ರಾಷ್ಟ್ರಪತಿಗಳ ಕಾರ್ಯಾಲಯ
azadi ka amrit mahotsav

ಬೈಸಾಖಿ, ವಿಷು, ವಿಶುವ್, ಬೊಹಾಗ್ ಬಿಹು, ಪೊಯಿಲಾ ಬೋಯಿಶಾಖ್, ಮೆಶಾದಿ, ವೈಶಾಖಡಿ ಮತ್ತು ಪುತಾಂಡು ಹಬ್ಬದ ಮುನ್ನಾದಿನದಂದು ರಾಷ್ಟ್ರಪತಿ ಅವರ ಶುಭಾಶಯ

ಪ್ರಕಟಣಾ ದಿನಾಂಕ: 13 APR 2026 7:11PM by PIB Bengaluru

ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು 2026 ರ ಏಪ್ರಿಲ್ 14 ಮತ್ತು 15ರಂದು ಆಚರಿಸಲಾಗುತ್ತಿರುವ ಬೈಸಾಖಿ, ವಿಷು, ವಿಶುವ್, ಬೋಹಾಗ್ ಬಿಹು, ಪೊಯಿಲಾ ಬೋಯಿಶಾಖ್, ಮೇಶಾದಿ, ವೈಶಾಖಡಿ ಮತ್ತು ಪುತಂಡು ಹಬ್ಬದ ಮುನ್ನಾದಿನದಂದು ತಮ್ಮ ಸಂದೇಶದಲ್ಲಿ ಹೀಗೆ ಹೇಳಿದ್ದಾರೆ: -

"ಬೈಸಾಖಿ, ವಿಷು, ವಿಶುವ್, ಬೊಹಾಗ್ ಬಿಹು, ಪೊಯಿಲಾ ಬೋಯಿಶಾಖ್, ಮೆಶಾದಿ, ವೈಶಾಖಡಿ ಮತ್ತು ಪುತಾಂಡು ಶುಭ ಸಂದರ್ಭದಲ್ಲಿ, ಭಾರತ ಮತ್ತು ವಿದೇಶಗಳಲ್ಲಿ ವಾಸಿಸುವ ಎಲ್ಲಾ ಭಾರತೀಯರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಶುಭಾಶಯಗಳನ್ನು ಸಲ್ಲಿಸುತ್ತೇನೆ.

ಸುಗ್ಗಿಯ ಋತುವನ್ನು ಗುರುತಿಸಲು ಈ ಹಬ್ಬಗಳನ್ನು ದೇಶಾದ್ಯಂತ ವಿವಿಧ ರೂಪಗಳಲ್ಲಿ ಆಚರಿಸಲಾಗುತ್ತದೆ. ಈ ಹಬ್ಬಗಳ ಮೂಲಕ ನಾವು ಭೂತಾಯಿ ಮತ್ತು ನಮ್ಮ ಅನ್ನದಾತ ರೈತರಿಗೆ ಕೃತಜ್ಞತೆ ಸಲ್ಲಿಸುತ್ತೇವೆ. ನಮ್ಮ ದೇಶದ ಶ್ರೀಮಂತ ಸಾಂಸ್ಕೃತಿಕ ಪರಂಪರೆ, ಕೃಷಿ ಪರಂಪರೆ ಮತ್ತು ಏಕತೆ ಕೂಡಾ ಈ ಹಬ್ಬಗಳ ಆಚರಣೆಯಿಂದ ಅಭಿವ್ಯಕ್ತವಾಗುತ್ತದೆ.

ಈ ಹಬ್ಬಗಳು ಎಲ್ಲರ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರಲಿ ಮತ್ತು ನಮ್ಮ ರಾಷ್ಟ್ರ ಮತ್ತು ಸಮಾಜದ ಅಭಿವೃದ್ಧಿಗೆ ಗಮನಾರ್ಹ ಕೊಡುಗೆ ನೀಡಲು ನಮಗೆ ಸ್ಫೂರ್ತಿ ನೀಡಲಿ ಎಂದು ನಾನು ಬಯಸುತ್ತೇನೆ."

ರಾಷ್ಟ್ರಪತಿ ಅವರ ಸಂದೇಶವನ್ನು ನೋಡಲು ದಯವಿಟ್ಟು ಇಲ್ಲಿ ಕ್ಲಿಕ್ ಮಾಡಿ-

 

*****


(ಪ್ರಕಟಣೆ ಐ.ಡಿ.: 2251728) ವಿಸಿಟರ್ ಕೌಂಟರ್ : 11
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , Marathi , हिन्दी , Bengali , Gujarati