ರಾಜ್ಯಸಭಾ ಕಾರ್ಯಾಲಯ
ರಾಜ್ಯಸಭಾ ಸಭಾಪತಿ ಶ್ರೀ ಸಿ.ಪಿ. ರಾಧಾಕೃಷ್ಣನ್ ಅವರು ಇಂದು ರಾಜ್ಯಸಭಾ ಕೊಠಡಿಯಲ್ಲಿ ಹೊಸದಾಗಿ ಆಯ್ಕೆಯಾದ / ಮರು ಆಯ್ಕೆಯಾದ ಸದಸ್ಯರಿಗೆ ಪ್ರಮಾಣ ವಚನ ಬೋಧಿಸಿದರು
प्रविष्टि तिथि:
06 APR 2026 2:48PM by PIB Bengaluru
ರಾಜ್ಯಸಭೆಯ ಗೌರವಾನ್ವಿತ ಸಭಾಪತಿ ಶ್ರೀ ಸಿ.ಪಿ. ರಾಧಾಕೃಷ್ಣನ್ ಅವರು ಇಂದು ರಾಜ್ಯಸಭಾ ಕೊಠಡಿಯಲ್ಲಿ ಹೊಸದಾಗಿ ಆಯ್ಕೆಯಾದ ಮತ್ತು ಮರು ಆಯ್ಕೆಯಾದ ಹತ್ತೊಂಬತ್ತು ಸದಸ್ಯರಾದ ಶ್ರೀ ರಾಮದಾಸ್ ಬಂಡು ಅಠಾವಳೆ, ಶ್ರೀಮತಿ ಮಾಯಾ ಚಿಂತಾಮನ್ ಇವ್ನಾಟೆ, ಶ್ರೀ ಶರದ್ಚಂದ್ರ ಪವಾರ್, ಶ್ರೀ ರಾಮರಾವ್ ಸಖಾರಾಮ್ ವಾಡ್ಕುಟೆ, ಡಾ. ಜ್ಯೋತಿ ನಾಗನಾಥ್ ವಾಘ್ಮಾರೆ, ಶ್ರೀ ಕ್ರಿಸ್ಟೋಫರ್ ಮಾಣಿಕ್ಕಂ, ಡಾ. ಅನ್ಬುಮಣಿ ರಾಮದಾಸ್, ಶ್ರೀ ಕಾನ್‌ಸ್ಟಂಡಿನ್ ರವೀಂದ್ರನ್, ಶ್ರೀ ಎಲ್.ಕೆ. ಸುಧೀಶ್, ಡಾ. ಎಂ. ತಂಬಿದುರೈ ಶ್ರೀ ತಿರುಚಿ ಶಿವ, ಶ್ರೀ ಬಾಬುಲ್ ಸುಪ್ರಿಯಾ ಬರಾಲ್, ಡಾ. ಮೇನಕಾ ಗುರುಸ್ವಾಮಿ, ಶ್ರೀ ರಾಜೀವ್ ಕುಮಾರ್, ಶ್ರೀಮತಿ ರುಕ್ಮಿಣಿ ಮಲ್ಲಿಕ್, ಶ್ರೀ ಬಿಸ್ವಜಿತ್ ಸಿನ್ಹಾ, ಶ್ರೀ ಸಂತ್ರುಪ್ತ್ ಮಿಶ್ರಾ, ಶ್ರೀ ದಿಲೀಪ್ ಕುಮಾರ್ ರೇ ಮತ್ತು ಶ್ರೀ ಮನಮೋಹನ್ ಸಮಲ್ ಅವರಿಗೆ ಪ್ರಮಾಣ ವಚನ ಬೋಧಿಸಿದರು.
ಮೂವರು ಮರಾಠಿಯಲ್ಲಿ, ಇಬ್ಬರು ಹಿಂದಿಯಲ್ಲಿ, ಆರು ಮಂದಿ ತಮಿಳು, ಒಬ್ಬರು ಇಂಗ್ಲಿಷ್, ನಾಲ್ವರು ಬಂಗಾಳಿ ಮತ್ತು ಮೂವರು ಒಡಿಯಾದಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಮಹಾರಾಷ್ಟ್ರದಿಂದ ಐದು ಸದಸ್ಯರು, ತಮಿಳುನಾಡಿನಿಂದ ಆರು, ಪಶ್ಚಿಮ ಬಂಗಾಳದಿಂದ ಐದು ಮತ್ತು ಒಡಿಶಾದಿಂದ ಮೂವರು ಸದಸ್ಯರು ಇದ್ದಾರೆ.
ಶ್ರೀ ಕಿರಣ್ ರಿಜಿಜು, ಸಂಸದೀಯ ವ್ಯವಹಾರಗಳು ಮತ್ತು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವರು; ಶ್ರೀ ಜುಯಲ್ ಓರಂ, ಬುಡಕಟ್ಟು ವ್ಯವಹಾರಗಳ ಸಚಿವರು; ರಾಜ್ಯಸಭೆಯ ಪ್ರಧಾನ ಕಾರ್ಯದರ್ಶಿ ಶ್ರೀ ಪಿ.ಸಿ. ಮೋದಿ ಮತ್ತು ಸಚಿವಾಲಯದ ಇತರ ಹಿರಿಯ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
*****
(रिलीज़ आईडी: 2249499)
आगंतुक पटल : 56