ಪ್ರಧಾನ ಮಂತ್ರಿಯವರ ಕಛೇರಿ
2026ರ ಬ್ರೆಜಿಲ್ ಚೀಸ್ ವಿಶ್ವಕಪ್‌ನಲ್ಲಿ ಭಾರತೀಯ ಚೀಸ್ ಮೇಕರ್ ಗಳ ಗಮನಾರ್ಹ ಸಾಧನೆಗೆ ಅಭಿನಂದನೆ ಸಲ್ಲಿಸಿದ ಪ್ರಧಾನಮಂತ್ರಿ
ಪ್ರಕಟಣಾ ದಿನಾಂಕ:
22 APR 2026 9:02PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಚೀಸ್ ಹಾಗೂ ಡೈರಿ ಉತ್ಪನ್ನಗಳ ತಯಾರಕರಿಗಾಗಿ ನಡೆಸುವ ಅಂತಾರಾಷ್ಟ್ರೀಯ ಸ್ವರ್ಧೆ, 2026ರ ಬ್ರೆಜಿಲ್ ವಿಶ್ವ ಚೀಸ್ ಚಾಂಪಿಯನ್‌ಶಿಪ್‌ನಲ್ಲಿ ಗಮನಾರ್ಹ ಸಾಧನೆ ಮಾಡಿದ ಭಾರತೀಯ ಚೀಸ್ ಮೇಕರ್ ಗಳನ್ನು ಅಭಿನಂದಿಸಿದ್ದಾರೆ. ನಾಲ್ಕು ಭಾರತೀಯ ಉತ್ಪನ್ನಗಳು 1 ಸೂಪರ್ ಚಿನ್ನ, 2 ಚಿನ್ನ ಮತ್ತು 1 ಬೆಳ್ಳಿ ಸೇರಿದಂತೆ ನಾಲ್ಕು ಪದಕಗಳನ್ನು ಗೆದ್ದಿವೆ.
”ಸೂಪರ್ ಚಿನ್ನವನ್ನು ಎಲೆಫ್ಥೇರಿಯಾ ಗುಲ್ಮಾರ್ಗ್ (ಬ್ರೈ ಸ್ಟೈಲ್), ಚಿನ್ನವನ್ನು ಯಾಕ್ ಚುರ್ಪಿ-ಸಾಫ್ಟ್, ನಾರ್ಡಿಕ್ ಫಾರ್ಮ್, ಲೇಹ್, ಲಡಾಖ್ ಮತ್ತು ಎಲೆಫ್ಥೇರಿಯಾ ಬ್ರೂನೋಸ್ಟ್ (ವೇ ಚೀಸ್) ಗೆದ್ದರೆ, ಬೆಳ್ಳಿಯನ್ನು ಎಲೆಫ್ಥೇರಿಯಾ ಕಾಲಿ ಮಿರಿ (ಬೆಲ್ಪರ್ ನೋಲ್ ಸ್ಟೈಲ್) ಗೆದ್ದಿದೆ" ಎಂದು ಶ್ರೀ ನರೇಂದ್ರ ಮೋದಿ ಹೇಳಿದರು.
ಮೌಸಮ್ ನಾರಂಗ್ ಮತ್ತು ಥೆನ್ಲೇ ನರ್ಬೂ ಸೇರಿದಂತೆ ಪ್ರಶಸ್ತಿ ಪುರಸ್ಕೃತರ ಪ್ರಯತ್ನಗಳನ್ನು ಪ್ರಧಾನಮಂತ್ರಿ ಶ್ಲಾಘಿಸಿದರು ಮತ್ತು ಅಂತಹ ಸಾಧನೆಗಳು ಭಾರತದ ಕುಶಲಕರ್ಮಿ ಡೈರಿ ವಲಯದ ಬೆಳೆಯುತ್ತಿರುವ ಜಾಗತಿಕ ಮನ್ನಣೆಯನ್ನು ಪ್ರತಿಬಿಂಬಿಸುತ್ತವೆ ಎಂದು ಹೇಳಿದರು.
ಪ್ರಧಾನಮಂತ್ರಿ ತಮ್ಮ ಸಾಮಾಜಿಕ ಜಾಲತಾಣ X ಪೋಸ್ಟ್ ನಲ್ಲಿ ಹೀಗೆ ಹೇಳಿದ್ದಾರೆ:
“ಭಾರತದ ಚೀಸ್ ಜಾಗತಿಕವಾಗಿ ತನ್ನ ಛಾಪು ಮೂಡಿಸಿದೆ.....
2026ರ ಬ್ರೆಜಿಲ್ ವಿಶ್ವ ಚೀಸ್ ಚಾಂಪಿಯನ್‌ಶಿಪ್‌ನಲ್ಲಿ ಭಾರತವು ಪ್ರಭಾವಶಾಲಿಯಾಗಿ ಪಾದಾರ್ಪಣೆ ಮಾಡಿದೆ. 1 ಸೂಪರ್ ಗೋಲ್ಡ್, 2 ಚಿನ್ನ ಮತ್ತು 1 ಬೆಳ್ಳಿ ಸೇರಿದಂತೆ ನಾಲ್ಕು ಭಾರತೀಯ ಉತ್ಪನ್ನಗಳು ಪದಕಗಳನ್ನು ಜಯಿಸಿವೆ.
ಸೂಪರ್ ಗೋಲ್ಡ್ ಅನ್ನು ಎಲೆಫ್ಥೇರಿಯಾ ಗುಲ್ಮಾರ್ಗ್ (ಬ್ರೈ ಸ್ಟೈಲ್), ಚಿನ್ನವನ್ನು ಯಾಕ್ ಚುರ್ಪಿ-ಸಾಫ್ಟ್, ನಾರ್ಡಿಕ್ ಫಾರ್ಮ್, ಲೇಹ್, ಲಡಾಖ್ ಮತ್ತು ಎಲೆಫ್ಥೇರಿಯಾ ಬ್ರೂನೋಸ್ಟ್ (ವೇ ಚೀಸ್) ಗೆದ್ದರೆ, ಬೆಳ್ಳಿಯನ್ನು ಎಲೆಫ್ಥೇರಿಯಾ ಕಾಲಿ ಮಿರಿ (ಬೆಲ್ಪರ್ ನೋಲ್ ಸ್ಟೈಲ್) ಗೆದ್ದಿದ್ದಾರೆ. ಮೌಸಮ್ ನಾರಂಗ್ ಮತ್ತು ಥೆನ್ಲೇ ನರ್ಬೂ ಅವರಿಗೆ ಅಭಿನಂದನೆಗಳು.
ಇಂತಹ ಯಶಸ್ಸುಗಳು ಭಾರತದ ಕುಶಲಕರ್ಮಿ ಡೈರಿ ವಲಯವನ್ನು ವಿಶ್ವ ವೇದಿಕೆಯಲ್ಲಿ ಬಲಪಡಿಸುತ್ತವೆ.’’
*****
(ಪ್ರಕಟಣೆ ಐ.ಡಿ.: 2254784)
ವಿಸಿಟರ್ ಕೌಂಟರ್ : 4
ಪ್ರಕಟಣೆಯನ್ನು ಇದರಲ್ಲಿ ಓದಿ:
English
,
Urdu
,
हिन्दी
,
Marathi
,
Manipuri
,
Bengali
,
Assamese
,
Punjabi
,
Gujarati
,
Telugu
,
Malayalam