ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav

ಜನಗಣತಿ ಜಾಗೃತಿಯ ನೂತನ ಆರು ಎಲ್.ಇ.ಡಿ. ಮೊಬೈಲ್ ವ್ಯಾನ್ ಗಳಿಗೆ ಭಾರತದ ರಿಜಿಸ್ಟ್ರಾರ್ ಜನರಲ್ ಮತ್ತು ಜನಗಣತಿ ಆಯುಕ್ತರು ಜಂಟಿಯಾಗಿ ದೆಹಲಿಯಲ್ಲಿ ಚಾಲನೆ ನೀಡಿದರು


ಜನಗಣತಿಯಲ್ಲಿ ಭಾಗವಹಿಸುವಿಕೆ, ಸ್ವಯಂ-ಗಣತಿ (ಎಸ್.ಇ.) ಸೌಲಭ್ಯ ಮತ್ತು ಜನಗಣತಿ 2027ರ ಪ್ರಮುಖ ವೈಶಿಷ್ಟ್ಯಗಳ ಕುರಿತು ಸಂದೇಶಗಳನ್ನು ಹೊತ್ತ ಜಾಗೃತಿ ವ್ಯಾನ್ ಗಳು ದೆಹಲಿಯಾದ್ಯಂತ ಸಂಚರಿಸಲಿವೆ

ದೆಹಲಿ ಎನ್.ಸಿ.ಟಿ. ಯ ನವದೆಹಲಿ ಮುನ್ಸಿಪಲ್ ಕೌನ್ಸಿಲ್ (ಎನ್.ಡಿ.ಎಂ.ಸಿ.) ಪ್ರದೇಶಗಳಲ್ಲಿ ನಡೆಯುತ್ತಿರುವ “ಮನೆ ಪಟ್ಟಿ ಕಾರ್ಯಾಚರಣೆ”ಗಳಿಗಾಗಿ (ಎಚ್.ಎಲ್.ಒ.) ಸ್ವಯಂ-ಗಣತಿ (ಎಸ್.ಇ.) ವ್ಯವಸ್ಥೆ

ದೆಹಲಿಯ ಎನ್.ಡಿ.ಎಂ.ಸಿ. ಮತ್ತು ಕಂಟೋನ್ಮೆಂಟ್ ಬೋರ್ಡ್ ಪ್ರದೇಶಗಳಲ್ಲಿ ಮನೆ ಮನೆಗೆ ಭೇಟಿ ನೀಡಲಾಗುತ್ತಿದೆ

ಉತ್ತರ ಪ್ರದೇಶದಲ್ಲಿ ಇಂದಿನಿಂದ ಸ್ವಯಂ-ಗಣತಿ (ಎಸ್.ಇ.) ಸೌಲಭ್ಯ ಪ್ರಾರಂಭವಾಗುತ್ತದೆ

23 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಸುಮಾರು 92 ಲಕ್ಷ ಕುಟುಂಬಗಳು ಸ್ವಯಂ-ಗಣತಿ(ಎಸ್.ಇ.) ಪೂರ್ಣಗೊಳಿಸಿವೆ

ಜನಗಣತಿಯ ಸಮಯದಲ್ಲಿ ಸಂಗ್ರಹಿಸಲಾದ ಎಲ್ಲಾ ಡೇಟಾವನ್ನು 1948ರ ಜನಗಣತಿ ಕಾಯ್ದೆಯ ಪ್ರಕಾರ ಕಟ್ಟುನಿಟ್ಟಾಗಿ ಗೌಪ್ಯವಾಗಿಡಲಾಗಿದೆ ಮತ್ತು ಸಂಖ್ಯಾಶಾಸ್ತ್ರೀಯ ಉದ್ದೇಶಗಳು ಮತ್ತು ಅಭಿವೃದ್ಧಿ ಯೋಜನೆಗಾಗಿ ಮಾತ್ರ ಬಳಸಲಾಗುತ್ತದೆ

ಪ್ರಕಟಣಾ ದಿನಾಂಕ: 07 MAY 2026 4:48PM by PIB Bengaluru

2027ರ ಜನಗಣತಿಯ ಮೊದಲ ಹಂತಕ್ಕಾಗಿ ದೆಹಲಿ ಎನ್.ಸಿ.ಟಿ.ಯಲ್ಲಿ, ಅಂದರೆ ಮನೆಪಟ್ಟಿ ಮತ್ತು ವಸತಿ ಗಣತಿ (ಎಚ್.ಎಲ್.ಒ.) ಗಾಗಿ ಭಾರತದ ರಿಜಿಸ್ಟ್ರಾರ್ ಜನರಲ್ ಮತ್ತು ಜನಗಣತಿ ಆಯುಕ್ತರು (ಆರ್.ಜಿ. & ಸಿ.ಸಿ.ಐ.) ಇಂದು ಜನಗಣತಿ 2027ರ ಸಾರ್ವಜನಿಕ ಸಂಪರ್ಕ ಅಭಿಯಾನದ ಭಾಗವಾಗಿ ನವದೆಹಲಿಯ ಜನಗಣನ ಭವನದಿಂದ ಆರು ಜಾಗೃತಿ ವ್ಯಾನ್ ಗಳಿಗೆ ಹಸಿರು ನಿಶಾನೆ ತೋರಿದರು.

WhatsApp Image 2026-05-07 at 16.33.08.jpeg

ಜನಗಣತಿ ಜಾಗೃತಿ ವ್ಯಾನ್ ಗಳು ದೆಹಲಿ ಎನ್.ಸಿ.ಟಿ.ಯಾದ್ಯಂತ ಸಂಚರಿಸುತ್ತವೆ, ಜನಗಣತಿ ಭಾಗವಹಿಸುವಿಕೆ, ಸ್ವಯಂ-ಗಣತಿ (ಎಸ್.ಇ.) ಸೌಲಭ್ಯ, ಜನಗಣತಿ 2027ರ ಪ್ರಮುಖ ಲಕ್ಷಣಗಳು ಮತ್ತು ಕ್ಷೇತ್ರ ಭೇಟಿಗಳ ಸಮಯದಲ್ಲಿ ಗಣತಿದಾರರೊಂದಿಗೆ ಸಾರ್ವಜನಿಕ ಸಹಕಾರದ ಮಹತ್ವದ ಕುರಿತು ಸಂದೇಶಗಳನ್ನು ಸಾಗಿಸುತ್ತವೆ. ಈ ಅಭಿಯಾನವು ಮಾಹಿತಿಯ ವ್ಯಾಪಕ ಪ್ರಸಾರವನ್ನು ಖಚಿತಪಡಿಸಿಕೊಳ್ಳುವುದು, ಸಾರ್ವಜನಿಕ ಜಾಗೃತಿಯನ್ನು ಹೆಚ್ಚಿಸುವುದು ಮತ್ತು ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ ಜನಗಣತಿ ಕಾರ್ಯಾಚರಣೆಗಳನ್ನು ಸುಗಮವಾಗಿ ನಡೆಸಲು ಅನುಕೂಲವಾಗುವಂತೆ ಮಾಡುವ ಗುರಿಯನ್ನು ಹೊಂದಿದೆ.

ದೆಹಲಿ ಎನ್.ಸಿ.ಟಿ.ಯಲ್ಲಿ ಮನೆಪಟ್ಟಿ ಮತ್ತು ವಸತಿ ಗಣತಿ ಕಾರ್ಯಾಚರಣೆಗಳು (ಎಚ್.ಎಲ್.ಒ.) ಪ್ರಸ್ತುತ ನಡೆಯುತ್ತಿವೆ. ನವದೆಹಲಿ ಮುನ್ಸಿಪಲ್ ಕೌನ್ಸಿಲ್ (ಎನ್.ಡಿ.ಎಂ.ಸಿ.) ಮತ್ತು ಕಂಟೋನ್ಮೆಂಟ್ ಬೋರ್ಡ್ ಪ್ರದೇಶಗಳಲ್ಲಿ, ಏಪ್ರಿಲ್ 15, 2026 ರಂದು ಎಚ್.ಎಲ್.ಒ. ಸ್ವಯಂ ಗಣತಿ (ಎಸ್.ಇ.) ಪೂರ್ಣಗೊಂಡ ನಂತರ, ಜನಗಣತಿ ಗಣತಿದಾರರು ಮನೆ ಮನೆಗೆ ಭೇಟಿ ನೀಡುವ ಕಾರ್ಯವು ಏಪ್ರಿಲ್ 16, 2026 ರಿಂದ ಪ್ರಾರಂಭವಾಯಿತು ಮತ್ತು ಮೇ 15, 2026 ರೊಳಗೆ ಮುಕ್ತಾಯಗೊಳ್ಳುತ್ತದೆ.

WhatsApp Image 2026-05-07 at 16.29.54.jpeg

ದೆಹಲಿ ಎನ್.ಸಿ.ಟಿ.ಯ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ (ಎಂ.ಸಿ.ಡಿ.) ಪ್ರದೇಶಗಳಲ್ಲಿ ಸ್ವಯಂ ಗಣತಿ (ಎಸ್.ಇ.) ಪ್ರಸ್ತುತ ನಡೆಯುತ್ತಿದೆ. ಮೇ 1 ರಿಂದ ಮೇ 15, 2026 ರವರೆಗಿನ ಅಧಿಸೂಚಿತ ಅವಧಿಯಲ್ಲಿ ನಿವಾಸಿಗಳು ಅಧಿಕೃತ ಜನಗಣತಿ ಪೋರ್ಟಲ್ (https://se.census.gov.in) ಮೂಲಕ ಸ್ವಯಂ-ಗಣತಿ (ಎಸ್.ಇ.)ಯನ್ನು ಕೈಗೊಳ್ಳಬಹುದು. ಇದರ ನಂತರ ಮೇ 16 ರಿಂದ ಜೂನ್ 14, 2026 ರವರೆಗೆ ಗಣತಿದಾರರು ಮನೆ-ಮನೆಗೆ ಮನೆ ಪಟ್ಟಿ ಕಾರ್ಯಾಚರಣೆಗಳನ್ನು ನಡೆಸಲಿದ್ದಾರೆ.

ಸ್ವಯಂ-ಗಣತಿ (ಎಸ್.ಇ.) ಪೂರ್ಣಗೊಳಿಸಿದ ನಿವಾಸಿಗಳು ತಮ್ಮ ಮಾಹಿತಿ ಪೂರೈಸಿ ಉತ್ಪಾದಿಸಿದ ಸ್ವಯಂ-ಗಣತಿ ಗುರುತು ಪತ್ರ/ಸಂಖ್ಯೆ(ಎಸ್.ಇ. ಐಡಿ)ಯನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಬೇಕು ಮತ್ತು ಎಚ್.ಎಲ್.ಒ. ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಕ್ಷೇತ್ರ ಭೇಟಿಯ ಸಮಯದಲ್ಲಿ ಗಣತಿದಾರರೊಂದಿಗೆ ಅದನ್ನು ಸ್ವಯಂ-ಗಣತಿ ಗುರುತು ಪತ್ರ/ಸಂಖ್ಯೆ(ಎಸ್.ಇ. ಐಡಿ)ಯನ್ನು ಹಂಚಿಕೊಳ್ಳಬೇಕು.

2027ರ ಜನಗಣತಿಯಲ್ಲಿ ಮೊದಲ ಬಾರಿಗೆ ಪರಿಚಯಿಸಲಾದ ಸ್ವಯಂ-ಗಣತಿ (ಎಸ್.ಇ.) ಸೌಲಭ್ಯವು ಸಾರ್ವಜನಿಕರಿಂದ ಉತ್ತೇಜಕ ಪ್ರತಿಕ್ರಿಯೆಯನ್ನು ಪಡೆದಿದೆ. ಇದುವರೆಗೆ 23 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸುಮಾರು 92 ಲಕ್ಷ ಕುಟುಂಬಗಳು ಅಧಿಕೃತ ಪೋರ್ಟಲ್ ಮೂಲಕ ಸ್ವಯಂ-ಗಣತಿ (ಎಸ್.ಇ.)ಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿವೆ.

WhatsApp Image 2026-05-07 at 16.29.54 (2).jpeg

2027ರ ಜನಗಣತಿಯ ಎಚ್.ಎಲ್.ಒ. ಹಂತವು ಮನೆಯ ವಿವರಗಳು, ವಸತಿ ಪರಿಸ್ಥಿತಿಗಳು, ಲಭ್ಯವಿರುವ ಸೌಲಭ್ಯಗಳು ಮತ್ತು ಮನೆಗಳು ಹೊಂದಿರುವ ಆಸ್ತಿಗಳಿಗೆ ಸಂಬಂಧಿಸಿದ ಅಧಿಸೂಚಿತ 33 ಪ್ರಶ್ನೆಗಳನ್ನು ಒಳಗೊಂಡಿರುವ ರಚನಾತ್ಮಕ ಪ್ರಶ್ನಾವಳಿಯ ಮೂಲಕ ಮಾಹಿತಿಯನ್ನು ಸಂಗ್ರಹಿಸುವುದನ್ನು ಒಳಗೊಂಡಿರುತ್ತದೆ. ಸಂಗ್ರಹಿಸಿದ ದತ್ತಾಂಶವು ಸರ್ಕಾರದಿಂದ ಯೋಜನೆ, ನೀತಿ ರಚನೆ ಮತ್ತು ಸಾರ್ವಜನಿಕ ಸೇವೆಗಳ ಪರಿಣಾಮಕಾರಿ ವಿತರಣೆಗೆ ಅಗತ್ಯವಾದ ಆಧಾರವನ್ನು ಒದಗಿಸುತ್ತದೆ.

ಹೆಚ್ಚುವರಿಯಾಗಿ, ಮನೆಗಳ ಪಟ್ಟಿ ಮತ್ತು ವಸತಿ ಗಣತಿ ಕಾರ್ಯಾಚರಣೆಗಳು ಇಂದು ಉತ್ತರ ಪ್ರದೇಶದಲ್ಲಿ ಪ್ರಾರಂಭವಾಗಿವೆ. ಉತ್ತರ ಪ್ರದೇಶದ ನಿವಾಸಿಗಳು ಮೇ 7 ರಿಂದ ಮೇ 21, 2026 ರವರೆಗಿನ ಅಧಿಸೂಚಿತ ಅವಧಿಯಲ್ಲಿ ಅಧಿಕೃತ ಪೋರ್ಟಲ್ ಮೂಲಕ ಸ್ವಯಂ-ಗಣತಿ (ಎಸ್.ಇ.) ಕೈಗೊಳ್ಳಬಹುದು. ಇದರ ನಂತರ ಮೇ 22 ರಿಂದ ಜೂನ್ 20, 2026 ರವರೆಗೆ ಮನೆ-ಮನೆಗೆ ಕ್ಷೇತ್ರ ಕಾರ್ಯಾಚರಣೆಗಳು ನಡೆಯಲಿವೆ.

ತೆಲಂಗಾಣ, ಪಂಜಾಬ್, ರಾಜಸ್ಥಾನ, ದೆಹಲಿ (ಎಂ.ಸಿ.ಡಿ.), ಮಹಾರಾಷ್ಟ್ರ, ಮೇಘಾಲಯ ಮತ್ತು ಜಾರ್ಖಂಡ್ಗಳಿಗೂ ಎಚ್.ಎಲ್.ಒ. ಸ್ವಯಂ ಗಣತಿ ನಡೆಯುತ್ತಿದೆ.

ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಆಂಧ್ರಪ್ರದೇಶ, ಅರುಣಾಚಲ ಪ್ರದೇಶ, ಬಿಹಾರ, ಚಂಡೀಗಢ, ಛತ್ತೀಸ್ಗಢ, ದಾದ್ರಾ ಮತ್ತು ನಗರ ಹವೇಲಿ ಮತ್ತು ದಮನ್ ಮತ್ತು ದೀಯು, ದೆಹಲಿ (ಎನ್.ಡಿ.ಎಂ.ಸಿ. ಮತ್ತು ದೆಹಲಿ ಕಂಟೋನ್ಮೆಂಟ್ ಬೋರ್ಡ್ ಪ್ರದೇಶಗಳು), ಗೋವಾ, ಹರಿಯಾಣ, ಕರ್ನಾಟಕ, ಲಕ್ಷದ್ವೀಪ, ಮಧ್ಯಪ್ರದೇಶ, ಮಿಜೋರಾಂ, ಒಡಿಶಾ, ಸಿಕ್ಕಿಂ ಮತ್ತು ಉತ್ತರಾಖಂಡ್ ಗಳಲ್ಲಿ ಅಧಿಸೂಚಿತ ವೇಳಾಪಟ್ಟಿಯ ಪ್ರಕಾರ ಗಣತಿದಾರರ ಮನೆ ಮನೆಗೆ ಭೇಟಿ ಪ್ರಸ್ತುತ ಈ ನಿಶ್ಚಿತ ಕಾಲಾವಧಿಯಲ್ಲಿ ನಡೆಯುತ್ತಿದೆ.

WhatsApp Image 2026-05-07 at 16.29.54 (1).jpeg

ಜನಗಣತಿ ಸಮಯದಲ್ಲಿ ಸಂಗ್ರಹಿಸಿದ ಎಲ್ಲಾ ದತ್ತಾಂಶವು 1948 ರ ಜನಗಣತಿ ಕಾಯ್ದೆಯ ಪ್ರಕಾರ ಕಟ್ಟುನಿಟ್ಟಾಗಿ ಗೌಪ್ಯವಾಗಿರುತ್ತದೆ ಮತ್ತು ಅದನ್ನು ಸಂಖ್ಯಾಶಾಸ್ತ್ರೀಯ ಉದ್ದೇಶಗಳು ಮತ್ತು ಅಭಿವೃದ್ಧಿ ಯೋಜನೆಗಾಗಿ ಮಾತ್ರ ಬಳಸಲಾಗುತ್ತದೆ. ಅಧಿಸೂಚಿತ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ನಿವಾಸಿಗಳು ಮನೆ ಪಟ್ಟಿ ಕಾರ್ಯಾಚರಣೆಗಳ ಸಮಯದಲ್ಲಿ ಗಣತಿದಾರರಿಗೆ ಸಂಪೂರ್ಣ ಸಹಕಾರವನ್ನು ನೀಡಲು ಮತ್ತು ಈ ಪ್ರಮುಖ ರಾಷ್ಟ್ರೀಯ ಕಾರ್ಯದಲ್ಲಿ ಸಕ್ರಿಯವಾಗಿ ಭಾಗವಹಿಸಲು ವಿನಂತಿಸಲಾಗಿದೆ.

 

*****


(ಪ್ರಕಟಣೆ ಐ.ಡಿ.: 2258765) ವಿಸಿಟರ್ ಕೌಂಟರ್ : 6
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Assamese , Gujarati , Tamil