ರಾಷ್ಟ್ರಪತಿಗಳ ಕಾರ್ಯಾಲಯ
azadi ka amrit mahotsav

ವಿಶ್ವ ಕ್ಷಯರೋಗ ದಿನದ ಮುನ್ನಾದಿನದಂದು ಭಾರತದ ರಾಷ್ಟ್ರಪತಿಗಳಿಂದ ಸಂದೇಶ

प्रविष्टि तिथि: 23 MAR 2026 4:38PM by PIB Bengaluru

ವಿಶ್ವ ಕ್ಷಯರೋಗ ದಿನವನ್ನು ಪ್ರತಿ ವರ್ಷ ಮಾರ್ಚ್ 24 ರಂದು ಆಚರಿಸಲಾಗುತ್ತದೆ. ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಕ್ಷಯರೋಗ ದಿನದ ಮುನ್ನಾದಿನವಾದ ಇಂದು ತಮ್ಮ ಸಂದೇಶದಲ್ಲಿ ಹೀಗೆ ಹೇಳಿದ್ದಾರೆ:-

"ಕ್ಷಯರೋಗ (ಟ್ಯೂಬರ್ ಕ್ಯುಲಾಸಿಸಿ - ಟಿಬಿ) ಒಡ್ಡಿರುವ ಜಾಗತಿಕ ಸವಾಲಿನ ಬಗ್ಗೆ ಜಾಗೃತಿ ಮೂಡಿಸಲು ಮಾರ್ಚ್ 24 ರಂದು 'ವಿಶ್ವ ಕ್ಷಯರೋಗ ದಿನ' ಆಚರಿಸಲಾಗುತ್ತಿದೆ ಎಂದು ತಿಳಿದು ನನಗೆ ಸಂತಸವಾಯಿತು.

ಕ್ಷಯರೋಗವು ಸಾರ್ವಜನಿಕ ಆರೋಗ್ಯಕ್ಕೆ ಗಮನಾರ್ಹ ಸವಾಲನ್ನು ಒಡ್ಡುತ್ತಲೇ ಇದ್ದು ಪ್ರಪಂಚದಾದ್ಯಂತ ಲಕ್ಷಾಂತರ ಜೀವಗಳ ಮೇಲೆ ಪರಿಣಾಮ ಬೀರುತ್ತಿದೆ. ಆದಾಗ್ಯೂ, ಕ್ಷಯರೋಗ ಮುಕ್ತ ಭಾರತ ಅಭಿಯಾನವು ಆರಂಭಿಕ ರೋಗ ಪತ್ತೆ ವಿಸ್ತರಿಸುವಲ್ಲಿ, ಉಚಿತ ಚಿಕಿತ್ಸೆ ಖಚಿತಪಡಿಸುವಲ್ಲಿ, ಪೌಷ್ಠಿಕಾಂಶದ ಬೆಂಬಲ ಬಲಪಡಿಸುವಲ್ಲಿ ಮತ್ತು ರೋಗಿಗಳ ಆರೈಕೆ ಸುಧಾರಿಸುವಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದೆ. ಈ ಪ್ರಗತಿಯು ರಾಷ್ಟ್ರೀಯ ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮದ ಶಕ್ತಿ ಮತ್ತು ನಮ್ಮ ಹಂಚಿತ ಬದ್ಧತೆಯನ್ನು ಒತ್ತಿಹೇಳುತ್ತದೆ.

ಕ್ಷಯರೋಗವನ್ನು ಶಾಶ್ವತವಾಗಿ ನಿರ್ಮೂಲನೆ ಮಾಡುವ ಸಾಮೂಹಿಕ ಸಂಕಲ್ಪದೊಂದಿಗೆ ಎಲ್ಲಾ ಸಂಬಂಧಿತರು ಒಟ್ಟಾಗಿ ಕಾರ್ಯನಿರ್ವಹಿಸುವಂತೆ ನಾನು ಮನವಿ ಮಾಡುತ್ತೇನೆ”.

ರಾಷ್ಟ್ರಪತಿಗಳ ಸಂದೇಶವನ್ನು ನೋಡಲು ದಯವಿಟ್ಟು ಇಲ್ಲಿ ಕ್ಲಿಕ್ ಮಾಡಿ –


(रिलीज़ आईडी: 2244046) आगंतुक पटल : 71
इस विज्ञप्ति को इन भाषाओं में पढ़ें: English , Urdu , Marathi , हिन्दी , Bengali , Bengali-TR , Gujarati