ನಾಗರೀಕ ವಿಮಾನಯಾನ ಸಚಿವಾಲಯ
azadi ka amrit mahotsav

ಲಂಡನ್ ಹೀಥ್ರೂ –ಬೆಂಗಳೂರು ನಡುವಿನ  2026ರ ಫೆಬ್ರವರಿ 2ರ ಏರ್ ಇಂಡಿಯಾ ಬೋಯಿಂಗ್ 787-8 ವಿಮಾನ ಹಾರಾಟ ಸ್ಥಗಿತ


ಏರ್ ಇಂಡಿಯಾದ ಅಧಿಕಾರಿಗಳ ಸಮ್ಮುಖದಲ್ಲಿ ಇಂಧನ ನಿಯಂತ್ರಣ ಸ್ವಿಚ್ ಪರಿಶೀಲಿಸುವಂತೆ ಒಇಎಂಗೆ ಡಿಜಿಸಿಎ ನಿರ್ದೇಶನ

ಪ್ರಕಟಣಾ ದಿನಾಂಕ: 19 MAY 2026 9:37PM by PIB Bengaluru

ಮೆಸರ್ಸ್ ಏರ್ ಇಂಡಿಯಾ ಬೋಯಿಂಗ್ 787-8 ವಿಮಾನ ವಿಟಿ - ಎ ಎನ್‌ ಎಕ್ಸ್‌ ನ ದಿನಾಂಕ: 02.02.2026 ರ ಎಐಸಿ-132 (ಲಂಡನ್ ಹೀಥ್ರೂ (ಇ ಜಿ ಎಲ್‌ ಎಲ್) - ಬೆಂಗಳೂರು (ವಿಒಬಿಎಲ್) ಹಾರಾಟ ವಲಯದ ಕಾರ್ಯಾಚರಣೆಯ ನಂತರ ಪೈಲಟ್ ದೋಷ ವರದಿಯಲ್ಲಿ ನಮೂದಿಸಲಾದ ಎಡ ಇಂಧನ ನಿಯಂತ್ರಣ ಸ್ವಿಚ್ (ಎಫ್‌ ಸಿ ಎಸ್) ಸ್ವಲ್ಪ ತಳ್ಳಿದಾಗ "RUN" ನಿಂದ "CUTOFF" ಗೆ ಜಾರುತ್ತಿದ್ದು ಆಯ್ಕೆ ಮಾಡಿದ ಸ್ಥಾನದಲ್ಲಿ ಲಾಕ್ ಆಗುವುದಿಲ್ಲ ಎಂಬ ವಿವರಗಳನ್ನು ಆಧರಿಸಿ ಹಾರಾಟ ಸ್ಥಗಿತಗೊಳಿಸಲಾಯಿತು. 

ಮೂಲ ಸಲಕರಣೆ ತಯಾರಕರು (ಒಇಎಂ) ನಿಂದ ಪಡೆದ ಶಿಫಾರಸುಗಳ ಆಧಾರದ ಮೇಲೆ, ಮೆಸರ್ಸ್ ಏರ್ ಇಂಡಿಯಾ, ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ (ಡಿಜಿಸಿಎ) ಅಧಿಕಾರಿಗಳ ಸಮ್ಮುಖದಲ್ಲಿ ಒಇಎಂ ಸೂಚಿತ ಕಾರ್ಯವಿಧಾನಗಳಿಗೆ ಅನುಗುಣವಾಗಿ ಇಂಧನ ನಿಯಂತ್ರಣ ಸ್ವಿಚ್ (ಎಫ್‌ ಸಿ ಎಸ್) ಗಳ ತಪಾಸಣೆ ಮತ್ತು ಕಾರ್ಯನಿರ್ವಹಣಾ ಪರೀಕ್ಷೆಯನ್ನು ನಡೆಸಿತು.

ತಪಾಸಣೆ ಫಲಿತಾಂಶಗಳು ಮತ್ತು ಒದಗಿಸಲಾದ ಪುರಾವೆಗಳನ್ನು ಪರಾಮರ್ಶಿಸಿದ ನಂತರ, ಇಂಧನ ನಿಯಂತ್ರಣ ಸ್ವಿಚ್ ವಿನ್ಯಾಸಗೊಳಿಸಿದಂತೆ ಯಾಂತ್ರಿಕವಾಗಿ ಕಾರ್ಯನಿರ್ವಹಿಸುತ್ತಿದೆ ಮತ್ತು ಘಟಕವನ್ನು ಸೇವೆಗೆ ಯೋಗ್ಯವೆಂದು ಪರಿಗಣಿಸಲಾಗಿದೆ ಎಂದು ಒಇಎಂ ನಿರ್ಣಯಿಸಿದೆ.

ಡಿಜಿಸಿಎ ಇಂಡಿಯಾ, ಇದರ ಇಂಧನ ನಿಯಂತ್ರಣ ಸ್ವಿಚ್ ನ ನಿರಂತರ ವಾಯು ಯೋಗ್ಯತೆಯ ಪರಿಶೀಲನೆಯ ಭಾಗವಾಗಿ, ಡಿಜಿಸಿಎ ಅಧಿಕಾರಿಗಳ ಸಮ್ಮುಖದಲ್ಲಿ ಒಇಎಂ ಸೌಲಭ್ಯದಲ್ಲಿ ಅದರ ತಪಾಸಣೆಗೆ ನಿರ್ದೇಶನ ನೀಡಿದೆ.

 

*****


(ಪ್ರಕಟಣೆ ಐ.ಡಿ.: 2263118) ವಿಸಿಟರ್ ಕೌಂಟರ್ : 3
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी