ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ನಾಗರಿಕ ಸೇವಾ ದಿನದ ಅಂಗವಾಗಿ ಎಲ್ಲಾ ನಾಗರಿಕ ಸೇವಕರಿಗೆ ಶುಭಾಶಯಗಳನ್ನು ತಿಳಿಸಿದ ಪ್ರಧಾನಮಂತ್ರಿ 

ಪ್ರಕಟಣಾ ದಿನಾಂಕ: 21 APR 2026 12:02PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನಾಗರಿಕ ಸೇವಾ ದಿನದ ಅಂಗವಾಗಿ ಎಲ್ಲಾ ನಾಗರಿಕ ಸೇವಕರಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ. ಉತ್ತಮ ಆಡಳಿತ ಮತ್ತು ರಾಷ್ಟ್ರ ನಿರ್ಮಾಣದತ್ತ ಕೆಲಸ ಮಾಡುವ ಸಂಕಲ್ಪವನ್ನು ಮತ್ತಷ್ಟು ಬಲಪಡಿಸುವ ಸಂದರ್ಭ ಇದಾಗಿದೆ ಎಂದು ಅವರು ಹೇಳಿದ್ದಾರೆ. “ಗ್ರಾಮಮಟ್ಟದಿಂದ ನೀತಿ ರೂಪಿಸುವ ಮಟ್ಟದವರೆಗೆ, ನಾಗರಿಕ ಸೇವಕರ ಪ್ರಯತ್ನಗಳು ಅನೇಕ ಜನರ ಜೀವನವನ್ನು ಸ್ಪರ್ಶಿಸುತ್ತವೆ ಮತ್ತು ಭಾರತದ ಪ್ರಗತಿಗೆ ಕೊಡುಗೆ ನೀಡುತ್ತವೆ. ನಮ್ಮ ನಾಗರಿಕ ಸೇವಕರು ಅತ್ಯುತ್ತಮ ಕಾರ್ಯವೈಖರಿ, ಸಹಾನುಭೂತಿ ಮತ್ತು ನವೀನತೆಯೊಂದಿಗೆ ಸೇವೆ ಸಲ್ಲಿಸುತ್ತಾ, ಕರ್ತವ್ಯದ ಉನ್ನತ ಮಾನದಂಡಗಳನ್ನು ಉಳಿಸಿಕೊಳ್ಳಲಿ'' ಎಂದು ಶ್ರೀ ಮೋದಿ ಆಶಿಸಿದ್ದಾರೆ. 

ಪ್ರಧಾನಮಂತ್ರಿ ತಮ್ಮ ಎಕ್ಸ್ ಪೋಸ್ಟ್ ನಲ್ಲಿ ಹೀಗೆ ಬರೆದುಕೊಂಡಿದ್ದಾರೆ:

“ಇಂದು ನಾಗರಿಕ ಸೇವಾ ದಿನದ ಅಂಗವಾಗಿ ಎಲ್ಲಾ ನಾಗರಿಕ ಸೇವಕರಿಗೆ ಶುಭಾಶಯಗಳು. ಉತ್ತಮ ಆಡಳಿತ ಮತ್ತು ರಾಷ್ಟ್ರ ನಿರ್ಮಾಣದತ್ತ ನಮ್ಮ ಸಂಕಲ್ಪವನ್ನು ಮತ್ತಷ್ಟು ಬಲಪಡಿಸುವ ಸಂದರ್ಭ ಇದಾಗಿದೆ. ಗ್ರಾಮಮಟ್ಟದಿಂದ ನೀತಿ ರೂಪಿಸುವ ಮಟ್ಟದವರೆಗೆ, ನಾಗರಿಕ ಸೇವಕರ ಪ್ರಯತ್ನಗಳು ಅನೇಕ ಜನರ ಜೀವನವನ್ನು ಸ್ಪರ್ಶಿಸುತ್ತವೆ ಮತ್ತು ಭಾರತದ ಪ್ರಗತಿಗೆ ಕೊಡುಗೆ ನೀಡುತ್ತವೆ. ನಮ್ಮ ನಾಗರಿಕ ಸೇವಕರು ಅತ್ಯುತ್ತಮ ಕಾರ್ಯವೈಖರಿ, ಸಹಾನುಭೂತಿ ಮತ್ತು ನಾವೀನ್ಯತೆ ಮೂಲಕ ಸೇವೆ ಸಲ್ಲಿಸುತ್ತಾ, ಕರ್ತವ್ಯದ ಉನ್ನತ ಮಾನದಂಡಗಳನ್ನು ಉಳಿಸಿಕೊಳ್ಳಲಿ.”

 

*****


(ಪ್ರಕಟಣೆ ಐ.ಡಿ.: 2254078) ವಿಸಿಟರ್ ಕೌಂಟರ್ : 10
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Marathi , Assamese , Bengali , Punjabi , Gujarati , Telugu , Malayalam