ಚುನಾವಣಾ ಆಯೋಗ
ವಿಧಾನಸಭೆಗಳಿಗೆ ಸಾರ್ವತ್ರಿಕ ಚುನಾವಣೆಗಳು ಮತ್ತು ಉಪಚುನಾವಣೆಗಳು 2026
ಸುಗಮ ಕಾರ್ಯಾಚರಣೆಗಳು, ವೇಗದ ವರದಿಗಾರಿಕೆ ಮತ್ತು ವರ್ಧಿತ ಸೈಬರ್ ಭದ್ರತೆ ಖಚಿತಪಡಿಸುತ್ತಿದೆ ಇ ಸಿ ಐ ಎನ್ ಇ ಟಿ
ಪ್ರಕಟಣಾ ದಿನಾಂಕ:
06 MAY 2026 4:42PM by PIB Bengaluru
1. 2026ರ ವಿಧಾನಸಭಾ ಚುನಾವಣೆಗಳು ಮತ್ತು ಉಪಚುನಾವಣೆಗಳ ಸಮಯದಲ್ಲಿ ನೈಜ-ಸಮಯದ ಮೇಲ್ವಿಚಾರಣೆ, ವೇಗದ ವರದಿಗಾರಿಕೆ ಮತ್ತು ಪಾರದರ್ಶಕತೆ ಹೆಚ್ಚಳ ಸೇರಿದಂತೆ ಚುನಾವಣಾ ಪ್ರಕ್ರಿಯೆಗಳನ್ನು ಸುಗಮಗೊಳಿಸುವಲ್ಲಿ ಭಾರತೀಯ ಚುನಾವಣಾ ಆಯೋಗದ (ಇಸಿಐ) ಬಲಿಷ್ಠ ಮಾಹಿತಿ ತಂತ್ರಜ್ಞಾನ ವೇದಿಕೆಯಾದ ಇ ಸಿ ಐ ಎನ್ ಇ ಟಿ ಪ್ರಮುಖ ಪಾತ್ರ ವಹಿಸಿದೆ.
2. ಜನವರಿ 2026 ರಲ್ಲಿ ಅಧಿಕೃತವಾಗಿ ಆರಂಭವಾದಾಗಿನಿಂದ, ಇಸಿಐಎನ್ಇಟಿ ಅಪ್ಲಿಕೇಶನ್ ನ ಬಳಕೆಯಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ ಮತ್ತು ಇಲ್ಲಿಯವರೆಗೆ ಈ ಆ್ಯಪ್ ನ 10 ಕೋಟಿಗೂ ಹೆಚ್ಚು ಡೌನ್ ಲೋಡ್ ಗಳಾಗಿವೆ. ಇಸಿಐಎನ್ಇಟಿ ಯ ಬೀಟಾ ಆವೃತ್ತಿಯನ್ನು ನವೆಂಬರ್ 2025 ರಲ್ಲಿ ಬಿಹಾರ ಚುನಾವಣೆಯಲ್ಲಿ ಬಳಸಲಾಯಿತು.
3. ಈ ಅಪ್ಲಿಕೇಷನ್ ಮತದಾನದ ದಿನಗಳಂದು, ಅಂದರೆ ಏಪ್ರಿಲ್ 9, 23 ಮತ್ತು 29 ರಂದು, 98.3 ಕೋಟಿಗೂ ಹೆಚ್ಚು ಬಳಕೆಯನ್ನು ದಾಖಲಿಸಿದೆ ಮತ್ತು ಎಣಿಕೆಯ ದಿನದಂದು ಅಂದರೆ 2026 ರ ಮೇ 4 ರಂದು, ECINET ಪ್ರತಿ ನಿಮಿಷಕ್ಕೆ ಸರಾಸರಿ 3 ಕೋಟಿ ಹಿಟ್ (ಬಳಕೆ / ಡೌನ್ ಲೋಡ್) ಗಳನ್ನು ದಾಖಲಿಸಿದೆ.
4. ಇ ಸಿ ಐ ಎನ್ ಇ ಟಿ ಯ ಸೈಬರ್ ಭದ್ರತಾ ಪ್ರೋಟೋಕಾಲ್ ಗಳಿಂದಾಗಿ ಮತ ಎಣಿಕೆಯ ದಿನದಂದು ಫಲಿತಾಂಶಗಳ ಪೋರ್ಟಲ್ ಸೇರಿದಂತೆ ಪ್ರಮುಖ ಚುನಾವಣಾ ವೇದಿಕೆಗಳನ್ನು ಗುರಿಯಾಗಿಸಿದ್ದ ಭಾರತ ಮತ್ತು ವಿದೇಶಗಳ 68 ಲಕ್ಷಕ್ಕೂ ಹೆಚ್ಚು ದುರುದ್ದೇಶಪೂರಿತ ಹಿಟ್ ಗಳನ್ನು ಪರಿಣಾಮಕಾರಿಯಾಗಿ ತಡೆಯಲು ಸಾಧ್ಯವಾಗಿದೆ.
5. ಮತ ಎಣಿಕೆ ಕೇಂದ್ರಗಳಲ್ಲಿ ಭದ್ರತೆಯನ್ನು ಹೆಚ್ಚಿಸುವ ಮಹತ್ವದ ಹೆಜ್ಜೆಯಾಗಿ, ಈ ಬಾರಿ ಎಲ್ಲಾ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಎಣಿಕೆಯ ದಿನದಂದು ಮೊದಲ ಬಾರಿಗೆ ಇಸಿಐಎನ್ಇಟಿ ಮೂಲಕ ಹೊಸ ಕ್ಯೂ ಆರ್ ಕೋಡ್ ಆಧಾರಿತ ಫೋಟೋ ಗುರುತಿನ ಚೀಟಿ ವಿಧಾನ ಬಳಸಲಾಯಿತು.
6. ಮತ ಎಣಿಕೆಯ ದಿನದಂದು, ಅಧಿಕೃತ ಸಿಬ್ಬಂದಿ ಮಾತ್ರ ಎಣಿಕೆ ಸ್ಥಳಗಳಿಗೆ ಪ್ರವೇಶಿಸುವುದನ್ನು ಖಚಿತಪಡಿಸಿಕೊಳ್ಳಲು 3.2 ಲಕ್ಷಕ್ಕೂ ಹೆಚ್ಚು ಕ್ಯೂ ಆರ್ ಕೋಡ್ ಗಳನ್ನು ಸೃಜಿಸಲಾಗಿದ್ದು, ಈ ಮೂಲಕ ಎಣಿಕೆ ಕೇಂದ್ರಗಳಿಗೆ ಅನಧಿಕೃತ ಪ್ರವೇಶ ತಡೆಯಲಾಯಿತು.
******
(ಪ್ರಕಟಣೆ ಐ.ಡಿ.: 2258524)
ವಿಸಿಟರ್ ಕೌಂಟರ್ : 6