ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಇಎ)
2026-27ರ ಮಾರುಕಟ್ಟೆ ಋತುವಿಗಾಗಿ ಮುಂಗಾರು ಬೆಳೆಗಳ ಕನಿಷ್ಠ ಬೆಂಬಲ ಬೆಲೆಗೆ (ಎಂ ಎಸ್ ಪಿ) ಸಂಪುಟ ಅನುಮೋದನೆ
ಪ್ರಕಟಣಾ ದಿನಾಂಕ:
13 MAY 2026 3:23PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು (ಸಿಸಿಇಎ), 2026-27ರ ಮಾರುಕಟ್ಟೆ ಋತುವಿಗಾಗಿ 14 ಮುಂಗಾರು ಬೆಳೆಗಳ ಕನಿಷ್ಠ ಬೆಂಬಲ ಬೆಲೆಯನ್ನು (ಎಂ ಎಸ್ ಪಿ) ಹೆಚ್ಚಿಸಲು ಅನುಮೋದನೆ ನೀಡಿದೆ.
ಬೆಳೆಗಾರರಿಗೆ ಅವರ ಉತ್ಪನ್ನಗಳಿಗೆ ಲಾಭದಾಯಕ ಬೆಲೆಗಳನ್ನು ಖಚಿತಪಡಿಸಿಕೊಳ್ಳಲು ಸರ್ಕಾರವು 2026-27ರ ಮಾರುಕಟ್ಟೆ ಋತುವಿಗಾಗಿ ಮುಂಗಾರು ಬೆಳೆಗಳ ಎಂ ಎಸ್ ಪಿ ಯನ್ನು ಹೆಚ್ಚಿಸಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಎಂ ಎಸ್ ಪಿ ಯಲ್ಲಿ ಅತ್ಯಧಿಕ ಸಂಪೂರ್ಣ ಹೆಚ್ಚಳವನ್ನು ಸೂರ್ಯಕಾಂತಿ ಬೀಜಕ್ಕೆ (ಕ್ವಿಂಟಲ್ ಗೆ ₹622), ನಂತರದಲ್ಲಿ ಹತ್ತಿ (ಕ್ವಿಂಟಲ್ ಗೆ ₹557), ಗುರೆಳ್ಳು/ಹುಚ್ಚೆಳ್ಳು (ಕ್ವಿಂಟಲ್ ಗೆ ₹515) ಮತ್ತು ಎಳ್ಳಿಗೆ (ಕ್ವಿಂಟಲ್ ಗೆ ₹500) ಶಿಫಾರಸು ಮಾಡಲಾಗಿದೆ.
2026-27ರ ಮಾರುಕಟ್ಟೆ ಋತುವಿಗಾಗಿ ಎಲ್ಲಾ ಮುಂಗಾರು ಬೆಳೆಗಳ ಕನಿಷ್ಠ ಬೆಂಬಲ ಬೆಲೆಗಳು:
(ರೂ. ಪ್ರತಿ ಕ್ವಿಂಟಲ್ ಗೆ)
|
ಕ್ರಮ ಸಂಖ್ಯೆ
|
ಬೆಳೆಗಳು
|
ಎಂ ಎಸ್ ಪಿ 2026-27
|
ವೆಚ್ಚ* KMS 2026-27
|
ವೆಚ್ಚದ ಮೇಲಿನ ಲಾಭಾಂಶ (%)
|
ಎಂ ಎಸ್ ಪಿ
|
2026-27ರಲ್ಲಿ ಎಂ ಎಸ್ ಪಿ ಹೆಚ್ಚಳ
|
| |
ಧಾನ್ಯಗಳು
|
|
|
|
2025-26
|
2013-14
|
2025-26 ಕ್ಕಿಂತ ಹೆಚ್ಚಳ
|
2013-14 ಕ್ಕಿಂತ ಹೆಚ್ಚಳ
|
|
1.
|
ಭತ್ತ (ಸಾಮಾನ್ಯ)
|
2441
|
1627
|
50
|
2369
|
1310
|
72
|
1131 (86%)
|
| |
ಗ್ರೇಡ್ A^
|
2461
|
-
|
-
|
2389
|
1345
|
72
|
1116 (83%)
|
|
2.
|
ಜೋಳ (ಹೈಬ್ರಿಡ್)
|
4023
|
2682
|
50
|
3699
|
1500
|
324
|
2523 (168%)
|
| |
ಮಾಲ್ದಂಡಿ ^
|
4073
|
-
|
-
|
3749
|
1520
|
324
|
2553 (168%)
|
|
3.
|
ಸಜ್ಜೆ
|
2900
|
1858
|
56
|
2775
|
1250
|
125
|
1650 (132%)
|
|
4.
|
ರಾಗಿ
|
5205
|
3470
|
50
|
4886
|
1500
|
319
|
3705 (247%)
|
|
5.
|
ಮೆಕ್ಕೆಜೋಳ
|
2410
|
1544
|
56
|
2400
|
1310
|
10
|
1100 (84%)
|
| |
ಬೇಳೆಕಾಳುಗಳು
|
|
|
|
|
|
|
|
|
6.
|
ತೊಗರಿ
|
8450
|
5496
|
54
|
8000
|
4300
|
450
|
4150 (97%)
|
|
7.
|
ಹೆಸರು ಕಾಳು
|
8780
|
5438
|
61
|
8768
|
4500
|
12
|
4280 (95%)
|
|
8.
|
ಉದ್ದಿನ ಕಾಳು
|
8200
|
5418
|
51
|
7800
|
4300
|
400
|
3900 (91%)
|
| |
ಎಣ್ಣೆಕಾಳುಗಳು
|
|
|
|
|
|
|
|
|
9.
|
ಶೇಂಗಾ/ನೆಲಗಡಲೆ
|
7517
|
5011
|
50
|
7263
|
4000
|
254
|
3517 (88%)
|
|
10.
|
ಸೂರ್ಯಕಾಂತಿ ಬೀಜ
|
8343
|
5562
|
50
|
7721
|
3700
|
622
|
4643 (125%)
|
|
11.
|
ಸೋಯಾಬೀನ್ (ಹಳದಿ)
|
5708
|
3805
|
50
|
5328
|
2560
|
380
|
3148 (123%)
|
|
12.
|
ಎಳ್ಳು
|
10346
|
6897
|
50
|
9846
|
4500
|
500
|
5846 (130%)
|
|
13.
|
ಹುಚ್ಚೆಳ್ಳು
|
10052
|
6701
|
50
|
9537
|
3500
|
515
|
6552 (187%)
|
| |
ವಾಣಿಜ್ಯ ಬೆಳೆಗಳು
|
|
|
|
|
|
|
|
|
14.
|
ಹತ್ತಿ (ಮಧ್ಯಮ ಉದ್ದದ ಎಳೆ)
|
8267
|
5511
|
50
|
7710
|
3700
|
557
|
4567 (123%)
|
| |
ಹತ್ತಿ (ಉದ್ದನೆಯ ಎಳೆ) ^
|
8667
|
-
|
-
|
8110
|
4000
|
557
|
4667 (117%)
|
*ವೆಚ್ಚವು ಬಾಡಿಗೆ ಮಾನವ ಶ್ರಮ, ಎತ್ತುಗಳ ಶ್ರಮ/ಯಂತ್ರದ ಶ್ರಮ, ಗುತ್ತಿಗೆಗೆ ಪಡೆದ ಭೂಮಿಗೆ ಪಾವತಿಸಿದ ಬಾಡಿಗೆ, ಬೀಜಗಳು, ರಸಗೊಬ್ಬರಗಳು, ಗೊಬ್ಬರಗಳು, ನೀರಾವರಿ ಶುಲ್ಕಗಳು, ಉಪಕರಣಗಳು ಮತ್ತು ಕೃಷಿ ಕಟ್ಟಡಗಳ ಮೇಲಿನ ಸವಕಳಿ, ದುಡಿಯುವ ಬಂಡವಾಳದ ಮೇಲಿನ ಬಡ್ಡಿ, ಪಂಪ್ ಸೆಟ್ ಗಳ ಚಾಲನೆಗೆ ಡೀಸೆಲ್/ವಿದ್ಯುತ್ ಮುಂತಾದ ವಸ್ತುಗಳ ಬಳಕೆಗೆ ತಗುಲುವ ಎಲ್ಲಾ ಪಾವತಿಸಿದ ವೆಚ್ಚಗಳನ್ನು ಮತ್ತು ಕುಟುಂಬದ ಶ್ರಮದ ಅಂದಾಜು ಮೌಲ್ಯವನ್ನು ಒಳಗೊಂಡಿರುತ್ತದೆ.
^ ಭತ್ತ (ಗ್ರೇಡ್ A), ಜೋಳ (ಮಾಲ್ದಂಡಿ) ಮತ್ತು ಹತ್ತಿ (ಉದ್ದನೆಯ ಎಳೆ) ಗಾಗಿ ವೆಚ್ಚದ ಡೇಟಾವನ್ನು ಪ್ರತ್ಯೇಕವಾಗಿ ಸಂಕಲಿಸಲಾಗಿಲ್ಲ.
2026-27ರ ಮಾರುಕಟ್ಟೆ ಋತುವಿಗಾಗಿ ಮುಂಗಾರು ಬೆಳೆಗಳ ಎಂ ಎಸ್ ಪಿ ಹೆಚ್ಚಳವು, ಅಖಿಲ ಭಾರತ ಸರಾಸರಿ ಉತ್ಪಾದನಾ ವೆಚ್ಚದ ಕನಿಷ್ಠ 1.5 ಪಟ್ಟು ಮಟ್ಟದಲ್ಲಿ ಎಂ ಎಸ್ ಪಿ ಯನ್ನು ನಿಗದಿಪಡಿಸುವ ಕೇಂದ್ರ ಬಜೆಟ್ 2018-19ರ ಘೋಷಣೆಗೆ ಅನುಗುಣವಾಗಿದೆ. ರೈತರಿಗೆ ಅವರ ಉತ್ಪಾದನಾ ವೆಚ್ಚದ ಮೇಲಿನ ನಿರೀಕ್ಷಿತ ಲಾಭಾಂಶವು ಹೆಸರು ಕಾಳು (61%), ನಂತರ ಸಜ್ಜೆ (56%), ಮೆಕ್ಕೆಜೋಳ (56%) ಮತ್ತು ತೊಗರಿ (54%) ವಿಷಯದಲ್ಲಿ ಅತ್ಯಧಿಕ ಎಂದು ಅಂದಾಜಿಸಲಾಗಿದೆ. ಉಳಿದ ಬೆಳೆಗಳಿಗೆ, ರೈತರಿಗೆ ಅವರ ವೆಚ್ಚದ ಮೇಲಿನ ಲಾಭಾಂಶವು 50% ಎಂದು ಅಂದಾಜಿಸಲಾಗಿದೆ.
ಇತ್ತೀಚಿನ ವರ್ಷಗಳಲ್ಲಿ, ಸರ್ಕಾರವು ಧಾನ್ಯಗಳ ಹೊರತಾಗಿ ಬೇಳೆಕಾಳುಗಳು ಮತ್ತು ಎಣ್ಣೆಕಾಳುಗಳು ಹಾಗೂ ಪೌಷ್ಟಿಕ ಧಾನ್ಯಗಳು/ಶ್ರೀ ಅನ್ನದ ಬೆಳೆಗಳಿಗೆ ಹೆಚ್ಚಿನ ಎಂ ಎಸ್ ಪಿ ನೀಡುವ ಮೂಲಕ ಅವುಗಳ ಕೃಷಿಯನ್ನು ಉತ್ತೇಜಿಸುತ್ತಿದೆ.
- 2014-15 ರಿಂದ 2025-26 ರ ಅವಧಿಯಲ್ಲಿ, ಭತ್ತದ ಖರೀದಿಯು 8418 ಎಲ್ ಎಂ ಟಿ ಆಗಿತ್ತು, ಆದರೆ 2004-05 ರಿಂದ 2013-14 ರ ಅವಧಿಯಲ್ಲಿ ಭತ್ತದ ಖರೀದಿಯು 4590 ಎಲ್ ಎಂ ಟಿ ಆಗಿತ್ತು.
- 2014-15 ರಿಂದ 2025-26 ರ ಅವಧಿಯಲ್ಲಿ, 14 ಮುಂಗಾರು ಬೆಳೆಗಳ ಖರೀದಿಯು 8746 ಎಲ್ ಎಂ ಟಿ ಆಗಿತ್ತು, ಆದರೆ 2004-05 ರಿಂದ 2013-14 ರ ಅವಧಿಯಲ್ಲಿ ಖರೀದಿಯು 4679 ಎಲ್ ಎಂ ಟಿ ಆಗಿತ್ತು.
- 2014-15 ರಿಂದ 2025-26 ರ ಅವಧಿಯಲ್ಲಿ, ಭತ್ತ ಬೆಳೆಯುವ ರೈತರಿಗೆ ಪಾವತಿಸಿದ ಎಂ ಎಸ್ ಪಿ ಮೊತ್ತವು ರೂ. 16.08 ಲಕ್ಷ ಕೋಟಿ ಆಗಿತ್ತು, 2004-05 ರಿಂದ 2013-14 ರ ಅವಧಿಯಲ್ಲಿ ರೈತರಿಗೆ ಪಾವತಿಸಿದ ಮೊತ್ತವು ರೂ. 4.44 ಲಕ್ಷ ಕೋಟಿ ಆಗಿತ್ತು.
- 2014-15 ರಿಂದ 2025-26 ರ ಅವಧಿಯಲ್ಲಿ, 14 ಮುಂಗಾರು ಬೆಳೆಗಳನ್ನು ಬೆಳೆಯುವ ರೈತರಿಗೆ ಪಾವತಿಸಿದ ಎಂ ಎಸ್ ಪಿ ಮೊತ್ತವು ರೂ. 18.99 ಲಕ್ಷ ಕೋಟಿ ಆಗಿತ್ತು, ಆದರೆ 2004-05 ರಿಂದ 2013-14 ರ ಅವಧಿಯಲ್ಲಿ ರೈತರಿಗೆ ಪಾವತಿಸಿದ ಎಂ ಎಸ್ ಪಿ ಮೊತ್ತವು ರೂ. 4.75 ಲಕ್ಷ ಕೋಟಿ ಆಗಿತ್ತು.
*****
(ಪ್ರಕಟಣೆ ಐ.ಡಿ.: 2260670)
ವಿಸಿಟರ್ ಕೌಂಟರ್ : 4