ವಾರ್ತಾ ಮತ್ತು ಪ್ರಸಾರ ಸಚಿವಾಲಯ
ಐತಿಹಾಸಿಕ ಜಾಗತಿಕ ಕೃತಕ ಬುದ್ದಿಮತ್ತೆ (ಎಐ) ಶೃಂಗಸಭೆ ಮುಕ್ತಾಯಗೊಂಡಿದೆ; ಕೃತಕ ಬುದ್ಧಿಮತ್ತೆ ನಾವೀನ್ಯತೆ, ಆಡಳಿತ, ಪಾಲುದಾರಿಕೆಗಳು ಮತ್ತು ಸಮಗ್ರ ಬೆಳವಣಿಗೆಗೆ ಭಾರತ ಜಾಗತಿಕ ಕೇಂದ್ರವಾಗಿ ದೃಢವಾಗಿ ಸ್ಥಾಪಿತವಾಗಿದೆ
ಭಾರತ ಕೃತಕ ಬುದ್ದಿಮತ್ತೆ (ಎಐ) ಇಂಪ್ಯಾಕ್ಟ್ ಎಕ್ಸ್ಪೋದ ಕುರಿತು ದಾರಿತಪ್ಪಿಸುವ ಹೇಳಿಕೆಯ ವಿರುದ್ಧ ಸರ್ಕಾರ ತ್ವರಿತ ಕ್ರಮ ಕೈಗೊಂಡಿದೆ; ಪ್ರದರ್ಶನಗಳು ಮತ್ತು ಅನುಸರಣೆಯ ಸ್ವರೂಪಕ್ಕೆ ಜವಾಬ್ದಾರರಾಗಿರುವ ಪ್ರದರ್ಶಕರನ್ನು ಗುರುತಿಸಿ ಸ್ಪಷ್ಟಪಡಿಸುತ್ತದೆ
ಪ್ರಕಟಣಾ ದಿನಾಂಕ:
11 MAR 2026 4:03PM by PIB Bengaluru
ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ದೃಷ್ಟಿಕೋನಕ್ಕೆ ಅನುಗುಣವಾಗಿ, ಕೇಂದ್ರ ಸರ್ಕಾರವು ತಂತ್ರಜ್ಞಾನದ ಅಭಿವೃದ್ಧಿ ಮತ್ತು ಬಳಕೆಯನ್ನು ಪ್ರಜಾಪ್ರಭುತ್ವಗೊಳಿಸುತ್ತಿದೆ. ನೈಜ ಜಗತ್ತಿನ ಸಮಸ್ಯೆಗಳನ್ನು ಪರಿಹರಿಸಲು ಮತ್ತು ಅಂತಿಮವಾಗಿ ವಿವಿಧ ವಲಯಗಳಲ್ಲಿ ಜೀವನವನ್ನು ಸುಧಾರಿಸಲು ಕೃತಕ ಬುದ್ಧಿಮತ್ತೆಯನ್ನು(ಎಐ) ಬಳಸಲಾಗುತ್ತಿದೆ. ಅದರ ಪ್ರಾಮುಖ್ಯತೆಯನ್ನು ಗುರುತಿಸಿ, ಕೃತಕ ಬುದ್ದಿಮತ್ತೆಯ(ಎಐ) ಜವಾಬ್ದಾರಿಯುತ ಮತ್ತು ಸಮಗ್ರ ಬಳಕೆಯನ್ನು ಉತ್ತೇಜಿಸಲು ಭಾರತ ಸರ್ಕಾರವು ಅಂತಾರಾಷ್ಟ್ರೀಯ ಪಾಲುದಾರರು, ಉದ್ಯಮ, ಶೈಕ್ಷಣಿಕ ಮತ್ತು ರಾಜ್ಯಗಳೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಿದೆ.
ಭಾರತವು ಫೆಬ್ರವರಿ 16–21, 2026 ರಿಂದ ನವದೆಹಲಿಯ ಭಾರತ್ ಮಂಟಪದಲ್ಲಿ ಭಾರತ-ಕೃತಕಬುದ್ದಿಮತ್ತೆ (ಎಐ) ಇಂಪ್ಯಾಕ್ಟ್ ಶೃಂಗಸಭೆ 2026 ಅನ್ನು ಆಯೋಜಿಸಿತ್ತು. ಮೊದಲ ಬಾರಿಗೆ, ಜಾಗತಿಕ ಕೃತಕಬುದ್ದಿಮತ್ತೆ (ಎಐ) ಶೃಂಗಸಭೆಯು ಜಾಗತಿಕ ದಕ್ಷಿಣದಲ್ಲಿ ನಡೆಯಿತು. ಈ ಬದಲಾವಣೆಯು ಹೆಚ್ಚು ಸಮಗ್ರ ಜಾಗತಿಕ ಕೃತಕಬುದ್ದಿಮತ್ತೆ ( ಎಐ) ಸಂವಾದದತ್ತ ವಿಶಾಲವಾದ ನಡೆಯನ್ನು ಸೂಚಿಸುತ್ತದೆ.
ಈ ಶೃಂಗಸಭೆಯು ಐತಿಹಾಸಿಕ ಜಾಗತಿಕ ಸಂಗಮವಾಗಿ ಮುಕ್ತಾಯಗೊಂಡಿತು, ಭಾರತವನ್ನು ಕೃತಕ ಬುದ್ಧಿಮತ್ತೆ ನಾವೀನ್ಯತೆ, ಆಡಳಿತ, ಪಾಲುದಾರಿಕೆ ಮತ್ತು ಸಮಗ್ರ ಬೆಳವಣಿಗೆಗೆ ಜಾಗತಿಕ ಕೇಂದ್ರವಾಗಿ ದೃಢವಾಗಿ ಸ್ಥಾಪಿಸಿತು. ಯಾವುದೇ ಅಭಿವೃದ್ಧಿಶೀಲ ರಾಷ್ಟ್ರವು ಆಯೋಜಿಸಿದ ಈ ರೀತಿಯ ಅತಿದೊಡ್ಡ ಐದು ದಿನಗಳ ಬೃಹತ್-ಕಾರ್ಯಕ್ರಮ ನಡೆಯಿತು. ಈ ಮೂಲಕ ಸರ್ಕಾರಗಳು, ಕೈಗಾರಿಕೆ, ಶೈಕ್ಷಣಿಕ, ನಾಗರಿಕ ಸಮಾಜ ಮತ್ತು ಸ್ಟಾರ್ಟ್ಅಪ್ ಗಳ ನಾಯಕರನ್ನು "ಸರ್ವಜನಹಿತಾಯ, ಸರ್ವಜನ ಸುಖಾಯ" (ಎಲ್ಲರಿಗೂ ಕಲ್ಯಾಣ, ಎಲ್ಲರ ಸಂತೋಷ) ಎಂಬ ವಿಷಯದ ಅಡಿಯಲ್ಲಿ ಒಟ್ಟುಗೂಡಿಸಿತು.
ಭಾರತ ಕೃತಕ ಬುದ್ದಿಮತ್ತೆ (ಎಐ) ಇಂಪ್ಯಾಕ್ಟ್ ಎಕ್ಸ್‌ಪೋವನ್ನು ಭಾರತ ಎಐ ಇಂಪ್ಯಾಕ್ಟ್ ಶೃಂಗಸಭೆ 2026ರ ಪಾರ್ಶ್ವ ಕಾರ್ಯಕ್ರಮವಾಗಿ ನಡೆಸಲಾಯಿತು, ಇದು ಜಾಗತಿಕ ಒಳಿತಿಗಾಗಿ ಭಾರತದ ಕೃತಕ ಬುದ್ದಿಮತ್ತೆಯ ಶಕ್ತಿಯನ್ನು ಪ್ರದರ್ಶಿಸುವ ವಿಷಯದೊಂದಿಗೆ ಹೊಂದಿಕೆಯಾಯಿತು. ವಿವಿಧ ಕೃತಕ ಬುದ್ದಿಮತ್ತೆ (ಎಐ) ಪರಿಸರ ವ್ಯವಸ್ಥೆಯ ಪಾಲುದಾರರಿಂದ ಆಸಕ್ತಿ ಅಭಿವ್ಯಕ್ತಿ (ಇಒಐ) ಮೂಲಕ - ಕಾರ್ಪೊರೇಟ್ ಗಳು, ಸ್ಟಾರ್ಟ್ಅಪ್ ಗಳು, ದೇಶ ಪ್ರಾತಿನಿಧ್ಯಗಳು, ಕೇಂದ್ರ ಸರ್ಕಾರ (ಸಚಿವ ಮತ್ತು ಇಲಾಖೆಗಳು), ರಾಜ್ಯ ಸರ್ಕಾರ, ಸಾರ್ವಜನಿಕ ವಲಯದ ಉದ್ಯಮಗಳು, ಶೈಕ್ಷಣಿಕ / ಸಂಶೋಧನಾ ಸಂಸ್ಥೆಗಳು ಮತ್ತು ಎನ್.ಜಿ.ಒ.ಗಳ ಭಾಗವಹಿಸುವಿಕೆಯನ್ನು ಆಹ್ವಾನಿಸಲಾಯಿತು. ಸ್ಥಳಾವಕಾಶದ ಲಭ್ಯತೆಗೆ ಒಳಪಟ್ಟು ಮತ್ತು ಎಕ್ಸ್ಪೋದ ಅನುಮೋದಿತ ವಿನ್ಯಾಸ ಚೌಕಟ್ಟಿನೊಳಗೆ ಮೊದಲು ಬಂದವರಿಗೆ ಮೊದಲು ಸೇವೆ ಸಲ್ಲಿಸುವ ಆಧಾರದ ಮೇಲೆ ಪ್ರದರ್ಶನ ಸ್ಥಳವನ್ನು ಹಂಚಲಾಯಿತು.
ಇಂಡಿಯಾ ಎಐ ಇಂಪ್ಯಾಕ್ಟ್ ಎಕ್ಸ್‌ಪೋದಲ್ಲಿ ಪ್ರದರ್ಶನಗಳ ಸ್ವರೂಪ, ಮಾಡಲಾದ ಪ್ರಾತಿನಿಧ್ಯಗಳು ಮತ್ತು ಅನ್ವಯವಾಗುವ ಕಾನೂನು ಮತ್ತು ನಿಯಂತ್ರಕ ಅವಶ್ಯಕತೆಗಳ ಅನುಸರಣೆಗೆ ಸಂಬಂಧಿಸಿದ ಜವಾಬ್ದಾರಿ ಆಯಾ ಪ್ರದರ್ಶಕರ ಮೇಲಿದೆ ಎಂಬುದು ಮುಖ್ಯವಾಗಿದೆ.
ಸರ್ಕಾರವು ಪ್ರದರ್ಶಕರ ನಕಲಿ ಹಕ್ಕನ್ನು ಜನಪ್ರಿಯಗೊಳಿಸಲು ಪ್ರಯತ್ನಿಸಲಿಲ್ಲ. ಸರ್ಕಾರವು ಸಂಬಂಧಪಟ್ಟ ಪ್ರದರ್ಶಕರ ವಿರುದ್ಧ ತ್ವರಿತ ಕ್ರಮ ಕೈಗೊಂಡಿತು.
ಕೇಂದ್ರ ವಾರ್ತಾ ಮತ್ತು ಪ್ರಸಾರ ಮತ್ತು ಸಂಸದೀಯ ವ್ಯವಹಾರಗಳ ರಾಜ್ಯ ಸಚಿವರಾದ ಡಾ. ಎಲ್. ಮುರುಗನ್ ಅವರು ಇಂದು ಲೋಕಸಭೆಯಲ್ಲಿ ಶ್ರೀ ಸಚ್ಚಿತಾನಂತಮ್ ಆರ್. ಅವರಿಗೆ ಲಿಖಿತ ಉತ್ತರದಲ್ಲಿ ಈ ಮಾಹಿತಿಯನ್ನು ಸಲ್ಲಿಸಿದ್ದಾರೆ.
*****
(ಪ್ರಕಟಣೆ ಐ.ಡಿ.: 2238271)
ವಿಸಿಟರ್ ಕೌಂಟರ್ : 19