ಪ್ರಧಾನ ಮಂತ್ರಿಯವರ ಕಛೇರಿ
ಶಾಂತತೆ ಮತ್ತು ಬುದ್ಧಿವಂತ ಚಿಂತನೆಯ ಮಹತ್ವ ಉಲ್ಲೇಖಿಸುವ ಸಂಸ್ಕೃತ ಸುಭಾಷಿತವನ್ನು ಹಂಚಿಕೊಂಡಿರುವ ಪ್ರಧಾನಮಂತ್ರಿ
प्रविष्टि तिथि:
10 APR 2026 10:00AM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ, ಕಷ್ಟಕರ ಸಂದರ್ಭಗಳಲ್ಲಿ ಶಾಂತವಾಗಿರುವುದು ಮತ್ತು ಬುದ್ಧಿವಂತಿಕೆಯಿಂದ ಯೋಚಿಸುವುದರ ಮಹತ್ವವನ್ನು ಉಲ್ಲೇಖಿಸುವ ಸಂಸ್ಕೃತ ಸುಭಾಷಿತವನ್ನು ಇಂದು ಹಂಚಿಕೊಂಡಿದ್ದಾರೆ.
ದೇಶದ ಯುವಕರು ತಾವು ಸಾಧಿಸಲು ನಿರ್ಧರಿಸಿದ್ದನ್ನು ಸಾಧಿಸಿಯೇ ತೀರುತ್ತಾರೆ ಎಂದು ಪ್ರಧಾನಮಂತ್ರಿ ಹೇಳಿದರು. ನಮ್ಮ ಯುವ ಶಕ್ತಿಯ ಬಲವೇ ದೇಶವನ್ನು ತ್ವರಿತ ಅಭಿವೃದ್ಧಿಯ ಹಾದಿಯಲ್ಲಿ ಮುನ್ನಡೆಸುತ್ತಿದೆ ಎಂದು ಶ್ರೀ ನರೇಂದ್ರ ಮೋದಿ ಉಲ್ಲೇಖಿಸಿದರು.
ಪ್ರಧಾನಮಂತ್ರಿ ತಮ್ಮ ಸಾಮಾಜಿಕ ಜಾಲತಾನ X ಪೋಸ್ಟ್ ನಲ್ಲಿ ಹೀಗೆ ಬರೆದಿದ್ದಾರೆ.:
"देश के युवा जो ठान लेते हैं, उसे करके दिखाते हैं। यह हमारी युवाशक्ति का ही सामर्थ्य है कि हमारा राष्ट्र आज तेज गति से विकास के पथ पर अग्रसर है।
व्यसने वाऽर्थकृच्छ्रे वा भये वा जीवनान्तके।
विमृशन् वै स्वया बुद्ध्या धृतिमान् नावसीदति॥"
ತೊಂದರೆಗಳು, ಆರ್ಥಿಕ ಬಿಕ್ಕಟ್ಟು ಅಥವಾ ಜೀವಕ್ಕೆ ಅಪಾಯದ ಸಂದರ್ಭಗಳಲ್ಲಿ ಶಾಂತವಾಗಿದ್ದು ಬುದ್ಧಿವಂತಿಕೆಯಿಂದ ಯೋಚಿಸುವ ವ್ಯಕ್ತಿಯು ಕುಸಿದು ಬೀಳುವುದಿಲ್ಲ. ಕಠಿಣ ಸಂದರ್ಭಗಳಲ್ಲಿ ಶಾಂತ ಮತ್ತು ಚಿಂತನಶೀಲ ನಿರ್ಧಾರಗಳು ಆತನನ್ನು ದುಃಖ ಮತ್ತು ನಷ್ಟದಿಂದ ರಕ್ಷಿಸುತ್ತವೆ.
*****
(रिलीज़ आईडी: 2250676)
आगंतुक पटल : 58
इस विज्ञप्ति को इन भाषाओं में पढ़ें:
English
,
Urdu
,
Marathi
,
Marathi
,
हिन्दी
,
Manipuri
,
Bengali
,
Bengali-TR
,
Assamese
,
Punjabi
,
Gujarati
,
Odia
,
Tamil
,
Telugu
,
Malayalam