ಈಶಾನ್ಯ ರಾಜ್ಯಗಳ ಅಭಿವೃಧ್ಧಿ ಸಚಿವಾಲಯ
₹236 ಕೋಟಿ ವೆಚ್ಚದ ತ್ರಿಪುರ ಕ್ವೀನ್ ಪೈನಾಪಲ್ ಮಿಷನ್ ಗೆ ಕೇಂದ್ರ ಸಚಿವರಾದ ಜ್ಯೋತಿರಾದಿತ್ಯ ಎಂ. ಸಿಂಧಿಯಾ ಅವರು ಚಾಲನೆ ನೀಡಿದರು
ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಪರಿಕಲ್ಪನೆಯ ದೂರದೃಷ್ಟಿಯಡಿಯಲ್ಲಿ, ತ್ರಿಪುರಾದ ಕೃಷಿ ಸಾಮರ್ಥ್ಯಗಳನ್ನು ಜಾಗತಿಕವಾಗಿ ಸ್ಪರ್ಧಾತ್ಮಕ ಬ್ರ್ಯಾಂಡ್ ಗಳಾಗಿ ಪರಿವರ್ತಿಸಲಾಗುತ್ತಿದೆ
ಜಿಐ-ಟ್ಯಾಗ್ ಮಾಡಲಾದ ರಾಣಿ ಅನಾನಸನ್ನು (ಕ್ವೀನ್ ಪೈನಾಪಲ್) ಜಾಗತಿಕ ಉತ್ಕೃಷ್ಟ ಸಾಮರ್ಥ್ಯದೊಂದಿಗೆ ಪ್ರಮುಖ ಉತ್ಪನ್ನವಾಗಿ ಮಾಡಲಾಗುವುದು ಎಂದು ಕೇಂದ್ರ ಸಚಿವರು ತಿಳಿಸಿದ್ದಾರೆ
ಪ್ರಕಟಣಾ ದಿನಾಂಕ:
27 MAY 2026 8:22PM by PIB Bengaluru
ಕೇಂದ್ರ ಈಶಾನ್ಯ ಪ್ರದೇಶದ ಅಭಿವೃದ್ಧಿ ಸಚಿವರಾದ (ಎಂ.ಡಿ.ಒ.ಎನ್.ಈ.ಆರ್.) ಶ್ರೀ ಜ್ಯೋತಿರಾದಿತ್ಯ ಎಂ. ಸಿಂಧಿಯಾ ಅವರು, ತ್ರಿಪುರದ ಮುಖ್ಯಮಂತ್ರಿಯೊಂದಿಗೆ ಇಂದು ತ್ರಿಪುರ ರಾಜ್ಯದಲ್ಲಿ ಅನಾನಸ್ ಕೃಷಿ ಮತ್ತು ಮೌಲ್ಯ ಸರಪಳಿ ಅಭಿವೃದ್ಧಿಗಾಗಿ ₹236 ಕೋಟಿ ವೆಚ್ಚದ ಒಮ್ಮುಖ-ನೇತೃತ್ವದ ಉಪಕ್ರಮವಾದ "ರಾಣಿ ಅನಾನಸು ಯೋಜನೆ (ಮಿಷನ್ ಕ್ವೀನ್ ಪೈನಾಪಲ್)" ಅನ್ನು ಪ್ರಾರಂಭಿಸಿದರು. ಈ ಮಿಷನ್ ಅನ್ನು ತ್ರಿಪುರಾದ ವಿಶಿಷ್ಟ ಮಾರಾಟದ ಪ್ರಸ್ತಾಪ (ಯು.ಎಸ್.ಪಿ) - ಜಿಐ-ಟ್ಯಾಗ್ ಮಾಡಲಾದ ರಾಣಿ ಅನಾನಸು (ಕ್ವೀನ್ ಪೈನಾಪಲ್) ಅನ್ನು ಪ್ರಚಾರ ಮಾಡಲು ಕ್ಯೂ2 ಹಣಕಾಸು ವರ್ಷ 2026 ರಿಂದ ಕ್ಯೂ4 ಹಣಕಾಸು ವರ್ಷ2028 ರವರೆಗೆ ಮೂರು ವರ್ಷಗಳ ಅನುಷ್ಠಾನ ಮಾರ್ಗಸೂಚಿಯಾಗಿ ವಿನ್ಯಾಸಗೊಳಿಸಲಾಗಿದೆ.

ಕೇಂದ್ರ ಈಶಾನ್ಯ ಪ್ರದೇಶದ ಅಭಿವೃದ್ಧಿ ಸಚಿವಾಲಯ (ಎಂ.ಡಿ.ಒ.ಎನ್.ಈ.ಆರ್.) ಆಯೋಜಿಸಲ್ಪಟ್ಟ ಈ ಮಿಷನ್, ರಾಜ್ಯದಲ್ಲಿ ಸಮಗ್ರ ಅನಾನಸ್ ಮೌಲ್ಯ ಸರಪಳಿ ಪರಿಸರ ವ್ಯವಸ್ಥೆಯನ್ನು ಸ್ಥಾಪಿಸಲು ಕೃಷಿ ಮತ್ತು ರೈತ ಕಲ್ಯಾಣ, ಆಹಾರ ಸಂಸ್ಕರಣಾ ಕೈಗಾರಿಕೆಗಳು, ವಾಣಿಜ್ಯ, ಎಂಎಸ್ ಎಂಟಿ, ಎಫೀಡಾ, ಡಿಪಿಐಐಟಿ, ಐಕಾರ್, ಸಿಎಸ್ಐಆರ್, ಟ್ರೈ ಬೆಡ್, ನೆರಮಾಕ್ ಮತ್ತು ತ್ರಿಪುರ ಸರ್ಕಾರದ ಯೋಜನೆಗಳು ಮತ್ತು ಮಧ್ಯಸ್ಥಿಕೆಗಳೊಂದಿಗೆ ಒಮ್ಮುಖವಾಗುವುದರ ಮೇಲೆ ನಿರ್ಮಿಸಲ್ಪಟ್ಟಿದೆ.
ಕೇಂದ್ರ ಈಶಾನ್ಯ ಪ್ರದೇಶದ ಅಭಿವೃದ್ಧಿಯ ಸಚಿವರು, ಈಶಾನ್ಯ ಪ್ರದೇಶವನ್ನು ಹೆಚ್ಚಿನ ಮೌಲ್ಯದ ಕೃಷಿ ಮತ್ತು ತೋಟಗಾರಿಕಾ ಉತ್ಪನ್ನಗಳ ಕೇಂದ್ರವಾಗಿ ಇರಿಸುವ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ದೃಷ್ಟಿಕೋನವನ್ನು ಒತ್ತಿ ಹೇಳಿದರು.
ಅನಾನಸ್ ರೈತರು, ಸಂಸ್ಕರಣಾಗಾರರು ಮತ್ತು ಹೂಡಿಕೆದಾರರು ಸೇರಿದಂತೆ ಪಾಲುದಾರರನ್ನು ವರ್ಚುವಲ್ ಆಗಿ ಉದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವ ಶ್ರೀ ಸಿಂಧಿಯಾ ಅವರು, "ಪ್ರಧಾನಮಂತ್ರಿ ನರೇಂದ್ರ ಮೋದಿಯವರ ದೃಷ್ಟಿಕೋನದಡಿಯಲ್ಲಿ, ತ್ರಿಪುರದ ಕೃಷಿ ಸಾಮರ್ಥ್ಯಗಳು ಜಾಗತಿಕವಾಗಿ ಸ್ಪರ್ಧಾತ್ಮಕ ಬ್ರ್ಯಾಂಡ್ ಗಳಾಗಿ ರೂಪಾಂತರಗೊಳ್ಳುತ್ತಿವೆ" ಎಂದು ಹೇಳಿದರು.
ಬೆಳೆ ಕೃಷಿ ಮಾತ್ರವಲ್ಲ, ಉತ್ಪಾದನೆ ಮತ್ತು ಒಟ್ಟುಗೂಡಿಸುವಿಕೆಯಿಂದ ಸಂಸ್ಕರಣೆ, ಬ್ರ್ಯಾಂಡಿಂಗ್, ಪ್ಯಾಕೇಜಿಂಗ್ ಮತ್ತು ರಫ್ತುಗಳವರೆಗೆ ರೈತರು ಸಂಪೂರ್ಣ ಮೌಲ್ಯ ಸರಪಳಿಯಲ್ಲಿ ಸಕ್ರಿಯ ಆಟಗಾರರಾಗಲು ಅನುವು ಮಾಡಿಕೊಡುವುದು ಇದರ ಉದ್ದೇಶ ಎಂದು ಸಚಿವರು ಒತ್ತಿ ಹೇಳಿದರು.
"ಕೃಷಿಯಿಂದ ಜಾಗತಿಕ ಮಾರುಕಟ್ಟೆಗಳವರೆಗೆ - ಸಂಪೂರ್ಣ ಮೌಲ್ಯ ಸರಪಳಿಯನ್ನು ನಿರ್ಮಿಸುವುದು ನಮ್ಮ ಗುರಿಯಾಗಿದೆ - ಇದರಿಂದ ರೈತರು ತಮ್ಮ ಉತ್ಪನ್ನಗಳಿಂದ ಸೃಷ್ಟಿಯಾದ ಸಮೃದ್ಧಿಯಲ್ಲಿ ಸಕ್ರಿಯ ಭಾಗವಹಿಸುವವರಾಗುತ್ತಾರೆ" ಎಂದು ಕೇಂದ್ರ ಸಚಿವ ಶ್ರೀ ಸಿಂಧಿಯಾ ಅವರು ಹೇಳಿದರು.

ತ್ರಿಪುರ ರಾಣಿ ಅನಾನಸು (ಕ್ವೀನ್ ಪೈನಾಪಲ್) ವಿಶಿಷ್ಟವಾದ ಆರೊಮ್ಯಾಟಿಕ್ ಪ್ರೊಫೈಲ್, ಕಡಿಮೆ-ನಾರಿನ ವಿನ್ಯಾಸ ಮತ್ತು ಜಿಐ- ಬೆಂಬಲಿತ ವಿಶಿಷ್ಟತೆಯನ್ನು ಹೊಂದಿದ್ದರೂ ಕೂಡ, ದುರ್ಬಲ ಮಾರುಕಟ್ಟೆ ಏಕೀಕರಣ ಮತ್ತು ಅಸಮರ್ಪಕ ಮೂಲಸೌಕರ್ಯದಿಂದಾಗಿ ರೈತರು ಕಡಿಮೆ ಬೆಲೆಗಳನ್ನು ಸದಾ ಪಡೆಯುತ್ತಲೇ ಇದ್ದಾರೆ ಎಂದು ಸಚಿವರು ಗಮನಿಸಿದರು. ಈ ಅಂತರವನ್ನು ಒಮ್ಮುಖ-ನೇತೃತ್ವದ ಹೂಡಿಕೆಗಳು ಮತ್ತು ಮಾರುಕಟ್ಟೆ-ಆಧಾರಿತ ಮಧ್ಯಸ್ಥಿಕೆಗಳ ಮೂಲಕ ರೈತ ಮೌಲ್ಯ ಸಾಕ್ಷಾತ್ಕಾರವನ್ನು ಗಮನಾರ್ಹವಾಗಿ ಹೆಚ್ಚಿಸುವ ಮೂಲಕ ಈ ಅಂತರವನ್ನು ಕಡಿಮೆ ಮಾಡುವ ಗುರಿಯನ್ನು ಈ ಅನಾನಸು ಮಿಷನ್ ಹೊಂದಿದೆ ಎಂದು ಅವರು ತಿಳಿಸಿದರು.
ಮಿಷನ್ ಅಡಿಯಲ್ಲಿ ಪ್ರಮುಖ ಮೂಲಸೌಕರ್ಯ ಘಟಕಗಳನ್ನು ಉಲ್ಲೇಖಿಸಿದ ಸಚಿವರು, ಈ ಕಾರ್ಯಕ್ರಮವು ಅಗರ್ತಲಾ ವಿಮಾನ ನಿಲ್ದಾಣದ ಬಳಿ ಒಂದು ಕೇಂದ್ರ ಹಬ್ ಮತ್ತು ಪಶ್ಚಿಮ ತ್ರಿಪುರ, ಖೋವಾಯ್ ಮತ್ತು ಸೆಪಾಹಿಜಲಾ ಜಿಲ್ಲೆಗಳ ಪ್ರಮುಖ ಅನಾನಸ್ ಬೆಳೆಯುವ ಕ್ಲಸ್ಟರ್ ಗಳಲ್ಲಿ ಎಂಟು ಸ್ಪೋಕ್ ಸಂಗ್ರಹ ಕೇಂದ್ರಗಳನ್ನು ಒಳಗೊಂಡಿರುವ "ಹಬ್ & ಸ್ಪೋಕ್" ಸಂಯೋಜಿತ ಅನಾನಸ್ ಕೊಯ್ಲಿನ ನಂತರದ ಪರಿಸರ ವ್ಯವಸ್ಥೆಯನ್ನು ಸ್ಥಾಪಿಸುತ್ತದೆ ಎಂದು ಹೇಳಿದರು. ಮೂಲಸೌಕರ್ಯವು ಗ್ರೇಡಿಂಗ್ ಸೌಲಭ್ಯಗಳು, ಕೋಲ್ಡ್ ಸ್ಟೋರೇಜ್, ರೀಫರ್ ಲಾಜಿಸ್ಟಿಕ್ಸ್, ಸೌರ ಕೋಲ್ಡ್ ಸ್ಟೋರೇಜ್, ಐಒಟಿ-ಸಕ್ರಿಯಗೊಳಿಸಿದ ಕೃಷಿ ಮೇಲ್ವಿಚಾರಣೆ ಮತ್ತು ಡಿಜಿಟಲ್ ಪತ್ತೆಹಚ್ಚುವಿಕೆ ವ್ಯವಸ್ಥೆಗಳನ್ನು ಒಳಗೊಂಡಿರುತ್ತದೆ.

ಖಾಸಗಿ ಪಾಲುದಾರರ ಸಹಭಾಗಿತ್ವದಲ್ಲಿ ನೆರಮಾಕ್ ಜಾರಿಗೆ ತರಲಿರುವ ಕಾರ್ಯಸಾಧ್ಯತಾ ಅಂತರ ನಿಧಿ (ವಿಜಿಎಫ್) ಮಾದರಿಯ ಮೂಲಕ ನಲ್ಕತಾ ಅನಾನಸು (ಪೈನಾಪಲ್) ಸಂಸ್ಕರಣಾ ಘಟಕದ ಪುನರುಜ್ಜೀವನದ ಬಗ್ಗೆ ಸಚಿವರು ಮತ್ತಷ್ಟು ಗಮನಸೆಳೆದರು. ಈ ಸೌಲಭ್ಯವು ಅನಾನಸ್ ಆಧಾರಿತ ಉತ್ಪನ್ನಗಳಿಗೆ ವಾಣಿಜ್ಯ-ಪ್ರಮಾಣದ ಸಂಸ್ಕರಣೆ ಮತ್ತು ಮೌಲ್ಯವರ್ಧನೆಯನ್ನು ಬೆಂಬಲಿಸುತ್ತದೆ.
ಮಿಷನ್‌ನ ಜೈವಿಕ-ಆರ್ಥಿಕ ತಂತ್ರವನ್ನು ಉಲ್ಲೇಖಿಸಿ, ಪ್ರಸ್ತುತ ತ್ಯಾಜ್ಯವಾಗಿ ತಿರಸ್ಕರಿಸಲಾದ ಅನಾನಸ್ ಸಸ್ಯದ ಸುಮಾರು 60 ಪ್ರತಿಶತವನ್ನು ಬ್ರೋಮೆಲೈನ್ ಹೊರತೆಗೆಯುವಿಕೆ, ಅನಾನಸ್ ಎಲೆ ನಾರು (ಪಿಎಎಲ್ ಎಫ್) ಸಂಸ್ಕರಣೆ ಮತ್ತು ಜಿಐ -ಬ್ರಾಂಡೆಡ್ ಮಿಠಾಯಿ ಘಟಕಗಳ ಮೂಲಕ ಮೌಲ್ಯವರ್ಧಿತ ಉತ್ಪನ್ನಗಳಾಗಿ ಪರಿವರ್ತಿಸಲಾಗುವುದು ಎಂದು ಸಚಿವರು ಹೇಳಿದರು. ಈ ಮಧ್ಯಸ್ಥಿಕೆಗಳು ಮಹಿಳಾ ಸ್ವಸಹಾಯ ಗುಂಪುಗಳು, ಬುಡಕಟ್ಟು ಸಮುದಾಯಗಳು ಮತ್ತು ಗ್ರಾಮೀಣ ಉದ್ಯಮಿಗಳಿಗೆ ಹೊಸ ಅವಕಾಶಗಳನ್ನು ಸೃಷ್ಟಿಸುತ್ತವೆ ಮತ್ತು ಅನಾನಸ್ ಕೃಷಿಯ ಸುತ್ತ ವೃತ್ತಾಕಾರದ ಆರ್ಥಿಕತೆಯನ್ನು ಬಲಪಡಿಸುತ್ತವೆ ಎಂದು ಅವರು ಒತ್ತಿ ಹೇಳಿದರು.
ಉದ್ಘಾಟನಾ ಕಾರ್ಯಕ್ರಮದ ಭಾಗವಾಗಿ, ಅನಾನಸು ಯೋಜನೆ (ಪೈನಾಪಲ್ ಮಿಷನ್) ಕುರಿತು ಕಿರುಚಿತ್ರವನ್ನು ಪ್ರದರ್ಶಿಸಲಾಯಿತು, ನಂತರ ತ್ರಿಪುರಾದ ಪ್ರಗತಿಪರ ಅನಾನಸ್ ರೈತರೊಂದಿಗೆ ಸಂವಾದ ಮತ್ತು ಹೂಡಿಕೆದಾರರು ಮತ್ತು ಉದ್ಯಮ ಪ್ರತಿನಿಧಿಗಳ ಹೇಳಿಕೆಗಳು ನಡೆದವು.

ತ್ರಿಪುರದ ಮುಖ್ಯಮಂತ್ರಿ ಪ್ರೊ. (ಡಾ) ಮಾಣಿಕ್ ಸಹಾ ಅವರು ಅನಾನಸ್ ಅನ್ನು ತ್ರಿಪುರದ "ರಾಜ್ಯ ಹಣ್ಣು" ಎಂದು ಘೋಷಿಸಲಾಗಿದೆ ಎಂದು ಹೇಳಿದರು. ತ್ರಿಪುರದ ಪ್ರಸಿದ್ಧ ರಾಣಿ (ಕ್ವೀನ್) ಮತ್ತು ಕ್ಯೂ ಪ್ರಭೇದದ ಅನಾನಸ್ ಅನ್ನು ರಾಜ್ಯದ ಗುಡ್ಡಗಾಡು ಪ್ರದೇಶದಲ್ಲಿ ರಾಸಾಯನಿಕ ಒಳಹರಿವು ಇಲ್ಲದೆ ನೈಸರ್ಗಿಕವಾಗಿ ಬೆಳೆಯಲಾಗುತ್ತದೆ, ಇದು ಅವುಗಳನ್ನು ಅಸಾಧಾರಣವಾಗಿ ಸಿಹಿ, ರಸಭರಿತ ಮತ್ತು ಪರಿಮಳಯುಕ್ತವಾಗಿಸುತ್ತದೆ ಎಂದು ಅವರು ತಿಳಿಸಿದರು.
ರೈತರ ಆದಾಯವನ್ನು ಹೆಚ್ಚಿಸಲು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ರಾಜ್ಯ ಸರ್ಕಾರವು ಮೌಲ್ಯವರ್ಧನೆ, ಆಹಾರ ಸಂಸ್ಕರಣೆ, ಪ್ಯಾಕೇಜಿಂಗ್, ಬ್ರ್ಯಾಂಡಿಂಗ್ ಮತ್ತು ಮಾರುಕಟ್ಟೆ ಸಂಪರ್ಕಗಳನ್ನು ಉತ್ತೇಜಿಸುತ್ತಿದೆ ಎಂದು ಅವರು ಹೇಳಿದರು. ಕೇಂದ್ರ ಈಶಾನ್ಯ ಪ್ರದೇಶದ ಅಭಿವೃದ್ಧಿ ಸಚಿವಾಲಯದ ಬೆಂಬಲದಲ್ಲಿ ವಿಶ್ವಾಸ ವ್ಯಕ್ತಪಡಿಸಿದ ಅವರು, ಈ ಉಪಕ್ರಮವು ಉತ್ಪಾದಕತೆಯ ಅಂತರವನ್ನು ಕಡಿಮೆ ಮಾಡಲು ಮತ್ತು ತ್ರಿಪುರ ಅನಾನಸ್ ಅನ್ನು ಜಾಗತಿಕ ಬ್ರ್ಯಾಂಡ್ ಆಗಿ ಸ್ಥಾಪಿಸಲು ಸಹಾಯ ಮಾಡುತ್ತದೆ ಎಂದು ಹೇಳಿದರು.
ತ್ರಿಪುರಾದ ಕೃಷಿ ಸಚಿವರಾದ ಶ್ರೀ ರತನ್ ಲಾಲ್ ನಾಥ್ ಅವರು ಮಿಷನ್ ಉದ್ದೇಶಗಳನ್ನು ಉಲ್ಲೇಖಿಸಿದರು ಮತ್ತು ಈ ಉಪಕ್ರಮಕ್ಕಾಗಿ ಕೇಂದ್ರ ಈಶಾನ್ಯ ಪ್ರದೇಶದ ಅಭಿವೃದ್ಧಿ ಸಚಿವಾಲಯಕ್ಕೆ ಧನ್ಯವಾದ ಅರ್ಪಿಸಿದರು.

ಕೇಂದ್ರ ಈಶಾನ್ಯ ಪ್ರದೇಶದ ಅಭಿವೃದ್ಧಿ ಸಚಿವಾಲಯದ ಕಾರ್ಯದರ್ಶಿ ಶ್ರೀ ಸಂಜಯ್ ಜಾಜು ಅವರು ತಮ್ಮ ಪರಿಚಯಾತ್ಮಕ ಮಾತುಗಳಲ್ಲಿ ಮಿಷನ್ ಅನುಷ್ಠಾನ ಚೌಕಟ್ಟಿನ ಬಗ್ಗೆ ವಿವರಿಸಿದರು ಮತ್ತು ತ್ರಿಪುರ ರಾಣಿ (ಕ್ವೀನ್) ಅನಾನಸ್ ನ ಸಂಪೂರ್ಣ ಆರ್ಥಿಕ ಸಾಮರ್ಥ್ಯವನ್ನು ಅನ್ ಲಾಕ್ ಮಾಡಲು ಮಿಷನ್-ಮೋಡ್ ವಿಧಾನದ ಅಗತ್ಯವನ್ನು ತಿಳಿಸಿದರು. ಭಾರತದಲ್ಲಿ ಅತ್ಯಂತ ಪರಿಮಳಯುಕ್ತ ಮತ್ತು ಕಡಿಮೆ-ನಾರಿನ ಅನಾನಸ್ ತಳಿಗಳಲ್ಲಿ ಒಂದಾಗಿದ್ದರೂ, ಸಣ್ಣ ಹಿಡುವಳಿದಾರರು ಪ್ರಸ್ತುತ ಫಾರ್ಮ್‌ಗೇಟ್ ಮಟ್ಟದಲ್ಲಿ ಪ್ರತಿ ಕಿಲೋಗ್ರಾಂಗೆ ₹6–10 ಮಾತ್ರ ಪಡೆಯುತ್ತಾರೆ, ಆದರೆ ಸಂಸ್ಕರಿಸಿದ ಮತ್ತು ರಫ್ತು-ದರ್ಜೆಯ ಉತ್ಪನ್ನಗಳು ದೇಶೀಯ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಗಮನಾರ್ಹವಾಗಿ ಹೆಚ್ಚಿನ ಮೌಲ್ಯವನ್ನು ಪಡೆಯಬಹುದು ಎಂದು ಅವರು ಒತ್ತಿ ಹೇಳಿದರು.
ಸುಗ್ಗಿಯ ನಂತರದ ನಷ್ಟಗಳು, ಸಂಯೋಜಿತ ಕೋಲ್ಡ್-ಚೈನ್ ಮೂಲಸೌಕರ್ಯದ ಕೊರತೆ, ವಾಣಿಜ್ಯ-ಪ್ರಮಾಣದ ಸಂಸ್ಕರಣಾ ಸೌಲಭ್ಯಗಳ ಅನುಪಸ್ಥಿತಿ, ದುರ್ಬಲ ಬ್ರ್ಯಾಂಡಿಂಗ್ ಮತ್ತು ಸೀಮಿತ ರಚನಾತ್ಮಕ ಜಿಐ ಹಣಗಳಿಕೆ ಮತ್ತು ಖರೀದಿದಾರ-ಸಂಪರ್ಕ ವ್ಯವಸ್ಥೆಗಳು ಸೇರಿದಂತೆ ವಲಯದಲ್ಲಿನ ಪ್ರಮುಖ ರಚನಾತ್ಮಕ ಅಂತರವನ್ನು ವ್ಯವಸ್ಥಿತವಾಗಿ ಪರಿಹರಿಸಲು ಮಿಷನ್ ಪ್ರಯತ್ನಿಸುತ್ತದೆ ಎಂದು ಕಾರ್ಯದರ್ಶಿ ಅವರು ಮಹತ್ವವನ್ನು ಮತ್ತಷ್ಟು ಒತ್ತಿ ಹೇಳಿದರು.
ಮಿಷನ್ ಚಟುವಟಿಕೆಗಳಲ್ಲಿ ಜಿಐ ಅಧಿಕಾರ ಕಾರ್ಯಾಗಾರಗಳು, ಕ್ಯೂಆರ್-ಆಧಾರಿತ ಪತ್ತೆಹಚ್ಚುವಿಕೆ ವ್ಯವಸ್ಥೆಗಳು, ಜಿಐ ಹಣಗಳಿಕೆ ಚೌಕಟ್ಟುಗಳು, ಖರೀದಿದಾರ-ಮಾರಾಟಗಾರರ ಸಭೆಗಳು, ಸಾವಯವ ಪ್ರಮಾಣೀಕರಣ ಬೆಂಬಲ, ರಫ್ತು-ಸಿದ್ಧತಾ ಕ್ರಮಗಳು ಮತ್ತು ಜೂನ್ 27 ರಂದು ಅಂತರರಾಷ್ಟ್ರೀಯ ಅನಾನಸ್ ದಿನದೊಂದಿಗೆ ಜೋಡಿಸಲಾದ "ತ್ರಿಪುರ ರಾಣಿ ಅನಾನಸ್ ಉತ್ಸವ" ದಂತಹ ವಾರ್ಷಿಕ ಪ್ರಮುಖ ಕಾರ್ಯಕ್ರಮಗಳು ಸೇರಿವೆ.
ಸುಸ್ಥಿರ ಜೀವನೋಪಾಯ, ರೈತ ನೇತೃತ್ವದ ಮೌಲ್ಯ ಸೃಷ್ಟಿ ಮತ್ತು ರಾಜ್ಯಾದ್ಯಂತ ರಫ್ತು-ಆಧಾರಿತ ಬೆಳವಣಿಗೆಯನ್ನು ಬಲಪಡಿಸುವ ಮೂಲಕ ತ್ರಿಪುರ ರಾಣಿ ಅನಾನಸ್ ಅನ್ನು ಜಾಗತಿಕವಾಗಿ ಗುರುತಿಸಲ್ಪಟ್ಟ ಪ್ರೀಮಿಯಂ ಬ್ರ್ಯಾಂಡ್ ಆಗಿ ಪರಿವರ್ತಿಸುವ ಗುರಿಯನ್ನು ಮಿಷನ್ ಹೊಂದಿದೆ.
ಉದ್ಘಾಟನಾ ಕಾರ್ಯಕ್ರಮದಲ್ಲಿ ಕೇಂದ್ರ ಈಶಾನ್ಯ ಪ್ರದೇಶದ ಅಭಿವೃದ್ಧಿ ಸಚಿವಾಲಯ ಮತ್ತು ತ್ರಿಪುರ ಸರ್ಕಾರದ ಅಧಿಕಾರಿಗಳು ರೈತರು, ಉದ್ಯಮಿಗಳು ಮತ್ತು ಇತರ ಪಾಲುದಾರರು ಭಾಗವಹಿಸಿದ್ದರು.
*****
(ಪ್ರಕಟಣೆ ಐ.ಡಿ.: 2266093)
ವಿಸಿಟರ್ ಕೌಂಟರ್ : 8