ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
azadi ka amrit mahotsav

ನವದೆಹಲಿಯ ಭಾರತ್ ಮಂಟಪದಲ್ಲಿ ನಡೆದ ಆರೋಗ್ಯ ರಕ್ಷಣೆ ಕುರಿತ 3ನೇ ಜಂಟಿ ಸಮಿತಿ ಸಭೆಯಲ್ಲಿ ಭಾರತ ಮತ್ತು ಜಪಾನ್ ಆರೋಗ್ಯ ಸಹಕಾರ ಮತ್ತಷ್ಟು ಹೆಚ್ಚಳ


ಆರೋಗ್ಯ ವ್ಯವಸ್ಥೆಗಳನ್ನು ಬಲಪಡಿಸುವುದು, ಲಭ್ಯತೆಯನ್ನು ಸುಧಾರಿಸುವುದು ಮತ್ತು ಉತ್ತಮ ಆರೋಗ್ಯ ಫಲಿತಾಂಶಗಳಿಗಾಗಿ ನಾವೀನ್ಯತೆ ಉತ್ತೇಜಿಸುವ ಹಂಚಿಕೆಯ ದೂರದೃಷ್ಟಿಯಿಂದ ಆರೋಗ್ಯ ರಕ್ಷಣೆಯಲ್ಲಿ ಭಾರತ-ಜಪಾನ್ ಸಹಕಾರದ ಮಾರ್ಗದರ್ಶನ; ಶ್ರೀ ಜೆ.ಪಿ.ನಡ್ಡಾ

“ಸಬ್ ಕಾ ಸಾಥ್, ಸಬ್ ಕಾ ವಿಕಾಸ್’’ ಎಂಬ ಮಾರ್ಗದರ್ಶಿ ಸೂತ್ರದಡಿಯಲ್ಲಿ ಸಮಗ್ರ ಅಭಿವೃದ್ಧಿಗೆ ಭಾರತದ ಬದ್ಧತೆ ಪುನರುಚ್ಚರಿಸಿದ ಶ್ರೀ ನಡ್ಡಾ

ನಾವೀನ್ಯತೆ, ತಂತ್ರಜ್ಞಾನ ಮತ್ತು ಸಂಶೋಧನೆಯ ಮೂಲಕ ಆರೋಗ್ಯ ರಕ್ಷಣಾ ಸಹಕಾರ ಮುಂದುವರಿಸುವಲ್ಲಿ ಜಪಾನ್‌ನ ನಿರಂತರ ಸಹಭಾಗಿತ್ವ  ಬಲವರ್ಧನೆ- ಜಪಾನ್‌ನ ಆರೋಗ್ಯ ರಕ್ಷಣಾ ನೀತಿಯ ಉಸ್ತುವಾರಿ ಸಚಿವರಾದ ಶ್ರೀಮತಿ ಕಿಮಿ ಒನೊಡಾ ಹೇಳಿಕೆ

ಪ್ರಕಟಣಾ ದಿನಾಂಕ: 05 MAY 2026 1:53PM by PIB Bengaluru

ಭಾರತ ಮತ್ತು ಜಪಾನ್ ನಡುವಿನ ಆರೋಗ್ಯ ರಕ್ಷಣಾ ಕುರಿತಾದ 3ನೇ ಜಂಟಿ ಸಮಿತಿ ಸಭೆ (ಜೆಸಿಎಂ) ಇಂದು ದೆಹಲಿಯ ಭಾರತ್ ಮಂಟಪದಲ್ಲಿ ನಡೆಯಿತು. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಶ್ರೀ ಜಗತ್ ಪ್ರಕಾಶ್ ನಡ್ಡಾ ಮತ್ತು ಜಪಾನ್‌ನ ಆರೋಗ್ಯ ರಕ್ಷಣಾ ನೀತಿಯ ಉಸ್ತುವಾರಿ ಸಚಿವರಾದ ಶ್ರೀಮತಿ ಕಿಮಿ ಒನೊಡಾ ಅವರು ಸಭೆಯ ಅಧ್ಯಕ್ಷತೆ ವಹಿಸಿದ್ದರು.

ನಿಯೋಗವನ್ನು ಸ್ವಾಗತಿಸಿದ ಕೇಂದ್ರ ಆರೋಗ್ಯ ಕಾರ್ಯದರ್ಶಿ ಶ್ರೀಮತಿ ಪುಣ್ಯ ಸಲೀಲಾ ಶ್ರೀವಾಸ್ತವ ಅವರು, ಭಾರತ ಮತ್ತು ಜಪಾನ್ ಪರಸ್ಪರ ಗೌರವ, ವಿಶ್ವಾಸ ಮತ್ತು ಭವಿಷ್ಯದ ಹಂಚಿಕೆಯ ದೂರದೃಷ್ಟಿಯನ್ನು ಆಧರಿಸಿದ ಪಾಲುದಾರಿಕೆಯನ್ನು ಹಂಚಿಕೊಂಡಿವೆ ಎಂದು ಹೇಳಿದರು. ಭಾರತ-ಜಪಾನ್ ಸಹಕಾರ ಒಪ್ಪಂದದಡಿಯಲ್ಲಿ ನಡೆದ ಜಂಟಿ ಸಮಿತಿ ಸಭೆಯು ನಿಯಮಿತ ಸಂವಾದ ಮತ್ತು ಗಾಢವಾದ ಪರಸ್ಪರ ತಿಳಿವಳಿಕೆಯ ಮೂಲಕ ಈ ಪಾಲುದಾರಿಕೆಯನ್ನು ಮುನ್ನಡೆಸಲು ಪ್ರಮುಖ ವೇದಿಕೆಯಾಗಿ ಕಾರ್ಯನಿರ್ವಹಿಸಿದೆ ಎಂದು ಅವರು ಒತ್ತಿ ಹೇಳಿದರು ಮತ್ತು ಚರ್ಚೆಗಳು ರಚನಾತ್ಮಕ ಮತ್ತು ಭವಿಷ್ಯದ ದೂರದೃಷ್ಟಿಯನ್ನು ಹೊಂದಿವೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.

ಈ ವೇಳೆ ಮಾತನಾಡಿದ ಶ್ರೀ ನಡ್ಡಾ, ಆರೋಗ್ಯ ಕ್ಷೇತ್ರದಲ್ಲಿ ಸಹಯೋಗವನ್ನು ಬಲವರ್ಧನೆಗೊಳಿಸಲು ಮತ್ತು ಹೊಸ ಪಾಲುದಾರಿಕೆಗಳನ್ನು ಬೆಳೆಸಲು ಎರಡೂ ದೇಶಗಳ ಹಂಚಿಕೆಯ ಬದ್ಧತೆಯನ್ನು ಸಭೆ ಪ್ರತಿಬಿಂಬಿಸುತ್ತದೆ ಎಂದು ಒತ್ತಿ ಹೇಳಿದರು.  ಆರೋಗ್ಯ ರಕ್ಷಣೆಯಲ್ಲಿ ಭಾರತ-ಜಪಾನ್ ಸಹಕಾರವು ಆರೋಗ್ಯ ರಕ್ಷಣೆ ಮತ್ತು ಸ್ವಾಸ್ಥ್ಯದಲ್ಲಿನ ಸಹಕಾರ ಒಪ್ಪಂದ ಮತ್ತು ಆರೋಗ್ಯ ವ್ಯವಸ್ಥೆಗಳನ್ನು ಬಲಪಡಿಸುವ, ಲಭ್ಯತೆಯನ್ನು ಸುಧಾರಿಸುವ ಮತ್ತು ಉತ್ತಮ ಆರೋಗ್ಯ ಫಲಿತಾಂಶಗಳಿಗಾಗಿ ನಾವೀನ್ಯತೆಯನ್ನು ಉತ್ತೇಜಿಸುವ ಹಂಚಿಕೆಯ ದೂರದೃಷ್ಟಿಯಿಂದ ಮಾರ್ಗದರ್ಶಿಸಲ್ಪಟ್ಟಿದೆ ಎಂದು ಅವರು ಉಲ್ಲೇಖಿಸಿದರು.

ಭಾರತ ಮತ್ತು ಜಪಾನ್ ನಡುವಿನ ದೀರ್ಘಕಾಲೀನ ಮತ್ತು ಬಹುಮುಖಿ ಸಂಬಂಧವನ್ನು ಪ್ರಮುಖವಾಗಿ ಪ್ರಸ್ತಾಪಿಸಿದ ಶ್ರೀ ನಡ್ಡಾ ಅವರು ಇದು ಒಂದು ಶತಮಾನಕ್ಕೂ ಅಧಿಕ ಕಾಲ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳುವಿಕೆಯಲ್ಲಿ ಬೇರೂರಿದೆ ಮತ್ತು ”ಸಬ್ ಕಾ ಸಬ್ ಸಾಥ್, ಸಬ್  ಕಾ ವಿಕಾಸ್’’  ಎಂಬ ಮಾರ್ಗದರ್ಶಿ ತತ್ವದ ಅಡಿಯಲ್ಲಿ ಸಮಗ್ರ ಅಭಿವೃದ್ಧಿಗೆ ಭಾರತದ ಬದ್ಧತೆಯನ್ನು ಪುನರುಚ್ಚರಿಸಿದರು. ಆರೋಗ್ಯ ರಕ್ಷಣೆಯಲ್ಲಿ ದ್ವಿಪಕ್ಷೀಯ ಸಹಕಾರವನ್ನು ಮುನ್ನಡೆಸಲು ಜಂಟಿ ಸಮಿತಿ ಸಭೆಯು ಒಂದು ಪ್ರಮುಖ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ಅವರು ಪ್ರತಿಪಾದಿಸಿದರು.

ಸಭೆಯನ್ನುದ್ದೇಶಿಸಿ ಮಾತನಾಡಿದ ಶ್ರೀಮತಿ ಒನೊಡಾ, ನಾವೀನ್ಯತೆ, ತಂತ್ರಜ್ಞಾನ ಮತ್ತು ಸಂಶೋಧನೆಯ ಮೂಲಕ ಆರೋಗ್ಯ ರಕ್ಷಣಾ ಸಹಕಾರವನ್ನು ಮುಂದುವರಿಸುವಲ್ಲಿ ಜಪಾನ್‌ನ ನಿರಂತರ ಸಹಭಾಗಿತ್ವವನ್ನು ಬಲಪಡಿಸಿದರು ಮತ್ತು ದ್ವಿಪಕ್ಷೀಯ ಸಹಯೋಗವನ್ನು ಮತ್ತಷ್ಟು ಬಲಪಡಿಸುವ ಬದ್ಧತೆಯನ್ನು ವ್ಯಕ್ತಪಡಿಸಿದರು.

ಜಂಟಿ ಸಮಿತಿ ಸಭೆಯಲ್ಲಿ, ಪ್ರಮುಖ ಆದ್ಯತೆಯ ಕ್ಷೇತ್ರಗಳಲ್ಲಿ ವಿವರವಾದ ಪ್ರಾತ್ಯಕ್ಷಿಕೆಗಳು ಮತ್ತು ಚರ್ಚೆಗಳು ನಡೆದವು:

ಸಾಂಕ್ರಾಮಿಕವಲ್ಲದ ರೋಗಗಳ (ಎನ್ ಸಿ ಡಿ ಎಸ್) ತಡೆಗಟ್ಟುವುದು, ರೋಗಪತ್ತೆ, ಚಿಕಿತ್ಸೆ ಮತ್ತು ಪುನರ್ ವಸತಿ:

ಭಾರತದ ಕಡೆಯಿಂದ ಹೆಚ್ಚಾತ್ತಿರುವ ರೋಗಗಳ ಹೊರೆಯನ್ನು ಪ್ರಸ್ತುತಪಡಿಸಿದರು, ಸಾಂಕ್ರಾಮಿಕವಲ್ಲದ ರೋಗಗಳ ಹೆಚ್ಚುತ್ತಿರುವ ಹರಡುವಿಕೆಯನ್ನು ಒತ್ತಿ ಹೇಳಿದರು ಮತ್ತು ತಪಾಸಣೆ, ನಿರಂತರ ಆರೈಕೆ ಮತ್ತು ಸುಸ್ಥಿರ ಅಭಿವೃದ್ಧಿ ಗುರಿಗಳೊಂದಿಗೆ (ಎಸ್ ಡಿಜಿ) ಹೊಂದಿಕೊಂಡ ನಿರಂತರ ಆರೋಗ್ಯ ಪ್ರಚಾರದ ಆಧಾರದ ಮೇಲೆ ಸಮಗ್ರ ಪ್ರತಿಕ್ರಿಯೆ ಚೌಕಟ್ಟನ್ನು ವಿವರಿಸಿದರು. ಜಪಾನ್ ಕಡೆಯಿಂದ ಕ್ಯಾನ್ಸರ್ ತಪಾಸಣೆ, ಆರಂಭಿಕ ರೋಗಪತ್ತೆ ಮತ್ತು ತಾಂತ್ರಿಕ ಸಹಯೋಗ ಮತ್ತು ಸಾಂಸ್ಥಿಕ ಸಾಮರ್ಥ್ಯ ನಿರ್ಮಾಣದ ಮೂಲಕ ಚಿಕಿತ್ಸಾ ವ್ಯವಸ್ಥೆಗಳನ್ನು ಬಲಪಡಿಸುವ ಯೋಜನೆಗಳು ಸೇರಿದಂತೆ ಪ್ರಗತಿಯಲ್ಲಿರುವ ಸಹಕಾರ ಉಪಕ್ರಮಗಳನ್ನು ಹಂಚಿಕೊಂಡರು.

ಪೂರೃಕೆ ಸರಣಿ ಸ್ಥಿತಿಸ್ಥಾಪಕತ್ವ ಮತ್ತು ಉತ್ತಮ ಗುಣಮಟ್ಟದ ವೈದ್ಯಕೀಯ ಉತ್ಪನ್ನಗಳು ಮತ್ತು ಸೇವೆಗಳ ಲಭ್ಯತೆ:

ಭಾರತೀಯ ಕಡೆಯಿಂದ ದೇಶೀಯ ಉತ್ಪಾದನೆಯನ್ನು ಬಲಪಡಿಸುವುದು, ಅವಲಂಬನೆಯನ್ನು ತಗ್ಗಿಸುವುದು ಮತ್ತು ಉದ್ದೇಶಿತ ನೀತಿ ಕ್ರಮಗಳ ಮೂಲಕ ಕೈಗೆಟುಕುವ ಲಭ್ಯತೆವನ್ನು ಖಾತ್ರಿಪಡಿಸಿಕೊಳ್ಳುವತ್ತ ಗಮನಹರಿಸುವ ಮೂಲಕ ಅದರ ಔಷಧೀಯ ಮತ್ತು ವೈದ್ಯಕೀಯ ಸಾಧನಗಳ ವಲಯಗಳ ಪ್ರಮಾಣ ಮತ್ತು ಸಾಮರ್ಥ್ಯವನ್ನು ಪ್ರಮುಖವಾಗಿ ಪ್ರಸ್ತುಪಡಿಸಲಾಯಿತು. ಜಪಾನ್ ದೇಶದಿಂದ ವೈದ್ಯಕೀಯ ಉತ್ಪನ್ನಗಳು ಮತ್ತು ಸೇವೆಗಳ ಲಭ್ಯತೆ ಹೆಚ್ಚಿಸುವುದು, ಸ್ಥಿತಿಸ್ಥಾಪಕ ಪೂರೈಕೆ ಸರಣಿಗಳನ್ನು ನಿರ್ಮಿಸುವುದು ಮತ್ತು ರಚನಾತ್ಮಕ ಪಾಲುದಾರಿಕೆಗಳ ಮೂಲಕ ತಂತ್ರಜ್ಞಾನ ನಿಯೋಜನೆಯನ್ನು ಸುಗಮಗೊಳಿಸುವ ಗುರಿಯನ್ನು ಹೊಂದಿರುವ ತನ್ನ ಸಂಘಟಿತ ಸಾರ್ವಜನಿಕ-ಖಾಸಗಿ ಸಹಯೋಗ ಮಾದರಿಯನ್ನು ವಿವರಿಸಲಾಯಿತು.

ಡಿಜಿಟಲ್ ಆರೋಗ್ಯ:

ಭಾರತದ ಕಡೆಯಿಂದ ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ ಅಡಿಯಲ್ಲಿ  ತಮ್ಮ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ ವಿಧಾನವನ್ನು ವಿವರಿಸಿದರು, ಇದು ಪರಸ್ಪರ ಕಾರ್ಯಸಾಧ್ಯ, ಸುರಕ್ಷಿತ ಮತ್ತು ನಾಗರಿಕ-ಕೇಂದ್ರಿತ ಡಿಜಿಟಲ್ ಆರೋಗ್ಯ ಪೂರಕ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವಿಕೆ ಮತ್ತು ಏಕೀಕರಣದಲ್ಲಿ ಗಮನಾರ್ಹ ಪ್ರಗತಿಯೊಂದಿಗೆ ಸಕ್ರಿಯಗೊಳಿಸಿತು. ಜಪಾನ್ ಕಡೆಯವರು, ಸಿಸ್ಟಮ್ ಏಕೀಕರಣ, ಎಐ-ಸಕ್ರಿಯಗೊಳಿಸಿದ ವೈದ್ಯಕೀಯ ತಂತ್ರಜ್ಞಾನಗಳು ಮತ್ತು ಉದಯೋನ್ಮುಖ ಡಿಜಿಟಲ್ ವೇದಿಕೆಗಳನ್ನು ಬಳಸಿಕೊಂಡು ಸಹಯೋಗದ ಸಂಶೋಧನೆಯ ಮೂಲಕ ಡಿಜಿಟಲೀಕರಣವನ್ನು ಮುನ್ನಡೆಸುವಲ್ಲಿ ತಮ್ಮ ಅನುಭವವನ್ನು ಹಂಚಿಕೊಂಡರು.

ಮಾನವ ಸಂಪನ್ಮೂಲ ಅಭಿವೃದ್ದಿ ಮತ್ತು ವಿನಿಮಯ:

ಮಾನವ ಸಂಪನ್ಮೂಲ ಅಭಿವೃದ್ಧಿ ಮತ್ತು ವಿನಿಮಯ ಕಾರ್ಯಕ್ರಮಗಳು, ಜಂಟಿ ತರಬೇತಿ ಮತ್ತು ಸಾಮರ್ಥ್ಯಗಳ ಪರಸ್ಪರ ಗುರುತಿಸುವಿಕೆಗಾಗಿ ರಚನಾತ್ಮಕ ಮಾರ್ಗಗಳೊಂದಿಗೆ ಕೌಶಲ್ಯಪೂರ್ಣ ಮತ್ತು ಜಾಗತಿಕವಾಗಿ ಸ್ಪರ್ಧಾತ್ಮಕ ಆರೋಗ್ಯ ಕಾರ್ಯಪಡೆಯನ್ನು ಬೆಂಬಲಿಸುವ ತನ್ನ ನೀತಿ ಮತ್ತು ನಿಯಂತ್ರಣ ಪೂರಕ ವ್ಯವಸ್ಥೆಯನ್ನು ಭಾರತದ ಕಡೆಯಿಂದ ಪ್ರಮುಖವಾಗಿ ಪ್ರಸ್ತುಪಡಿಸಲಾಯಿತು. ಜಪಾನಿನ ಕಡೆಯವರು ಜಂಟಿ ಸಂಶೋಧನೆ, ಸಿಬ್ಬಂದಿ ವಿನಿಮಯ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಸಹಯೋಗದ ವೈಜ್ಞಾನಿಕ ತೊಡಗಿಸಿಕೊಳ್ಳುವಿಕೆಗಳನ್ನು ಬೆಂಬಲಿಸುವ ನಡೆಯುತ್ತಿರುವ ಸಹಕಾರ ಚೌಕಟ್ಟುಗಳನ್ನು ವಿವರಿಸಿದರು.

ತಮ್ಮ ಸಮಾರೋಪ ಭಾಷಣದಲ್ಲಿ ಶ್ರೀ ನಡ್ಡಾ ಅವರು, ಈ ಚರ್ಚೆಗಳು ಭಾರತ-ಜಪಾನ್ ಆರೋಗ್ಯ ಪಾಲುದಾರಿಕೆಗೆ ಹೊಸ ವೇಗವನ್ನು ನೀಡಿವೆ ಮತ್ತು ಪ್ರಮುಖ ಆದ್ಯತೆಯ ಕ್ಷೇತ್ರಗಳಲ್ಲಿ ಸಹಕಾರವನ್ನು ವೃರ್ದ್ಧಿಸುವ ಹಂಚಿಕೆಯ ಬದ್ಧತೆಯನ್ನು ಪುನರುಚ್ಚರಿಸಿದರು. ಚರ್ಚೆಗಳು ಸ್ಥಿತಿಸ್ಥಾಪಕ ಮತ್ತು ಸಮಗ್ರ ಆರೋಗ್ಯ ವ್ಯವಸ್ಥೆಗಳನ್ನು ಬಲಪಡಿಸಲು ಸ್ಪಷ್ಟ ನಿರ್ದೇಶನವನ್ನು ನೀಡಿವೆ ಎಂದು ಅವರು ಬಲವಾಗಿ ಪ್ರತಿಪಾದಿಸಿದರು.

ಸಭೆಯ ಫಲಿತಾಂಶಗಳು ಸಹಕಾರವನ್ನು ಮುಂದುವರಿಸಲು ಭದ್ರ ಬುನಾದಿಯನ್ನು ಹಾಕಿಕೊಡಲಿವೆ ಮತ್ತು ಹಂಚಿಕೆಯ ಉದ್ದೇಶವನ್ನು ಎರಡೂ ದೇಶಗಳ ನಾಗರಿಕರಿಗೆ ಅರ್ಥಪೂರ್ಣ ಫಲಿತಾಂಶಗಳಾಗಿ ಪರಿವರ್ತಿಸಲು ಜಪಾನ್‌ನೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸುವ ಭಾರತದ ಬದ್ಧತೆಯನ್ನು ಅವರು ಪುನರುಚ್ಚರಿಸಿದರು.

ಸಹಕಾರವನ್ನು ಮತ್ತಷ್ಟು ಮುಂದುವರಿಸುವ ಜಪಾನ್‌ನ ಬದ್ಧತೆಯನ್ನು ಬಲಪಡಿಸುತ್ತಾ, ಶ್ರೀಮತಿ ಒನೊಡಾ ಅವರು ಆರೋಗ್ಯ ಕ್ಷೇತ್ರದಲ್ಲಿ ಭಾರತ-ಜಪಾನ್ ವಿಶೇಷ ಕಾರ್ಯತಂತ್ರ ಮತ್ತು ಜಾಗತಿಕ ಪಾಲುದಾರಿಕೆಯನ್ನು ಬಲಪಡಿಸುವ ಜಪಾನ್‌ನ ಬದ್ಧತೆಯನ್ನು ಪುನರುಚ್ಚರಿಸಿದರು.

ಸಭೆಯು ಸಕಾರಾತ್ಮಕ ಮಾತುಕತೆಯ ಮೂಲಕ ಮುಕ್ತಾಯವಾಯಿತು, ಎರಡೂ ದೇಶಗಳವರು ತಮ್ಮ ನಾಗರಿಕರಿಗೆ ಉತ್ತಮ ಆರೋಗ್ಯ ಫಲಿತಾಂಶಗಳನ್ನು ಸಾಧಿಸಲು ದ್ವಿಪಕ್ಷೀಯ ಸಹಕಾರವನ್ನು ಮತ್ತಷ್ಟು ಬಲವರ್ಧನೆಗೊಳಿಸುವ ಬಗ್ಗೆ ಆಶಾವಾದವನ್ನು ವ್ಯಕ್ತಪಡಿಸಿದರು.

 

*****


(ಪ್ರಕಟಣೆ ಐ.ಡಿ.: 2258008) ವಿಸಿಟರ್ ಕೌಂಟರ್ : 8
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Marathi , Bengali , Punjabi , Gujarati , Telugu