ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
azadi ka amrit mahotsav

ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರವು ‘ಆಯುಷ್ಮಾನ್ ಭಾರತ್ ಪಿಎಂ-ಜೆಎವೈ ಸ್ವಯಂ-ನಿರ್ಧಾರಣೆ ಹ್ಯಾಕಥಾನ್ 2026’ಕ್ಕೆ ಸೇರಲು ನಾವೀನ್ಯಕಾರರನ್ನು ಆಹ್ವಾನಿಸಿದೆ


‘ಆಯುಷ್ಮಾನ್‌ ಭಾರತ್‌ ಪಿಎಂ-ಜೆಎವೈ ಸ್ವಯಂ-ನಿರ್ಧಾರಣೆ ಹ್ಯಾಕಥಾನ್’ ಉಪಕ್ರಮವು ಅಸ್ತಿತ್ವದಲ್ಲಿರುವ ವ್ಯವಸ್ಥೆಗಳೊಂದಿಗೆ ಸಂಯೋಜಿಸಲು, ಕೈಯಾರೆ ಮಾಡುವ ಕೆಲಸವನ್ನು ಕಡಿಮೆ ಮಾಡಲು, ಕ್ಲೈಮ್ ಪ್ರಕ್ರಿಯೆಯನ್ನು ವೇಗಗೊಳಿಸಲು ಮತ್ತು ದೊಡ್ಡಮಟ್ಟದ, ಭವಿಷ್ಯಕ್ಕೆ ಸನ್ನದ್ಧವಾದ ತೀರ್ಪು ಚೌಕಟ್ಟನ್ನು ರಚಿಸಲು ನವೀನ ಡಿಜಿಟಲ್ ಪರಿಹಾರಗಳನ್ನು ಹುಡುಕುತ್ತದೆ

ಇಲ್ಲಿಯವರೆಗೆ 2,600ಕ್ಕೂ ಹೆಚ್ಚು  ಮಂದಿ ನೋಂದಾಯಿಸಿಕೊಂಡಿದ್ದಾರೆ; ಏಪ್ರಿಲ್ 13ರಂದು ನೋಂದಣಿಗಳು ಕೊನೆಗೊಳ್ಳುತ್ತವೆ, 'ಮಾಸ್ಟರ್ ಕ್ಲಾಸ್' ಸರಣಿಯು ಏಪ್ರಿಲ್ 13 ರಂದು ಪ್ರಾರಂಭವಾಗುತ್ತದೆ

ಪ್ರಕಟಣಾ ದಿನಾಂಕ: 13 APR 2026 11:32AM by PIB Bengaluru

ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಡಿಯಲ್ಲಿ 'ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ' (ಎನ್ಎಚ್ಎ) ಜಾರಿಗೆ ತಂದ ಪ್ರಮುಖ ಆರೋಗ್ಯ ಭರವಸೆ ಯೋಜನೆಯಾದ 'ಆಯುಷ್ಮಾನ್ ಭಾರತ್-ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ'ಯು (ಎಬಿ ಪಿಎಂ-ಜೆಎವೈ), ಭಾರತದಲ್ಲಿ ಡಿಜಿಟಲ್ ಆರೋಗ್ಯ ಪರಿವರ್ತನೆಗೆ ಚಾಲನೆ ನೀಡುತ್ತಿದೆ. 1,900ಕ್ಕೂ ಚಿಕಿತ್ಸಾ ಪ್ಯಾಕೇಜ್‌ಗಳಲ್ಲಿ ಪ್ರತಿದಿನ ಸುಮಾರು 50,000 ಕ್ಲೇಮ್‌ಗಳನ್ನು ಪ್ರಕ್ರಿಯೆಗೊಳಿಸುತ್ತಿದೆ. ಈ ಪ್ರಮಾಣದಲ್ಲಿ ಕಾರ್ಯನಿರ್ವಹಿಸಲು ಕ್ಲೇಮ್‌ ನಿರ್ಧಾರಣೆಯಲ್ಲಿ ವೇಗ, ನಿಖರತೆ ಮತ್ತು ಅನುಸರಣೆ ನಿರ್ಣಾಯಕವಾಗಿದೆ. 15-20% ಕ್ಲೈಮ್‌ಗಳು ಪ್ರಸ್ತುತ ಸ್ವಯಂ-ನಿರ್ಣಯದೊಂದಿಗೆ ಅಂತಿಮಗೊಳ್ಳುತ್ತಿವೆಯಾದರೂ, ದೊಡ್ಡಮಟ್ಟದ, ಪ್ಯಾಕೇಜ್-ಆಧರಿತ ಪರಿಹಾರದ ಅಗತ್ಯವು ಅನಿವಾರ್ಯವಾಗಿ ಉಳಿದಿದೆ.

ಕ್ಲೇಮ್‌ಗಳ ಪ್ರಮಾಣ ಮತ್ತು ಸಂಕೀರ್ಣತೆಯನ್ನು ಗಮನಿಸಿದರೆ, ವೈವಿಧ್ಯಮಯ ಚಿಕಿತ್ಸೆಗಳು ಮತ್ತು ಡಾಕ್ಯುಮೆಂಟ್ ಸ್ವರೂಪಗಳನ್ನು ನಿರ್ವಹಿಸುವ ಸಾಮರ್ಥ್ಯವಿರುವ ಸುಧಾರಿತ ಸ್ವಯಂ-ನಿರ್ಧಾರಣೆ ವ್ಯವಸ್ಥೆಯ ಅವಶ್ಯಕತೆ ಹೆಚ್ಚುತ್ತಿದೆ. ಯಾಂತ್ರೀಕೃತಗೊಂಡ, ಕೃತಕ ಬುದ್ಧಿಮತ್ತೆ ಆಧಾರಿತ ವಂಚನೆ ಪತ್ತೆಹಚ್ಚುವಿಕೆ, ಪ್ರಮಾಣೀಕೃತ ದಾಖಲಾತಿ ಮತ್ತು ನೈಜ-ಸಮಯದ ಪರಿಶೀಲನೆಯು ವೇಗವಾದ, ಹೆಚ್ಚು ಸ್ಥಿರವಾದ ಮತ್ತು ಪಾರದರ್ಶಕ ಫಲಿತಾಂಶಗಳನ್ನು ನೀಡುತ್ತವೆ. ಜೊತೆಗೆ ಕ್ಲೇಮ್ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಡಿಜಿಟಲೀಕರಣಗೊಳಿಸಲು ಸಹಾಯ ಮಾಡುತ್ತವೆ.

'ಎಬಿ ಪಿಎಂ-ಜೆಎವೈ ಸ್ವಯಂ-ನಿರ್ಧಾರಣೆ ಹ್ಯಾಕಥಾನ್' ಉಪಕ್ರಮವು ನವೀನ ಡಿಜಿಟಲ್ ಪರಿಹಾರಗಳನ್ನು ವೇಗಗೊಳಿಸುವ ಗುರಿಯನ್ನು ಹೊಂದಿದೆ, ಅದು ಅಸ್ತಿತ್ವದಲ್ಲಿರುವ 'ಎಬಿ ಪಿಎಂ-ಜೆಎವೈ' ಮೂಲಸೌಕರ್ಯದೊಂದಿಗೆ ಸುಗಮವಾಗಿ ಸಂಯೋಜನೆಯಾಗುತ್ತದೆ, ಹಸ್ತಚಾಲಿತ ಪ್ರಯತ್ನವನ್ನು ಕಡಿಮೆ ಮಾಡುತ್ತದೆ, ಪ್ರಕ್ರಿಯೆ ಸಮಯವನ್ನು ವೇಗಗೊಳಿಸುತ್ತದೆ ಮತ್ತು ಇಡೀ ಪರಿಸರ ವ್ಯವಸ್ಥೆಗೆ ದೊಡ್ಡಮಟ್ಟದ, ಭವಿಷ್ಯ-ಸಿದ್ಧ ನಿರ್ಧಾರಣೆ ವ್ಯವಸ್ಥೆಯನ್ನು ಸೃಷ್ಟಿಸುತ್ತದೆ.

'ಎಬಿ ಪಿಎಂ-ಜೆಎವೈ ಸ್ವಯಂ-ನಿರ್ಧಾರಣೆ ಹ್ಯಾಕಥಾನ್ 2026’ಕ್ಕೆ ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ (ಎನ್ಎಚ್ಎ) ಉತ್ಸಾಹಭರಿತ ಪ್ರತಿಕ್ರಿಯೆಯನ್ನು ಪಡೆದಿದೆ, ದೇಶಾದ್ಯಂತ ಇಲ್ಲಿಯವರೆಗೆ 2,600ಕ್ಕೂ ಹೆಚ್ಚು ಮಂದಿ ಇದರಲ್ಲಿ ಭಾಗವಹಿಸಲು ನೋಂದಾಯಿಸಿಕೊಂಡಿದ್ದಾರೆ.

ನೋಂದಣಿಗೆ ಕೊನೆ ದಿನಾಂಕ: 13 ಏಪ್ರಿಲ್ 2026

ಆಸಕ್ತ ವಿದ್ಯಾರ್ಥಿಗಳು, ಸಂಶೋಧಕರು, ಡೆವಲಪರ್‌ಗಳು, ವೃತ್ತಿಪರರು, ನವೋದ್ಯಮಗಳು ಮತ್ತು ನವೋದ್ಯಮಿಗಳು ಅಧಿಕೃತ ಪೋರ್ಟಲ್https://nha.gov.in/hackathon ಮೂಲಕ 13 ಏಪ್ರಿಲ್ 2026 ರವರೆಗೆ ನೋಂದಾಯಿಸಿಕೊಳ್ಳಬಹುದು.

ಮೂರು 'ಮಾಸ್ಟರ್ ಕ್ಲಾಸ್' ಅಧಿವೇಶನಗಳು 13 ಏಪ್ರಿಲ್ 2026 ರಿಂದ ಪ್ರಾರಂಭವಾಗುತ್ತವೆ

ಸವಾಲಿನ ಹೇಳಿಕೆಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಸಂಭಾವ್ಯ ಪರಿಹಾರ ಮಾರ್ಗಗಳನ್ನು ಗುರುತಿಸುವಲ್ಲಿ ಭಾಗವಹಿಸುವವರನ್ನು ಬೆಂಬಲಿಸಲು, 13 ಏಪ್ರಿಲ್ 2026 ರಿಂದ ಪ್ರಾರಂಭವಾಗುವ ವಿಶೇಷ ಮೂರು-ಭಾಗಗಳ 'ಮಾಸ್ಟರ್ ಕ್ಲಾಸ್' ಸರಣಿಯನ್ನು 'ಎನ್ಎಚ್ಎ' ಆಯೋಜಿಸುತ್ತದೆ. ಈ ಅಧಿವೇಶನಗಳು ಕ್ಲೇಮ್‌ಗಳ ತೀರ್ಪು ಪರಿಸರ ವ್ಯವಸ್ಥೆ, ಹ್ಯಾಕಥಾನ್‌ನಿಂದ ಪ್ರಮುಖ ನಿರೀಕ್ಷೆಗಳು ಮತ್ತು ಡಿಜಿಟಲ್ ಆರೋಗ್ಯದಲ್ಲಿ ನಾವೀನ್ಯತೆಗಾಗಿ ಉದಯೋನ್ಮುಖ ಅವಕಾಶಗಳ ಬಗ್ಗೆ ಅಮೂಲ್ಯವಾದ ಒಳನೋಟಗಳನ್ನು ನೀಡುತ್ತವೆ.

'ಮಾಸ್ಟರ್ ಕ್ಲಾಸ್' ಸರಣಿಯ ವೇಳಾಪಟ್ಟಿ ಈ ಕೆಳಗಿನಂತಿದೆ:

ಅಧಿವೇಶನ 1: 13 ಏಪ್ರಿಲ್ 2026 ಮಧ್ಯಾಹ್ನ 2:00 ರಿಂದ ಸಂಜೆ 4:00
ಅಧಿವೇಶನ 2: 15 ಏಪ್ರಿಲ್ 2026 ಮಧ್ಯಾಹ್ನ 2:00 ರಿಂದ ಸಂಜೆ 4:00
ಅಧಿವೇಶನ 3: 16 ಏಪ್ರಿಲ್ 2026 ಮಧ್ಯಾಹ್ನ 2:00 ರಿಂದ ಸಂಜೆ 4:00

ಎಲ್ಲಾ ಅಧಿವೇಶನಗಳನ್ನು ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ ಅಧಿಕೃತ ಯೂಟ್ಯೂಬ್ ಚಾನೆಲ್, @AyushmanNHA ನಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ.

ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ (ಐಐಎಸ್‌ಸಿ) ಗ್ರ್ಯಾಂಡ್ ಫಿನಾಲೆ

2026’ರ ಮೇ 8-9 ರಂದು ಬೆಂಗಳೂರಿನ ಪ್ರತಿಷ್ಠಿತ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಎರಡು ದಿನಗಳ ಆಫ್‌ಲೈನ್ ಫಿನಾಲೆಯೊಂದಿಗೆ 'ಹ್ಯಾಕಥಾನ್' ಮುಕ್ತಾಯಗೊಳ್ಳುತ್ತದೆ.  ಅಲ್ಲಿ ವಿಜೇತ ತಂಡಗಳು ತಮ್ಮ ಪರಿಹಾರಗಳನ್ನು ಆರೋಗ್ಯ ರಕ್ಷಣೆ, ತಂತ್ರಜ್ಞಾನ ಮತ್ತು ಸಾರ್ವಜನಿಕ ನೀತಿಯ ನಾಯಕರನ್ನು ಒಳಗೊಂಡ ಪ್ರಖ್ಯಾತ ತೀರ್ಪುಗಾರರ ಮುಂದೆ ಪ್ರಸ್ತುತಪಡಿಸುತ್ತವೆ. ವಿಜೇತರು ಪ್ರತಿ ಸಮಸ್ಯೆಯ ಹೇಳಿಕೆಗೆ ₹5 ಲಕ್ಷ, ₹3 ಲಕ್ಷ ಮತ್ತು ₹2 ಲಕ್ಷ ಆಕರ್ಷಕ ನಗದು ಬಹುಮಾನಗಳನ್ನು ಸಹ ಪಡೆಯುತ್ತಾರೆ, ಜೊತೆಗೆ 'ಎನ್ಎಚ್ಎ' ಜೊತೆ ಸಂಭಾವ್ಯ ಸಹಯೋಗದ ಅವಕಾಶವನ್ನು ಸಹ ಪಡೆಯುತ್ತಾರೆ.

ಡಿಜಿಟಲ್ ಆರೋಗ್ಯ ನಾವೀನ್ಯತೆಯ ಭವಿಷ್ಯಕ್ಕೆ ಚಾಲನೆ ನೀಡುವುದು

ಈ ಹ್ಯಾಕಥಾನ್ ಮೂಲಕ ದಕ್ಷತೆಯನ್ನು ಹೆಚ್ಚಿಸುವ, ಪಾರದರ್ಶಕತೆಯನ್ನು ಬಲಪಡಿಸುವ ಹಾಗೂ ಫಲಾನುಭವಿಗಳು ಮತ್ತು ಪೂರೈಕೆದಾರರಿಗೆ ಆರೋಗ್ಯ ಸೇವೆ ಪೂರೈಕೆಯನ್ನು ಸುಧಾರಿಸುವ, ಭವಿಷ್ಯ ಸನ್ನದ್ಧವಾದ ಡಿಜಿಟಲ್ ಆರೋಗ್ಯ ವ್ಯವಸ್ಥೆಗಳನ್ನು ನಿರ್ಮಿಸಲು ನಾವೀನ್ಯತೆ ಮತ್ತು ಸಹಯೋಗವನ್ನು ಉತ್ತೇಜಿಸುವ ತನ್ನ ಬದ್ಧತೆಯನ್ನು 'ಎನ್ಎಚ್ಎ' ಪುನರುಚ್ಚರಿಸುತ್ತದೆ.

ಹೆಚ್ಚಿನ ವಿವರಗಳು ಮತ್ತು ನೋಂದಣಿಗಾಗಿ, ಭೇಟಿ ನೀಡಿ: https://nha.gov.in/hackathon

 

*****


(ಪ್ರಕಟಣೆ ಐ.ಡಿ.: 2251460) ವಿಸಿಟರ್ ಕೌಂಟರ್ : 21
ಪ್ರಕಟಣೆಯನ್ನು ಇದರಲ್ಲಿ ಓದಿ: Telugu , English , Urdu , Marathi , हिन्दी , Punjabi , Gujarati