ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ದೇವಿ ಸ್ಕಂದಮಾತೆಯ ದೈವಿಕ ಅನುಗ್ರಹವನ್ನು ತಿಳಿಸುವ ಸಂಸ್ಕೃತ ಸುಭಾಷಿತ ಹಂಚಿಕೊಂಡಿರುವ ಪ್ರಧಾನಮಂತ್ರಿ

प्रविष्टि तिथि: 23 MAR 2026 8:27AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸ್ಕಂದಮಾತೆಯ ದೈವಿಕ ಅನುಗ್ರಹವನ್ನು ವಿವರಿಸುವ ಮತ್ತು ಎಲ್ಲರ ಯೋಗಕ್ಷೇಮಕ್ಕಾಗಿ ಆಕೆಯ ದೈವಿಕ ಆಶೀರ್ವಾದವನ್ನು ಕೋರುವ ಸಂಸ್ಕೃತ ಸುಭಾಷಿತವನ್ನು ಇಂದು ಹಂಚಿಕೊಂಡಿದ್ದಾರೆ.

ಪ್ರಧಾನಮಂತ್ರಿಗಳು ಎಕ್ಸ್ ನಲ್ಲಿ ಹೀಗೆ ಬರೆದಿದ್ದಾರೆ:
“ದೇವಿ ಸ್ಕಂದ ಮಾತೆಯನ್ನು ಕೈಮುಗಿದು ಪ್ರಾರ್ಥಿಸುವೆ! ಮಮತಾಮಯಿ ದೇವಿಯು ವಾತ್ಸಲ್ಯ ಮತ್ತು ಆಶೀರ್ವಾದದಿಂದ ಎಲ್ಲರ ಜೀವನ ಬೆಳಗಿಸಲಿ." 

ಸಿಂಹಾಸನಗತಾ ನಿತ್ಯಂ ಪದ್ಮಾಶ್ರಿತಕರದ್ವಯಾ|
ಶುಭದಾऽಸ್ತು ಸದಾ ದೇವಿ ಸ್ಕಂದಮಾತಾ ಯಶಸ್ವಿನೀ||

सिंहासनगता नित्यं पद्माश्रितकरद्वया।
शुभदाऽस्तु सदा देवी स्कन्दमाता यशस्विनी॥"

ಸಿಂಹದ ಮೇಲೆ ಸದಾ ಆಸೀನಳಾಗಿರುವ, ಎರಡೂ ಕೈಗಳಲ್ಲಿ ಕಮಲದ ಹೂವುಗಳನ್ನು ಹಿಡಿದಿರುವ ಮಹಿಮಾನ್ವಿತ ದೇವಿ ಸ್ಕಂದಮಾತೆಯು ಯಾವಾಗಲೂ ನಮಗೆ ಶುಭ ಫಲವನ್ನು ದಯಪಾಲಿಸಲಿ.

 

*****


(रिलीज़ आईडी: 2243822) आगंतुक पटल : 62
इस विज्ञप्ति को इन भाषाओं में पढ़ें: English , Urdu , Marathi , हिन्दी , Bengali , Bengali-TR , Assamese , Manipuri , Punjabi , Gujarati , Odia , Tamil , Telugu , Malayalam