ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಸಂಸ್ಕೃತ ಸುಭಾಷಿತಂ ಹಂಚಿಕೊಂಡ ಪ್ರಧಾನಮಂತ್ರಿ ಅವರು ದೃಢನಿಶ್ಚಯ, ಸಂಯಮ ಮತ್ತು ಆತ್ಮವಿಶ್ವಾಸದ ಮೌಲ್ಯಗಳನ್ನು ಉಲ್ಲೇಖಿಸಿದರು

प्रविष्टि तिथि: 09 MAR 2026 9:33AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಟಿ20 ಕ್ರಿಕೆಟ್ ವಿಶ್ವಕಪ್ ಗೆಲ್ಲುವ ಮೂಲಕ, ದೃಢನಿಶ್ಚಯ, ಸಂಯಮ ಮತ್ತು ಆತ್ಮವಿಶ್ವಾಸದ ಸಂಯೋಜನೆಯು ಜೀವನದ ಯಶಸ್ಸಿಗೆ ಕೀಲಿಕೈ ಎಂಬುದನ್ನು ಟೀಮ್ ಇಂಡಿಯಾ ತೋರಿಸಿದೆ ಎಂದು ಹೇಳಿದ್ದಾರೆ. ಸರಿಯಾದ ದಿಕ್ಕಿನಲ್ಲಿ ಕಠಿಣ ಪರಿಶ್ರಮದಿಂದ ಪ್ರತಿಯೊಂದು ಗುರಿಯನ್ನು ಸಾಧಿಸಬಹುದು ಎಂಬುದನ್ನು ಈ ಗೆಲುವು ತೋರಿಸುತ್ತದೆ ಎಂದು ಅವರು ಹೇಳಿದರು.

ಪ್ರಧಾನಮಂತ್ರಿ ಅವರು ಸಂಸ್ಕೃತ ಸುಭಾಷಿತಂ ಹಂಚಿಕೊಂಡಿದ್ದಾರೆ-

“अभीप्सां स्वात्मनो रक्षाऽविरतं सुस्थिरं तया। यत्नमातिष्ठ धैर्येण ततः सिद्धिर्भवेद् ध्रुवम्।।”

ಜೀವನದಲ್ಲಿ ಪ್ರಗತಿಯನ್ನು ಬಯಸುವ ಯಾರೇ ಆದರೂ ಪರಿಶ್ರಮ ಮತ್ತು ದೃಢನಿಶ್ಚಯದಿಂದ ಶ್ರಮಿಸಬೇಕು ಎಂದು ಸುಭಾಷಿತಂ ತಿಳಿಸುತ್ತದೆ. ನಿರಂತರ ಕಠಿಣ ಪರಿಶ್ರಮ, ತಾಳ್ಮೆಯೊಂದಿಗೆ ಸೇರಿಕೊಂಡು ಖಂಡಿತವಾಗಿಯೂ ಯಶಸ್ಸಿಗೆ ದಾರಿ ಮಾಡಿಕೊಡುತ್ತದೆ.

ಪ್ರಧಾನಮಂತ್ರಿ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಹೀಗೆ ಬರೆದಿದ್ದಾರೆ;

“T20 क्रिकेट वर्ल्ड कप जीतकर टीम इंडिया ने साबित कर दिया है कि दृढ़ संकल्प, संयम और आत्मविश्वास का संगम ही जीवन में सफलता का मूलमंत्र है। यह जीत हमें यह भी बताती है कि सही दिशा में कठिन परिश्रम से हर लक्ष्य को हासिल किया जा सकता है।

अभीप्सां स्वात्मनो रक्षाऽविरतं सुस्थिरं तया।

यत्नमातिष्ठ धैर्येण ततः सिद्धिर्भवेद् ध्रुवम् ।।”

 

*****


(रिलीज़ आईडी: 2236814) आगंतुक पटल : 74
इस विज्ञप्ति को इन भाषाओं में पढ़ें: English , Urdu , Marathi , हिन्दी , Manipuri , Bengali , Bengali-TR , Assamese , Punjabi , Gujarati , Odia , Tamil , Telugu , Malayalam