ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಪ್ರಧಾನಮಂತ್ರಿ ಅವರು ಕರ್ನಾಟಕಕ್ಕೆ ಭೇಟಿ ನೀಡಿ ಶ್ರೀ ಗುರು ಭೈರವೈಕ್ಯ ಮಂದಿರ ಉದ್ಘಾಟಿಸಿದ್ದು, ಈ ಭೇಟಿಯ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

ಪ್ರಕಟಣಾ ದಿನಾಂಕ: 15 APR 2026 5:46PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದಿನ ತಮ್ಮ ಕರ್ನಾಟಕ ತಮ್ಮ ಭೇಟಿಯ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

ಕರ್ನಾಟಕದ ಮಂಡ್ಯ ಜಿಲ್ಲೆಯ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ಶ್ರೀ ಗುರು ಭೈರವೈಕ್ಯ ಮಂದಿರವನ್ನು ಉದ್ಘಾಟಿಸಲಾಯಿತು ಎಂದು ಅವರು ಮಾಹಿತಿ ನೀಡಿದ್ದಾರೆ.

ಈ ಪವಿತ್ರ ಸ್ಥಳವು ದೇಶದ ಕಾಲಾತೀತ ಆಧ್ಯಾತ್ಮಿಕ ನೀತಿ ಹಾಗೂ ಸೇವೆ ಮತ್ತು ಜ್ಞಾನದ ನಿರಂತರ ಸಂಪ್ರದಾಯಗಳಿಗೆ ಗೌರವ ಸೂಚಕವಾಗಿದೆ ಎಂದು ಪ್ರಧಾನಮಂತ್ರಿ ಹೇಳಿದ್ದಾರೆ.

ತಮ್ಮ ಭೇಟಿಯ ಸಮಯದಲ್ಲಿ, ಪ್ರಧಾನಮಂತ್ರಿಯವರು ಜ್ವಾಲಾ ಪೀಠಕ್ಕೂ ಭೇಟಿ ನೀಡಿ ಶ್ರೀ ಕಾಲಭೈರವ ದೇವಾಲದಲ್ಲಿ ಪ್ರಾರ್ಥನೆ ಸಲ್ಲಿಸಿದರು.

ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರಿಗೂ ಪ್ರಧಾನಮಂತ್ರಿ ಗೌರವ ಸಲ್ಲಿಸಿದರು. ಅವರು ಆಧ್ಯಾತ್ಮಿಕತೆ ಮತ್ತು ಸೇವೆಯ ದಾರಿದೀಪವಾಗಿದ್ದರು, ಸಾಮಾಜಿಕ ಸಬಲೀಕರಣದಲ್ಲಿ ಅವರ ಶ್ಲಾಘನೀಯ ಪ್ರಯತ್ನಗಳು ಪ್ರಪಂಚದಾದ್ಯಂತ ಅಸಂಖ್ಯಾತರನ್ನು ತಲುಪಿದೆ ಎಂದು ಪ್ರಧಾನಮಂತ್ರಿ ಹೇಳಿದ್ದಾರೆ.

ಶ್ರೀ ಮೋದಿ ಅವರು ಸರಣಿ ಎಕ್ಸ್ ಪೋಸ್ಟ್‌ಗಳಲ್ಲಿ ಹೀಗೆ ಹೇಳಿದ್ದಾರೆ: 

“ಕರ್ನಾಟಕದ ಮಂಡ್ಯ ಜಿಲ್ಲೆಯ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ಶ್ರೀ ಗುರು ಭೈರವೈಕ್ಯ ಮಂದಿರವನ್ನು ಇಂದು ಬೆಳಗ್ಗೆ ಉದ್ಘಾಟಿಸಲಾಯಿತು.

ಈ ಪವಿತ್ರ ಸ್ಥಳವು ನಮ್ಮ ಭೂಮಿಯ ಕಾಲಾತೀತ ಆಧ್ಯಾತ್ಮಿಕ ನೀತಿ ಹಾಗೂ ಸೇವೆ ಮತ್ತು ವಿವೇಕದ ನಿರಂತರ ಸಂಪ್ರದಾಯಗಳಿಗೆ ಗೌರವ ಸೂಚಕವಾಗಿದೆ."

"ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ, ಜ್ವಾಲಾ ಪೀಠಕ್ಕೆ ಭೇಟಿ ನೀಡಿದೆ ಮತ್ತು ಶ್ರೀ ಕಾಲಭೈರವ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದೆ."

“ಪರಮಪೂಜ್ಯ ಜಗದ್ಗುರುಗಳಿಗೆ ಗೌರವ ನಮನ ಸಲ್ಲಿಸಿದೆ”

"ಶ್ರೀ ಶ್ರೀ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರು ಸಾಮಾಜಿಕ ಸಬಲೀಕರಣದಲ್ಲಿ ಶ್ಲಾಘನೀಯ ಪ್ರಯತ್ನಗಳನ್ನು ಮಾಡಿದ್ದು, ಅವರು ಆಧ್ಯಾತ್ಮಿಕತೆ ಮತ್ತು ಸೇವೆಯ ಸಂಕೇತವಾಗಿದ್ದಾರೆ. ಅವರ ಕಾರ್ಯವು ಪ್ರಪಂಚದಾದ್ಯಂತ ಅಸಂಖ್ಯಾತರನ್ನು ತಲುಪಿದೆ.”

******


(ಪ್ರಕಟಣೆ ಐ.ಡಿ.: 2252350) ವಿಸಿಟರ್ ಕೌಂಟರ್ : 22
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , Marathi , हिन्दी , Manipuri , Bengali , Assamese , Punjabi , Gujarati , Telugu , Malayalam