ಪ್ರಧಾನ ಮಂತ್ರಿಯವರ ಕಛೇರಿ
ಪ್ರಧಾನಮಂತ್ರಿ ಮೇ 10-11 ರಂದು ಗುಜರಾತ್‌ಗೆ ಭೇಟಿ
ಪುನಃಸ್ಥಾಪಿತ ಸೋಮನಾಥ ದೇವಾಲಯ ಉದ್ಘಾಟನೆಯ 75 ವರ್ಷಗಳ ಅಂಗವಾಗಿ ನಡೆಯುವ ಸೋಮನಾಥ ಅಮೃತ ಮಹೋತ್ಸವದಲ್ಲಿ ಪ್ರಧಾನಮಂತ್ರಿಭಾಗಿ
ಪ್ರಧಾನಮಂತ್ರಿಸೋಮನಾಥ ದೇವಾಲಯದಲ್ಲಿ ವಿಶೇಷ ಮಹಾ ಪೂಜೆ, ಕುಂಭಾಭಿಷೇಕ ಮತ್ತು ಧ್ವಜಾರೋಹಣದಲ್ಲಿ ಭಾಗಿ
ವಡೋದರಾದಲ್ಲಿ ಸರ್ದಾರ್ ಧಾಮ್ ವಸತಿ ನಿಲಯ ಉದ್ಘಾಟಿಸಲಿರುವ ಪ್ರಧಾನಮಂತ್ರಿ
ಪ್ರಕಟಣಾ ದಿನಾಂಕ:
09 MAY 2026 11:19AM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2026ರ ಮೇ 10-11 ರಂದು ಗುಜರಾತ್‌ಗೆ ಭೇಟಿ ನೀಡಲಿದ್ದಾರೆ. ಅವರು ಮೇ 10 ರಂದು ತಡರಾತ್ರಿ ಗುಜರಾತ್‌ನ ಜಾಮ್‌ನಗರಕ್ಕೆ ಆಗಮಿಸಲಿದ್ದಾರೆ. ಪ್ರಧಾನಮಂತ್ರಿ ಮೇ 11 ರಂದು ಬೆಳಿಗ್ಗೆ 10:15 ರ ಸುಮಾರಿಗೆ ಸೋಮನಾಥ ದೇವಾಲಯದಲ್ಲಿ ಸೋಮನಾಥ ಅಮೃತ ಮಹೋತ್ಸವದಲ್ಲಿ ಭಾಗವಹಿಸಲಿದ್ದಾರೆ. ನಂತರ ಪ್ರಧಾನಮಂತ್ರಿ ಸಂಜೆ 6 ಗಂಟೆಗೆ ವಡೋದರಾಕ್ಕೆ ಪ್ರಯಾಣಿಸಲಿದ್ದಾರೆ. ಅಲ್ಲಿ ಅವರು ಸರ್ದಾರ್ ಧಾಮ್ ವಸತಿ ನಿಲಯವನ್ನು ಉದ್ಘಾಟಿಸಲಿದ್ದಾರೆ. ಎರಡೂ ಸಂದರ್ಭಗಳಲ್ಲಿ ಅವರು ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.
ಸೋಮನಾಥದಲ್ಲಿ ಪ್ರಧಾನಮಂತ್ರಿ
ಪ್ರಧಾನಮಂತ್ರಿ ಅವರು ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಒಂದಾದ ಮತ್ತು ಭಾರತದ ಕಾಯಂ ನಂಬಿಕೆ ಮತ್ತು ನಾಗರಿಕ ಪರಂಪರೆಯ ಸಂಕೇತವಾದ ಪವಿತ್ರ ಸೋಮನಾಥ ದೇವಾಲಯದಲ್ಲಿ ನಡೆಯುವ ಸೋಮನಾಥ ಅಮೃತ ಮಹೋತ್ಸವದಲ್ಲಿ ಭಾಗವಹಿಸಲಿದ್ದಾರೆ. ಸೋಮನಾಥ ಅಮೃತ ಮಹೋತ್ಸವವನ್ನು ಪುನಃಸ್ಥಾಪಿಸಲಾದ ದೇವಾಲಯದ ಉದ್ಘಾಟನೆಯಾಗಿ 75 ವರ್ಷಗಳನ್ನು ಪೂರೈಸುತ್ತಿರುವ ಅಂಗವಾಗಿ ಆಯೋಜಿಸಲಾಗಿದೆ.
ಆಚರಣೆಯ ಭಾಗವಾಗಿ, ಪ್ರಧಾನಮಂತ್ರಿ ಅವರು ಶುಭ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಸರಣಿಯಲ್ಲಿ ಭಾಗವಹಿಸಲಿದ್ದಾರೆ. ಅವರು ವಿಶೇಷ ಮಹಾ ಪೂಜೆಯಲ್ಲಿ ಭಾಗವಹಿಸಲಿದ್ದಾರೆ, ನಂತರ ಶುದ್ಧೀಕರಣ ವಿಧಿವಿಧಾನಗಳ ಅಂಗವಾಗಿ ನಡೆಯುವ ಕುಂಭಾಭಿಷೇಕ ಮತ್ತು ಧ್ವಜಾರೋಹಣ ಸಮಾರಂಭಗಳಲ್ಲಿ ಪಾಲ್ಗೊಂಡು, ಧ್ವಜಾರೋಹಣ ನೆರವೇರಿಸಲಿದ್ದಾರೆ.
ಪ್ರಧಾನಮಂತ್ರಿ ಇದೇ ಸಂದರ್ಭದಲ್ಲಿ ಸೋಮನಾಥನ ಶ್ರೀಮಂತ ಪರಂಪರೆ ಮತ್ತು ಆಧ್ಯಾತ್ಮಿಕ ಮಹತ್ವವನ್ನು ಸ್ಮರಿಸುವ ಸ್ಮರಣಾರ್ಥ ಅಂಚೆಚೀಟಿ ಮತ್ತು ನಾಣ್ಯವನ್ನು ಬಿಡುಗಡೆ ಮಾಡಲಿದ್ದಾರೆ
ವಡೋದರಾದಲ್ಲಿ ಪ್ರಧಾನಮಂತ್ರಿ
ಪ್ರಧಾನ ಮಂತ್ರಿ ಅವರು ವಡೋದರಾದಲ್ಲಿ ಸರ್ದಾರ್ಧಾಮ್ ವಸತಿ ನಿಲಯವನ್ನು ಉದ್ಘಾಟಿಸಲಿದ್ದಾರೆ. ಈ ಯೋಜನೆಯು 1,000 ಬಾಲಕರು ಮತ್ತು 1,000 ಬಾಲಕಿಯರಿಗೆ ವಸತಿ ಸೌಲಭ್ಯಗಳ ಜೊತೆಗೆ ಕೇಂದ್ರ ಊಟದ ಕೊಠಡಿ, ಗ್ರಂಥಾಲಯ ಮತ್ತು ಸಭಾಂಗಣದಂತಹ ಸೌಲಭ್ಯಗಳನ್ನು ಒಳಗೊಂಡಿದೆ. ಪ್ರಧಾನಮಂತ್ರಿ ಸ್ವಾಗತ ಪ್ರದೇಶ, ನಾಗರಿಕ ಸೌಲಭ್ಯಗಳು, ಊಟದ ಪ್ರದೇಶ ಮತ್ತು ಇ-ಗ್ರಂಥಾಲಯ ಸೇರಿದಂತೆ ಸರ್ದಾರ್ಧಾಮ್ ಸಂಕೀರ್ಣದಲ್ಲಿ ವಿವಿಧ ಸೌಲಭ್ಯಗಳಿಗೆ ಭೇಟಿ ನೀಡಲಿದ್ದಾರೆ.
*****
(ಪ್ರಕಟಣೆ ಐ.ಡಿ.: 2259294)
ವಿಸಿಟರ್ ಕೌಂಟರ್ : 3