ರೈಲ್ವೇ ಸಚಿವಾಲಯ
ಭಾರತೀಯ ರೈಲ್ವೆಯು ಸುರಕ್ಷತೆ ಮತ್ತು ಕಾರ್ಯಾಚರಣೆಯ ದಕ್ಷತೆಯನ್ನು ಹೆಚ್ಚಿಸಲು ಸುಧಾರಿತ ಕೃತಕ ಬುದ್ಧಿಮತ್ತೆ (ಎಐ) ಮತ್ತು ಯಂತ್ರ ಕಲಿಕಾ (ಮಷಿನ್ ಲರ್ನಿಂಗ್) ಸಾಧನಗಳನ್ನು ನಿಯೋಜಿಸಿದೆ
ಮಂಜು ಮತ್ತು ಪ್ರತಿಕೂಲ ಹವಾಮಾನ ಪರಿಸ್ಥಿತಿಗಳಲ್ಲಿ ಗೋಚರತೆ ಹೆಚ್ಚಿಸುವ ಮೂಲಕ ಲೋಕೊ ಪೈಲಟ್‌ಗಳಿಗೆ ನೆರವಾಗಲು ʻತ್ರಿ-ನೇತ್ರʼ ವ್ಯವಸ್ಥೆಯನ್ನು ʻಆರ್‌ಡಿಎಸ್ಒʼ ಅಭಿವೃದ್ಧಿಪಡಿಸುತ್ತಿದೆ
ಚಕ್ರಗಳು ಮತ್ತು ಬೇರಿಂಗ್ ಸುಸ್ಥಿತಿಯ ಮೇಲೆ ನೈಜ ಸಮಯದಲ್ಲಿ ನಿಗಾ ಇಡಲು 24 ʻವ್ಹೀಲ್ ಇಂಪ್ಯಾಕ್ಟ್ ಲೋಡ್ ಡಿಟೆಕ್ಟರ್ (ವೈಲ್ಡ್) ವ್ಯವಸ್ಥೆಗಳು ಮತ್ತು 25 ʻಆನ್‌ಲೈನ್ ರೋಲಿಂಗ್ ಸ್ಟಾಕ್ ವ್ಯವಸ್ಥೆಗಳನ್ನು (ಒಎಂಆರ್‌ಎಸ್) ಅಳವಡಿಸಲಾಗಿದೆ
ʻಮಷಿನ್ ವಿಷನ್ ಇನ್ಸ್ಪೆಕ್ಷನ್ ಸಿಸ್ಟಮ್ʼ(ಎಂವಿಐಎಸ್) ಅನ್ನು ಪ್ರಾಯೋಗಿಕ ಆಧಾರದ ಮೇಲೆ ನಿಯೋಜಿಸಲಾಗಿದೆ;
ಈಶಾನ್ಯ ಗಡಿನಾಡು ರೈಲ್ವೆಯಲ್ಲಿ 3, ʻಡಿಎಫ್‌ಸಿಸಿಐಎಲ್ʼನಲ್ಲಿ 2 ಮತ್ತು ಆಗ್ನೇಯ ಮಧ್ಯ ರೈಲ್ವೆಯಲ್ಲಿ 1 ʻಎಂವಿಐಎಸ್ʼ ನಿಯೋಜಿಸಲಾಗಿದೆ
ಕೃತಕ ಬುದ್ಧಿಮತ್ತೆ ಆಧರಿತವಾದ ಹಳಿ ತಪಾಸಣೆ ಮತ್ತು ಮೇಲ್ವಿಚಾರಣೆಗಾಗಿ 3 ʻಸಮಗ್ರ ಹಳಿ ನಿಗಾ ವ್ಯವಸ್ಥೆʼ ಗಳನ್ನು (ಐಟಿಎಂಎಸ್) ನಿಯೋಜಿಸಲಾಗಿದೆ
ಡ್ರೋನ್‌ಗಳ ಮೂಲಕ ʻಓವರ್‌ಹೆಡ್ ಉಪಕರಣʼಗಳ ಶಾಖದ ಮೇಲ್ವಿಚಾರಣೆಯನ್ನು ರಾಯ್ಪುರ ವಿಭಾಗದಲ್ಲಿ ಪ್ರಾಯೋಗಿಕವಾಗಿ ನಡೆಸಲಾಗಿದೆ; ʻಐಐಟಿ ಮದ್ರಾಸ್ʼ ಸಹಯೋಗದೊಂದಿಗೆ ಕೃತಕ ಬುದ್ಧಿಮತ್ತೆ ಆಧಾರಿತ ವೈಮಾನಿಕ ತಪಾಸಣೆ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ
ಕೃತಕ ಬುದ್ಧಿಮತ್ತೆ ಆಧರಿತ ದೊಡ್ಡಮಟ್ಟದ ಆವಿಷ್ಕಾರಗಳನ್ನು ತ್ವರಿತಗೊಳಿಸಲು ʻರೈಲ್ ಟೆಕ್ ನೀತಿʼ ಪೋರ್ಟಲ್ ಅಭಿವೃದ್ಧಿಪಡಿಸಲಾಗಿದೆ
ಪ್ರಕಟಣಾ ದಿನಾಂಕ:
12 MAR 2026 12:39PM by PIB Bengaluru
ಭಾರತೀಯ ರೈಲ್ವೆಯಲ್ಲಿ (ಐಆರ್) ತಾಂತ್ರಿಕ ಸುಧಾರಣೆ ಎನ್ನುವುದು ನಿರಂತರ ಪ್ರಕ್ರಿಯೆಯಾಗಿದೆ. ಭಾರತೀಯ ರೈಲ್ವೆಯಲ್ಲಿ ನಿಯೋಜಿಸಲಾದ / ಪ್ರಾಯೋಗಿಕವಾಗಿ ಅಳವಡಿಸಲಾದ ಕೆಲವು ಪ್ರಮುಖ ತಂತ್ರಜ್ಞಾನಗಳು ಈ ಕೆಳಗಿನಂತಿವೆ:
- ಮಷಿನ್ ವಿಷನ್ ಇನ್ಸ್ಪೆಕ್ಷನ್ ಸಿಸ್ಟಮ್ (ಎಂವಿಐಎಸ್): ಇದು ಕೃತಕ ಬುದ್ಧಿಮತ್ತೆ(ಎಐ)/ಯಂತ್ರ ಕಲಿಕೆ (ಮಷಿನ್ ಲರ್ನಿಂಗ್-ಎಂಎಲ್) ಆಧಾರಿತ ವ್ಯವಸ್ಥೆಯಾಗಿದ್ದು, ಚಲಿಸುತ್ತಿರುವ ರೈಲುಗಳಲ್ಲಿ ಯಾವುದೇ ನೇತಾಡುತ್ತಿರುವ, ಸಡಿಲವಾದ ಅಥವಾ ಕಾಣೆಯಾದ ಸಲಕರಣೆಗಳನ್ನು ಪತ್ತೆಹಚ್ಚಿ ಎಚ್ಚರಿಕೆಗಳನ್ನು ನೀಡುತ್ತದೆ. ಇಂತಹ ಮೂರು (03) ʻಎಂವಿಐʼಗಳನ್ನು ಈಶಾನ್ಯ ಗಡಿನಾಡು ರೈಲ್ವೆಯಲ್ಲಿ, ಎರಡು (02) ʻಎಂವಿಐʼಗಳನ್ನು ʻಡೆಡಿಕೇಟೆಡ್ ಫ್ರೈಟ್ ಕಾರಿಡಾರ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ʼ (ಡಿಎಫ್‌ಸಿಸಿಐಎಲ್) ಮತ್ತು ಒಂದು (01) ವ್ಯವಸ್ಥೇಯನ್ನು ಆಗ್ನೇಯ ಮಧ್ಯ ರೈಲ್ವೆಯಲ್ಲಿ ಪ್ರಾಯೋಗಿಕ ಆಧಾರದ ಮೇಲೆ ಅಳವಡಿಸಲಾಗಿದೆ. ಸರಕು ಸಾಗಣೆ ರೈಲುಗಳಲ್ಲಿ ಇವುಗಳನ್ನು ನಿಯೋಜಿಸಲಾಗಿದೆ. ಇದಲ್ಲದೆ, ಸರಕು ಸಾಗಣೆ ರೈಲುಗಳಿಗಾಗಿ ಭಾರತೀಯ ರೈಲ್ವೆ ಜಾಲದಲ್ಲಿ ನಾಲ್ಕು (04) ʻಎಂವಿಐʼಗಳನ್ನು ಅಳವಡಿಸಲು ಭಾರತೀಯ ರೈಲ್ವೆ ಮತ್ತು ʻಡಿಎಫಸಿಸಿಐಎಲ್ʼ ನಡುವೆ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಅಲ್ಲದೆ,
ʻರಿಸರ್ಚ್ ಡಿಸೈನ್ಸ್ ಅಂಡ್ ಸ್ಟ್ಯಾಂಡರ್ಡ್ಸ್ ಆರ್ಗನೈಸೇಶನ್ʼ(ಆರ್‌ಡಿಎಸ್ಒ) ಸಂಸ್ಥೆಯು ಉದ್ಯಮದ ಸಹಯೋಗದೊಂದಿಗೆ ಬೋಗಿಗಳಿಗೆ (ರೋಲಿಂಗ್ ಸ್ಟಾಕ್) ʻಎಂವಿಐಎಸ್ʼ ಅಭಿವೃದ್ಧಿಯನ್ನು ಕೈಗೆತ್ತಿಕೊಂಡಿದ್ದು, ಈ ಸಂಬಂಧ ʻಆಸಕ್ತಿ ಅಭಿವ್ಯಕ್ತಿʼ (ಇಒಐ) ಪತ್ರವನ್ನು ಸಲ್ಲಿಸಿದೆ.
- ವ್ಹೀಲ್ ಇಂಪ್ಯಾಕ್ಟ್ ಲೋಡ್ ಡಿಟೆಕ್ಟರ್ (ವೈಲ್ಡ್): ಇದು ರೈಲ್ವೆ ಮಾರ್ಗದ ತಪಾಸಣಾ ವ್ಯವಸ್ಥೆಯಾಗಿದ್ದು, ಇದು ಬೋಗಿಗಳಲ್ಲಿನ (ರೋಲಿಂಗ್ ಸ್ಟಾಕ್) ದೋಷಯುಕ್ತ ಚಕ್ರವನ್ನು ಗುರುತಿಸುವ ನಿಟ್ಟಿನಲ್ಲಿ ಹಳಿಯ ಮೇಲೆ ಚಕ್ರದ ಪ್ರಭಾವವನ್ನು ಅಳೆಯುತ್ತದೆ. ಅಂತಹ 24 ವ್ಯವಸ್ಥೆಗಳನ್ನು ಭಾರತೀಯ ರೈಲ್ವೆಯಲ್ಲಿ ಅಳವಡಿಸಲಾಗಿದೆ.
- ಬೋಗಿಗಳ ಆನ್‌ಲೈನ್ ಮೇಲ್ವಿಚಾರಣೆ (ಒಎಂಆರ್‌ಎಸ್): ಇದು ಸಹ ಒಂದು ರೈಲ್ವೆ ಮಾರ್ಗದ ತಪಾಸಣಾ ವ್ಯವಸ್ಥೆಯಾಗಿದ್ದು, ಇದು ಬೋಗಿಗಳ ಬೇರಿಂಗ್ ಮತ್ತು ಚಕ್ರಗಳ ಸುಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತದೆ. ಅಂತಹ 25 ವ್ಯವಸ್ಥೆಗಳನ್ನು ಭಾರತೀಯ ರೈಲ್ವೆಯಲ್ಲಿ ಅಳವಡಿಸಲಾಗಿದೆ. ಈ ಪೈಕಿ ಒಂದು (01) ʻಒಎಂಆರ್‌ಎಸ್ʼ ಅನ್ನು ದಕ್ಷಿಣ ಮಧ್ಯ ರೈಲ್ವೆಯ ಸಿರ್ಪುರ್ ಕಾಘ್ ನಗರ / ಸಿಕಂದರಾಬಾದ್ ವಿಭಾಗದಲ್ಲಿ ನಿಯೋಜಿಸಲಾಗಿದೆ.
- ಸಮಗ್ರ ಹಳಿ ಮೇಲ್ವಿಚಾರಣಾ ವ್ಯವಸ್ಥೆ(ಐಟಿಎಂಎಸ್): ರೈಲ್ವೆ ಹಳಿಗಳ ಸಮಗ್ರ ಪರಿಶೀಲನೆ ಮತ್ತು ಮೇಲ್ವಿಚಾರಣೆಗಾಗಿ ʻಐಟಿಎಂಎಸ್ʼ ಅನ್ನು ನಿಯೋಜಿಸಲಾಗಿದೆ. ಹಳಿಗಳು, ಸ್ಲೀಪರ್‌ಗಳು ಮತ್ತು ಕಟ್ಟುಗಳಂತಹ ರೈಲ್ವೆ ಹಳಿ ಭಾಗಗಳಲ್ಲಿನ ದೋಷಗಳನ್ನು ಮೇಲ್ವಿಚಾರಣೆ ಮಾಡಲು ಮತ್ತು ಪತ್ತೆಹಚ್ಚಲು ʻಐಟಿಎಂಎಸ್ʼ ನೆರವಾಗುತ್ತದೆ. ಇದಕ್ಕಾಗಿ ಇದು ʻಯಂತ್ರ ಕಲಿಕೆʼ ಮತ್ತು ʻಇಮೇಜ್ ಪ್ರೋಸೆಸಿಂಗ್ʼ ತಂತ್ರಜ್ಞಾನಗಳನ್ನು ಬಳಸುತ್ತದೆ. ಹಳಿಯ ತುರ್ತು ಮತ್ತು ಯೋಜಿತ ನಿರ್ವಹಣೆಗಾಗಿ ʻಐಟಿಎಂಎಸ್ʼನ ಡೇಟಾವನ್ನು ವಿಶ್ಲೇಷಿಸಲಾಗುತ್ತದೆ. ಪ್ರಸ್ತುತ ಟ್ರ್ಯಾಕ್ ರೆಕಾರ್ಡಿಂಗ್ ಮತ್ತು ಭಾರತೀಯ ರೈಲ್ವೆಯ ಹಳಿ ಮೇಲ್ವಿಚಾರಣೆಗಾಗಿ ಮೂರು (03) ʻಐಟಿಎಂಎಸ್ʼಗಳನ್ನು ನಿಯೋಜಿಸಲಾಗಿದೆ. ಇದು ಉತ್ತಮ ಟ್ರ್ಯಾಕ್ ನಿರ್ವಹಣಾ ಯೋಜನೆ, ವರ್ಧಿತ ಸುರಕ್ಷತೆ, ಟ್ರ್ಯಾಕ್ ಸ್ವತ್ತುಗಳ ಸುಧಾರಿತ ವಿಶ್ವಾಸಾರ್ಹತೆ ಮತ್ತು ಕಾರ್ಯಾಚರಣೆಯ ದಕ್ಷತೆಗೆ ಸಹಾಯ ಮಾಡುತ್ತದೆ.
- ಓವರ್ ಹೆಡ್ ಉಪಕರಣಗಳ ಡ್ರೋನ್ ಆಧಾರಿತ ಮೇಲ್ವಿಚಾರಣೆ: ಓವರ್ ಹೆಡ್ ಉಪಕರಣದ (ಒಎಚ್‌ಇ) ʻಥರ್ಮಲ್ ಇಮೇಜಿಂಗ್ʼ ಪಡೆಯುವ ಮೂಲಕ ಡ್ರೋನ್ ಆಧಾರಿತ ಮೇಲ್ವಿಚಾರಣೆಯನ್ನು ರಾಯ್ಪುರ ವಿಭಾಗದಲ್ಲಿ ಪ್ರಾಯೋಗಿಕವಾಗಿ ಕೈಗೆತ್ತಿಕೊಳ್ಳಲಾಗಿದೆ. ಇದಲ್ಲದೆ, ಐಐಟಿ ಮದ್ರಾಸ್ ಸಹಯೋಗದೊಂದಿಗೆ, ಭಾರತೀಯ ರೈಲ್ವೆಯು ಡ್ರೋನ್ ಆಧಾರಿತ ಓವರ್ ಹೆಡ್ ಉಪಕರಣಗಳ (ಒಎಚ್‌ಇ) ವೈಮಾನಿಕ ತಪಾಸಣೆಯನ್ನು ಅಭಿವೃದ್ಧಿಪಡಿಸಿದೆ, ಇದು ಎಐ / ಎಂಎಲ್ ಬಳಸಿ ಸೆರೆಹಿಡಿದ ಡೇಟಾವನ್ನು ಸಹ ವಿಶ್ಲೇಷಿಸುತ್ತದೆ.
- ತ್ರಿ-ನೇತ್ರ: ಮಂಜು, ಮಳೆ ಮತ್ತು ಪ್ರತಿಕೂಲ ಹವಾಮಾನದಲ್ಲಿ ಲೋಕೋ ಪೈಲಟ್‌ಗಳಿಗೆ ಸಹಾಯ ಮಾಡಲು ʻಆರ್‌ಡಿಎಸ್ಒʼ ಸಂಸ್ಥೆಯು ʻತ್ರಿ-ನೇತ್ರʼ (ಟೆರೈನ್ ಇಮೇಜಿಂಗ್ ಫಾರ್ ಲೋಕೊಮೊಟಿವ್ ಡ್ರೈವರ್ಸ್ - ಇನ್ಫ್ರಾರೆಡ್, ಎನ್‌ಹ್ಯಾನ್ಸ್‌ಡ್ ಆಪ್ಟಿಕಲ್ ಆಂಡ್ ರೇಂಜಿಂಗ್ ಡಿವೈಸ್ ಅಸಿಸ್ಟೆಡ್) ಅಭಿವೃದ್ಧಿಯನ್ನು ಕೈಗೆತ್ತಿಕೊಂಡಿದೆ. ಈ ವ್ಯವಸ್ಥೆಯು ಆಪ್ಟಿಕಲ್ ಕ್ಯಾಮೆರಾಗಳು, ಇನ್ಫ್ರಾ-ರೆಡ್ ಕ್ಯಾಮೆರಾ ಮತ್ತು ರೇಂಜಿಂಗ್ ಸಾಧನಗಳನ್ನು (ಉದಾ. ರಾಡಾರ್ / ಲಿಡಾರ್) ಮತ್ತು ʻಎಐʼ ಅನ್ನು ಒಳಗೊಂಡಿದೆ. ಲೋಕೊ ಪೈಲಟ್‌ಗಳಿಗೆ ಸಹಾಯ ಮಾಡಲು ನೈಜ-ಸಮಯದ, ಸುಧಾರಿತ ಗೋಚರತೆಯನ್ನು ಇದು ಒದಗಿಸುತ್ತದೆ.
ರೈಲ್ ಟೆಕ್ ನೀತಿ: ಇದಲ್ಲದೆ, ಕೃತಕ ಬುದ್ಧಿಮತ್ತೆ ಮತ್ತು ದತ್ತಾಂಶ ಆಧರಿತ ತಂತ್ರಜ್ಞಾನಗಳನ್ನು ಒಳಗೊಂಡಂತೆ ಕಡಿಮೆ ವೆಚ್ಚದ, ಕಾರ್ಯಗತಗೊಳಿಸಬಹುದಾದ ಮತ್ತು ದೊಡ್ಡ ಮಟ್ಟದ ಪರಿಹಾರಗಳ ಅಭಿವೃದ್ಧಿಯನ್ನು ಬೆಂಬಲಿಸಲು, 26.02.2026 ರಂದು ʻರೈಲ್ ಟೆಕ್ ಪಾಲಿಸಿʼ ಎಂಬ ಹೊಸ ನೀತಿಯನ್ನು ಭಾರತೀಯ ರೈಲ್ವೆಯು ಅಳವಡಿಸಿಕೊಂಡಿದೆ. ಜೊತೆಗೆ ನವೋದ್ಯಮಿಗಳು ಮತ್ತು ನವೋದ್ಯಮಗಳ ಭಾಗವಹಿಸುವಿಕೆಗೆ ಅನುಕೂಲವಾಗುವಂತೆ ಪೋರ್ಟಲ್ (https://railtech.indianrailways.gov.in) ಅನ್ನು ಪ್ರಾರಂಭಿಸಲಾಗಿದೆ.
ಉದ್ದೇಶಿತ ರೈಲು ತಂತ್ರಜ್ಞಾನ ನೀತಿಯು ಈ ಕೆಳಗಿನ ಪ್ರಮುಖ ಅಂಶಗಳನ್ನು ಒಳಗೊಂಡಿದೆ:
- ನಾವೀನ್ಯಕಾರರಿಂದ ಒಂದೇ ಹಂತದಲ್ಲಿ ವಿವರವಾದ ಪ್ರಸ್ತಾವನೆಗಳ ಸಲ್ಲಿಕೆ.
- ʻರೈಲ್ ಟೆಕ್ ಪೋರ್ಟಲ್ʼನಲ್ಲಿ ನಾವೀನ್ಯಕಾರರು ಸ್ವಯಂ-ಪ್ರಾರಂಭಿಸಿದ ಸವಾಲುಗಳಿಗೆ ಪ್ರಸ್ತಾವನೆಗಳನ್ನು ಸಲ್ಲಿಸಲು ಅವಕಾಶ.
- ಮೂಲಮಾದರಿ ಅಭಿವೃದ್ಧಿ ಮತ್ತು ಪ್ರಯೋಗಗಳಿಗೆ ಗರಿಷ್ಠ ಅನುದಾನದೊಂದಿಗೆ ಭಾರತೀಯ ರೈಲ್ವೆ ಮತ್ತು ನಾವಿನ್ಯಕಾರರ ನಡುವೆ 50:50 ವೆಚ್ಚ-ಹಂಚಿಕೆ ಆಧಾರದ ಮೇಲೆ ಧನಸಹಾಯಕ್ಕೆ ಅವಕಾಶ.
- ವಿಸ್ತೃತ ಪ್ರಯೋಗಗಳು ಅಥವಾ ಪ್ರಮಾಣ ಹೆಚ್ಚಳಕ್ಕೆ ಅನುದಾನ ನೀಡಲಾಗುವುದು
ಈ ಉದ್ದೇಶಿತ ನೀತಿಯು ಭಾರತೀಯ ರೈಲ್ವೆಯಲ್ಲಿ ಹೊಸ ತಂತ್ರಜ್ಞಾನಗಳನ್ನು ಶೀಘ್ರವಾಗಿ ಅಳವಡಿಸಿಕೊಳ್ಳಲು ಅನುಕೂಲ ಮಾಡಿಕೊಡುತ್ತದೆ.
ಕೇಂದ್ರ ರೈಲ್ವೆ, ವಾರ್ತಾ ಮತ್ತು ಪ್ರಸಾರ ಹಾಗೂ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರು ಲೋಕಸಭೆಯಲ್ಲಿ ಪ್ರಶ್ನೆಗಳಿಗೆ ಉತ್ತರಿಸುವ ವೇಳೆ ಈ ಮಾಹಿತಿಯನ್ನು ಒದಗಿಸಿದರು.
*****
(ಪ್ರಕಟಣೆ ಐ.ಡಿ.: 2238816)
ವಿಸಿಟರ್ ಕೌಂಟರ್ : 13