ಸಂವಹನ ಸಚಿವಾಲಯ
ಕರಡು ಟೆಲಿಕಾಂ ಗ್ರಾಹಕ ದೂರು ಪರಿಹಾರ (ನಾಲ್ಕನೇ ತಿದ್ದುಪಡಿ) ನಿಯಮ, 2026 ರ ಆಕ್ಷೇಪಣೆ, ಸಲಹೆ ಸಲ್ಲಿಸಲು ಗಡುವು ವಿಸ್ತರಣೆ
प्रविष्टि तिथि:
04 JUN 2026 2:21PM by PIB Bengaluru
ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟಿ ಆರ್ ಎ ಐ - ಟ್ರಾಯ್) 2026 ರ ಮೇ 7 ರಂದು ತನ್ನ ಜಾಲತಾಣದಲ್ಲಿ ಸಂಬಂಧಿತರಿಂದ ಸಲಹೆ, ಆಕ್ಷೇಪಣೆ ಆಹ್ವಾನಿಸಿ ಕರಡು ದೂರಸಂಪರ್ಕ ಗ್ರಾಹಕ ದೂರು ಪರಿಹಾರ (ನಾಲ್ಕನೇ ತಿದ್ದುಪಡಿ) ನಿಯಮಗಳು, 2026 ಅನ್ನು ಪ್ರಕಟಿಸಿ, ಕರಡು ನಿಯಮಗಳ ಕುರಿತು ಟೀಕೆಗಳನ್ನು ಸಲ್ಲಿಸಲು 2026ರ ಜೂನ್ 5 ಅನ್ನು ಕೊನೆಯ ದಿನವಾಗಿ ನಿಗದಿಪಡಿಸಿತ್ತು.
ಪಾಲುದಾರರು ಮತ್ತು ಸಂಬಂಧಿತರಿಂದ ಟೀಕೆ ಟಿಪ್ಪಣಿ ಸಲ್ಲಿಸಲು ಕಾಲಾವಕಾಶ ವಿಸ್ತರಿಸುವಂತೆ ಮನವಿಗಳು ಸ್ವೀಕೃತವಾಗಿರುವುದರಿಂದ, ಕರಡು ತಿದ್ದುಪಡಿಯ ಕುರಿತು ಲಿಖಿತ ಟಿಪ್ಪಣಿಗಳನ್ನು ಸಲ್ಲಿಸಲು ಕೊನೆಯ ದಿನಾಂಕವನ್ನು 2026ರ ಜೂನ್ 12 ರವರೆಗೆ ವಿಸ್ತರಿಸಲು ನಿರ್ಧರಿಸಲಾಗಿದೆ. ಇದಲ್ಲದೆ, ಕೆಲವು ಸಂಬಂಧಿತರು ಕೋರಿರುವಂತೆ, ಸ್ವೀಕರಿಸಿದ ಟಿಪ್ಪಣಿಗಳ ಮೇಲೆ ಪ್ರತಿ-ಟಿಪ್ಪಣಿಗಳನ್ನು ಸಹ ಸಲ್ಲಿಸಬಹುದಾಗಿದ್ದು, ಪ್ರತಿ ಟಿಪ್ಪಣಿ ಸಲ್ಲಿಸಲು 2026ರ ಜೂನ್ 19 ಕೊನೆಯ ದಿನವಾಗಿದೆ.
ಕರಡು ತಿದ್ದುಪಡಿಯ ಕುರಿತಾದ ಟಿಪ್ಪಣಿ ಮತ್ತು ಪ್ರತಿ-ಟಿಪ್ಪಣಿಗಳನ್ನು ವಿದ್ಯುನ್ಮಾನ ರೂಪದಲ್ಲಿ ಇಮೇಲ್ ವಿಳಾಸ adv.ca@trai.gov.in ಗೆ ಕಳುಹಿಸಬಹುದಾಗಿದೆ. ಯಾವುದೇ ಸ್ಪಷ್ಟೀಕರಣ ಅಥವಾ ಹೆಚ್ಚಿನ ಮಾಹಿತಿಗಾಗಿ, ಸಲಹೆಗಾರ (ಸಿಎ) ಶ್ರೀ ವಿವೇಕ್ ಖಾರೆ ಅವರನ್ನು ಮೇಲೆ ತಿಳಿಸಿರುವ ಇಮೇಲ್ ವಿಳಾಸ ಅಥವಾ ದೂರವಾಣಿ ಸಂಖ್ಯೆ: +91-11-20907772 ರಲ್ಲಿ ಸಂಪರ್ಕಿಸಬಹುದು.
*****
(रिलीज़ आईडी: 2268874)
आगंतुक पटल : 16