ಅತಿಸಣ್ಣ, ಸಣ್ಣ, ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳ ಸಚಿವಾಲಯ
ಪ್ರಧಾನಮಂತ್ರಿ ಅವರ ಉದ್ಯೋಗ ಸೃಷ್ಟಿ ಕಾರ್ಯಕ್ರಮವು ಮಹಿಳೆಯರು ಮತ್ತು ಗ್ರಾಮೀಣ ಉದ್ಯಮಿಗಳಿಗೆ ಬಲವಾದ ಬೆಂಬಲ ನೀಡುವುದರ ಜೊತೆಗೆ ಎಲ್ಲರನ್ನೂ ಒಳಗೊಂಡ ಬೆಳವಣಿಗೆಯನ್ನು ಉತ್ತೇಜಿಸಿದೆ
ಪ್ರಧಾನಮಂತ್ರಿ ಅವರ ಉದ್ಯೋಗ ಸೃಷ್ಟಿ ಕಾರ್ಯಕ್ರಮವು ಮಹಿಳೆಯರು ಮತ್ತು ಗ್ರಾಮೀಣ ಉದ್ಯಮಿಗಳಿಗೆ ಬಲವಾದ ಬೆಂಬಲ ನೀಡುವುದರ ಜೊತೆಗೆ ಎಲ್ಲರನ್ನೂ ಒಳಗೊಂಡ ಬೆಳವಣಿಗೆಯನ್ನು ಉತ್ತೇಜಿಸಿದೆ
ಅತಿಸಣ್ಣ ಉದ್ಯಮ ಅಭಿವೃದ್ಧಿಯಲ್ಲಿ ದಾಖಲೆಯ ಬೆಳವಣಿಗೆಯನ್ನು ಸಾಧಿಸಿದ ʻಎಂಎಸ್ಎಂಇʼ ಸಚಿವಾಲಯದ ʻಪಿಎಂಇಜಿಪಿʼ ಯೋಜನೆಯು 36.33 ಲಕ್ಷ ಉದ್ಯೋಗಾವಕಾಶಗಳನ್ನು ಸೃಷ್ಟಿಸಿದೆ, ಗ್ರಾಮೀಣ ಉದ್ಯಮಶೀಲತೆಯನ್ನು ಬಲಪಡಿಸಿದೆ
15ನೇ ಹಣಕಾಸು ಆಯೋಗದ ಅವಧಿಯಲ್ಲಿ ಗುರಿಗಳನ್ನು ಮೀರಿದ ಸಾಧನೆ ಮಾಡಲಾಗಿದೆ, ಅತಿಸಣ್ಣ ಉದ್ಯಮಗಳು ಮತ್ತು ಉದ್ಯೋಗಗಳ ಬೆಳವಣಿಗೆ ಹೆಚ್ಚಾಗಿದೆ
13,554 ಕೋಟಿ ರೂ.ಗಳ ಬಜೆಟ್ ವೆಚ್ಚದ ಸಂಪೂರ್ಣ ಬಳಕೆಯೊಂದಿಗೆ ಗುರಿಗಳನ್ನು ಮೀರಿದ ಸಾಧನೆ ಮಾಡಲಾಗಿದೆ
ಶೇ.80ರಷ್ಟು ʻಪಿಎಂಇಜಿಪಿʼ ಘಟಕಗಳು ಹಳ್ಳಿಗಳಲ್ಲಿ ತಲೆ ಎತ್ತಿರುವುದರಿಂದ ಗ್ರಾಮೀಣ ಕೈಗಾರಿಕೀಕರಣಕ್ಕೆ ಹೆಚ್ಚಿನ ಉತ್ತೇಜನ ದೊರೆತಿದೆ
ಮಹಿಳೆಯರು ಮತ್ತು ಪ.ಜಾ/ಪ.ಪಂ/ಒಬಿಸಿ ಉದ್ಯಮಿಗಳು ʻಪಿಎಂಇಜಿಪಿʼ ಯಶೋಗಾಥೆಯನ್ನು ಮುನ್ನಡೆಸುತ್ತಿದ್ದಾರೆ
ಪ್ರಕಟಣಾ ದಿನಾಂಕ:
07 MAY 2026 10:52AM by PIB Bengaluru
ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ (ಕೆವಿಐಸಿ) ಮೂಲಕ ಜಾರಿಗೆ ತರಲಾದ ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯದ ಪ್ರಮುಖ ಯೋಜನೆಯಾದ ʻಪ್ರಧಾನಮಂತ್ರಿ ಉದ್ಯೋಗ ಸೃಷ್ಟಿ ಕಾರ್ಯಕ್ರಮʼವು (ಪಿಎಂಇಜಿಪಿ), ದೇಶಾದ್ಯಂತ ಉದ್ಯಮಶೀಲತೆ ಮತ್ತು ಉದ್ಯೋಗ ಸೃಷ್ಟಿಯನ್ನು ಉತ್ತೇಜಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ.
ಬ್ಯಾಂಕ್ ಸಾಲಗಳ ಮೇಲೆ ʻಮಾರ್ಜಿನ್ ಮನಿʼ(ಎಂಎಂ) ಸಬ್ಸಿಡಿಯನ್ನು ಒದಗಿಸುವ ಮೂಲಕ ಕೃಷಿಯೇತರ ವಲಯದಲ್ಲಿ ಹೊಸ ಅತಿಸಣ್ಣ ಉದ್ಯಮಗಳನ್ನು ಸ್ಥಾಪಿಸುವಲ್ಲಿ ʻಪಿಎಂಇಜಿಪಿʼ ನಿರೀಕ್ಷಿತ ಮಟ್ಟದಲ್ಲಿ ಉದ್ಯಮಿಗಳನ್ನು ಬೆಂಬಲಿಸುತ್ತಿದೆ. ಈ ಯೋಜನೆಯು ಪ್ರಾಥಮಿಕವಾಗಿ ಮೊದಲ ತಲೆಮಾರಿನ ಉದ್ಯಮಿಗಳಿಗೆ ಸ್ವಯಂ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಮತ್ತು ಉತ್ಪಾದನೆ ಹಾಗೂ ಸೇವಾ ಕ್ಷೇತ್ರಗಳಲ್ಲಿ, ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಸುಸ್ಥಿರ ಜೀವನೋಪಾಯವನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ.
15ನೇ ಹಣಕಾಸು ಆಯೋಗದ ಅವಧಿಯಲ್ಲಿ ಬಲವಾದ ಕಾರ್ಯಕ್ಷಮತೆ
15ನೇ ಹಣಕಾಸು ಆಯೋಗದ ಅವಧಿಯಲ್ಲಿ (2021-22ನೇ ಸಾಲಿನ ಹಣಕಾಸು ವರ್ಷದಿಂದ 2025-26ರ ಹಣಕಾಸು ವರ್ಷದವರೆಗೆ), ʻಪಿಎಂಇಜಿಪಿʼ ದೃಢವಾದ ಕಾರ್ಯಕ್ಷಮತೆಯನ್ನು ಪ್ರದರ್ಶಿಸಿದೆ. ಭಾರತದ ಅತಿಸಣ್ಣ ಉದ್ಯಮ ಪರಿಸರ ವ್ಯವಸ್ಥೆಯನ್ನು ಬಲಪಡಿಸುವಲ್ಲಿ ತನ್ನ ಕೊಡುಗೆಯನ್ನು ಮತ್ತೆ ಸಾಬೀತುಪಡಿಸಿದೆ.
ಈ ಯೋಜನೆಗೆ ನೀಡಲಾದ 13,554.42 ಕೋಟಿ ರೂ.ಗಳ ಬಜೆಟ್ ಅನುದಾನವನ್ನು ಪೂರ್ಣ ಮಟ್ಟದಲ್ಲಿ ಬಳಕೆ ಮಾಡಲಾಗಿದೆ ಮತ್ತು ಇದು 4,03,706 ಸಣ್ಣ ಉದ್ಯಮಗಳ ಸ್ಥಾಪನೆಗೆ ಅನುವು ಮಾಡಿಕೊಟ್ಟಿದೆ. ಆ ಮೂಲಕ 4,02,000 ಉದ್ಯಮಗಳ ಸ್ಥಾಪನೆಯ ಗುರಿಯನ್ನು ಮೀರಿ ಸಾಧನೆ ಮಾಡಲಾಗಿದೆ. ಈ ಸಾಧನೆಯು ಉದ್ಯಮಶೀಲತೆ ನೇತೃತ್ವದ ಉಪಕ್ರಮಗಳ ಪರಿಣಾಮಕಾರಿ ಅನುಷ್ಠಾನ ಮತ್ತು ಅಂತಹ ಯೋಜನೆಗಳಿಗೆ ನಿರಂತರ ಬೇಡಿಕೆಯನ್ನು ಸೂಚಿಸುತ್ತದೆ.

ಈ ಕಾರ್ಯಕ್ರಮವು ಸುಮಾರು 36.33 ಲಕ್ಷ ವ್ಯಕ್ತಿಗಳಿಗೆ ಸುಸ್ಥಿರ ಉದ್ಯೋಗಾವಕಾಶಗಳನ್ನು ಸೃಷ್ಟಿಸಿದೆ, ಇದು ದೇಶಾದ್ಯಂತ ಜೀವನೋಪಾಯ ಸೃಷ್ಟಿ ಮತ್ತು ತಳಮಟ್ಟದ ಆರ್ಥಿಕ ಅಭಿವೃದ್ಧಿಗೆ ಗಮನಾರ್ಹ ಕೊಡುಗೆ ನೀಡಿದೆ.
ಎಲ್ಲರನ್ನೂ ಒಳಗೊಂಡ ಬೆಳವಣಿಗೆ ಮತ್ತು ಗ್ರಾಮೀಣ ಸಂಪರ್ಕ
ʻಪಿಎಂಇಜಿಪಿʼ ಯೋಜನೆಯು ಮಹಿಳೆಯರು ಮತ್ತು ಸಾಮಾಜಿಕವಾಗಿ ಹಿಂದುಳಿದ ಸಮುದಾಯಗಳಿಗೆ ಉದ್ದೇಶಿತ ಬೆಂಬಲದ ಮೂಲಕ ಎಲ್ಲರನ್ನೂ ಒಳಗೊಂಡ ಅಭಿವೃದ್ಧಿಗೆ ಉತ್ತೇಜನ ನೀಡುವುದನ್ನು ಮುಂದುವರಿಸಿದೆ.
- ಯೋಜನೆಯಡಿ ನೆರವು ನೀಡಲಾದ ಒಟ್ಟು ಅತಿಸಣ್ಣ ಉದ್ಯಮಗಳಲ್ಲಿ ಮಹಿಳಾ ಫಲಾನುಭವಿಗಳ ಪಾಲು ಸುಮಾರು ಶೇ.40 ರಷ್ಟಿದೆ.
- ವಿತರಿಸಿದ ಒಟ್ಟು ʻಮಾರ್ಜಿನ್ ಮನಿ ಸಬ್ಸಿಡಿʼಯ ಸುಮಾರು ಶೇ.45ರಷ್ಟನ್ನು ಮಹಿಳಾ ಉದ್ಯಮಿಗಳಿಗೆ ಒದಗಿಸಲಾಗಿದೆ, ಇದು ಮಹಿಳಾ ನೇತೃತ್ವದ ಉದ್ಯಮಗಳನ್ನು ಪ್ರೋತ್ಸಾಹಿಸುತ್ತದೆ.
- ಸುಮಾರು ಶೇ.54 ರಷ್ಟು ಫಲಾನುಭವಿಗಳು ಪ.ಜಾ/ಪ.ಪಂ/ಒಬಿಸಿ ವರ್ಗಗಳಿಗೆ ಸೇರಿದವರಾಗಿದ್ದಾರೆ, ಇದು ಸಾಮಾಜಿಕ ಸೇರ್ಪಡೆಯ ಮೇಲೆ ಯೋಜನೆಯ ಬಲವಾದ ಗಮನವನ್ನು ಉಲ್ಲೇಖಿಸುತ್ತದೆ.
- ʻಪಿಎಂಇಜಿಪಿʼ ಅಡಿಯಲ್ಲಿ ಸ್ಥಾಪಿಸಲಾದ ಸುಮಾರು ಶೇ.80 ರಷ್ಟು ಉದ್ಯಮಗಳು ಗ್ರಾಮೀಣ ಪ್ರದೇಶಗಳಲ್ಲಿವೆ, ಗ್ರಾಮೀಣ ಕೈಗಾರಿಕೀಕರಣ ಮತ್ತು ಸಮತೋಲಿತ ಪ್ರಾದೇಶಿಕ ಅಭಿವೃದ್ಧಿಯನ್ನು ಬೆಂಬಲಿಸಿವೆ.

ಸ್ವಾವಲಂಬನೆ ಮತ್ತು ತಳಮಟ್ಟದ ಉದ್ಯಮಶೀಲತೆಗೆ ಚಾಲನೆ
15ನೇ ಹಣಕಾಸು ಆಯೋಗದ ಅವಧಿಯಲ್ಲಿನ ಸಾಧನೆಗಳು ಭಾರತದಲ್ಲಿ ಅತಿಸಣ್ಣ ಉದ್ಯಮ ಅಭಿವೃದ್ಧಿ ಮತ್ತು ಉದ್ಯೋಗ ಸೃಷ್ಟಿಯ ಪ್ರಮುಖ ಚಾಲಕ ಶಕ್ತಿಯಾಗಿ ʻಪಿಎಂಇಜಿಪಿʼ ವಹಿಸಿದ ಪಾತ್ರವನ್ನು ಪುನರುಚ್ಚರಿಸುತ್ತವೆ. ಸಾಲ-ಸಂಪರ್ಕಿತ ಸಬ್ಸಿಡಿಗಳಿಗೆ ಪ್ರವೇಶವನ್ನು ಸುಗಮಗೊಳಿಸುವ ಮೂಲಕ ಮತ್ತು ತಳಮಟ್ಟದಲ್ಲಿ ಉದ್ಯಮಶೀಲತೆಯನ್ನು ಉತ್ತೇಜಿಸುವ ಮೂಲಕ, ಈ ಯೋಜನೆಯು ಎಲ್ಲರನ್ನೂ ಒಳಗೊಂಡ ಆರ್ಥಿಕ ಬೆಳವಣಿಗೆಗೆ ಮತ್ತು ಸ್ವಾವಲಂಬಿ ಭಾರತದ ಆಶಯಕ್ಕೆ ಗಮನಾರ್ಹ ಕೊಡುಗೆ ನೀಡುವುದನ್ನು ಮುಂದುವರಿಸಿದೆ.
ನಾವೀನ್ಯತೆ, ಗಾತ್ರ ಹೆಚ್ಚಳ ಮತ್ತು ವ್ಯಾಪ್ತಿ ಹೆಚ್ಚಳದ ಮೇಲೆ ಹೆಚ್ಚಿನ ಗಮನದೊಂದಿಗೆ ಮುಂಬರುವ ಸುತ್ತಿನಲ್ಲಿ ʻಪಿಎಂಇಜಿಪಿʼಯನ್ನು ಮತ್ತಷ್ಟು ಬಲಪಡಿಸಲು ಸಚಿವಾಲಯ ಬದ್ಧವಾಗಿದೆ.
*****
(ಪ್ರಕಟಣೆ ಐ.ಡಿ.: 2258667)
ವಿಸಿಟರ್ ಕೌಂಟರ್ : 5