ಲೋಕಸಭಾ ಸಚಿವಾಲಯ
azadi ka amrit mahotsav

18ನೇ ಲೋಕಸಭೆಯ ಏಳನೇ ಅಧಿವೇಶನದ ಉತ್ಪಾದಕತೆ ಸುಮಾರು ಶೇ. 93 ರಷ್ಟು: ಲೋಕಸಭಾ ಅಧ್ಯಕ್ಷರು


ಏಳನೇ ಅಧಿವೇಶನದಲ್ಲಿ ಸುಮಾರು 151 ಗಂಟೆ 42 ನಿಮಿಷಗಳ ಕಾಲ ಒಟ್ಟು 31 ಲೋಕಸಭಾ ಕಲಾಪಗಳು: ಲೋಕಸಭಾ ಅಧ್ಯಕ್ಷರು

ಕೇಂದ್ರ ಆಯವ್ಯಯ 2026-27ರ ಕುರಿತು ಸುಮಾರು 13 ಗಂಟೆಗಳ ಕಾಲ ನಡೆದ ಸಾಮಾನ್ಯ ಚರ್ಚೆಯಲ್ಲಿ 63 ಸದಸ್ಯರು ಭಾಗಿ: ಲೋಕಸಭಾ ಅಧ್ಯಕ್ಷರು

ಸಂವಿಧಾನ (ನೂರ ಮೂವತ್ತೊಂದನೇ ತಿದ್ದುಪಡಿ) ಮಸೂದೆ, 2026; ಕೇಂದ್ರಾಡಳಿತ ಪ್ರದೇಶಗಳ ಕಾನೂನು (ತಿದ್ದುಪಡಿ) ಮಸೂದೆ, 2026 ಮತ್ತು ಸೀಮಾ ನಿರ್ಣಯ ಮಸೂದೆ, 2026 ರ ಕುರಿತು 21 ಗಂಟೆ 27 ನಿಮಿಷಗಳ ಕಾಲ ಚರ್ಚೆ ಮತ್ತು 131 ಸದಸ್ಯರು ಚರ್ಚೆಯಲ್ಲಿ ಭಾಗಿ: ಲೋಕಸಭಾ ಅಧ್ಯಕ್ಷರು

ಲೋಕಸಭೆಯಲ್ಲಿ 12 ಸರ್ಕಾರಿ ಮಸೂದೆಗಳ ಮಂಡನೆ ಮತ್ತು 09 ಮಸೂದೆಗಳ ಅಂಗೀಕಾರ: ಲೋಕಸಭಾ ಅಧ್ಯಕ್ಷರು

18ನೇ ಲೋಕಸಭೆಯ ಏಳನೇ ಅಧಿವೇಶನದಲ್ಲಿ ಸಾರ್ವಜನಿಕ ಪ್ರಾಮುಖ್ಯತೆಯ 326 ವಿಷಯಗಳ ಚರ್ಚೆ: ಲೋಕಸಭಾ ಅಧ್ಯಕ್ಷರು

ಹದಿನೆಂಟನೇ ಲೋಕಸಭೆಯ ಏಳನೇ ಅಧಿವೇಶನ ಸಂಪನ್ನ

ಪ್ರಕಟಣಾ ದಿನಾಂಕ: 18 APR 2026 3:22PM by PIB Bengaluru

ಹದಿನೆಂಟನೇ ಲೋಕಸಭೆಯ ಏಳನೇ ಅಧಿವೇಶನದ ಕಲಾಪವು 2026 ರ ಜನವರಿ 28 ರಂದು ಪ್ರಾರಂಭವಾಗಿ ಇಂದು ಮುಕ್ತಾಯಗೊಂಡಿದೆ.
 
ಈ ಬಾರಿಯ ಅಧಿವೇಶನದಲ್ಲಿ ಸುಮಾರು 151 ಗಂಟೆ 42 ನಿಮಿಷಗಳ ಕಾಲ ಒಟ್ಟು 31 ಕಲಾಪಗಳು ನಡೆದಿವೆ ಎಂದು ಶ್ರೀ ಬಿರ್ಲಾ ಅವರು ಸದನಕ್ಕೆ ಅಂಕಿಅಂಶ ನೀಡಿದ್ದಾರೆ.

ಅಧಿವೇಶನದಲ್ಲಿ ಸದನದ ಉತ್ಪಾದಕತೆ ಶೇ. 93 ರಷ್ಟಿತ್ತು ಎಂದು ಶ್ರೀ ಬಿರ್ಲಾ ಅವರು ಮಾಹಿತಿ ನೀಡಿದ್ದಾರೆ.

ಭಾರತದ ಮಾನ್ಯ ರಾಷ್ಟ್ರಪತಿಗಳು 2026ರ ಜನವರಿ 28 ರಂದು ಸಂಸತ್ತಿನ ಉಭಯ ಸದನಗಳನ್ನುದ್ದೇಶಿಸಿ ಮಾತನಾಡಿದರು ಮತ್ತು ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆಯು 2 ಗಂಟೆ 46 ನಿಮಿಷಗಳ ಕಾಲ ನಡೆಯಿತು ಎಂದು ಶ್ರೀ ಬಿರ್ಲಾ ತಿಳಿಸಿದ್ದಾರೆ.

ಕೇಂದ್ರ ಹಣಕಾಸು ಸಚಿವರು 2026ರ ಫೆಬ್ರವರಿ 1 ರಂದು ಲೋಕಸಭೆಯಲ್ಲಿ 2026-2027 ರ ಕೇಂದ್ರ ಆಯವ್ಯಯ ಮಂಡಿಸಿದ್ದು ಕೇಂದ್ರ ಬಜೆಟ್ 2026-27 ರ ಸಾಮಾನ್ಯ ಚರ್ಚೆ ಸುಮಾರು 13 ಗಂಟೆಗಳ ಕಾಲ ನಡೆಯಿತು. ಚರ್ಚೆಯಲ್ಲಿ 63 ಸದಸ್ಯರು ಭಾಗಿಯಾಗಿದ್ದು  2025ರ ಫೆಬ್ರವರಿ 11 ರಂದು ವಿತ್ತ ಸಚಿವರು ಚರ್ಚೆಗೆ ಉತ್ತರಿಸಿದರು ಎಂದು ಶ್ರೀ ಬಿರ್ಲಾ ಅವರು ಮಾಹಿತಿ ನೀಡಿದ್ದಾರೆ.

ಆಯ್ದ ಸಚಿವಾಲಯಗಳು/ ಇಲಾಖೆಗಳ ಅನುದಾನದ ಬೇಡಿಕೆಯ ಬಗ್ಗೆ 2026 ರ ಮಾರ್ಚ್ 16 ರಿಂದ 18 ರವರೆಗೆ ಸದನದಲ್ಲಿ ಚರ್ಚಿಸಲಾಯಿತು ಮತ್ತು ನಂತರ ಸದನವು ಅನುದಾನದ ಬೇಡಿಕೆಗಳನ್ನು ಅಂಗೀಕರಿಸಿತು. ವಿನಿಯೋಗ ಮಸೂದೆಯನ್ನು 2026ರ ಮಾರ್ಚ್ 18 ರಂದು ಮತ್ತು ಹಣಕಾಸು ಮಸೂದೆಯನ್ನು 2026ರ ಮಾರ್ಚ್ 25 ರಂದು ಲೋಕಸಭೆಯಲ್ಲಿ ಅಂಗೀಕರಿಸಲಾಯಿತು.

ಅಧಿವೇಶನದಲ್ಲಿ 12 ಸರ್ಕಾರಿ ಮಸೂದೆಗಳನ್ನು ಮಂಡಿಸಲಾಯಿತು ಮತ್ತು 09 ಮಸೂದೆಗಳನ್ನು ಅಂಗೀಕರಿಸಲಾಯಿತು ಎಂದು ಶ್ರೀ ಬಿರ್ಲಾ ಅವರು ತಿಳಿಸಿದ್ದಾರೆ. ಅಂಗೀಕರಿಸಲ್ಪಟ್ಟ ಕೆಲವು ಪ್ರಮುಖ ಮಸೂದೆಗಳು ಈ ಕೆಳಗಿನಂತಿವೆ:

1.    ಕೈಗಾರಿಕಾ ಸಂಬಂಧ ಸಂಹಿತೆ (ತಿದ್ದುಪಡಿ) ಮಸೂದೆ, 2026

2.    ಲಿಂಗತ್ವ ಅಲ್ಪಸಂಖ್ಯಾತರ (ತೃತೀಯ ಲಿಂಗಿಗಳ) (ಹಕ್ಕುಗಳ ರಕ್ಷಣೆ) ತಿದ್ದುಪಡಿ ಮಸೂದೆ, 2026

3.    ಹಣಕಾಸು ಮಸೂದೆ, 2026

4.    ದಿವಾಳಿ ಮತ್ತು ದಿವಾಳಿತನ ಸಂಹಿತೆ (ತಿದ್ದುಪಡಿ) ಮಸೂದೆ, 2026

5.    ಆಂಧ್ರಪ್ರದೇಶ ಪುನರ್ ವಿಂಗಡಣೆ (ತಿದ್ದುಪಡಿ) ಮಸೂದೆ, 2026

6.    ಜನ ವಿಶ್ವಾಸ (ನಿಬಂಧನೆಗಳ ತಿದ್ದುಪಡಿ) ಮಸೂದೆ, 2026

7.    ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ (ಸಾಮಾನ್ಯ ಆಡಳಿತ) ಮಸೂದೆ, 2026

ಸದನದಲ್ಲಿ 2026 ರ ಏಪ್ರಿಲ್ 16 ಮತ್ತು 17 ರಂದು ಸಂವಿಧಾನ (ನೂರ ಮೂವತ್ತೊಂದನೇ ತಿದ್ದುಪಡಿ) ಮಸೂದೆ, 2026; ಕೇಂದ್ರಾಡಳಿತ ಪ್ರದೇಶಗಳ ಕಾನೂನುಗಳು (ತಿದ್ದುಪಡಿ) ಮಸೂದೆ, 2026 ಮತ್ತು ಸೀಮಾ ನಿರ್ಣಯ ಮಸೂದೆ, 2026 ಚರ್ಚಿಸಲಾಯಿತು ಮತ್ತು ಈ ಚರ್ಚೆ 21 ಗಂಟೆ 27 ನಿಮಿಷಗಳ ಕಾಲ ನಡೆಯಿತು ಎಂದು ಈ ಸಂದರ್ಭದಲ್ಲಿ ಶ್ರೀ ಬಿರ್ಲಾ ಅವರು ತಿಳಿಸಿದ್ದಾರೆ. ಮೂರು ಮಸೂದೆಗಳ ಮೇಲಿನ ಚರ್ಚೆಯಲ್ಲಿ 131 ಸದಸ್ಯರು ಭಾಗವಹಿಸಿದ್ದು, ಸಂವಿಧಾನ ತಿದ್ದುಪಡಿ ಮಸೂದೆಯನ್ನು ಸದನ ಅಂಗೀಕರಿಸಲಿಲ್ಲ ಎಂದೂ ಸಹ ಅವರು ಮಾಹಿತಿ ನೀಡಿದ್ದಾರೆ. 

ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷ ಮತ್ತು ಭಾರತದ ಮುಂದೆ ಎದುರಾಗಿರುವ ಸವಾಲುಗಳ ಕುರಿತು 2026ರ ಮಾರ್ಚ್ 23 ರಂದು ಪ್ರಧಾನಮಂತ್ರಿಯವರು ಹೇಳಿಕೆ ನೀಡಿದರು ಎಂದು ಶ್ರೀ ಬಿರ್ಲಾ ಅವರು ತಿಳಿಸಿದ್ದಾರೆ. 

ಅಧಿವೇಶನದಲ್ಲಿ, 126 ನಕ್ಷತ್ರ ಗುರುತಿನ ಪ್ರಶ್ನೆಗಳಿಗೆ ಮೌಖಿಕವಾಗಿ ಉತ್ತರಿಸಲಾಯಿತು. ಶೂನ್ಯ ವೇಳೆಯಲ್ಲಿ ಸದಸ್ಯರು ಒಟ್ಟು 326 ಸಾರ್ವಜನಿಕ ಮಹತ್ವದ ವಿಷಯಗಳನ್ನು ಪ್ರಸ್ತಾಪಿಸಿದ್ದು, ಅಧಿವೇಶನದಲ್ಲಿ ನಿಯಮ 377 ರ ಅಡಿಯಲ್ಲಿ ಒಟ್ಟು 650 ವಿಷಯಗಳನ್ನು ಕೈಗೆತ್ತಿಕೊಳ್ಳಲಾಯಿತು ಎಂದು ಲೋಕಸಭಾಧ್ಯಕ್ಷರು ಮಾಹಿತಿ ನೀಡಿದ್ದಾರೆ.

ಇಲಾಖಾ ಸಂಬಂಧಿತ ಸ್ಥಾಯಿ ಸಮಿತಿಗಳು 73 ವರದಿಗಳನ್ನು ಮಂಡಿಸಿದ್ದು, 2089 ಪತ್ರಿಕೆ/ಹಾಳೆಗಳನ್ನು ಸದನದ ಮುಂದಿಡಲಾಯಿತು ಎಂದು ಶ್ರೀ ಬಿರ್ಲಾ ತಿಳಿಸಿದ್ದಾರೆ.

2026ರ ಮಾರ್ಚ್ 30 ರಂದು, ನಿಯಮ 193 ರ ಅಡಿಯಲ್ಲಿ "ದೇಶವನ್ನು ಎಡಪಂಥೀಯ ಉಗ್ರವಾದದಿಂದ ಮುಕ್ತಗೊಳಿಸುವ ಪ್ರಯತ್ನಗಳು" ಎಂಬ ವಿಷಯದ ಕುರಿತು ಅಲ್ಪಾವಧಿಯ ಚರ್ಚೆ ನಡೆಯಿತು. ಚರ್ಚೆಯು 6 ಗಂಟೆ 7 ನಿಮಿಷಗಳ ಕಾಲ ನಡೆಯಿತು ಮತ್ತು 36 ಸದಸ್ಯರು ಭಾಗವಹಿಸಿದರು. ಕೇಂದ್ರ ಗೃಹ ಸಚಿವರ ಉತ್ತರದೊಂದಿಗೆ ಚರ್ಚೆ ಮುಕ್ತಾಯವಾಯಿತು.
ಭಾರತದ 500 ಮೆಗಾವ್ಯಾಟ್ ಮೂಲಮಾದರಿ ಕ್ಷಿಪ್ರ ಬ್ರೀಡರ್ ರಿಯಾಕ್ಟರ್ ಯಶಸ್ವಿಯಾಗಿ ಮೊದಲ ನಿರ್ಣಾಯಕ ಹಂತವನ್ನು ತಲುಪಿದ ಮಹತ್ವದ ಸಾಧನೆಯ ಬಗ್ಗೆ 2026 ರ ಏಪ್ರಿಲ್ 16 ರಂದು ಲೋಕಸಭಾಧ್ಯಕ್ಷರು ಸದನಕ್ಕೆ ತಿಳಿಸಿದರು.

ಈ ಅಧಿವೇಶನದಲ್ಲಿ, ಸದಸ್ಯರು 18 ಭಾರತೀಯ ಭಾಷೆಗಳಲ್ಲಿ 181 ಹೇಳಿಕೆಗಳನ್ನು ನೀಡಿದ್ದಾರೆ ಮತ್ತು ಏಕಕಾಲದಲ್ಲಿ ಅವುಗಳ ವ್ಯಾಖ್ಯಾನ ಯಶಸ್ವಿಯಾಗಿ ನಡೆಸಲಾಯಿತು ಎಂದು ಶ್ರೀ ಬಿರ್ಲಾ ಅವರು ಮಾಹಿತಿ ನೀಡಿದ್ದಾರೆ. 

Seventh Session of Eighteenth Lok Sabha: An Overview 

 

*****


(ಪ್ರಕಟಣೆ ಐ.ಡಿ.: 2253331) ವಿಸಿಟರ್ ಕೌಂಟರ್ : 4
ಪ್ರಕಟಣೆಯನ್ನು ಇದರಲ್ಲಿ ಓದಿ: हिन्दी , Gujarati , Bengali , English , Urdu