ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ
ಯು.ಪಿ.ಎಸ್.ಸಿ. ನಾಗರಿಕ ಸೇವೆಗಳ ಪರೀಕ್ಷಾ ಫಲಿತಾಂಶಗಳಿಗೆ ಸಂಬಂಧಿಸಿದಂತೆ ದಾರಿತಪ್ಪಿಸುವ ಹಕ್ಕು ಪ್ರತಿಪಾದನೆಗಾಗಿ ಸಿಸಿಪಿಎ ₹7 ಲಕ್ಷ ದಂಡ ವಿಧಿಸುತ್ತದೆ
ಯಶಸ್ವಿ ಅಭ್ಯರ್ಥಿಗಳು ಹಾಜರಾದ ಕೋರ್ಸ್‌ಗಳ ಸ್ವರೂಪದ ಬಗ್ಗೆ ಮಾಹಿತಿಯನ್ನು ಮರೆಮಾಚಿರುವ ಸಂಸ್ಥೆ
ತರಬೇತಿ ಸೇವೆಗಳನ್ನು ಆಯ್ಕೆ ಮಾಡುವ ಮೊದಲು ಗ್ರಾಹಕರು ನಿಖರವಾದ ಮಾಹಿತಿಯನ್ನು ಪಡೆಯುವ ಹಕ್ಕನ್ನು ಹೊಂದಿದ್ದಾರೆ ಎಂದು ಸಿಸಿಪಿಎ ಪುನರುಚ್ಚರಿಸಿದೆ
ಪ್ರಕಟಣಾ ದಿನಾಂಕ:
30 MAY 2026 1:24PM by PIB Bengaluru
ಗ್ರಾಹಕ ರಕ್ಷಣಾ ಕಾಯ್ದೆ, 2019 ರ ಉಲ್ಲಂಘನೆಯಾಗಿ, ವಸ್ತು ಮಾಹಿತಿಯನ್ನು ಉದ್ದೇಶಪೂರ್ವಕವಾಗಿ ಮರೆಮಾಚುವ ಮೂಲಕ ದಾರಿತಪ್ಪಿಸುವ ಜಾಹೀರಾತಿನಲ್ಲಿ ತೊಡಗಿದ್ದಕ್ಕಾಗಿ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ (ಸಿಸಿಪಿಎ) “ವಜಿರಾಮ್ ಮತ್ತು ರವಿ ಐಎಎಸ್ ಸ್ಟಡಿ ಸೆಂಟರ್ ಎಲ್‌ಎಲ್‌ಪಿ” ಸಂಸ್ಥೆ ವಿರುದ್ಧ ₹7,00,000 ದಂಡ ವಿಧಿಸುವ ಅಂತಿಮ ಆದೇಶವನ್ನು ಹೊರಡಿಸಿದೆ. ಗ್ರಾಹಕರ ಹಕ್ಕುಗಳನ್ನು ಒಂದು ವರ್ಗವಾಗಿ ರಕ್ಷಿಸಲು ಮತ್ತು ಉತ್ತೇಜಿಸಲು ಮತ್ತು ಗ್ರಾಹಕ ರಕ್ಷಣಾ ಕಾಯ್ದೆ, 2019 ರ ನಿಬಂಧನೆಗಳನ್ನು ಉಲ್ಲಂಘಿಸಿ ಯಾವುದೇ ಸರಕು ಅಥವಾ ಸೇವೆಗಳಿಗೆ ಸಂಬಂಧಿಸಿದಂತೆ ಯಾವುದೇ ಸುಳ್ಳು ಅಥವಾ ದಾರಿತಪ್ಪಿಸುವ ಜಾಹೀರಾತು ನೀಡದಂತೆ ನೋಡಿಕೊಳ್ಳಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಯು.ಪಿ.ಎಸ್.ಸಿ. ಸಿವಿಲ್ ಸರ್ವೀಸಸ್ ಎಕ್ಸಾಮಿನೇಷನ್ (ಸಿ.ಎಸ್.ಇ) 2023 ರ ಯಶಸ್ವಿ ಅಭ್ಯರ್ಥಿಗಳ ಹೆಸರುಗಳು, ಛಾಯಾಚಿತ್ರಗಳು ಮತ್ತು ಸಾಧನೆಗಳನ್ನು ಕೋಚಿಂಗ್ ಇನ್ಸ್ಟಿಟ್ಯೂಟ್ ದೊಡ್ಡ ಹಕ್ಕುಪ್ರತಿಪಾದನೆಗಳನ್ನು ನೀಡುತ್ತಿದೆ, ಪ್ರಚಾರ ಮಾಡುತ್ತಿದೆ ಮತ್ತು ಪ್ರಮುಖವಾಗಿ ಬಳಸಿಕೊಂಡಿದೆ ಮತ್ತು ಅಂತಹ ಅಭ್ಯರ್ಥಿಗಳು ಆಯ್ಕೆ ಮಾಡಿಕೊಂಡ ನಿರ್ದಿಷ್ಟ ಕೋರ್ಸ್‌ಗಳ ಬಗ್ಗೆ ಪ್ರಮುಖ ಮಾಹಿತಿಯನ್ನು ಸಂಪೂರ್ಣ ಮರೆಚುವ ಕಾರ್ಯ ಮಾಡಿದೆ ಎಂದು ಗಮನಿಸಿದ ನಂತರ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರದ (ಸಿಸಿಪಿಎ) ಮುಖ್ಯ ಆಯುಕ್ತರಾದ ಶ್ರೀಮತಿ ನಿಧಿ ಖರೆ ಮತ್ತು ಆಯುಕ್ತರಾದ ಶ್ರೀ ಅನುಪಮ್ ಮಿಶ್ರಾ ಅವರು “ವಾಜಿರಾಮ್ ಮತ್ತು ರವಿ ಐಎಎಸ್ ಸ್ಟಡಿ ಸೆಂಟರ್ ಎಲ್‌ಎಲ್‌ಪಿ” ಸಂಸ್ಥೆ ವಿರುದ್ಧ ದಂಡದ ಆದೇಶವನ್ನು ಹೊರಡಿಸಿದರು.
ಯು.ಪಿ.ಎಸ್.ಸಿ. ಸಿವಿಲ್ ಸರ್ವೀಸಸ್ ಎಕ್ಸಾಮಿನೇಷನ್ (ಸಿ.ಎಸ್.ಇ) 2023 ರ ಫಫಲಿತಾಂಶ ಘೋಷಣೆಯ ನಂತರ ಈ ಸಂಸ್ಥೆಯು ತನ್ನ ಅಧಿಕೃತ ವೆಬ್‌ಸೈಟ್ ನಲ್ಲಿ ( www.vajiramandravi.com ) ಈ ಕೆಳಗಿನ ಹಕ್ಕುಗಳನ್ನು ಪ್ರಕಟಿಸಿದೆ:
i. "ಅಗ್ರಶ್ರೇಣಿಯ 10 ರಲ್ಲಿ 8 ರ‍್ಯಾಂಕ್ ಹೊಂದಿರುವವರು “ವಾಜಿರಾಮ್ ಮತ್ತು ರವಿ” ಸಂಸ್ಥೆಯವರು"
ii. " ಅಗ್ರಶ್ರೇಣಿಯ 50 ರಲ್ಲಿ 37 ರ‍್ಯಾಂಕ್ ಹೊಂದಿರುವವರು “ವಾಜಿರಾಮ್ ಮತ್ತು ರವಿ” ಸಂಸ್ಥೆಯವರು"
iii. "ವಾಸ್ತವ: ಪ್ರತಿ ವರ್ಷ, ಯು.ಪಿ.ಎಸ್.ಸಿ. ಸಿವಿಲ್ ಸರ್ವೀಸಸ್ ಪರೀಕ್ಷೆಯ ಮೂಲಕ ಆಯ್ಕೆಯಾದ ಅಧಿಕಾರಿಗಳಲ್ಲಿ 30% ಕ್ಕಿಂತ ಹೆಚ್ಚು ಜನರು “ವಾಜಿರಾಮ್ ಮತ್ತು ರವಿ” ಸಂಸ್ಥೆಯ ವಿದ್ಯಾರ್ಥಿಗಳು."
ವಿವರವಾದ ತನಿಖೆಯ ನಂತರ ಸಿ.ಸಿ.ಪಿ.ಎ.ಯು ಈ ಕೆಳಗಿನವುಗಳನ್ನು ಗಮನಿಸಿದೆ:
|
ಕ್ರಮ ಸಂಖ್ಯೆ.
|
ಸಂಸ್ಥೆಯ ಹಕ್ಕು ಪ್ರತಿಪಾದನೆಗಳು
|
ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ (ಸಿ.ಸಿ.ಪಿ.ಎ.) ಗುರುತಿಸಿದ ವಿಷಯ
|
| |
“ಅಗ್ರಶ್ರೇಣಿಯ 10 ರಲ್ಲಿ 8 ರ‍್ಯಾಂಕ್ ಪಡೆದವರು “ವಾಜಿರಾಮ್ ಮತ್ತು ರವಿ” ಸಂಸ್ಥೆಯಿಂದ ಬಂದವರು”
|
8 ಅಭ್ಯರ್ಥಿಗಳಲ್ಲಿ 7 ಅಭ್ಯರ್ಥಿಗಳು ಉಚಿತ ಸಂದರ್ಶನ ಮಾರ್ಗದರ್ಶನ ಕಾರ್ಯಕ್ರಮಕ್ಕೆ ಮಾತ್ರ ದಾಖಲಾಗಿದ್ದರು.
|
| |
“ಅಗ್ರಶ್ರೇಣಿಯ 50 ರಲ್ಲಿ 37 ರ‍್ಯಾಂಕ್ ಪಡೆದವರು ”
|
37 ಅಭ್ಯರ್ಥಿಗಳಲ್ಲಿ 29 ಅಭ್ಯರ್ಥಿಗಳು ಉಚಿತ ಸಂದರ್ಶನ ಮಾರ್ಗದರ್ಶನ ಕಾರ್ಯಕ್ರಮಕ್ಕೆ ಮಾತ್ರ ದಾಖಲಾಗಿದ್ದರು.
|
| |
"ವಾಸ್ತವ: ಪ್ರತಿ ವರ್ಷ, ಯು.ಪಿ.ಎಸ್.ಸಿ. ನಾಗರಿಕ ಸೇವೆಗಳ ಪರೀಕ್ಷೆಯ ಮೂಲಕ ಆಯ್ಕೆಯಾದ ಅಧಿಕಾರಿಗಳಲ್ಲಿ 30% ಕ್ಕಿಂತ ಹೆಚ್ಚು ಜನರು “ವಾಜಿರಾಮ್ ಮತ್ತು ರವಿ” ಸಂಸ್ಥೆಯ ವಿದ್ಯಾರ್ಥಿಗಳಾಗಿರುತ್ತಾರೆ."
|
i. 2021 ರಲ್ಲಿ- ಯಶಸ್ವಿ ಅಭ್ಯರ್ಥಿಗಳಲ್ಲಿ 86.36% ರಷ್ಟು ಮಂದಿ ಸಂದರ್ಶನ ಮಾರ್ಗದರ್ಶನ ಕಾರ್ಯಕ್ರಮದಲ್ಲಿ ದಾಖಲಾಗಿದ್ದಾರೆ.
ii. 2022 ರಲ್ಲಿ- ಯಶಸ್ವಿ ಅಭ್ಯರ್ಥಿಗಳಲ್ಲಿ 78.31% ರಷ್ಟು ಮಂದಿ ಸಂದರ್ಶನ ಮಾರ್ಗದರ್ಶನ ಕಾರ್ಯಕ್ರಮದಲ್ಲಿ ದಾಖಲಾಗಿದ್ದಾರೆ.
iii. 2023 ರಲ್ಲಿ- ಯಶಸ್ವಿ ಅಭ್ಯರ್ಥಿಗಳಲ್ಲಿ 97.56% ರಷ್ಟು ಮಂದಿ ಸಂದರ್ಶನ ಮಾರ್ಗದರ್ಶನ ಕಾರ್ಯಕ್ರಮದಲ್ಲಿ ದಾಖಲಾಗಿದ್ದಾರೆ.
iv. 2024 ರಲ್ಲಿ- ಯಶಸ್ವಿ ಅಭ್ಯರ್ಥಿಗಳಲ್ಲಿ 71.69% ರಷ್ಟು ಮಂದಿ ಸಂದರ್ಶನ ಮಾರ್ಗದರ್ಶನ ಕಾರ್ಯಕ್ರಮದಲ್ಲಿ ದಾಖಲಾಗಿದ್ದಾರೆ.
|
ಮೇಲೆ ತಿಳಿಸಿದ ಪ್ರಮುಖ ಮಾಹಿತಿಯನ್ನು ಈ ಯಾವುದೇ ವರ್ಷಗಳಲ್ಲಿಯೂ ಕೂಡಾ ಸಂಸ್ಥೆಯ ಅಧಿಕೃತ ವೆಬ್‌ಸೈಟ್ ನಲ್ಲಿ ಬಹಿರಂಗಪಡಿಸಲಾಗಿಲ್ಲ.
ಐಜಿಪಿ ಕಾರ್ಯಕ್ರಮವು, ಯು.ಪಿ.ಎಸ್.ಸಿ. ಸಿ.ಎಸ್.ಇ.ಯ ಎರಡು ಅತ್ಯಂತ ಕಠಿಣ ಸ್ಪರ್ಧಾತ್ಮಕ ಹಂತಗಳಲ್ಲಿ ಸ್ವತಂತ್ರವಾಗಿ ಉತ್ತೀರ್ಣರಾದ ನಂತರ ಪ್ರಾರಂಭವಾಗುವ ಕಾರ್ಯಕ್ರಮವಾಗಿದೆ ಎಂದು ಸಿಸಿಪಿಎ ತಿಳಿಸಿದೆ, ಇದರಲ್ಲಿ ಈ ಸಂಸ್ಥೆಯು ಯಾವುದೇ ಶೈಕ್ಷಣಿಕ ಕೊಡುಗೆಯನ್ನು ನೀಡಿಲ್ಲ, ಈ ಸಂಸ್ಥೆಯು ಯಾವುದೇ ರೀತಿಯ ಶೈಕ್ಷಣಿಕ ಭಾಗವಹಿಸುವಿಕೆ ಹೊಂದಿಲ್ಲ. ಸಮಗ್ರ ಪಾವತಿಸಿದ ತರಬೇತಿ ಕಾರ್ಯಕ್ರಮಗಳ ಜಾಹೀರಾತುಗಳ ಜೊತೆಗೆ ಅಂತಹ ಅಭ್ಯರ್ಥಿಗಳನ್ನು ಪ್ರಮುಖವಾಗಿ ಪ್ರದರ್ಶಿಸುವ ಮೂಲಕ, ನಿರ್ದಿಷ್ಟ ಕೋರ್ಸ್‌ನ ಯಾವುದೇ ಬಹಿರಂಗಪಡಿಸುವಿಕೆಯಿಲ್ಲದೆ, ಈ ಅಭ್ಯರ್ಥಿಗಳು ಸಂಸ್ಥೆಯ ಪೂರ್ಣ-ಪ್ರಮಾಣದ ತರಬೇತಿ ಕಾರ್ಯಕ್ರಮಗಳ ಉತ್ಪನ್ನಗಳು ಎಂಬ ತಪ್ಪು ಕಲ್ಪನೆಯನ್ನು ಸಂಸ್ಥೆಯು ಸೃಷ್ಟಿಸಿ, ಪ್ರಚಾರ ಮಾಡಿತು.
ಯಶಸ್ವಿ ಅಭ್ಯರ್ಥಿಗಳು ಆಯ್ಕೆ ಮಾಡಿಕೊಂಡ ನಿರ್ದಿಷ್ಟ ಕೋರ್ಸ್‌ಗಳನ್ನು ಬಹಿರಂಗಪಡಿಸದಿರುವುದು, ಅಂತಹ ಅಭ್ಯರ್ಥಿಗಳು ಪೂರ್ಣ-ಪ್ರಮಾಣದ ತರಗತಿ ಕಾರ್ಯಕ್ರಮಗಳು, ಐಚ್ಛಿಕ ವಿಷಯ ತರಬೇತಿ, ಪರೀಕ್ಷಾ ಸರಣಿ ಅಥವಾ ಅಲ್ಪಾವಧಿಯ ಉಚಿತ ಸಂದರ್ಶನ ಮಾರ್ಗದರ್ಶನ ಕಾರ್ಯಕ್ರಮಕ್ಕೆ ಹಾಜರಾಗಿದ್ದಾರೆಯೇ ಎಂಬುದನ್ನು ಒಳಗೊಂಡಂತೆ ಕಾಯಿದೆಯಡಿಯಲ್ಲಿ ದಾರಿತಪ್ಪಿಸುವ ಜಾಹೀರಾತಿಗೆ ಸಮನಾಗಿರುತ್ತದೆ ಎಂದು ಸಿಸಿಪಿಎ ಗಮನಿಸಿದೆ, ಏಕೆಂದರೆ ಇದು ನಿರೀಕ್ಷಿತ ಗ್ರಾಹಕರನ್ನು ತಿಳುವಳಿಕೆಯುಳ್ಳ ಆಯ್ಕೆ ಮಾಡುವ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತದೆ. ಗ್ರಾಹಕ ಸಂರಕ್ಷಣಾ ಕಾಯ್ದೆ, 2019 ರ ಸೆಕ್ಷನ್ 2(28) (iv) ರ ಅಡಿಯಲ್ಲಿ "ದಾರಿ ತಪ್ಪಿಸುವ ಜಾಹೀರಾತು" ಎಂಬ ವ್ಯಾಖ್ಯಾನದೊಳಗೆ ಈ ಆಕ್ಷೇಪಾರ್ಹ ಜಾಹೀರಾತುಗಳು ಬರುತ್ತವೆ ಎಂದು ಸಿಸಿಪಿಎ ಅಭಿಪ್ರಾಯಪಟ್ಟಿದೆ, ಇದು ಪ್ರಮುಖ ಮಾಹಿತಿಯನ್ನು ಉದ್ದೇಶಪೂರ್ವಕವಾಗಿ ಮರೆಮಾಚುವುದನ್ನು ನಿಷೇಧಿಸುತ್ತದೆ. ಈ ನಡವಳಿಕೆಯು ಗ್ರಾಹಕರಿಗೆ ತಿಳಿಸುವ ಹಕ್ಕನ್ನು ನೀಡುವ ಕಾಯಿದೆಯ ಸೆಕ್ಷನ್ 2(9) ರ ಉಲ್ಲಂಘನೆಯಾಗಿದೆ ಎಂದು ಕಂಡುಬಂದಿದೆ.
ವಿದ್ಯಾರ್ಥಿಗಳ ಹಿತಾಸಕ್ತಿಗಳನ್ನು ಕಾಪಾಡಲು ಮತ್ತು ತರಬೇತಿ ವಲಯದಲ್ಲಿ ಪಾರದರ್ಶಕತೆಯನ್ನು ಖಚಿತಪಡಿಸಿಕೊಳ್ಳಲು ಇಲ್ಲಿಯವರೆಗೆ, ಸಿಸಿಪಿಎ ದಾರಿತಪ್ಪಿಸುವ ಜಾಹೀರಾತುಗಳು ಮತ್ತು ಅನ್ಯಾಯದ ವ್ಯಾಪಾರ ಪದ್ಧತಿಗಳಿಗಾಗಿ ತರಬೇತಿ ಸಂಸ್ಥೆಗಳಿಗೆ 60 ಕ್ಕೂ ಹೆಚ್ಚು ನೋಟಿಸ್‌ಗಳನ್ನು ನೀಡಿದೆ. ಯು.ಪಿ.ಎಸ್.ಸಿ. ನಾಗರಿಕ ಸೇವಾ ಪರೀಕ್ಷೆ (ಸಿ.ಎಸ್.ಇ), ಐಐಟಿ-ಜೆಇಇ, ಎನ್.ಇ.ಇ.ಟಿ, ಆರ್.ಬಿ.ಐ., ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳಂತಹ ಪರೀಕ್ಷೆಗಳಿಗೆ ತರಬೇತಿ ನೀಡುವ ತರಬೇತಿ ಸಂಸ್ಥೆಗಳ ಮೇಲೆ ಸಿಸಿಪಿಎ ₹1.46 ಕೋಟಿಗೂ ಹೆಚ್ಚಿನ ದಂಡವನ್ನು ವಿಧಿಸಿದೆ.
(ಅಂತಿಮ ಆದೇಶಗಳನ್ನು ಈ ಕೆಳಗಿನ ಕೊಂಡಿ ಮೂಲಕ ಪ್ರವೇಶಿಸಿ ಪಡೆಯಬಹುದು: https://jagograhakjago.gov.in/ಸಿಸಿಪಿಎ_Orders/index.html).
******
(ಪ್ರಕಟಣೆ ಐ.ಡಿ.: 2266980)
ವಿಸಿಟರ್ ಕೌಂಟರ್ : 21