ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ
‘ಜೀವನ್’ (JEEVAN) ಆ್ಯಪ್ ಮತ್ತು ‘ಶತಾಯು’ (SHATAYU) ವೃದ್ಧರ ಆರೈಕೆದಾರರ ಡ್ಯಾಶ್ ಬೋರ್ಡ್ ಆ್ಯಪ್ ಲೋಕಾರ್ಪಣೆ
ಪ್ರಕಟಣಾ ದಿನಾಂಕ:
22 MAY 2026 2:20PM by PIB Bengaluru
ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ಹಿರಿಯ ನಾಗರಿಕರಿಗಾಗಿ "ಜೀವನ್" (ಜಂಟಿ ಹಿರಿಯರ ಸಬಲೀಕರಣ ಮತ್ತು ವರ್ಚುವಲ್ ಸಹಾಯ ಜಾಲ) ಮೊಬೈಲ್ ಅಪ್ಲಿಕೇಶನ್ ಮತ್ತು "ಶತಾಯು" (ನಿಮ್ಮ ಉಪಯುಕ್ತತೆಗಾಗಿ ಹಿರಿಯ ಸಮಗ್ರ ಆರೈಕೆ ಸಹಾಯ ಮತ್ತು ತರಬೇತಿ) ವೃದ್ಧರ ಆರೈಕೆದಾರರ ಡ್ಯಾಶ್ಬೋರ್ಡ್ ಅನ್ನು ಪ್ರಾರಂಭಿಸಿದೆ.
ಇವು ಹಿರಿಯ ನಾಗರಿಕರ ಸುರಕ್ಷತೆ, ಆರೈಕೆ, ಘನತೆ ಮತ್ತು ಸಬಲೀಕರಣದತ್ತ ಒಂದು ಪ್ರಮುಖ ಹೆಜ್ಜೆಯಾಗಿದ್ದು, ತಂತ್ರಜ್ಞಾನದ ನೆರವಿನೊಂದಿಗೆ ವೃದ್ಧರ ಆರೈಕೆಯ ಪರಿಸರ ವ್ಯವಸ್ಥೆಯನ್ನು ಬಲಪಡಿಸುತ್ತದೆ.
ದೇಶದಾದ್ಯಂತ ಇರುವ ಹಿರಿಯ ನಾಗರಿಕರ ಬೆಂಬಲ ವ್ಯವಸ್ಥೆಯನ್ನು ಬಲಪಡಿಸುವ ಗುರಿಯನ್ನು ಹೊಂದಿರುವ ಮಹತ್ವದ ಉಪಕ್ರಮದಲ್ಲಿ, ಗೌರವಾನ್ವಿತ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಕೇಂದ್ರ ಸಚಿವರಾದ ಡಾ. ವೀರೇಂದ್ರ ಕುಮಾರ್ ಅವರು ಇಂದು 'ಜೀವನ್' ಮೊಬೈಲ್ ಅಪ್ಲಿಕೇಶನ್ ಅನ್ನು ಲೋಕಾರ್ಪಣೆ ಮಾಡಿದರು. ಇದು ಭಾರತದಲ್ಲಿನ ಹಿರಿಯ ನಾಗರಿಕರ ಸುರಕ್ಷತೆ, ಕಲ್ಯಾಣ, ಆರೋಗ್ಯ ರಕ್ಷಣೆಯ ಲಭ್ಯತೆ ಮತ್ತು ಸಾಮಾಜಿಕ ಒಳಗೊಳ್ಳುವಿಕೆಯನ್ನು ಹೆಚ್ಚಿಸಲು ವಿನ್ಯಾಸಗೊಳಿಸಲಾದ ವಿಶೇಷ ಡಿಜಿಟಲ್ ವೇದಿಕೆಯಾಗಿದೆ.
ಈ ಆ್ಯಪ್ ಹಿರಿಯ ನಾಗರಿಕರ ಅಗತ್ಯತೆಗಳು ಮತ್ತು ಕಳಕಳಿಗಳನ್ನು ಪರಿಹರಿಸುವ ಗುರಿಯನ್ನು ಹೊಂದಿರುವ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಇದರಲ್ಲಿ ಸರ್ಕಾರದ ಯೋಜನೆಗಳು ಮತ್ತು ಕಲ್ಯಾಣ ಕಾರ್ಯಕ್ರಮಗಳ ಮಾಹಿತಿ, ತುರ್ತು ಸಹಾಯ ಮತ್ತು ಬೆಂಬಲ ಸೇವೆಗಳು, ಹಾಗೂ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯು ಬೆಂಬಲಿಸುವ ಹಿರಿಯ ನಾಗರಿಕರ ಆಶ್ರಮಗಳ ವಿವರಗಳು ಲಭ್ಯವಿವೆ. ವಯೋವೃದ್ಧ ಬಳಕೆದಾರರ ಅವಶ್ಯಕತೆಗಳನ್ನು ಗಮನದಲ್ಲಿಟ್ಟುಕೊಂಡು, ಸರಳವಾದ ಮತ್ತು ಸುಲಭವಾಗಿ ಬಳಸಬಹುದಾದ ವ್ಯವಸ್ಥೆಯೊಂದಿಗೆ ಈ ವೇದಿಕೆಯನ್ನು ವಿನ್ಯಾಸಗೊಳಿಸಲಾಗಿದೆ.
"ಸುಸ್ಥಿತಿಯಲ್ಲಿರುವ ಆರೈಕೆ ಆರ್ಥಿಕತೆಯ ಸೃಷ್ಟಿ" ಎಂಬ ವಿಷಯದ ಕುರಿತು ನಡೆದ ರಾಷ್ಟ್ರೀಯ ಕಾರ್ಯಾಗಾರದಲ್ಲಿ, ದೇಶದಾದ್ಯಂತ ಹಿರಿಯ ನಾಗರಿಕರ ಆರೈಕೆ ಸೇವೆಗಳನ್ನು ಬೆಂಬಲಿಸಲು ಮತ್ತು ಬಲಪಡಿಸಲು ಅಭಿವೃದ್ಧಿಪಡಿಸಲಾದ ಮತ್ತೊಂದು ಅಪ್ಲಿಕೇಶನ್ ಆದ “ಶತಾಯು” (SHATAYU" )ಡ್ಯಾಶ್‌ಬೋರ್ಡ್ ಅನ್ನು ಸಹ ಬಿಡುಗಡೆ ಮಾಡಲಾಯಿತು.
ಇದು ಹಿರಿಯ ನಾಗರಿಕರಿಗೆ ನಿರ್ದಿಷ್ಟ ಜಿಲ್ಲೆ ಮತ್ತು ರಾಜ್ಯದಲ್ಲಿ ವೃದ್ಧಾಪ್ಯದ ಆರೈಕೆದಾರರ ('ಜೆರಿಯಾಟ್ರಿಕ್ ಕೇರ್ಗಿವರ್ಸ್') ಲಭ್ಯತೆಯ ಮಾಹಿತಿಯಂತಹ ವೈಶಿಷ್ಟ್ಯಗಳನ್ನು ಒದಗಿಸುತ್ತದೆ.
ಈ ವೇದಿಕೆಯನ್ನು ಸುಲಭವಾಗಿ ಮತ್ತು ಪರಿಣಾಮಕಾರಿ ಸೇವೆಗಳನ್ನು ಖಚಿತಪಡಿಸಿಕೊಳ್ಳಲು ಮತ್ತು ಸರಳವಾಗಿ ಬಳಸಲು ಅನುಕೂಲವಾಗುವಂತೆ ಸರಳ ಕಾರ್ಯಚಟುವಟಿಕೆಗಳೊಂದಿಗೆ ವಿನ್ಯಾಸಗೊಳಿಸಲಾಗಿದೆ.
*****
(ಪ್ರಕಟಣೆ ಐ.ಡಿ.: 2264116)
ವಿಸಿಟರ್ ಕೌಂಟರ್ : 16