ಸಹಕಾರ ಸಚಿವಾಲಯ
ಲಡಾಖ್‌ನಲ್ಲಿ ಬಹು ಬಗೆಯ ಹೈನುಗಾರಿಕೆ ಮೂಲಸೌಕರ್ಯ ಮತ್ತು ಸಹಕಾರಿ ಉಪಕ್ರಮಗಳನ್ನು ಉದ್ಘಾಟಿಸಲಿರುವ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ
ಲಡಾಖ್‌ನ ಹೈನುಗಾರಿಕೆ ಮೂಲಸೌಕರ್ಯಕ್ಕೆ ಭಾರೀ ಉತ್ತೇಜನ: ಹಾಲು ಸಂಸ್ಕರಣಾ ಘಟಕಗಳು, ಹಾಲು ತಂಪಾಗಿಸುವ ವ್ಯವಸ್ಥೆಗಳು ಮತ್ತು ಮೊಬೈಲ್ ಪರೀಕ್ಷಾ ಸೌಲಭ್ಯಗಳನ್ನು ಉದ್ಘಾಟಿಸಲಿರುವ ಅಮಿತ್ ಶಾ
ಸಹಕಾರಿ ವಲಯದಲ್ಲಿ ಡಿಜಿಟಲ್ ಸಬಲೀಕರಣ ಬಲವರ್ಧನೆಗೆ ಆಂಡ್ರಾಯ್ಡ್ ಆಧಾರಿತ ಸ್ವಯಂಚಾಲಿತ ಹಾಲು ಸಂಗ್ರಹಣಾ ವ್ಯವಸ್ಥೆ (ಎಎಂಸಿಎಸ್) ಆರಂಭ
ಮಾರುಕಟ್ಟೆ ಸಂಪರ್ಕಗಳನ್ನು ಹೆಚ್ಚಿಸಲು ಹೈನುಗಾರಿಕೆ ಉತ್ಪನ್ನಗಳ ಮಾರುಕಟ್ಟೆ ಮತ್ತು ವಿತರಣೆಗಾಗಿ ಎಂಒಯುಗಳಿಗೆ ಸಹಿ
ಪ್ರಕಟಣಾ ದಿನಾಂಕ:
30 APR 2026 3:19PM by PIB Bengaluru
ಲಡಾಖ್ ಕೇಂದ್ರಾಡಳಿತ ಪ್ರದೇಶದಲ್ಲಿ ಹೈನುಗಾರಿಕೆ (ಡೈರಿ) ವಲಯವನ್ನು ಉತ್ತೇಜಿಸಲು ಮತ್ತು ಸಹಕಾರಿ ಆಧರಿತ ಗ್ರಾಮೀಣಾಭಿವೃದ್ಧಿಯನ್ನು ಬಲವರ್ಧನೆಗೊಳಿಸುವ ಮಹತ್ವದ ಹೆಜ್ಜೆಯಾಗಿ ಗೌರವಾನ್ವಿತ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು 2026ರ ಮೇ 1 ರಂದು ಲೇಹ್‌ನ ಕೇಂದ್ರ ಬೌದ್ಧ ಅಧ್ಯಯನ ಸಂಸ್ಥೆಯಲ್ಲಿ (ಸಿಐಬಿಎಸ್) ನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಮುಖ ಉಪಕ್ರಮಗಳ ಸರಣಿಯನ್ನು ಉದ್ಘಾಟಿಸಲಿದ್ದಾರೆ. ಕೇಂದ್ರ ಮೀನುಗಾರಿಕಕೆ, ಪಶುಸಂಗೋಪನೆ ಮತ್ತು ಡೈರಿ ಸಚಿವ ಶ್ರೀ ಶ್ರೀ ರಾಜೀವ್ ರಂಜನ್ ಸಿಂಗ್ ಅಲಿಯಾಸ್ ಲಲನ್ ಸಿಂಗ್ ಮತ್ತು ಲಡಾಖ್‌ನ ಲೆಫ್ಟಿನೆಂಟ್ ಗವರ್ನರ್ ಶ್ರೀ ವಿನಯ್ ಕುಮಾರ್ ಸಕ್ಸೇನಾ ಈ ಸಂದರ್ಭದಲ್ಲಿ ಉಪಸ್ಥಿತರಿರಲಿದ್ದಾರೆ.
ಈ ಕಾರ್ಯಕ್ರಮವು ಹಾಲು ಸಂಸ್ಕರಣಾ ಸಾಮರ್ಥ್ಯವನ್ನು ವೃದ್ಧಿಸುವುದು, ಶೀಥಲ(ಕೋಲ್ಡ್-ಚೈನ್) ವ್ಯವಸ್ಥೆಗಳನ್ನು ಸುಧಾರಿಸುವುದು ಮತ್ತು ಸ್ಥಳೀಯ ಡೈರಿ ರೈತರಿಗೆ ಮಾರುಕಟ್ಟೆ ಸಂಪರ್ಕಗಳನ್ನು ವಿಸ್ತರಿಸುವ ಗುರಿಯನ್ನು ಹೊಂದಿರುವ ಬಹು ಡೈರಿ ಮೂಲಸೌಕರ್ಯ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆಗೆ ಸಾಕ್ಷಿಯಾಗಲಿದೆ. ಈ ಪ್ರದೇಶದಲ್ಲಿ ಸಹಕಾರಿ ಡೈರಿ ಕಾರ್ಯಾಚರಣೆಗಳನ್ನು ಆಧುನೀಕರಿಸಲು ರೂಪಿಸಲಾದ ಡಿಜಿಟಲ್ ಮತ್ತು ಸಾಂಸ್ಥಿಕ ಉಪಕ್ರಮಗಳ ಉದ್ಘಾಟನೆಗೆ ಈ ಕಾರ್ಯಕ್ರಮ ಸಾಕ್ಷಿಯಾಗಲಿದೆ.
ಈ ಕಾರ್ಯಕ್ರಮದ ವೇಳೆ, ಗೌರವಾನ್ವಿತ ಸಚಿವರು ಕಾರ್ಗಿಲ್‌ನಲ್ಲಿ 10 ಟಿಎಲ್ ಪಿಡಿ ಡೈರಿ ಸ್ಥಾವರಕ್ಕೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಮತ್ತು ಲೇಹ್‌ನಲ್ಲಿ ಮೊಸರು ಮತ್ತು ಪನೀರ್ ಉತ್ಪಾದನಾ ಸೌಲಭ್ಯಗಳನ್ನು ಒಳಗೊಂಡಂತೆ ಹೊಸ ಡೈರಿ ಸಂಸ್ಕರಣಾ ಘಟಕಗಳನ್ನು ಉದ್ಘಾಟಿಸಲಿದ್ದಾರೆ. ಹೆಚ್ಚುವರಿಯಾಗಿ ಹಾಲಿನ ಸಂಗ್ರಹಣೆ ಮತ್ತು ಸಾಗಣೆ ಮೂಲಸೌಕರ್ಯವನ್ನು ಬಲಪಡಿಸಲು ಬಲ್ಕ್ ಮಿಲ್ಕ್ ಕೂಲರ್ ವ್ಯವಸ್ಥೆಯನ್ನು ಆರಂಭಿಸಲಾಗುವುದು.
ಸಹಕಾರಿ ವಲಯದಲ್ಲಿ ಡಿಜಿಟಲ್ ಸಬಲೀಕರಣದ ದೂರದೃಷ್ಟಿಯನ್ನು ಮತ್ತಷ್ಟು ಬಲಪಡಿಸುವ ಸಲುವಾಗಿ ಖರೀದಿ ಪ್ರಕ್ರಿಯೆಗಳನ್ನು ಸುಗಮಗೊಳಿಸಲು ಮತ್ತು ರೈತರಿಗೆ ಪಾವತಿಗಳಲ್ಲಿ ಪಾರದರ್ಶಕತೆಯನ್ನು ಖಾತ್ರಿಪಡಿಸಿಕೊಳ್ಳಲು ಆಂಡ್ರಾಯ್ಡ್ ಆಧಾರಿತ ಸ್ವಯಂಚಾಲಿತ ಹಾಲು ಸಂಗ್ರಹಣಾ ವ್ಯವಸ್ಥೆ (ಎಎಂಸಿಎಸ್) ಅಪ್ಲಿಕೇಶನ್ ಅನ್ನು ಆರಂಭಿಸಲಾಗುವುದು.
ಈ ಕಾರ್ಯಕ್ರಮದಲ್ಲಿ ಗುಣಮಟ್ಟದ ಭರವಸೆಯನ್ನು ಖಾತ್ರಿಪಡಿಸುವುದು ಮತ್ತು ತಳಮಟ್ಟದಲ್ಲಿ ಡೈರಿ ರೈತರನ್ನು ಬೆಂಬಲಿಸುವ ಗುರಿಯನ್ನು ಹೊಂದಿರುವ ಮೊಬೈಲ್ ಹಾಲು ಪರೀಕ್ಷಾ ಪ್ರಯೋಗಾಲಯವನ್ನು ಸಹ ಆರಂಭಿಸಲಾಗುವುದು. ಪ್ರಮುಖ ಬ್ರ್ಯಾಂಡ್‌ಗಳ ಅಡಿಯಲ್ಲಿ ಡೈರಿ ಉತ್ಪನ್ನಗಳ ಮಾರುಕಟ್ಟೆಯನ್ನು ಹೆಚ್ಚಿಸಲು, ಇದರಿಂದಾಗಿ ಸ್ಥಳೀಯ ಉತ್ಪಾದಕರಿಗೆ ಮಾರುಕಟ್ಟೆ ಲಭ್ಯತೆ ಮತ್ತು ಮೌಲ್ಯವರ್ಧನೆ ಸುಧಾರಿಸಲು ಪ್ರಮುಖ ಪಾಲುದಾರರ ನಡುವೆ ತಿಳಿವಳಿಕೆ ಒಪ್ಪಂದಕ್ಕೆ ಸಹಿ ಹಾಕಲಾಗುವುದು.
ರೈತ ಕಲ್ಯಾಣ ಮತ್ತು ಸಹಕಾರಿ ಬಲವರ್ಧನೆಗೆ ಸರ್ಕಾರದ ಹೆಚ್ಚಿನ ಗಮನ ಹರಿಸುತ್ತಿರುವುದಕ್ಕೆ ಅನುಗುಣವಾಗಿ ಈ ಪ್ರದೇಶದ ಪ್ರಗತಿಪರ ಡೈರಿ ರೈತರನ್ನು ಈ ಕಾರ್ಯಕ್ರಮದ ಸಂದರ್ಭದಲ್ಲಿ ಸನ್ಮಾನಿಸಲಾಗುವುದು. ಈ ಉಪಕ್ರಮವು, ಸಹಕಾರಿ ಸಂಸ್ಥೆಗಳನ್ನು ಸಬಲೀಕರಣಗೊಳಿಸುವ ಮೂಲಕ ಗ್ರಾಮೀಣ ಜೀವನೋಪಾಯವನ್ನು ವೃದ್ಧಿಸುವ ಮೂಲಕ ಮತ್ತು ದೇಶದ ದೂರದ ಪ್ರದೇಶಗಳಲ್ಲಿ ಸಮಗ್ರ ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸುವ ಮೂಲಕ “ಸಹಕಾರದಿಂದ ಸಮೃದ್ಧಿ’’ ಯ ದೂರದೃಷ್ಟಿಯನ್ನು ಸಾಕಾರಗೊಳಿಸುವ ಸರ್ಕಾರದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.
*****
(ಪ್ರಕಟಣೆ ಐ.ಡಿ.: 2257015)
ವಿಸಿಟರ್ ಕೌಂಟರ್ : 10