ಉಪರಾಷ್ಟ್ರಪತಿಗಳ ಕಾರ್ಯಾಲಯ
azadi ka amrit mahotsav

ದಿಗ್ಗಜ ಗಾಯಕಿ ಆಶಾ ಭೋಸ್ಲೆ ನಿಧನಕ್ಕೆ ಉಪರಾಷ್ಟ್ರಪತಿ ಸಂತಾಪ

ಪ್ರಕಟಣಾ ದಿನಾಂಕ: 12 APR 2026 2:47PM by PIB Bengaluru

ಭಾರತದ ಉಪರಾಷ್ಟ್ರಪತಿ ಶ್ರೀ ಸಿ.ಪಿ. ರಾಧಾಕೃಷ್ಣನ್ ಅವರು ಖ್ಯಾತ ಗಾಯಕಿ ಆಶಾ ಭೋಸ್ಲೆ ಅವರ ನಿಧನಕ್ಕೆ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.

ಉಪರಾಷ್ಟ್ರಪತಿಗಳು ತಮ್ಮ ಸಂದೇಶದಲ್ಲಿ, “ದಿಗ್ಗಜ ಗಾಯಕಿ ಆಶಾ ಭೋಸ್ಲೆ ಅವರ ನಿಧನದ ಸುದ್ದಿ ತಿಳಿದು ನನಗೆ ತೀವ್ರ ದುಃಖವಾಗಿದೆ. ಅವರ ಕುಟುಂಬವರ್ಗ, ಅಭಿಮಾನಿಗಳು ಮತ್ತು ಸಂಗೀತ ಪ್ರಿಯರಿಗೆ ನನ್ನ ಆಳವಾದ ಸಂತಾಪಗಳು.

ಆಶಾ ಅವರು ಭಾವಪೂರ್ಣ ಗಜಲ್‌ಗಳು, ಸಾಂಪ್ರದಾಯಿಕ ಭಜನೆಗಳು ಹೀಗೆ ವಿವಿಧ ಪ್ರಕಾರಗಳಲ್ಲಿ ಹಾಡಲು ಸಾಧ್ಯವಾಗಬಲ್ಲ ಧ್ವನಿ ಹೊಂದಿದ್ದು ಎಲ್ಲ ಪ್ರಕಾರಗಳನ್ನೂ ಕರಗತ ಮಾಡಿಕೊಂಡು ಭಾರತೀಯ ಸಂಗೀತದ ಮೇಲೆ ಅಚ್ಚಳಿಯದ ಛಾಪು ಮೂಡಿಸಿದ್ದಾರೆ.

ಅವರ ಕಾಲಾತೀತ ಧ್ವನಿ ಮತ್ತು ಸಂಗೀತ ಪರಂಪರೆ ಲಕ್ಷಾಂತರ ಜನರ ಹೃದಯಗಳಲ್ಲಿ ಅನುರಣಿಸುತ್ತಲೇ ಇರಲಿದೆ ಮತ್ತು ಮುಂದಿನ ಪೀಳಿಗೆಗೆ ಸ್ಫೂರ್ತಿ ನೀಡುತ್ತಲಿರಲಿದೆ. ಓಂ ಶಾಂತಿ.”

 

*****


(ಪ್ರಕಟಣೆ ಐ.ಡಿ.: 2251266) ವಿಸಿಟರ್ ಕೌಂಟರ್ : 17
ಪ್ರಕಟಣೆಯನ್ನು ಇದರಲ್ಲಿ ಓದಿ: Urdu , English , हिन्दी , Marathi , Bengali , Bengali-TR , Gujarati