ಗೃಹ ವ್ಯವಹಾರಗಳ ಸಚಿವಾಲಯ
ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಶ್ರೀ ಗುರು ಹರಗೋವಿಂದ ಸಾಹಿಬ್ ಅವರ *ಜ್ಯೋತಿ-ಜ್ಯೋತ್* ದಿವಸದ ಸಂದರ್ಭದಲ್ಲಿ ಅವರಿಗೆ ವಿನಮ್ರ ಗೌರವ ಸಲ್ಲಿಸಿದ್ದಾರೆ
'ಸಂತ-ಸೈನಿಕ' ಸಂಪ್ರದಾಯವನ್ನು ಸ್ಥಾಪಿಸಿದ ಶ್ರೀ ಗುರು ಹರಗೋವಿಂದ ಸಾಹಿಬ್ ಜಿ ಅವರು ಸಿಖ್ ಧರ್ಮವನ್ನು ಮಾನವೀಯತೆಯ ರಕ್ಷಣೆಗಾಗಿ ಪ್ರಬಲ ಸಾಧನವಾಗಿ ಬಳಸಿದ್ದಾರೆ
ಅವರು ಅಕಾಲ್ ತಖ್ತ್ ಸಂಸ್ಥೆಯ ಮೂಲಕ ಸಿಖ್ ನಂಬಿಕೆಯನ್ನು ಬಲಪಡಿಸಿ, ಹಿಂದೂ-ಸಿಖ್ ಏಕತೆಯ ಆಳವಾದ ಸಂದೇಶವನ್ನು ಸಾರಿದ್ದಾರೆ
ಪ್ರಕಟಣಾ ದಿನಾಂಕ:
23 MAR 2026 11:57AM by PIB Bengaluru
ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಶ್ರೀ ಗುರು ಹರಗೋವಿಂದ ಸಾಹಿಬ್ ಅವರ *ಜ್ಯೋತಿ-ಜ್ಯೋತ್* ದಿವಸ್ ಸಂದರ್ಭದಲ್ಲಿ ಅವರಿಗೆ ವಿನಮ್ರ ಗೌರವವನ್ನು ಸಲ್ಲಿಸಿದರು.
X ವೇದಿಕೆಯಲ್ಲಿ ಪೋಸ್ಟ್ ಮಾಡಿದ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು, ಸಿಖ್ ನಂಬಿಕೆಯ ಆರನೇ ಗುರುವಾದ ಶ್ರೀ ಗುರು ಹರಗೋವಿಂದ ಸಾಹಿಬ್ ಅವರು 'ಸಂತ-ಸೈನಿಕ' ಸಂಪ್ರದಾಯವನ್ನು ಸ್ಥಾಪಿಸಿ, ಆ ಮೂಲಕ ಸಿಖ್ ಧರ್ಮವನ್ನು ಮಾನವೀಯತೆಯ ರಕ್ಷಣೆಗಾಗಿ ಪ್ರಬಲ ಸಾಧನವಾಗಿ ಬಳಸಿದ್ದಾರೆ ಎಂದು ಹೇಳಿದರು. ಶ್ರೀ ಗುರು ಹರಗೋವಿಂದ ಸಾಹಿಬ್ ಅವರು ಅಕಾಲ್ ತಖ್ತ್ ಸಂಸ್ಥೆಯ ಮೂಲಕ ಸಿಖ್ ನಂಬಿಕೆಯನ್ನು ಬಲಪಡಿಸಿ, ಮೊಘಲ್ ಸೆರೆಯಿಂದ ಹಿಂದೂಗಳನ್ನು ಬಿಡುಗಡೆ ಮಾಡುವ ಮೂಲಕ ಹಿಂದೂ-ಸಿಖ್ ಏಕತೆಯ ಆಳವಾದ ಸಂದೇಶವನ್ನು ನೀಡಿದರು.
*****
(ಪ್ರಕಟಣೆ ಐ.ಡಿ.: 2243850)
ವಿಸಿಟರ್ ಕೌಂಟರ್ : 4