಜ ಸಮಯದಲ್ಲಿ ಪ್ರಕರಣದ ಪ್ರಗತಿಯನ್ನು ಟ್ರ್ಯಾಕ್ ಮಾಡಬಹುದು ಮತ್ತು ಗ್ರಾಹಕ ಆಯೋಗಗಳಿಗೆ ಪ್ರಯಾಣಿಸದೆ ವರ್ಚುವಲ್ ವಿಚಾರಣೆಗಳಲ್ಲಿ ಭಾಗವಹಿಸಬಹುದು.

ವೇದಿಕೆಯು ಇವುಗಳನ್ನು ನೀಡುತ್ತದೆ:

• ಆನ್‌ಲೈನ್ ಫೈಲಿಂಗ್ ಮತ್ತು ಡಿಜಿಟಲ್ ಡಾಕ್ಯುಮೆಂಟ್ ವಿನಿಮಯ

• ಒಟಿಪಿ ಆಧಾರಿತ ಆನ್‌ಬೋರ್ಡಿಂಗ್

• ಬಹುಭಾಷಾ ಬೆಂಬಲ

• ಎಐ ಮತ್ತು ಯಂತ್ರ ಕಲಿಕೆ-ಸಕ್ರಿಯಗೊಳಿಸಿದ ಸೇವೆಗಳು

• ಭಾರತ್ ಕೋಶ್, ಪೇಗೋವ್ ಮತ್ತು ಎಸ್‌ ಬಿಐ ಇಪೇ ಮೂಲಕ ಆನ್‌ಲೈನ್ ಪಾವತಿ

• ಸ್ವಯಂಚಾಲಿತ ಎಸ್‌ ಎಂ ಎಸ್‌  ಮತ್ತು ಇಮೇಲ್ ಎಚ್ಚರಿಕೆಗಳು

• ಎಐ ಚಾಟ್‌ಬಾಟ್ ಸಹಾಯ

• ಧ್ವನಿಯಿಂದ ಪಠ್ಯಕ್ಕೆ ಕಾರ್ಯನಿರ್ವಹಣೆ

• ಅಂಗವಿಕಲರಿಗೆ ಪ್ರವೇಶದ ವೈಶಿಷ್ಟ್ಯಗಳು

• ವಕೀಲರು ಮತ್ತು ಆಯೋಗದ ಅಧಿಕಾರಿಗಳಿಗೆ ಪಾತ್ರ ಆಧಾರಿತ ಡ್ಯಾಶ್‌ಬೋರ್ಡ್‌ಗಳು

ಎಲ್ಲಾ ಎನ್‌.ಡಿ.ಆರ್‌.ಸಿ. ಪೀಠಗಳು ಮತ್ತು 35 ರಾಜ್ಯ ಆಯೋಗಗಳಲ್ಲಿ ಹೈಬ್ರಿಡ್ ವೀಡಿಯೊ-ಕಾನ್ಫರೆನ್ಸಿಂಗ್ ಮೂಲಸೌಕರ್ಯದಿಂದ ಬೆಂಬಲಿತವಾದ ವರ್ಚುವಲ್ ವಿಚಾರಣೆಗಳು ಈ ಪ್ರಕ್ರಿಯೆಯ ಡೀಫಾಲ್ಟ್ ವಿಚಾರಣಾ ವಿಧಾನವಾಗಿದೆ.

ಈ ವೇದಿಕೆಯು ಭಾರತಕ್ಕೆ ಹಿಂತಿರುಗದೆ ಅನಿವಾಸಿ ಭಾರತೀಯರು (ಎನ್‌ ಆರ್‌ ಐ) ಅಲ್ಲಿಂದಲೇ ಗ್ರಾಹಕ ನ್ಯಾಯವನ್ನು ಪಡೆಯಲು ಅನುವು ಮಾಡಿಕೊಟ್ಟಿದೆ.

ಅನಿವಾಸಿ ಭಾರತೀಯರು ಸಲ್ಲಿಸಿದ 751 ದೂರುಗಳು: 

ಕ್ರ. ಸಂ

ದೇಶ

ಅನಿವಾಸಿ ಭಾರತೀಯರು ಸಲ್ಲಿಸಿದ ದೂರು ಪ್ರಕರಣಗಳು

1

ಯು.ಎಸ್‌.ಎ.

234

2

ಯುಕೆ

82

3

ಯುಎಇ

77

4

ಕೆನಡಾ

58

5

ಜರ್ಮನಿ

39

6

ಆಸ್ಟ್ರೇಲಿಯಾ

34

7

ಇತರ

227

ಒಟ್ಟು 61 ಅನಿವಾಸಿ ಭಾರತೀಯ ಪ್ರಕರಣಗಳನ್ನು ಈಗಾಗಲೇ ಈ ವೇದಿಕೆಯ ಮೂಲಕ ವಿಲೇವಾರಿ ಮಾಡಲಾಗಿದೆ.

ರಾಜ್ಯಗಳು 100% ಕ್ಕಿಂತ ಹೆಚ್ಚಿನ ವಿಲೇವಾರಿ ದರವನ್ನು ದಾಖಲಿಸುತ್ತಿವೆ

2025-26ನೇ ಹಣಕಾಸು ವರ್ಷದಲ್ಲಿ, ಈ ಕೆಳಗಿನ ವಿಲೇವಾರಿ ದರಗಳು 100 ಪ್ರತಿಶತಕ್ಕಿಂತ ಹೆಚ್ಚಿವೆ:

• ಎನ್‌.ಡಿ.ಆರ್‌.ಸಿ.

• ಉತ್ತರಾಖಂಡ

• ಛತ್ತೀಸ್‌ಗಢ

• ಚಂಡೀಗಢ

• ಮಧ್ಯಪ್ರದೇಶ

• ಪಂಜಾಬ್

• ಮೇಘಾಲಯ

• ರಾಜಸ್ಥಾನ

• ಕರ್ನಾಟಕ

• ಅರುಣಾಚಲ ಪ್ರದೇಶ

 

ಸುಗಮ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಲು, ಇಲಾಖೆಯು ಪ್ರಾದೇಶಿಕ ಕಾರ್ಯಾಗಾರಗಳನ್ನು ನಡೆಸಿತು, ರಾಜ್ಯ ಆಯೋಗಗಳೊಂದಿಗೆ ಸುಮಾರು 50 ವೀಡಿಯೊ ಸಮ್ಮೇಳನಗಳನ್ನು ಆಯೋಜಿಸಿತು ಮತ್ತು ಹಂತಗಳಲ್ಲಿ ಮೀಸಲಾದ ತಾಂತ್ರಿಕ ಮಾನವಶಕ್ತಿಯನ್ನು ನಿಯೋಜಿಸಿತು.

ಬಳಕೆದಾರರಿಗೆ, ವೇದಿಕೆಯು ಈ ಕೆಳಗಿನ ಸೇವಾಕಾರ್ಯ ಒದಗಿಸುತ್ತದೆ:

• ಸಹಾಯ ದಾಖಲೆಗಳು

• ಟ್ಯುಟೋರಿಯಲ್ ವೀಡಿಯೊಗಳು

• ಪುನರಪಿಕೇಳುವ ಪ್ರಶ್ನಾವಳಿಗಳು

• ಪ್ರಕ್ರಿಯೆ ಹರಿವಿನ ಮಾರ್ಗದರ್ಶಿಗಳು

• ಮೀಸಲಾದ ಸಹಾಯ ಕೇಂದ್ರ ಮತ್ತು ಟಿಕೆಟಿಂಗ್ ವ್ಯವಸ್ಥೆ

ಅಕ್ಟೋಬರ್ 2025 ಮತ್ತು ಮಾರ್ಚ್ 2026 ರ ನಡುವೆ, ಸಹಾಯ ಕೇಂದ್ರವು ಸ್ವೀಕರಿಸಿದ 5,537 ಟಿಕೆಟ್‌ಗಳಲ್ಲಿ 4,821 ಅನ್ನು ಪರಿಹರಿಸಿದೆ. ಆಗಸ್ಟ್ 2025 ರಿಂದ, ಇಲಾಖೆ, ಎನ್‌.ಡಿ.ಆರ್‌.ಸಿ. ಮತ್ತು ಎನ್.ಐ.ಸಿ ಒಳಗೊಂಡ ಸಾಪ್ತಾಹಿಕ ಜನರ ಅಹವಾಲು (ಜನ್‌ ಸುನ್‌ ವಾಯಿ) ಅವಧಿಗಳು ಬಳಕೆದಾರರಿಗೆ ಸಮಸ್ಯೆಗಳನ್ನು ಪರಿಹರಿಸಲು ಮತ್ತು ನಿರಂತರ ಸುಧಾರಣೆಗಾಗಿ ಪ್ರತಿಕ್ರಿಯೆಯನ್ನು ಒದಗಿಸಲು ಸಹಾಯ ಮಾಡುತ್ತಿವೆ.

ಪರಿಹಾರ ಕಂಡ ಗ್ರಾಹಕ ಯಶಸ್ಸಿನ ಕಥೆಗಳು

ಅಹಮದಾಬಾದ್, ಗುಜರಾತ್: ಮೆಡಿಕ್ಲೈಮ್ ವಿವಾದವೊಂದರಲ್ಲಿ, ಜಿಲ್ಲಾ ಗ್ರಾಹಕ ವಿವಾದ ಪರಿಹಾರ ಆಯೋಗವು 27 ದಿನಗಳಲ್ಲಿ ನ್ಯಾಯ ಒದಗಿಸಿತು. ಮೆಡಿಕ್ಲೈಮ್ ಇತ್ಯರ್ಥದಿಂದ ಕಡಿತಗೊಳಿಸಲಾದ ರೂ.16,224 ಅನ್ನು 7% ಬಡ್ಡಿ, ರೂ.2,000 ಪರಿಹಾರ ಮತ್ತು ರೂ.2,000 ಮೊಕದ್ದಮೆ ವೆಚ್ಚಗಳೊಂದಿಗೆ ಮರುಪಾವತಿಸುವಂತೆ ಆಯೋಗವು ವಿಮಾ ಕಂಪನಿಗೆ ನಿರ್ದೇಶನ ನೀಡಿತು.

 

ನಾಮಕ್ಕಲ್, ತಮಿಳುನಾಡು: ಮತ್ತೊಂದು ಪ್ರಕರಣವನ್ನು 56 ದಿನಗಳಲ್ಲಿ ಪರಿಹರಿಸಲಾಯಿತು, ಜಿಲ್ಲಾ ಗ್ರಾಹಕ ವಿವಾದ ಪರಿಹಾರ ಆಯೋಗವು, ನಾಮಕ್ಕಲ್, ಕಲಿಕಾ ಅಕಾಡೆಮಿಯು ಉದ್ಯೋಗ ಖಾತರಿ ಕಾರ್ಯಕ್ರಮದಡಿಯಲ್ಲಿ ಸೇವೆಗಳನ್ನು ಭರವಸೆ ನೀಡಿದಂತೆ ಒದಗಿಸದ ನಂತರ ಸಂಗ್ರಹಿಸಿದ ರೂ.24,780 ಅನ್ನು ಮರುಪಾವತಿಸುವಂತೆ ಆದೇಶಿಸಿತು. ಆಯೋಗವು ರೂ.10,000 ಪರಿಹಾರವನ್ನು ಸಹ ನೀಡಿತು.

ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖೆಯು ವೇಗವಾದ, ಪಾರದರ್ಶಕ ಮತ್ತು ಗ್ರಾಹಕ ಸ್ನೇಹಿ ನ್ಯಾಯ ವಿತರಣೆಯನ್ನು ಖಚಿತಪಡಿಸಿಕೊಳ್ಳಲು ನಿರಂತರ ತರಬೇತಿ, ಪ್ರವೇಶಸಾಧ್ಯತೆಯ ಸುಧಾರಣೆಗಳು ಮತ್ತು ಪಾಲುದಾರರ ತೊಡಗಿಸಿಕೊಳ್ಳುವಿಕೆಯ ಮೂಲಕ ವೇದಿಕೆಯನ್ನು ಮತ್ತಷ್ಟು ಬಲಪಡಿಸಲು ಬದ್ಧವಾಗಿದೆ. ಗ್ರಾಹಕರು ಮತ್ತು ವಕೀಲರು ತಡೆರಹಿತ ಆನ್‌ಲೈನ್ ಕುಂದುಕೊರತೆ ಪರಿಹಾರಕ್ಕಾಗಿ ಇ-ಜಾಗೃತಿ ಮೂಲಕ ವೇದಿಕೆಯನ್ನು ಪ್ರವೇಶಿಸಬಹುದು.

******

 


(रिलीज़ आईडी: 2270064) आगंतुक पटल : 14
इस विज्ञप्ति को इन भाषाओं में पढ़ें: English , Urdu , हिन्दी , Tamil