ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
azadi ka amrit mahotsav

ಜಿನೀವಾದಲ್ಲಿ ನಡೆದ 79ನೇ ವಿಶ್ವ ಆರೋಗ್ಯ ಸಭೆಯಲ್ಲಿ "ಆರೋಗ್ಯದಲ್ಲಿ ಕೃತಕ ಬುದ್ಧಿಮತ್ತೆ: ಕಾನೂನುಗಳು, ನೈತಿಕ ಮೇಲ್ವಿಚಾರಣೆ, ಸಂಶೋಧನೆ ಮತ್ತು ಸಮಾನತೆ" ಎಂಬ ವಿಷಯ ಕುರಿತ ಉಪ ಕಾರ್ಯಕ್ರಮ ಉದ್ದೇಶಿಸಿ ಕೇಂದ್ರ ಆರೋಗ್ಯ ಸಚಿವರಾದ ಶ್ರೀ ಜೆ ಪಿ ನಡ್ಡಾ ಭಾಷಣ


ಆರೋಗ್ಯ ರಕ್ಷಣೆ ವಿತರಣೆಯನ್ನು ಮುಂದುವರಿಸಲು ಎಐ ತಂತ್ರಜ್ಞಾನ ಅಪಾರ ಅವಕಾಶಗಳನ್ನು ಒದಗಿಸುತ್ತದೆ; ಆದರೆ ಅದನ್ನು ಉತ್ತಮ ನಿಯಂತ್ರಣ, ಕಠಿಣ ಸಂಶೋಧನೆ, ನೈತಿಕ ಮೇಲ್ವಿಚಾರಣೆ ಮತ್ತು ಸಮಾನತೆಗೆ ಆಳವಾದ ಬದ್ಧತೆಯಿಂದ ರೂಪಿಸಬೇಕು; ಇದರಿಂದ ಅದರ ಪ್ರಯೋಜನಗಳು ಪ್ರತಿಯೊಬ್ಬ ನಾಗರಿಕನನ್ನು ತಲುಪುತ್ತವೆ: ಶ್ರೀ ಜೆ ಪಿ ನಡ್ಡಾ

"ಭಾರತದ ಆರೋಗ್ಯ ರಕ್ಷಣೆಯಲ್ಲಿ ಕೃತಕ ಬುದ್ಧಿಮತ್ತೆ ಕಾರ್ಯತಂತ್ರ(SAHI) ಜಾಗತಿಕ ದಕ್ಷಿಣದಿಂದ ಹೊರಹೊಮ್ಮುತ್ತಿರುವ ಮೊದಲ ಸಮಗ್ರ ಕಾರ್ಯತಂತ್ರವಾಗಿದ್ದು, ಭಾರತದ ಆರೋಗ್ಯ ರಕ್ಷಣಾ ಪ್ರಯಾಣವನ್ನು ನೈತಿಕ, ಪಾರದರ್ಶಕ ಮತ್ತು ಜನ-ಕೇಂದ್ರಿತ ರೀತಿಯಲ್ಲಿ ಮಾರ್ಗದರ್ಶನ ಮಾಡುತ್ತದೆ"

ವಿಶ್ವಾಸಾರ್ಹ ಮತ್ತು ಪರಸ್ಪರ ಕಾರ್ಯ ನಿರ್ವಹಿಸಬಹುದಾದ ಆರೋಗ್ಯ ದತ್ತಾಂಶ ಪರಿಸರ ವ್ಯವಸ್ಥೆಗಳನ್ನು ಬಲಪಡಿಸಲು, ಸಹಭಾಗಿತ್ವದ ಸಂಶೋಧನೆ ಉತ್ತೇಜಿಸಲು, ನೈತಿಕ ಎಐ ಅಭಿವೃದ್ಧಿ ಮುನ್ನಡೆಸಲು ಮತ್ತು ಹಂಚಿಕೆಯ ಆರೋಗ್ಯ ರಕ್ಷಣಾ ಸವಾಲುಗಳನ್ನು ಸಾಮೂಹಿಕವಾಗಿ ಪರಿಹರಿಸಲು ಜಾಗತಿಕ ಪಾಲುದಾರರೊಂದಿಗೆ ಕೆಲಸ ಮಾಡಲು ಭಾರತ ಬದ್ಧತೆ ಹೊಂದಿದೆ

"ಆರೋಗ್ಯ ರಕ್ಷಣೆಯಲ್ಲಿ ಎಐ ಭವಿಷ್ಯವನ್ನು ಕ್ರಮಾವಳಿಗಳಿಂದಲ್ಲ, ಸಾಮೂಹಿಕ ಮಾನವ ಆಯ್ಕೆಗಳಿಂದ ವ್ಯಾಖ್ಯಾನಿಸಲಾಗುತ್ತದೆ"

प्रविष्टि तिथि: 21 MAY 2026 9:16AM by PIB Bengaluru

ಜಿನೀವಾದಲ್ಲಿ ನಡೆದ 79ನೇ ವಿಶ್ವ ಆರೋಗ್ಯ ಸಭೆಯಲ್ಲಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಶ್ರೀ ಜಗತ್ ಪ್ರಕಾಶ್ ನಡ್ಡಾ ಅವರು "ಆರೋಗ್ಯದಲ್ಲಿ ಕೃತಕ ಬುದ್ಧಿಮತ್ತೆ: ಕಾನೂನುಗಳು, ನೈತಿಕ ಮೇಲ್ವಿಚಾರಣೆ, ಸಂಶೋಧನೆ ಮತ್ತು ಸಮಾನತೆ" ಎಂಬ ವಿಷಯ ಕುರಿತ ಉಪ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

ಜಾಗತಿಕ ನಾಯಕರು, ಪ್ರತಿನಿಧಿಗಳು, ತಜ್ಞರು ಮತ್ತು ನೀತಿ ನಿರೂಪಕರ ವಿಶೇಷ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಶ್ರೀ ನಡ್ಡಾ, ಆರೋಗ್ಯ ರಕ್ಷಣಾ ವ್ಯವಸ್ಥೆಗಳು, ಆಡಳಿತ ಮಾರ್ಗಸೂಚಿಗಳು, ಆರ್ಥಿಕತೆಗಳು ಮತ್ತು ವಿಶ್ವಾದ್ಯಂತದ ನಾಗರಿಕರ ಜೀವನವನ್ನು ಮರುರೂಪಿಸುವಲ್ಲಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನವು ಪರಿವರ್ತನೀಯ ಸಾಮರ್ಥ್ಯಗಳನ್ನು ಹೊಂದಿದೆ. ಆರೋಗ್ಯ ರಕ್ಷಣೆ ವಿತರಣೆಯನ್ನು ಮುಂದುವರಿಸಲು ಎಐ ಅಪಾರ ಅವಕಾಶಗಳನ್ನು ಒದಗಿಸುತ್ತಿದ್ದರೂ, ಅದನ್ನು "ಉತ್ತಮ ನಿಯಂತ್ರಣ, ಕಠಿಣ ಸಂಶೋಧನೆ, ನೈತಿಕ ಮೇಲ್ವಿಚಾರಣೆ ಮತ್ತು ಸಮಾನತೆಗೆ ಆಳವಾದ ಬದ್ಧತೆಯಿಂದ ರೂಪಿಸಬೇಕು. ಇದರಿಂದ ಅದರ ಪ್ರಯೋಜನಗಳು ಪ್ರತಿಯೊಬ್ಬ ನಾಗರಿಕನನ್ನು ತಲುಪುತ್ತವೆ" ಎಂದು ಅವರು ಹೇಳಿದರು.

2015ರಲ್ಲಿ ಡಿಜಿಟಲ್ ಇಂಡಿಯಾ ಉಪಕ್ರಮ ಪ್ರಾರಂಭಿಸುವ ಮೂಲಕ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ದೂರದೃಷ್ಟಿಯ ನಾಯಕತ್ವದಲ್ಲಿ ಭಾರತವು ಒಂದು ದಶಕದ ಹಿಂದೆ ಬಲವಾದ ಡಿಜಿಟಲ್ ಅಡಿಪಾಯ ಹಾಕಿದೆ ಎಂದು ಸಚಿವರಾದ ನಡ್ಡಾ ಹೇಳಿದರು. ಈ ಉಪಕ್ರಮವು "ಭಾರತವನ್ನು ಡಿಜಿಟಲ್ ಸಬಲೀಕೃತ ಸಮಾಜ ಮತ್ತು ಜ್ಞಾನ ಆರ್ಥಿಕತೆಯಾಗಿ ಪರಿವರ್ತಿಸುವ ಗುರಿ ಹೊಂದಿದೆ, ಎಐ ಸೇರಿದಂತೆ ಭವಿಷ್ಯದ ತಂತ್ರಜ್ಞಾನಗಳಿಗೆ ಭಾರತವನ್ನು ಸಜ್ಜುಗೊಳಿಸುವ" ಗುರಿ ಹೊಂದಲಾಗಿದೆ ಎಂದು ಅವರು ಹೇಳಿದರು.

2017ರ ಭಾರತದ ರಾಷ್ಟ್ರೀಯ ಆರೋಗ್ಯ ನೀತಿಯು ಸಮಗ್ರ, ಪರಸ್ಪರ ಕಾರ್ಯಸಾಧು, ಎಲ್ಲರನ್ನೂ ಒಳಗೊಂಡ ಮತ್ತು ಮಾಪನ ಮಾಡಬಹುದಾದ ಡಿಜಿಟಲ್ ಆರೋಗ್ಯ ಪರಿಸರ ವ್ಯವಸ್ಥೆಯನ್ನು ಕಲ್ಪಿಸಿಕೊಂಡಿದೆ ಎಂದು ಶ್ರೀ ನಡ್ಡಾ ಹೇಳಿದರು. ಈ ದೃಷ್ಟಿಕೋನವನ್ನು ಆಧರಿಸಿ ಸರ್ಕಾರವು 2021ರಲ್ಲಿ ಒಪ್ಪಿಗೆ ಆಧಾರಿತ ಡಿಜಿಟಲ್ ಆರೋಗ್ಯ ದತ್ತಾಂಶ ಮಾರ್ಗಸೂಚಿಗಳೊಂದಿಗೆ ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ ಪ್ರಾರಂಭಿಸಿದೆ, ಇದು ಗುಣಮಟ್ಟದ ಆರೋಗ್ಯ ದತ್ತಾಂಶ ರಚಿಸಲು ಅನುವು ಮಾಡಿಕೊಡುತ್ತದೆ ಎಂದರು.

ಉತ್ತಮ ಆರೋಗ್ಯ ಫಲಿತಾಂಶಗಳನ್ನು ಸಾಧಿಸಲು ಡಿಜಿಟಲೀಕರಣ ಮತ್ತು ದತ್ತಾಂಶ ಮಾತ್ರ ಸಾಕಾಗುವುದಿಲ್ಲ, ಎಐನ ಸುರಕ್ಷಿತ ಮತ್ತು ಜವಾಬ್ದಾರಿಯುತ ನಿಯೋಜನೆಗೆ ವಲಯ-ನಿರ್ದಿಷ್ಟ ಆಡಳಿತ ಮಾರ್ಗಸೂಚಿಗಳು ಅತ್ಯಗತ್ಯ ಎಂದರು. ಈ ನಿಟ್ಟಿನಲ್ಲಿ, 2026 ಫೆಬ್ರವರಿಯಲ್ಲಿ ನಡೆದ ಭಾರತ ಎಐ ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ಭಾರತದ ಆರೋಗ್ಯ ರಕ್ಷಣೆಯಲ್ಲಿ ಎಐ ಕಾರ್ಯತಂತ್ರ(SAHI) ಪ್ರಾರಂಭಿಸಿದ್ದನ್ನು ಅವರು ಪ್ರಸ್ತಾಪಿಸಿದರು.

SAHI "ಜಾಗತಿಕ ದಕ್ಷಿಣದಿಂದ ಹೊರಹೊಮ್ಮುತ್ತಿರುವ ಮೊದಲ ಸಮಗ್ರ ಕಾರ್ಯತಂತ್ರವಾಗಿದ್ದು, ಭಾರತದ ಆರೋಗ್ಯ ರಕ್ಷಣಾ ಪ್ರಯಾಣವನ್ನು ನೈತಿಕ, ಪಾರದರ್ಶಕ ಮತ್ತು ಜನ-ಕೇಂದ್ರಿತ ರೀತಿಯಲ್ಲಿ ಸಾಗಲು ಮಾರ್ಗದರ್ಶನ ಮಾಡುತ್ತದೆ" ಎಂದು ಅವರು ಬಣ್ಣಿಸಿದರು.

ಭಾರತದ ವಿಶಿಷ್ಟ ಪ್ರಮಾಣ ಮತ್ತು ವೈವಿಧ್ಯತೆಯನ್ನು ಪ್ರಸ್ತಾಪಿಸಿದ ಕೇಂದ್ರ ಸಚಿವರು, ದೇಶವು 22 ಅಧಿಕೃತ ಭಾಷೆಗಳಲ್ಲಿ ಮತ್ತು ವಿವಿಧ ಹಂತದ ಆರೋಗ್ಯ ಸೇವೆಗಳಲ್ಲಿ 1.4 ಶತಕೋಟಿ ನಾಗರಿಕರಿಗೆ ಎಐಅನ್ನು ನಿಯಂತ್ರಿಸುತ್ತಿದೆ. ಎಐ ತಂತ್ರಜ್ಞಾನವು ಆರೋಗ್ಯ ಸೇವೆಯ ಅಂತರ ಕಡಿಮೆ ಮಾಡುವ ಸಾಮರ್ಥ್ಯ ಹೊಂದಿದ್ದರೂ, ಜವಾಬ್ದಾರಿಯುತವಾಗಿ ವಿನ್ಯಾಸಗೊಳಿಸದಿದ್ದರೆ ಅದು ಅಸಮಾನತೆಗಳನ್ನು ಇನ್ನಷ್ಟು ಹೆಚ್ಚಿಸಬಹುದು ಎಂದು ಅವರು ಎಚ್ಚರಿಸಿದರು. ಈ ಸವಾಲನ್ನು ಪರಿಹರಿಸಲು BODH - ಬೆಂಚ್‌ಮಾರ್ಕಿಂಗ್ ಓಪನ್ ಡೇಟಾ ಪ್ಲಾಟ್‌ಫಾರ್ಮ್ ಫಾರ್ ಹೆಲ್ತ್ ಎಐ ರಚಿಸಲಾಗಿದೆ. ಇದು ಭಾರತದಲ್ಲಿ ನಿಯೋಜಿಸಲಾದ ಎಐ ಪರಿಹಾರಗಳು ನೈಜ-ಪ್ರಪಂಚದ ಡೇಟಾಸೆಟ್‌ಗಳಿಗೆ ಮಾನದಂಡವಾಗಿದೆ. ಇದರಿಂದಾಗಿ ಅವು ಎಲ್ಲೆಡೆ ಪ್ರತಿಯೊಬ್ಬ ಭಾರತೀಯರಿಗೂ ಸುರಕ್ಷಿತವಾಗಿ ಮತ್ತು ಸಮಾನವಾಗಿ ಕಾರ್ಯ ನಿರ್ವಹಿಸುತ್ತವೆ ಎಂಬುದನ್ನು ಖಚಿತಪಡಿಸುತ್ತದೆ.

ಆರೋಗ್ಯ ರಂಗದಲ್ಲಿ ಹೆಚ್ಚಿನ ಅಂತಾರಾಷ್ಟ್ರೀಯ ಸಹಯೋಗ ಸ್ಥಾಪಿಸಲು ಕರೆ ನೀಡಿದ ಕೇಂದ್ರ ಆರೋಗ್ಯ ಸಚಿವರು, ಯಾವುದೇ ದೇಶವು ಎಐ ಸವಾಲುಗಳು ಮತ್ತು ಅವಕಾಶಗಳನ್ನು ಪ್ರತ್ಯೇಕವಾಗಿ ಪರಿಹರಿಸಲು ಸಾಧ್ಯವಿಲ್ಲ. ವಿಶ್ವಾಸಾರ್ಹ ಮತ್ತು ಪರಸ್ಪರ ಕಾರ್ಯ ನಿರ್ವಹಿಸಬಹುದಾದ ಆರೋಗ್ಯ ದತ್ತಾಂಶ ಪರಿಸರ ವ್ಯವಸ್ಥೆಗಳನ್ನು ಬಲಪಡಿಸಲು ಸಹಯೋಗದ ಸಂಶೋಧನೆ ಉತ್ತೇಜಿಸಲು, ನೈತಿಕ ಎಐ ಅಭಿವೃದ್ಧಿ ಮುನ್ನಡೆಸಲು ಮತ್ತು ಹಂಚಿಕೆಯ ಆರೋಗ್ಯ ಸೇವೆಯ ಸವಾಲುಗಳನ್ನು ಸಾಮೂಹಿಕವಾಗಿ ಪರಿಹರಿಸಲು ಜಾಗತಿಕ ಪಾಲುದಾರರೊಂದಿಗೆ ಕೆಲಸ ಮಾಡಲು ಭಾರತ ಬದ್ಧತೆ ಹೊಂದಿದೆ ಎಂದು ಅವರು ಹೇಳಿದರು.

ನಾವೀನ್ಯತೆಯನ್ನು ನಿಯಂತ್ರಣದಿಂದ ಮಾರ್ಗದರ್ಶಿಸಬೇಕು, ನಂಬಿಕೆಯ ಮೂಲಕ ಪ್ರಮಾಣವನ್ನು ಗಳಿಸಬೇಕು ಮತ್ತು ತಾಂತ್ರಿಕ ಪ್ರಗತಿಯು ಸಮಾನತೆ, ನೀತಿಶಾಸ್ತ್ರ ಮತ್ತು ಸಾರ್ವಜನಿಕ ಒಳಿತಿಗೆ ಆಧಾರವಾಗಿರಬೇಕು ಎಂದು ಶ್ರೀ ನಡ್ಡಾ ಹೇಳಿದರು.

ಆರೋಗ್ಯ ರಕ್ಷಣೆಯಲ್ಲಿ ಎಐ ಭವಿಷ್ಯವನ್ನು ಕೇವಲ ಕ್ರಮಾವಳಿ(ಅಲ್ಗಾರಿದಮ್‌)ಗಳಿಂದ ಬರೆಯುವುದಲ್ಲ, ಬದಲಾಗಿ ಸರ್ಕಾರಗಳು, ಸಂಸ್ಥೆಗಳು ಮತ್ತು ಸಮಾಜಗಳ ಸಾಮೂಹಿಕ ಆಯ್ಕೆಗಳಿಂದ ಬರೆಯಬೇಕಿದೆ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ದೃಷ್ಟಿಕೋನವನ್ನು ಉಲ್ಲೇಖಿಸಿದ ಅವರು, ಭಾರತವು ಕೇವಲ "ಕೃತಕ ಬುದ್ಧಿಮತ್ತೆ"ಯಲ್ಲಿ ಅಲ್ಲ, "ಎಲ್ಲರನ್ನೂ, ಎಲ್ಲವನ್ನೂ ಒಳಗೊಂಡ ಬುದ್ಧಿಮತ್ತೆ"ಯಲ್ಲಿ ನಂಬಿಕೆ ಇಡುತ್ತದೆ. ಜಾಗತಿಕ ಒಳಿತಿಗಾಗಿ ಎಐ ಒಂದು ಶಕ್ತಿಯಾಗುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಜಾಗತಿಕ ಸಮುದಾಯಕ್ಕೆ ಕರೆ ನೀಡಿದ ಸಚಿವರು, ತಮ್ಮ ಭಾಷಣ ಮುಕ್ತಾಯಗೊಳಿಸಿದರು.


(रिलीज़ आईडी: 2263647) आगंतुक पटल : 39
इस विज्ञप्ति को इन भाषाओं में पढ़ें: Tamil , Malayalam , English , Urdu , हिन्दी , Manipuri , Bengali , Bengali-TR , Punjabi , Gujarati