ಹಣಕಾಸು ಸಚಿವಾಲಯ
azadi ka amrit mahotsav

ಕೇಂದ್ರ ಬಜೆಟ್ 2026–27 ರಲ್ಲಿ ಘೋಷಿಸಿದ್ದಂತೆ ಜಾಗತಿಕ ವ್ಯಾಪಾರ ಅಡಚಣೆಗಳಿಂದ ಉಂಟಾಗುವ ಆತಂಕಗಳನ್ನು ಪರಿಹರಿಸಲು ದೇಶೀಯ ಸುಂಕ ಪ್ರದೇಶದಲ್ಲಿ (ಡಿಟಿಎ) ತಯಾರಿಸಿದ ಸರಕುಗಳನ್ನು ರಿಯಾಯಿತಿ ಕಸ್ಟಮ್ಸ್ ಸುಂಕ ದರಗಳಲ್ಲಿ ಮಾರಾಟ ಮಾಡಲು ಎಸ್ ಇಝಡ್ ಗಳಲ್ಲಿನ ಅರ್ಹ ಘಟಕಗಳಿಗೆ ಸಿಬಿಐಸಿ ಒಂದು ಬಾರಿ ಪರಿಹಾರ ಕ್ರಮ ಪ್ರಕಟ


ಕಸ್ಟಮ್ಸ್ ಅಧಿಸೂಚನೆಯ ಮೂಲಕ 2026ರ ಏಪ್ರಿಲ್ 1 ರಿಂದ 2027ರ ಮಾರ್ಚ್ 31 ರವರೆಗೆ ಪರಿಹಾರವು ಜಾರಿಗೆ ಬರಲಿದ್ದು, 2025ರ ಮಾರ್ಚ್ 31 ಕಾರ್ಯಾಚರಣೆಯ ಎಸ್ ಇ ಝಡ್  ಘಟಕಗಳ ಅರ್ಹತೆಗೆ ಕಟ್-ಆಫ್ ದಿನಾಂಕ

ಪರಿಹಾರ ವಿಂಡೋದಡಿಯಲ್ಲಿ ತೆರವುಗೊಳಿಸಲಾದ ತಯಾರಿಸಿದ ಸರಕುಗಳಿಗೆ ಕನಿಷ್ಠ ಶೇ.20ರಷ್ಟು ಮೌಲ್ಯವರ್ಧನೆ ಕಡ್ಡಾಯ

ದೇಶೀಯ ಉದ್ಯಮವನ್ನು ರಕ್ಷಿಸಲು ಆಯ್ದ ಸೂಕ್ಷ್ಮ ವಲಯಗಳನ್ನು ಹೊರತುಪಡಿಸಿ ಪರಿಹಾರವು ರಫ್ತು ಹೆಚ್ಚಿನ ಗಮನ ಉಳಿಸಿಕೊಂಡಿದೆ; ಡಿಟಿಎ ಮಾರಾಟವು ಹಿಂದಿನ ಮೂರು ಹಣಕಾಸು ವರ್ಷಗಳಲ್ಲಿ ಹಿಂದಿನ ಗರಿಷ್ಠ ರಫ್ತು ಕಾರ್ಯಕ್ಷಮತೆಯ ಶೇ.30 ಕ್ಕೆ ಸೀಮಿತ

ಪ್ರಕಟಣಾ ದಿನಾಂಕ: 01 APR 2026 2:05PM by PIB Bengaluru

ಕೇಂದ್ರ ಬಜೆಟ್ 2026-27ರ ಘೋಷಣೆಯ ಅನುಸಾರವಾಗಿ, ಜಾಗತಿಕ ವ್ಯಾಪಾರ ಅಡಚಣೆಗಳಿಂದಾಗಿ ವಿಶೇಷ ಆರ್ಥಿಕ ವಲಯಗಳಲ್ಲಿನ (ಎಸ್ ಇ ಝಡ್‌) ಉತ್ಪಾದನಾ ಘಟಕಗಳು ಎದುರಿಸುತ್ತಿರುವ ಆತಂಕಗಳನ್ನು ಪರಿಹರಿಸಲು ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ಸ್ ಕೇಂದ್ರೀಯ ಮಂಡಳಿ (ಸಿಬಿಐಸಿ) ಇಂದು ಎಸ್ ಇ ಝಡ್ (SEZ) ಗಳಲ್ಲಿನ ಅರ್ಹ ಉತ್ಪಾದನಾ ಘಟಕಗಳಿಂದ ದೇಶೀಯ ಸುಂಕ ಪ್ರದೇಶಕ್ಕೆ (ಡಿಟಿಎ) ರಿಯಾಯಿತಿ ದರಗಳಲ್ಲಿ ಮಾರಾಟ ಮಾಡಲು ಅನುಕೂಲವಾಗುವಂತೆ ವಿಶೇಷ ಒಂದು-ಬಾರಿ ಪರಿಹಾರ ಕ್ರಮವನ್ನು ಪರಿಚಯಿಸಿದೆ.

ಎಸ್ ಇಝಡ್‌ ಘಟಕಗಳು ಡಿಟಿಎ ಗೆ ತೆರವುಗೊಳಿಸಿದ ಉತ್ಪಾದಿತ ಸರಕುಗಳಿಗೆ ಕಸ್ಟಮ್ಸ್ ಕಾಯ್ದೆ 1962 ರ ಸೆಕ್ಷನ್ 25 ರ ಅಡಿಯಲ್ಲಿ ಹೊರಡಿಸಲಾದ ವಿನಾಯಿತಿ ಅಧಿಸೂಚನೆಯ ಮೂಲಕ ಕೇಂದ್ರ ಬಜೆಟ್ ಘೋಷಣೆಯನ್ನು ಜಾರಿಗೆ ತರಲಾಗುತ್ತಿದೆ ಮತ್ತು ಇದು 2026ರ ಏಪ್ರಿಲ್ 1 ರಿಂದ 2027ರ ಮಾರ್ಚ್ 31 ರವರೆಗೆ ಜಾರಿಯಲ್ಲಿರುತ್ತದೆ (ಅಧಿಸೂಚನೆ ಸಂಖ್ಯೆ 11/2026- ಕಸ್ಟಮ್ಸ್ ದಿನಾಂಕ 31.03.2026).

ಈ ಪರಿಹಾರ ವಿಂಡೋದ ಅಡಿಯಲ್ಲಿ ಅರ್ಹ ಎಸ್ ಇಝಡ್‌  ಘಟಕಗಳಿಗೆ ರಿಯಾಯಿತಿ ದರಗಳನ್ನು ನಿರ್ಧರಿಸುವಾಗ ಡಿಟಿಎ ಯಲ್ಲಿ ಕಾರ್ಯನಿರ್ವಹಿಸುವ ಘಟಕಗಳಿಗೆ ಸಮಾನ ಅವಕಾಶವನ್ನು ಖಚಿತಪಡಿಸಿಕೊಳ್ಳಲು ಸೂಕ್ತ ಕಾಳಜಿ ವಹಿಸಲಾಗಿದೆ.

ಈ ಪರಿಹಾರ ವಿಂಡೋದಲ್ಲಿ, ಈ ಕೆಳಗಿನ ವಿವರಗಳ ಪ್ರಕಾರ ಅಧಿಸೂಚಿತ ಸರಕುಗಳಿಗೆ ಕಸ್ಟಮ್ಸ್ ಸುಂಕದ ರಿಯಾಯಿತಿ ದರಗಳನ್ನು ನಿಗದಿಪಡಿಸಲಾಗಿದೆ:

ಹಾಲಿ ಇರುವ ಸೀಮಾ ಸುಂಕ (ಬಿಸಿಡಿ, ಎಐಡಿಸಿ, ಆರೋಗ್ಯ ಸೆಸ್‌ ಸೇರಿ)

ಪರಿಹಾರ ಅವಕಾಶದಡಿಯಲ್ಲಿ ಅರ್ಹ ಎಸ್ ಇ ಝಡ್ ಘಟಕಗಳಿಗೆ ರಿಯಾಯಿತಿ ದರ

ಶೇ.7.5

ಶೇ.6.5

ಶೇ.10

ಶೇ.9

ಶೇ.12.5, ಶೇ.15

ಶೇ.10

ಶೇ.20

ಶೇ.12.5

ಶೇ.20 ರಿಂದ ಶೇ.30 ರವರೆಗೆ

ಶೇ.15

ಶೇ.30 ರಿಂದ ಶೇ.40 ರ ನಡುವೆ

ಶೇ.20

ಈ ಪರಿಹಾರ ಅವಕಾಶದಡಿಯಲ್ಲಿ ಪ್ರಯೋಜನವನ್ನು ಪಡೆಯುವ ಎಸ್ ಇ ಝಡ್  ಘಟಕಗಳು 31.03.2025 ರಂದು ಅಥವಾ ಅದಕ್ಕೂ ಮೊದಲು ಸರಕುಗಳ ಉತ್ಪಾದನೆಯನ್ನು ಆರಂಭಿಸಿರಬೇಕು.

ಈ ಪರಿಹಾರ ಅವಕಾಶದಡಿಯಲ್ಲಿ ಪ್ರಯೋಜನವನ್ನು ಪಡೆಯುವ ಅಂತಹ ಘಟಕಗಳು ತಯಾರಿಸಿದ ಸರಕುಗಳು ಇನ್‌ಪುಟ್‌ಗಳ ಮೇಲೆ ಕನಿಷ್ಠಶೇ. 20% ಮೌಲ್ಯವರ್ಧನೆಗೆ ಒಳಗಾಗಿರಬೇಕು.

SEZ ಘಟಕಗಳ ರಫ್ತಿಗೆ ಒತ್ತು ಉಳಿಯುತ್ತದೆ. ಅರ್ಹ SEZ ಘಟಕಗಳಿಂದ ರಿಯಾಯಿತಿ ದರದಲ್ಲಿ DTA ಮಾರಾಟವು ಹಿಂದಿನ ಮೂರು ಹಣಕಾಸು ವರ್ಷಗಳಲ್ಲಿ ರಫ್ತಿನ ಅತ್ಯಧಿಕ ವಾರ್ಷಿಕ FOB ಮೌಲ್ಯದ ಶೇ.30 ಕ್ಕಿಂತ ಹೆಚ್ಚಿರಬಾರದು.

ಈ ಪರಿಹಾರ ಅವಕಾಶವನ್ನು CBIC ಯ ಸ್ವಯಂಚಾಲಿತ ವ್ಯವಸ್ಥೆಯ ಮೂಲಕ ಕಾರ್ಯಗತಗೊಳಿಸಲಾಗುತ್ತದೆ ಮತ್ತು ಈ ಪರಿಹಾರ ವಿಂಡೋದ ಅಡಿಯಲ್ಲಿ DTA ಕ್ಲಿಯರೆನ್ಸ್‌ಗಳಿಗಾಗಿ ಪ್ರವೇಶ ಬಿಲ್‌ಗಳ ಮೌಲ್ಯಮಾಪನವನ್ನು ಮುಖರಹಿತ ಮೌಲ್ಯಮಾಪನ ಕಾರ್ಯವಿಧಾನದ ಅಡಿಯಲ್ಲಿ ಮಾಡಲಾಗುತ್ತದೆ.

ಅಲ್ಲದದೆ, ಕೆಲವು ಸೂಕ್ಷ್ಮತೆಗಳ ಕಾರಣದಿಂದಾಗಿ ಮತ್ತು ದೇಶೀಯ ಉದ್ಯಮವನ್ನು ರಕ್ಷಿಸಲು ಕೆಲವು ವಲಯಗಳನ್ನು ಈ ಪರಿಹಾರ ಅವಕಾಶದಿಂದ ಹೊರಗಿಡಲಾಗಿದೆ.

ಹೆಚ್ಚಿನ ಸ್ಪಷ್ಟೀಕರಣಕ್ಕಾಗಿ ವಿವರವಾದ ಪ್ರಶ್ನೋತ್ತರ (FAQ) ಗಳನ್ನು ಸಹ ನೀಡಲಾಗುತ್ತಿದೆ.

CLICK HERE FOR NOTIFICATION No. 11/2026-CUSTOMS

 

*****


(ಪ್ರಕಟಣೆ ಐ.ಡಿ.: 2247732) ವಿಸಿಟರ್ ಕೌಂಟರ್ : 3
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Marathi , Gujarati