ಲೋಕಸಭಾ ಸಚಿವಾಲಯ
azadi ka amrit mahotsav

ಖ್ಯಾತ ಗಾಯಕಿ ಶ್ರೀಮತಿ ಆಶಾ ಭೋಸ್ಲೆ ಅವರ ನಿಧನಕ್ಕೆ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಸಂತಾಪ

प्रविष्टि तिथि: 12 APR 2026 7:17PM by PIB Bengaluru

ಲೋಕಸಭಾ ಸ್ಪೀಕರ್ ಶ್ರೀ ಓಂ ಬಿರ್ಲಾ ಅವರು ದಿಗ್ಗಜ ಹಿನ್ನೆಲೆ ಗಾಯಕಿ ಶ್ರೀಮತಿ ಆಶಾ ಭೋಸ್ಲೆ ಅವರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ತಮ್ಮ ಶೋಕ ಸಂದೇಶದಲ್ಲಿ ಶ್ರೀ ಬಿರ್ಲಾ ಅವರು, ಭಾರತೀಯ ಕಲೆ ಮತ್ತು ಸಂಗೀತ ರಂಗಕ್ಕೆ ಆಶಾ ಭೋಸ್ಲೆ ಅವರು ನೀಡಿದ ಸ್ಮರಣೀಯ ಕೊಡುಗೆಯನ್ನು ವಿವರಿಸಿದ್ದಾರೆ.

ಹಿರಿಯ ಗಾಯಕಿಗೆ ಗೌರವ ಸಲ್ಲಿಸುತ್ತಾ ಶ್ರೀ ಬಿರ್ಲಾ ಅವರು ಹೀಗೆ ಹೇಳಿದ್ದಾರೆ:

"ಖ್ಯಾತ ಗಾಯಕಿ ಆಶಾ ಭೋಸ್ಲೆ ಅವರ ನಿಧನ ತೀವ್ರ ದುಃಖಕರ. ಪ್ರತಿಷ್ಠಿತ ಪದ್ಮವಿಭೂಷಣ ಮತ್ತು ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತರಾದ ಆಶಾ ಅವರು, ದೀರ್ಘಕಾಲದವರೆಗೆ ಭಾರತೀಯ ಕಲಾ ಜಗತ್ತನ್ನು ಶ್ರೀಮಂತಗೊಳಿಸುವಲ್ಲಿ ಅನನ್ಯ ಪಾತ್ರ ವಹಿಸಿದ್ದರು."

ಹಿಂದಿ, ಮರಾಠಿ ಸೇರಿದಂತೆ ಹಲವು ಭಾಷೆಗಳಲ್ಲಿ ಹಾಡುವ ಮೂಲಕ, ಭಾರತೀಯ ಸಂಗೀತ ಮತ್ತು ಸಿನಿಮಾವನ್ನು ಜಾಗತಿಕ ವೇದಿಕೆಗೆ ತರುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದು, ಅವರ ನಿಧನವು ದೇಶದ ಸಾಂಸ್ಕೃತಿಕ ಪರಂಪರೆಗೆ ತುಂಬಲಾರದ ನಷ್ಟ ಎಂದು ಶ್ರೀ ಬಿರ್ಲಾ ಅವರು ಶೋಕ ವ್ಯಕ್ತಪಡಿಸಿದ್ದಾರೆ.

ದುಃಖತಪ್ತ ಅವರ ಕುಟುಂಬ ಸದಸ್ಯರು ಮತ್ತು ಪ್ರಪಂಚದಾದ್ಯಂತದ ಅಸಂಖ್ಯಾತ ಅಭಿಮಾನಿಗಳಿಗೆ ಶ್ರೀ ಬಿರ್ಲಾ ಅವರು ಆಳವಾದ ಸಂತಾಪ ಸೂಚಿಸಿದ್ದಾರೆ.

 

*****


(रिलीज़ आईडी: 2251360) आगंतुक पटल : 66
इस विज्ञप्ति को इन भाषाओं में पढ़ें: English , Urdu , हिन्दी , Marathi , Bengali , Punjabi , Gujarati