ಪಂಚಾಯತ್ ರಾಜ್ ಸಚಿವಾಲಯ
ಪಂಚಾಯತ್ ಅಭಿವೃದ್ಧಿ ಸೂಚ್ಯಂಕ (ಪಿಎಐ) 2.0 ವರದಿ ಬಿಡುಗಡೆ: 3635 ಪಂಚಾಯತ್ ಗಳು ಮುಂಚೂಣಿ ಸಂಸ್ಥೆಗಳಾಗಿ ಹೊರಹೊಮ್ಮಿವೆ
ಗ್ರಾಮ ಪಂಚಾಯತ್ ಗಳು/ಸಾಂಪ್ರದಾಯಿಕ ಸ್ಥಳೀಯ ಸಂಸ್ಥೆಗಳಿಂದ ಶೇಕಡಾ 97.3 ರಷ್ಟು ದಾಖಲೆ ಮಟ್ಟದ ಭಾಗವಹಿಸುವಿಕೆ; ಪಂಚಾಯತ್ ವರದಿ ಕಾರ್ಡ್ ಜೀವನೋಪಾಯ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಬಲವಾದ ಪ್ರಯೋಜನಗಳನ್ನು ತೋರಿಸುತ್ತಿದೆ
ಪ್ರಕಟಣಾ ದಿನಾಂಕ:
29 APR 2026 4:34PM by PIB Bengaluru
ತಳಮಟ್ಟದ ಆಡಳಿತವನ್ನು ಬಲಪಡಿಸುವ ಮತ್ತು ಎಲ್ಲರನ್ನೂ ಒಳಗೊಂಡ ಗ್ರಾಮೀಣ ಅಭಿವೃದ್ಧಿಯನ್ನು ಉತ್ತೇಜಿಸುವ ಪ್ರಮುಖ ಹೆಜ್ಜೆಯಾಗಿ, ಪಂಚಾಯತ್ ರಾಜ್ ಸಚಿವಾಲಯವು 24 ಏಪ್ರಿಲ್ 2026 ರಂದು ಆಚರಿಸಲಾದ ರಾಷ್ಟ್ರೀಯ ಪಂಚಾಯತ್ ರಾಜ್ ದಿನದ ಸಂದರ್ಭದಲ್ಲಿ, 2023-24ರ ಹಣಕಾಸು ವರ್ಷದ ಪಂಚಾಯತ್ ಅಭಿವೃದ್ಧಿ ಸೂಚ್ಯಂಕ (ಪಿಎಐ) 2.0 ವರದಿಯನ್ನು ಬಿಡುಗಡೆ ಮಾಡಿದೆ. ಪ್ರತಿ ಪಂಚಾಯತ್‌ನ 'ವರದಿ ಕಾರ್ಡ್' ಆಗಿ ಕಾರ್ಯನಿರ್ವಹಿಸುವ ಈ ವರದಿಯು, (ಸಂಯೋಜಿತ ಅಂಕಗಳ ಆಧಾರದ ಮೇಲೆ) 3,635 ಗ್ರಾಮ ಪಂಚಾಯತ್ ಗಳು 'ಫ್ರಂಟ್ ರನ್ನರ್' (ಮುಂಚೂಣಿ) ವರ್ಗಕ್ಕೆ ಸೇರಿವೆ ಎಂದು ಹೇಳಿದೆ. ಹಾಗೆಯೇ 1,18,824 ಗ್ರಾಮ ಪಂಚಾಯತ್ ಗಳು (ಭಾಗವಹಿಸಿದ ಗ್ರಾಮ ಪಂಚಾಯತ್/ಸಾಂಪ್ರದಾಯಿಕ ಸ್ಥಳೀಯ ಸಂಸ್ಥೆಗಳ ಸುಮಾರು ಶೇ.45.72) 'ಪರ್ಫಾರ್ಮರ್' (ಕಾರ್ಯಕ್ಷಮತೆ ತೋರಿದ) ವರ್ಗದಲ್ಲಿ ಸ್ಥಾನ ಪಡೆದಿವೆ. ಗ್ರಾಮ ಪಂಚಾಯತ್ ಗಳು ಬಲವಾದ ಫಲಿತಾಂಶಗಳನ್ನು ತೋರಿಸಿರುವ ಪ್ರಮುಖ ವಿಷಯಾಧಾರಿತ ಕ್ಷೇತ್ರಗಳಲ್ಲಿ 'ಪಂಚಾಯತ್ ನಲ್ಲಿ ಬಡತನ ಮುಕ್ತ ಮತ್ತು ವರ್ಧಿತ ಜೀವನೋಪಾಯ' ಹಾಗೂ 'ಆರೋಗ್ಯವಂತ ಪಂಚಾಯತ್' ಸೇರಿವೆ. ಥೀಮ್ 1: 'ಪಂಚಾಯತ್ ಗಳಲ್ಲಿ ಬಡತನ ಮುಕ್ತ ಮತ್ತು ವರ್ಧಿತ ಜೀವನೋಪಾಯ' ಅಡಿಯಲ್ಲಿ ದೇಶಾದ್ಯಂತ ಒಟ್ಟು 3,313 ಗ್ರಾಮ ಪಂಚಾಯತ್ ಗಳು/ಸಾಂಪ್ರದಾಯಿಕ ಸ್ಥಳೀಯ ಸಂಸ್ಥೆಗಳು 'A+' ಗ್ರೇಡ್ ಪಡೆದುಕೊಂಡಿವೆ. ಇದು ಪಂಚಾಯತ್ ಮಟ್ಟದಲ್ಲಿ ಬಡತನ ನಿರ್ಮೂಲನೆ ಮತ್ತು ಜೀವನೋಪಾಯದ ಸೃಷ್ಟಿಯಲ್ಲಿ ಗಮನಾರ್ಹ ಸಾಧನೆಯನ್ನು ಪ್ರತಿಬಿಂಬಿಸುತ್ತದೆ. ಅದೇ ರೀತಿ, ಥೀಮ್ 2: 'ಆರೋಗ್ಯವಂತ ಪಂಚಾಯತ್ ಗಳು' ಅಡಿಯಲ್ಲಿ ಒಟ್ಟು 1,015 ಗ್ರಾಮ ಪಂಚಾಯತ್ ಗಳು/ ಸಾಂಪ್ರದಾಯಿಕ ಸ್ಥಳೀಯ ಸಂಸ್ಥೆಗಳು 'A+' ಗ್ರೇಡ್ ಸಾಧಿಸಿವೆ. ಇದು ರೋಗನಿರೋಧಕ ಆರೋಗ್ಯ ರಕ್ಷಣೆ, ಪೌಷ್ಟಿಕಾಂಶ ಜಾಗೃತಿ, ನೈರ್ಮಲ್ಯ ಪದ್ಧತಿಗಳು ಮತ್ತು ಸಮುದಾಯದ ಒಳಗೊಳ್ಳುವಿಕೆಯಲ್ಲಿ ಬಲವಾದ ಫಲಿತಾಂಶಗಳನ್ನು ಪ್ರದರ್ಶಿಸುತ್ತದೆ.
ಪಿಎಐ 2.0 ರಾಷ್ಟ್ರಮಟ್ಟದಲ್ಲಿ ಶೇಕಡಾ 97.30 ರಷ್ಟು ಅಸಾಧಾರಣ ಭಾಗವಹಿಸುವಿಕೆಯನ್ನು ದಾಖಲಿಸಿದೆ. 33 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಾದ್ಯಂತ 2,59,867 ಗ್ರಾಮ ಪಂಚಾಯತ್ ಗಳು ಮೌಲ್ಯೀಕರಿಸಿದ ಡೇಟಾವನ್ನು ಸಲ್ಲಿಸಿವೆ – ಇದು ಪಿಎಐ ಆವೃತ್ತಿ 1.0 ಅಡಿಯಲ್ಲಿ ಸಾಧಿಸಿದ ಶೇಕಡಾ 80.79 ರ ಭಾಗವಹಿಸುವಿಕೆಗೆ ಹೋಲಿಸಿದರೆ ಶ್ಲಾಘನೀಯ ಸುಧಾರಣೆಯಾಗಿದೆ. ಈ ಆವೃತ್ತಿಯ ಪ್ರಮುಖ ಸುಧಾರಣೆಗಳಲ್ಲಿ ಏಕೀಕೃತ ದತ್ತಾಂಶ ನಮೂದು ನಮೂನೆ, ಪಾರದರ್ಶಕತೆ ಮತ್ತು ಹೊಣೆಗಾರಿಕೆಗಾಗಿ ಕಡ್ಡಾಯ ಗ್ರಾಮ ಸಭೆ ಮೌಲ್ಯೀಕರಣ, ನೋಡಲ್ ಕೇಂದ್ರ ಸಚಿವಾಲಯಗಳು ಮತ್ತು ಇಲಾಖೆಗಳ ರಾಷ್ಟ್ರೀಯ ಪೋರ್ಟಲ್ ಗಳಿಂದ ಡೇಟಾದ ಸ್ವಯಂಚಾಲಿತ ವರ್ಗಾವಣೆ, ಸುಧಾರಿತ ಡೇಟಾ ನಿಖರತೆಗಾಗಿ ಸಾಫ್ಟ್ ಮತ್ತು ಕ್ರಾಸ್-ಡೇಟಾ ಮೌಲ್ಯೀಕರಣ ಕಾರ್ಯವಿಧಾನಗಳು, ನೈಜ-ಸಮಯದ ಡ್ಯಾಶ್‌ಬೋರ್ಡ್ ಗಳು ಮತ್ತು ಸ್ಥಳೀಯ ಭಾಷಾ ಬೆಂಬಲವನ್ನು ಒಳಗೊಂಡಿವೆ. ಪಿಎಐ 2.0 (ಎಫ್ ವೈ 2023–24) ಬಿಡುಗಡೆಯು ಪಂಚಾಯತ್ ರಾಜ್ ಸಂಸ್ಥೆಗಳನ್ನು ಬಲಪಡಿಸುವ ಮತ್ತು ಸಹಭಾಗಿತ್ವದ, ಪಾರದರ್ಶಕ ಮತ್ತು ಡೇಟಾ-ಚಾಲಿತ ಸ್ಥಳೀಯ ಆಡಳಿತದ ಮೂಲಕ "ವಿಕಸಿತ ಗ್ರಾಮ ಪಂಚಾಯತ್ ಗಳ" ದೃಷ್ಟಿಕೋನವನ್ನು ಮುನ್ನಡೆಸುವ ಸರ್ಕಾರದ ಬದ್ಧತೆಯನ್ನು ಪುನರುಚ್ಚರಿಸುತ್ತದೆ.

ಪಿಎಐ 2.0 ಬಗ್ಗೆ
ಪಂಚಾಯತ್ ಅಭಿವೃದ್ಧಿ ಸೂಚ್ಯಂಕವು ಪುರಾವೆ ಆಧಾರಿತ ಯೋಜನೆ, ಕಾರ್ಯಕ್ಷಮತೆಯ ಮೇಲ್ವಿಚಾರಣೆ ಮತ್ತು ಪಂಚಾಯತ್ ರಾಜ್ ಸಂಸ್ಥೆಗಳನ್ನು ಉತ್ತೇಜಿಸಲು ಒಂದು ದೃಢವಾದ ಸಾಧನವಾಗಿ ಕಾರ್ಯನಿರ್ವಹಿಸುತ್ತದೆ. ಅಭಿವೃದ್ಧಿ ಕ್ರಮಗಳಿಗೆ ಆದ್ಯತೆ ನೀಡಲು, ಗ್ರಾಮ ಪಂಚಾಯತ್ ಅಭಿವೃದ್ಧಿ ಯೋಜನೆಗಳ (ಜಿಪಿಡಿಪಿ) ತಯಾರಿಕೆಗೆ ಬೆಂಬಲ ನೀಡಲು ಮತ್ತು ಉತ್ತಮ ಸಾಧನೆ ಮಾಡುವ ಪಂಚಾಯತ್ ಗಳನ್ನು ಕಲಿಕಾ ಕೇಂದ್ರಗಳು ಮತ್ತು ಉತ್ತಮ ಅಭ್ಯಾಸಗಳ ಮಾದರಿಗಳಾಗಿ ಗುರುತಿಸಲು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಇದನ್ನು ಹೆಚ್ಚಾಗಿ ಅಳವಡಿಸಿಕೊಳ್ಳುತ್ತಿವೆ. ಗ್ರಾಮ ಪಂಚಾಯತ್ ಕಾರ್ಯಕ್ಷಮತೆಯನ್ನು ಮೌಲ್ಯಮಾಪನ ಮಾಡುವ ಭಾರತದ ಮೊದಲ ರಾಷ್ಟ್ರವ್ಯಾಪಿ ಡೇಟಾ-ಚಾಲಿತ ಚೌಕಟ್ಟು ಇದಾಗಿದೆ. ಪಿಎಐ 2.0 ದೇಶದ 2.5 ಲಕ್ಷಕ್ಕೂ ಹೆಚ್ಚು ಗ್ರಾಮ ಪಂಚಾಯತ್ ಗಳನ್ನು 150 ಸೂಚಕಗಳು ಮತ್ತು 230 ಡೇಟಾ ಪಾಯಿಂಟ್ ಗಳ ಆಧಾರದ ಮೇಲೆ ಮೌಲ್ಯಮಾಪನ ಮಾಡುತ್ತದೆ. ಇದು ಸುಸ್ಥಿರ ಅಭಿವೃದ್ಧಿ ಗುರಿಗಳ ಸ್ಥಳೀಕರಣದ (ಎಲ್ ಎಸ್ ಡಿ ಜಿ) ಅಡಿಯಲ್ಲಿ ಒಂಬತ್ತು ವಿಷಯಾಧಾರಿತ ಕ್ಷೇತ್ರಗಳನ್ನು ಒಳಗೊಂಡಿದೆ - ಬಡತನ, ಆರೋಗ್ಯ, ಮಕ್ಕಳ ಕಲ್ಯಾಣ, ನೀರು, ಪರಿಸರ, ಮೂಲಸೌಕರ್ಯ, ಸಾಮಾಜಿಕ ನ್ಯಾಯ, ಉತ್ತಮ ಆಡಳಿತ ಮತ್ತು ಮಹಿಳಾ ಸಬಲೀಕರಣ. ಅದರ ಹಿಂದಿನ ಆವೃತ್ತಿಗಿಂತ ಗಮನಾರ್ಹವಾಗಿ ಸುಧಾರಿತ ಮತ್ತು ಬಲಗೊಂಡಿರುವ ಪಿಎಐ 2.0, ಆವೃತ್ತಿ 1.0 ರಲ್ಲಿದ್ದ 516 ಸೂಚಕಗಳು ಮತ್ತು 794 ಡೇಟಾ ಪಾಯಿಂಟ್ ಗಳನ್ನು 150 ಸೂಚಕಗಳು ಮತ್ತು 230 ಡೇಟಾ ಪಾಯಿಂಟ್ ಗಳಿಗೆ ತರ್ಕಬದ್ಧಗೊಳಿಸಿದೆ. ಇದು ಹೆಚ್ಚಿನ ಉಪಯುಕ್ತತೆ ಮತ್ತು ರಾಷ್ಟ್ರೀಯ ಯೋಜನಾ ಚೌಕಟ್ಟುಗಳೊಂದಿಗೆ ಬಲವಾದ ಸಂಪರ್ಕವನ್ನು ಖಚಿತಪಡಿಸುತ್ತದೆ. ಅವುಗಳ ಸಂಯೋಜಿತ ಪಿಎಐ ಅಂಕಗಳ ಆಧಾರದ ಮೇಲೆ, ಗ್ರಾಮ ಪಂಚಾಯತ್ ಗಳನ್ನು ಐದು ಕಾರ್ಯಕ್ಷಮತೆಯ ವಿಭಾಗಗಳಾಗಿ ವರ್ಗೀಕರಿಸಲಾಗಿದೆ – ಅಚೀವರ್ (A+: 90 ಮತ್ತು ಅದಕ್ಕಿಂತ ಹೆಚ್ಚು), ಫ್ರಂಟ್ ರನ್ನರ್ (A: 75 ರಿಂದ 90 ಕ್ಕಿಂತ ಕಡಿಮೆ), ಪರ್ಫಾರ್ಮರ್ (B: 60 ರಿಂದ 75 ಕ್ಕಿಂತ ಕಡಿಮೆ), ಆಸ್ಪಿರಂಟ್ (C: 40 ರಿಂದ 60 ಕ್ಕಿಂತ ಕಡಿಮೆ), ಮತ್ತು ಬಿಗಿನರ್ (D: 40 ಕ್ಕಿಂತ ಕಡಿಮೆ) – ಇದು ತಳಮಟ್ಟದಲ್ಲಿ ಅರ್ಥಪೂರ್ಣ ಮಾನದಂಡ, ಆರೋಗ್ಯಕರ ಸ್ಪರ್ಧೆ ಮತ್ತು ಉದ್ದೇಶಿತ ಕ್ರಮಗಳನ್ನು ಸಕ್ರಿಯಗೊಳಿಸುತ್ತದೆ.
ಪಿಎಐ ಆವೃತ್ತಿ 2.0 ಹಣಕಾಸು ವರ್ಷ 2023-24 ರ ಗ್ರೇಡ್ ಗಳಲ್ಲಿ ವರ್ಗೀಕರಿಸಲಾದ ರಾಜ್ಯ/ಕೇಂದ್ರಾಡಳಿತ ಪ್ರದೇಶವಾರು ಗ್ರಾಮ ಪಂಚಾಯತ್/ ಗ್ರಾಮ ಪಂಚಾಯತ್ ಗೆ ಸಮಾನವಾದ ಸಂಸ್ಥೆಗಳ ಸಂಖ್ಯೆ
|
ಕ್ರ.ಸಂ
|
ರಾಜ್ಯ/ಕೇಂದ್ರಾಡಳಿತ ಪ್ರದೇಶ
|
ಒಟ್ಟು ಗ್ರಾಮ ಪಂಚಾಯತ್/ ಸಮಾನ ಸಂಸ್ಥೆಗಳ ಸಂಖ್ಯೆ
|
ಡೇಟಾ ಸಲ್ಲಿಸಿದ ಗ್ರಾಮ ಪಂಚಾಯತ್ ಗಳ ಸಂಖ್ಯೆ*
|
A
|
B
|
C
|
D
|
|
1
|
ಅಂಡಮಾನ್ ಮತ್ತು ನಿಕೋಬಾರ್
|
70
|
70
|
0
|
21
|
49
|
0
|
|
2
|
ಆಂಧ್ರಪ್ರದೇಶ
|
13310
|
13310
|
591
|
10178
|
2468
|
73
|
|
3
|
ಅರುಣಾಚಲ ಪ್ರದೇಶ
|
2108
|
2108
|
0
|
72
|
1718
|
318
|
|
4
|
ಅಸ್ಸಾಂ
|
2192
|
2192
|
25
|
1209
|
884
|
74
|
|
5
|
ಬಿಹಾರ
|
8053
|
8053
|
2
|
771
|
6862
|
418
|
|
6
|
ಛತ್ತೀಸಗಢ
|
11643
|
11643
|
30
|
3936
|
5941
|
1736
|
|
7
|
ಗುಜರಾತ್
|
14534
|
14534
|
75
|
11963
|
2471
|
25
|
|
8
|
ಗೋವಾ
|
191
|
188
|
0
|
80
|
107
|
1
|
|
9
|
ಹರಿಯಾಣ
|
6225
|
6225
|
7
|
3342
|
2779
|
97
|
|
10
|
ಹಿಮಾಚಲ ಪ್ರದೇಶ
|
3615
|
3615
|
1
|
1706
|
1828
|
80
|
|
11
|
ಜಮ್ಮು ಮತ್ತು ಕಾಶ್ಮೀರ
|
4291
|
4291
|
1
|
1459
|
2792
|
39
|
|
12
|
ಜಾರ್ಖಂಡ್
|
4345
|
4345
|
6
|
1993
|
2311
|
35
|
|
13
|
ಕರ್ನಾಟಕ
|
5946
|
5946
|
36
|
3707
|
2172
|
31
|
|
14
|
ಕೇರಳ
|
941
|
941
|
95
|
840
|
6
|
0
|
|
15
|
ಲಡಾಖ್
|
193
|
193
|
0
|
62
|
129
|
2
|
|
16
|
ಲಕ್ಷದ್ವೀಪ
|
10
|
10
|
0
|
5
|
5
|
0
|
|
17
|
ಮಧ್ಯಪ್ರದೇಶ
|
23011
|
23011
|
33
|
11154
|
11514
|
310
|
|
18
|
ಮಹಾರಾಷ್ಟ್ರ
|
27894
|
27894
|
315
|
10049
|
16909
|
621
|
|
19
|
ಮಣಿಪುರ
|
3041
|
3041
|
0
|
57
|
1231
|
1753
|
|
20
|
ಮೇಘಾಲಯ
|
6859
|
3069
|
0
|
18
|
2292
|
759
|
|
21
|
ನಾಗಾಲ್ಯಾಂಡ್
|
1277
|
1277
|
0
|
33
|
1040
|
204
|
|
22
|
ಮಿಜೋರಾಂ
|
840
|
840
|
34
|
549
|
253
|
4
|
|
23
|
ಒಡಿಶಾ
|
6794
|
6794
|
555
|
4566
|
1627
|
46
|
|
24
|
ಪುದುಚೇರಿ
|
108
|
108
|
0
|
77
|
31
|
0
|
|
25
|
ಪಂಜಾಬ್
|
13233
|
13233
|
1
|
3275
|
9464
|
493
|
|
26
|
ರಾಜಸ್ಥಾನ
|
11037
|
11037
|
8
|
5437
|
5389
|
203
|
|
27
|
ಸಿಕ್ಕಿಂ
|
199
|
199
|
1
|
163
|
35
|
0
|
|
28
|
ತಮಿಳುನಾಡು
|
12482
|
12482
|
197
|
10520
|
1746
|
19
|
|
29
|
ತೆಲಂಗಾಣ
|
12556
|
12556
|
624
|
10056
|
1853
|
23
|
|
30
|
ದಾದ್ರಾ ಮತ್ತು ನಗರ ಹವೇಲಿ ಮತ್ತು ದಮನ್ ಮತ್ತು ದಿಯು
|
42
|
42
|
1
|
29
|
12
|
0
|
|
31
|
ತ್ರಿಪುರ
|
1176
|
1176
|
943
|
233
|
0
|
0
|
|
32
|
ಉತ್ತರಾಖಂಡ
|
7766
|
7766
|
3
|
2359
|
5203
|
201
|
|
33
|
ಉತ್ತರ ಪ್ರದೇಶ
|
57678
|
57678
|
51
|
18905
|
32598
|
6124
|
|
34
|
ಪಶ್ಚಿಮ ಬಂಗಾಳ*
|
3339
|
0
|
-
|
-
|
-
|
-
|
| |
ಒಟ್ಟು
|
266999
|
259867
|
3635
|
118824
|
123719
|
13689
|
# ಯಾವುದೇ ಗ್ರಾಮ ಪಂಚಾಯತ್/ಸಮಾನ ಸಂಸ್ಥೆಗಳು ಗ್ರೇಡ್ A+ ಅಡಿಯಲ್ಲಿ ಬಂದಿಲ್ಲ
ರಾಜ್ಯ/ಕೇಂದ್ರಾಡಳಿತ ಪ್ರದೇಶದಿಂದ ಮೌಲ್ಯೀಕರಿಸಿದ ನಂತರ ಪಿಎಐ ಪೋರ್ಟಲ್ ನಲ್ಲಿ ಡೇಟಾವನ್ನು ಸಲ್ಲಿಸಿದ ಗ್ರಾಮ ಪಂಚಾಯತ್ ಗಳ ಸಂಖ್ಯೆ*
*ಪಶ್ಚಿಮ ಬಂಗಾಳವು ಪಿಎಐ 2.0 ನಲ್ಲಿ ಪಾಲ್ಗೊಂಡಿಲ್ಲ
ಪಿಎಐ 2.0 ಕುರಿತಾದ ವಿವರವಾದ ಟಿಪ್ಪಣಿ (English/Hindi)
State wise Snapshots of Performance under PAI 2.0
*****
(ಪ್ರಕಟಣೆ ಐ.ಡಿ.: 2256672)
ವಿಸಿಟರ್ ಕೌಂಟರ್ : 17