ಸಿಬ್ಬಂದಿ, ಸಾರ್ವಜನಿಕ ಅಹವಾಲು ಮತ್ತು ಪಿಂಚಣಿ ಸಚಿವಾಲಯ
18ನೇ ನಾಗರಿಕ ಸೇವಾ ದಿನದಂದು ಕೇಂದ್ರ ಸಚಿವರಾದ ಡಾ. ಜಿತೇಂದ್ರ ಸಿಂಗ್ ಅವರು ಭಾಷಣ ಮಾಡಿದರು, ಪ್ರಧಾನಮಂತ್ರಿ ಅವರ ಶ್ರೇಷ್ಠತಾ ಪ್ರಶಸ್ತಿಗಳ ಅರ್ಜಿಗಳಲ್ಲಿ ಹೆಚ್ಚಳ ಮಹತ್ವ ಪಡೆದಿದೆ 2023 ರಲ್ಲಿ 1,216 ಇದ್ದ ಅರ್ಜಿಗಳು 2025 ರಲ್ಲಿ 2,035 ಕ್ಕೆ ಏರಿಕೆಯಾಗಿದೆ
2,000 ಕ್ಕೂ ಹೆಚ್ಚು ತರಬೇತಿ ಕೋರ್ಸ್‌ಗಳನ್ನು ಹೊಂದಿರುವ ಐಗೋಟ್ ಕರ್ಮಯೋಗಿ ಜಾಲತಾಣವು 88 ಲಕ್ಷ ಬಳಕೆದಾರರನ್ನು ದಾಟಿದೆ: ಸಚಿವರು
ಸಿಪಿಗ್ರಾಮ್ಸ್ ಮೂಲಕ ಕುಂದುಕೊರತೆ ಪರಿಹಾರ ವ್ಯವಸ್ಥೆಯಲ್ಲಿ 2014 ರಲ್ಲಿ ವಾರ್ಷಿಕವಾಗಿ ಇದ್ದ ಸುಮಾರು 2 ಲಕ್ಷ ದೂರುಗಳು , ಇಂದು ಪ್ರಸ್ತುತ 25–30 ಲಕ್ಷಕ್ಕೆ ವಿಸ್ತರಿಸಿದೆ, 95% ಕ್ಕೂ ಹೆಚ್ಚು ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದೆ ಮತ್ತು ಸರಾಸರಿ ಪರಿಹಾರ ಸಮಯ 60 ದಿನಗಳಿಂದ ಸುಮಾರು 12 ದಿನಗಳಿಗೆ ಕಡಿಮೆಯಾಗಿದೆ ಎಂದು ಅಂಕಿಅಂಶಗಳನ್ನು ಉಲ್ಲೇಖಿಸಿ ಸಚಿವರು ಹೇಳಿದರು
2024 ರಲ್ಲಿ ಮಾತ್ರ 40 ಲಕ್ಷಕ್ಕೂ ಹೆಚ್ಚು ಪಿಂಚಣಿದಾರರು ಮುಖ ಗುರುತಿಸುವಿಕೆ ಆಧಾರಿತ ಡಿಜಿಟಲ್ ಜೀವ ಪ್ರಮಾಣಪತ್ರ( ಡಿ.ಎಲ್.ಸಿ) ಗಳನ್ನು ಬಳಸಿದ್ದಾರೆ, ಆದರೆ ಡಿಜಿಟಲ್ ಜೀವ ಪ್ರಮಾಣಪತ್ರ( ಡಿ.ಎಲ್.ಸಿ) ವ್ಯವಸ್ಥೆಗಳಲ್ಲಿ ಸಂಚಿತ ಬಳಕೆ 10 ಕೋಟಿ ದಾಟಿದೆ: ಡಾ. ಜಿತೇಂದ್ರ ಸಿಂಗ್
ನಾಗರಿಕ ಸೇವೆಗಳ ಮೌಲ್ಯಮಾಪನವು ಪ್ರಮುಖ ಕಾರ್ಯಕ್ರಮದ ಫಲಿತಾಂಶಗಳ ಸುತ್ತ ಮರುರೂಪಿಸಲ್ಪಟ್ಟಿದೆ ಎಂದು ಡಾ. ಜಿತೇಂದ್ರ ಸಿಂಗ್ ಅವರು ಹೇಳಿದರು
ಪ್ರಕಟಣಾ ದಿನಾಂಕ:
21 APR 2026 3:50PM by PIB Bengaluru
ಪ್ರಧಾನಮಂತ್ರಿ ಅವರ ಶ್ರೇಷ್ಠತೆಗಾಗಿ ಪ್ರಶಸ್ತಿಗಳ ಜನಪ್ರಿಯತೆಯು 750 ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ತೀವ್ರವಾಗಿ ಏರಿದೆ ಮತ್ತು ಅರ್ಜಿಗಳು ಹೆಚ್ಚಾಗುವುದರೊಂದಿಗೆ ಸ್ಪರ್ಧಾತ್ಮಕ ಭಾಗವಹಿಸುವಿಕೆ ಅನುಗುಣವಾದ ಏರಿಕೆಯನ್ನು ತೋರಿಸಿದೆ 2023 ರಲ್ಲಿ 1,216 ಮತ್ತು 2024 ರಲ್ಲಿ 1,588 ಕ್ಕೆ ಮತ್ತು 2025 ರಲ್ಲಿ 2,035 ಕ್ಕೆ ಏರಿದೆ. 2,000 ಕ್ಕೂ ಹೆಚ್ಚು ಕೋರ್ಸ್‌ಗಳನ್ನು ಹೊಂದಿರುವ iGOTKarmayogi ವೇದಿಕೆ ಮೂಲಕ ಪಠ್ಯ ಬಳಕೆಗಾಗಿ ಪ್ರವೇಶಿಸಿದ 88 ಲಕ್ಷಕ್ಕೂ ಹೆಚ್ಚು ಅಧಿಕಾರಿಗಳನ್ನು ಜಾಲತಾಣ ಸೇರಿಸಿಕೊಂಡಿದೆ. ಸಿಪಿಗ್ರಾಮ್ಸ್ ಮೂಲಕ ಕುಂದುಕೊರತೆ ಪರಿಹಾರವು 2014 ರಲ್ಲಿ ವಾರ್ಷಿಕವಾಗಿ ಸುಮಾರು 2 ಲಕ್ಷ ದೂರುಗಳಿಂದ ಪ್ರಸ್ತುತ 25–30 ಲಕ್ಷಕ್ಕೆ ವಿಸ್ತರಿಸಿದೆ, 95% ಕ್ಕೂ ಹೆಚ್ಚು ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದೆ ಮತ್ತು ಸರಾಸರಿ ಪರಿಹಾರ ಸಮಯವು 60 ದಿನಗಳಿಂದ ಸುಮಾರು 12 ದಿನಗಳಿಗೆ ಕಡಿಮೆಯಾಗಿದೆ. ಪಿಂಚಣಿ ಸುಧಾರಣೆಗಳಲ್ಲಿ, 2024 ರಲ್ಲಿ ಮಾತ್ರ 40 ಲಕ್ಷಕ್ಕೂ ಹೆಚ್ಚು ಪಿಂಚಣಿದಾರರು ಮುಖ ಗುರುತಿಸುವಿಕೆ ಆಧಾರಿತ ಡಿಜಿಟಲ್ ಜೀವ ಪ್ರಮಾಣಪತ್ರಗಳನ್ನು ಬಳಸಿದ್ದಾರೆ, ಆದರೆ ವ್ಯವಸ್ಥೆಗಳಲ್ಲಿ ಸಂಚಿತ ಬಳಕೆ ಗಮನಾರ್ಹ ಪ್ರಮಾಣವನ್ನು ತಲುಪಿದೆ.
ಕೇಂದ್ರ ಸಚಿವರಾಧ ಡಾ ಜಿತೇಂದ್ರ ಸಿಂಗ್ ಅವರು 18ನೇ ನಾಗರಿಕ ಸೇವಾ ದಿನಾಚರಣೆಯನ್ನು ಉದ್ದೇಶಿಸಿ ಮಾತನಾಡುತ್ತಾ, "ನಾಗರಿಕ ಕೇಂದ್ರಿತ, ಸಾಂಸ್ಥಿಕ ಆಡಳಿತ"ದತ್ತ ಬದಲಾವಣೆಯನ್ನು ಉಲ್ಲೇಖಿಸುತ್ತಾ, ಸೇವಾ ವಿತರಣೆಯಲ್ಲಿ ಸುಧಾರಣೆಗಳನ್ನು ಒತ್ತಿ ಹೇಳಿದರು ಮತ್ತು ವೈಯಕ್ತಿಕ ಪ್ರೊಫೈಲಿಂಗ್ ಗಿಂತ ಸ್ಪರ್ಧಾತ್ಮಕ, ಕಾರ್ಯಕ್ರಮ ಆಧಾರಿತ ಮಾನದಂಡಗಳ ಮೂಲಕ ಆಡಳಿತಾತ್ಮಕ ಕಾರ್ಯಕ್ಷಮತೆಯನ್ನು ಮೌಲ್ಯಮಾಪನ ಮಾಡಲು ಮರುನಿರ್ದೇಶಿತ ಚೌಕಟ್ಟಿನ ಜೊತೆಗೆ ಮಿಷನ್ ಕರ್ಮಯೋಗಿ ಮತ್ತು ಅದರ ಹೊಸ ಘಟಕಗಳಂತಹ ಸಾಮರ್ಥ್ಯ-ನಿರ್ಮಾಣ ಉಪಕ್ರಮಗಳ ನಿರಂತರ ವಿಸ್ತರಣೆಯನ್ನು ಎಂದು ಅವರು ಘೋಷಿಸಿದರು.
"ವೈಯಕ್ತಿಕ ವಿತರಣೆಯಿಂದ ಸಾಂಸ್ಥಿಕ ವಿತರಣೆಗೆ" ಮತ್ತು "ನಿಯಮ ಆಧಾರಿತ" ದಿಂದ "ಪಾತ್ರ ಆಧಾರಿತ" ಆಡಳಿತಕ್ಕೆ ಕ್ರಮ ಸೇರಿದಂತೆ ಆಡಳಿತದಲ್ಲಿ ರಚನಾತ್ಮಕ ಬದಲಾವಣೆಗಳನ್ನು ಸಚಿವರು ಒತ್ತಿ ಹೇಳಿದರು. ಸುಮಾರು 2,000 ಬಳಕೆಯಲ್ಲಿಲ್ಲದ ನಿಯಮಗಳನ್ನು ತೆಗೆದುಹಾಕುವುದು, ಕೆಲವು ನೇಮಕಾತಿ ಪ್ರಕ್ರಿಯೆಗಳಿಗೆ ಸಂದರ್ಶನಗಳನ್ನು ರದ್ದುಗೊಳಿಸುವುದು ಮತ್ತು ನಾಗರಿಕ ಸೇವಾ ದಿನವನ್ನು ಹೆಚ್ಚು ಜ್ಞಾನ-ಚಾಲಿತ ವೇದಿಕೆಯಾಗಿ ಮರುವಿನ್ಯಾಸಗೊಳಿಸುವುದನ್ನು ಅವರು ಗಮನಸೆಳೆದರು. ವೈಯಕ್ತಿಕ ಅಧಿಕಾರಿಗಳ ಪ್ರೊಫೈಲ್‌ಗಳಿಗಿಂತ ಪ್ರಮುಖ ಕಾರ್ಯಕ್ರಮದ ಫಲಿತಾಂಶಗಳ ಮೇಲೆ ಕೇಂದ್ರೀಕರಿಸಲು ಶ್ರೇಷ್ಠತೆ ಪ್ರಶಸ್ತಿಗಳ ಮೌಲ್ಯಮಾಪನ ಚೌಕಟ್ಟನ್ನು ಪುನರ್ರಚಿಸಲಾಗಿದೆ. ಸಹಾಯಕ ಕಾರ್ಯದರ್ಶಿ ಕಾರ್ಯಕ್ರಮ, ಸುಮಾರು 90% ಸರ್ಕಾರಿ ಕಾರ್ಯಾಚರಣೆಗಳನ್ನು ಒಳಗೊಂಡಿರುವ ಡಿಜಿಟಲ್ ಆಡಳಿತ ವ್ಯವಸ್ಥೆಗಳು ಮತ್ತು ಜಾಗತಿಕ ಆಡಳಿತ ವೇದಿಕೆಗಳನ್ನು ಆಯೋಜಿಸುವುದು ಸೇರಿದಂತೆ ಅಂತರರಾಷ್ಟ್ರೀಯ ಸಹಯೋಗಗಳಂತಹ ಸಾಂಸ್ಥಿಕ ನಾವೀನ್ಯತೆಗಳನ್ನು ಸಹ ಎತ್ತಿ ತೋರಿಸಲಾಯಿತು.
ಡಾ. ಜಿತೇಂದ್ರ ಸಿಂಗ್ ಅವರು ವಿಷಯದಲ್ಲಿ ಮುಂದುವರಿದು, ಮಿಷನ್ ಕರ್ಮಯೋಗಿ ಮತ್ತು "ಕರ್ಮಯೋಗಿ ಪ್ರಾರಂಭ್" ನಂತಹ ಉಪಕ್ರಮಗಳ ಮೂಲಕ ತರಬೇತಿ ಮತ್ತು ಆಡಳಿತ ಸುಧಾರಣೆಗಳ ವಿಸ್ತರಣೆಯನ್ನು ಸೂಚಿಸಿದರು, ಉದಯೋನ್ಮುಖ ಆಡಳಿತ ಸವಾಲುಗಳಿಗೆ ನಾಗರಿಕ ಸೇವಕರನ್ನು ಸಿದ್ಧಪಡಿಸುವತ್ತ ಗಮನಹರಿಸಿದರು. ಮಾಲ್ಡೀವ್ಸ್, ಮಾರಿಷಸ್, ಬಾಂಗ್ಲಾದೇಶ ಮತ್ತು ದಕ್ಷಿಣ ಆಫ್ರಿಕಾದಂತಹ ದೇಶಗಳು ಸಿಪಿಗ್ರಾಮ್ಸ್ ನಂತಹ ವ್ಯವಸ್ಥೆಗಳನ್ನು ಅಧ್ಯಯನ ಮಾಡುವುದರೊಂದಿಗೆ ಭಾರತೀಯ ಆಡಳಿತ ಮಾದರಿಗಳಲ್ಲಿ ಜಾಗತಿಕ ಆಸಕ್ತಿಯನ್ನು ಹೆಚ್ಚಿಸುವ ಬಗ್ಗೆಯೂ ಅವರು ಗಮನಸೆಳೆದರು. 2047 ರಲ್ಲಿ ಭಾರತದ ಸ್ವಾತಂತ್ರ್ಯದ ಶತಮಾನೋತ್ಸವಕ್ಕೆ ಮುಂದಿನ ಪೀಳಿಗೆಯ ನಾಗರಿಕ ಸೇವಕರನ್ನು ಸಜ್ಜುಗೊಳಿಸುವ ಗುರಿಯನ್ನು ಹೊಂದಿರುವ "ವಿಕಸಿತ ಭಾರತ: ಕೊನೆಯ ಮೈಲಿಯಲ್ಲಿ ನಾಗರಿಕ-ಕೇಂದ್ರಿತ ಆಡಳಿತ ಮತ್ತು ಅಭಿವೃದ್ಧಿ" ಎಂಬ ವಿಷಯದೊಂದಿಗೆ ವಿಶಾಲವಾದ ಪ್ರಚೋದನೆಯು ಹೊಂದಿಕೆಯಾಗುತ್ತದೆ ಎಂದು ಅವರು ಹೇಳಿದರು.
"ಆಡಳಿತ-ಕೇಂದ್ರಿತ ಆಡಳಿತದಿಂದ ನಾಗರಿಕ-ಕೇಂದ್ರಿತ ಆಡಳಿತಕ್ಕೆ ಬದಲಾವಣೆಯಾಗಿದೆ" ಎಂದು ಡಾ. ಜಿತೇಂದ್ರ ಸಿಂಗ್ ಹೇಳಿದರು, ಸುಧಾರಣೆಗಳು "ಗರಿಷ್ಠ ಪಾರದರ್ಶಕತೆ, ಗರಿಷ್ಠ ಹೊಣೆಗಾರಿಕೆ ಮತ್ತು ಸಮಯೋಚಿತ ಶಿಸ್ತನ್ನು" ಖಚಿತಪಡಿಸಿಕೊಳ್ಳಲು ಉದ್ದೇಶಿಸಲಾಗಿದೆ ಎಂದು ಹೇಳಿದರು. ದೂರು ಸಲ್ಲಿಕೆಯಲ್ಲಿನ ಹೆಚ್ಚಳವು ಹೆಚ್ಚುತ್ತಿರುವ ಅಸಮಾಧಾನಕ್ಕಿಂತ ಪರಿಹಾರ ವ್ಯವಸ್ಥೆಗಳಲ್ಲಿ ಸುಧಾರಿತ ನಂಬಿಕೆಯನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ತಿಳಿಸಿದರು.
ಸಾರ್ವಜನಿಕ ಸೇವಾ ಸುಧಾರಣೆಯ ಕೇಂದ್ರ ಸ್ತಂಭಗಳಾಗಿ ದತ್ತಾಂಶ ಆಧಾರಿತ ಮೌಲ್ಯಮಾಪನ, ಡಿಜಿಟಲ್ ಆಡಳಿತ ಮತ್ತು ದೊಡ್ಡ ಪ್ರಮಾಣದ ಸಾಮರ್ಥ್ಯ ನಿರ್ಮಾಣದ ಕಡೆಗೆ ಭಾರತದ ಆಡಳಿತ ಚೌಕಟ್ಟಿನಲ್ಲಿ ನಡೆಯುತ್ತಿರುವ ಪರಿವರ್ತನೆಯನ್ನು ಈ ಬೆಳವಣಿಗೆಗಳು ಉಲ್ಲೇಖಿಸುತ್ತವೆ.
ಉಪ ರಾಷ್ಟ್ರಪತಿಗಳಾದ ಶ್ರೀ ಸಿ.ಪಿ. ರಾಧಾಕೃಷ್ಣನ್ ಅವರು ಮುಖ್ಯ ಅತಿಥಿಯಾಗಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ಸರ್ಕಾರದ ಉನ್ನತ ಆಡಳಿತ ನಾಯಕತ್ವದ ಹಿರಿಯ ಸದಸ್ಯರು ಭಾಗವಹಿಸಿದ್ದರು. ವೇದಿಕೆಯಲ್ಲಿ ಪ್ರಧಾನಮಂತ್ರಿ ಅವರ ಪ್ರಧಾನ ಕಾರ್ಯದರ್ಶಿ ಡಾ. ಪಿ.ಕೆ. ಮಿಶ್ರಾ, ಪ್ರಧಾನಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಶ್ರೀ ಶಕ್ತಿಕಾಂತ ದಾಸ್, ಕ್ಯಾಬಿನೆಟ್ ಕಾರ್ಯದರ್ಶಿ ಡಾ. ಟಿ.ವಿ. ಸೋಮನಾಥನ್ ಮತ್ತು ಡಿಎಆರ್‌ಪಿಜಿ ಕಾರ್ಯದರ್ಶಿ ಶ್ರೀಮತಿ ನಿವೇದಿತಾ ಶುಕ್ಲಾ ವರ್ಮಾ ಇದ್ದರು, ಅವರುಗಳು ವಾರ್ಷಿಕ ನಾಗರಿಕ ಸೇವಾ ಸಭೆಯಲ್ಲಿ ಉನ್ನತ ಮಟ್ಟದ ಸಾಂಸ್ಥಿಕ ಉಪಸ್ಥಿತಿಯನ್ನು ಪ್ರತಿಬಿಂಬಿಸುತ್ತಾರೆ.

ಛಾಯಾಚಿತ್ರ : ಕೇಂದ್ರ ಸಚಿವ ಡಾ. ಜಿತೇಂದ್ರ ಸಿಂಗ್ ಮಂಗಳವಾರ ನವದೆಹಲಿಯಲ್ಲಿ ನಡೆದ 18 ನೇ ನಾಗರಿಕ ಸೇವಾ ದಿನದಂದು ಸಭಿಕರನ್ನು ಉದ್ದೇಶಿಸಿ ಮಾತನಾಡುತ್ತಿರುವುದು.



******
(ಪ್ರಕಟಣೆ ಐ.ಡಿ.: 2254300)
ವಿಸಿಟರ್ ಕೌಂಟರ್ : 12