ಗೃಹ ವ್ಯವಹಾರಗಳ ಸಚಿವಾಲಯ
ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ನಾಳೆ ಒಡಿಶಾದ ಮುಂಡಾಲಿಯಲ್ಲಿ ಸಿಐಎಸ್ಎಫ್ ನ 57ನೇ ಸಂಸ್ಥಾಪನಾ ದಿನಾಚರಣೆ ಸಮಾರಂಭವನ್ನು ಉದ್ದೇಶಿಸಿ ಮುಖ್ಯ ಅತಿಥಿಯಾಗಿ ಭಾಷಣ ಮಾಡಲಿದ್ದಾರೆ
ಕೇಂದ್ರ ಗೃಹ ಸಚಿವರು ಭುವನೇಶ್ವರದಲ್ಲಿ ಎನ್ಎಫ್ಎಸ್ ಯು ಮತ್ತು ಸಿಎಫ್ಎಸ್ಎಲ್ ಕ್ಯಾಂಪಸ್ ಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಮತ್ತು ಎನ್ಎಫ್ಎಸ್ ಯುನ ಟ್ರಾನ್ಸಿಟ್ ಕ್ಯಾಂಪಸ್ಅನ್ನು ವರ್ಚುವಲ್ ಮೂಲಕ ಉದ್ಘಾಟಿಸಲಿದ್ದಾರೆ
ಕೇಂದ್ರ ಗೃಹ ಸಚಿವರು 'ಹೊಸ ನ್ಯಾಯ ಸಂಹಿತಾ' ಕುರಿತ ವಸ್ತುಪ್ರದರ್ಶನವನ್ನು ಉದ್ಘಾಟಿಸಲಿದ್ದಾರೆ ಮತ್ತು ಸಂಚಾರಿ ವಿಧಿವಿಜ್ಞಾನ ವ್ಯಾನ್ ಗೆ ಹಸಿರು ನಿಶಾನೆ ತೋರಲಿದ್ದಾರೆ
ಭುವನೇಶ್ವರದಲ್ಲಿರುವ ಎನ್ಎಫ್ಎಸ್ ಯು ಕ್ಯಾಂಪಸ್ ಒಡಿಶಾದ ವಿಧಿವಿಜ್ಞಾನ ಮತ್ತು ತನಿಖಾ ಮೂಲಸೌಕರ್ಯವನ್ನು ಬಲಪಡಿಸುವ ನಿಟ್ಟಿನಲ್ಲಿ ಒಂದು ಪ್ರಮುಖ ಹೆಜ್ಜೆಯಾಗಿದೆ
ಒಡಿಶಾ ಸರ್ಕಾರವು ಹಂಚಿಕೆ ಮಾಡಿದ 40 ಎಕರೆ ಭೂಮಿಯಲ್ಲಿ ನಿರ್ಮಿಸಲಿರುವ ಶಾಶ್ವತ ಕ್ಯಾಂಪಸ್ ಅನ್ನು ವಿಧಿವಿಜ್ಞಾನ ಮತ್ತು ಸಂಬಂಧಿತ ವಿಜ್ಞಾನಗಳ ಉತ್ಕೃಷ್ಟತಾ ಕೇಂದ್ರವಾಗಿ ಅಭಿವೃದ್ಧಿಪಡಿಸಲಾಗುವುದು
ಪ್ರಕಟಣಾ ದಿನಾಂಕ:
05 MAR 2026 6:19PM by PIB Bengaluru
ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು 2026ರ ಮಾರ್ಚ್ 06 ರ ಶುಕ್ರವಾರದಂದು ಒಡಿಶಾದ ಮುಂಡಾಲಿಯಲ್ಲಿ ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ (ಸಿಐಎಸ್ಎಫ್) 57ನೇ ಸಂಸ್ಥಾಪನಾ ದಿನಾಚರಣೆಯ ಸಮಾರಂಭವನ್ನು ಉದ್ದೇಶಿಸಿ ಮುಖ್ಯ ಅತಿಥಿಯಾಗಿ ಮಾತನಾಡಲಿದ್ದಾರೆ. ಗೃಹ ಸಚಿವರು ಭುವನೇಶ್ವರದಲ್ಲಿ ರಾಷ್ಟ್ರೀಯ ವಿಧಿವಿಜ್ಞಾನ ವಿಶ್ವವಿದ್ಯಾಲಯದ (ಎನ್‌ಎಫ್‌ಎಸ್‌ಯು) ಕ್ಯಾಂಪಸ್ ಗೆ ಭೂಮಿ ಪೂಜೆ ನೆರವೇರಿಸಲಿದ್ದಾರೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಇದಲ್ಲದೆ, ಕೇಂದ್ರ ಗೃಹ ಸಚಿವರು ಎನ್ಎಫ್ಎಸ್ ಯುನ ಟ್ರಾನ್ಸಿಟ್ ಕ್ಯಾಂಪಸ್ ಅನ್ನು ವರ್ಚುವಲ್ ಮೂಲಕ ಉದ್ಘಾಟಿಸಲಿದ್ದಾರೆ.
ಶ್ರೀ ಅಮಿತ್ ಶಾ ಅವರು ಭುವನೇಶ್ವರದ ರಾಷ್ಟ್ರೀಯ ವಿಧಿವಿಜ್ಞಾನ ವಿಶ್ವವಿದ್ಯಾಲಯದ (ಎನ್ಎಫ್ಎಸ್ ಯು) ಕ್ಯಾಂಪಸ್ ಪಕ್ಕದಲ್ಲಿರುವ ಕೇಂದ್ರೀಯ ವಿಧಿ ವಿಜ್ಞಾನ ಪ್ರಯೋಗಾಲಯದ (ಸಿಎಫ್ಎಸ್ಎಲ್) ಭೂಮಿ ಪೂಜೆ ನೆರವೇರಿಸಲಿದ್ದಾರೆ. ಶ್ರೀ ಅಮಿತ್ ಶಾ ಅವರು ಭುವನೇಶ್ವರದಲ್ಲಿ 'ಹೊಸ ನ್ಯಾಯ ಸಂಹಿತೆ' ಕುರಿತ ಪ್ರದರ್ಶನವನ್ನು ಉದ್ಘಾಟಿಸಲಿದ್ದಾರೆ ಮತ್ತು ಸಂಚಾರಿ ವಿಧಿವಿಜ್ಞಾನ ವ್ಯಾನ್ ಗೆ ಹಸಿರು ನಿಶಾನೆ ತೋರಲಿದ್ದಾರೆ. ಈ ಸಂದರ್ಭದಲ್ಲಿ ಕೇಂದ್ರ ಶಿಕ್ಷಣ ಸಚಿವರಾದ ಶ್ರೀ ಧರ್ಮೇಂದ್ರ ಪ್ರಧಾನ್, ಒಡಿಶಾದ ಮುಖ್ಯಮಂತ್ರಿ ಶ್ರೀ ಮೋಹನ್ ಚರಣ್ ಮಾಝಿ, ಕೇಂದ್ರ ಗೃಹ ಕಾರ್ಯದರ್ಶಿ, ಎನ್ಎಫ್ಎಸ್.ಯು.ನ ಸಂಸ್ಥಾಪಕ ಉಪಕುಲಪತಿ ಮತ್ತು ಇತರ ಹಲವಾರು ಗಣ್ಯರು ಉಪಸ್ಥಿತರಿರುತ್ತಾರೆ.
ಕೇಂದ್ರ ಗೃಹ ಮತ್ತು ಸಹಕಾರ ಸಚಿವರು ಗೃಹ ಸಚಿವಾಲಯಕ್ಕೆ ಸಂಬಂಧಿಸಿದ ಉಪಕ್ರಮಗಳ ಅಡಿಯಲ್ಲಿ ಪೊಲೀಸ್ ಮೂಲಸೌಕರ್ಯವನ್ನು ಬಲಪಡಿಸುವ ಗುರಿಯನ್ನು ಹೊಂದಿರುವ ಅನೇಕ ಪೊಲೀಸ್ ಠಾಣೆ ಕಟ್ಟಡಗಳನ್ನು ವರ್ಚುವಲ್ ಮೂಲಕ ಉದ್ಘಾಟಿಸಲಿದ್ದಾರೆ. ಅವರು ಕೆಲವು ಪೊಲೀಸ್ ಠಾಣೆಗಳಲ್ಲಿ ಸಿಸಿ ಮತ್ತು ಇಒ ಸೌಲಭ್ಯಗಳನ್ನು ಉದ್ಘಾಟಿಸಲಿದ್ದಾರೆ. ಇದಲ್ಲದೆ, ಭಾರತೀಯ ತಂತ್ರಜ್ಞಾನ ಸಂಸ್ಥೆ ಭುವನೇಶ್ವರ ಮತ್ತು ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯದೊಂದಿಗೆ ತಿಳುವಳಿಕೆ ಒಪ್ಪಂದಗಳಿಗೆ ಸಹಿ ಹಾಕಲಾಗುವುದು.
ಭುವನೇಶ್ವರದಲ್ಲಿರುವ ರಾಷ್ಟ್ರೀಯ ವಿಧಿವಿಜ್ಞಾನ ವಿಶ್ವವಿದ್ಯಾಲಯ (ಎನ್‌ಎಫ್‌ಎಸ್‌ಯು) ಕ್ಯಾಂಪಸ್ ಒಡಿಶಾದ ವಿಧಿವಿಜ್ಞಾನ ಮತ್ತು ತನಿಖಾ ಮೂಲಸೌಕರ್ಯವನ್ನು ಬಲಪಡಿಸುವ ನಿಟ್ಟಿನಲ್ಲಿ ಒಂದು ಪ್ರಮುಖ ಹೆಜ್ಜೆಯಾಗಿದೆ. ಒಡಿಶಾ ಸರ್ಕಾರ ಹಂಚಿಕೆ ಮಾಡಿದ 40 ಎಕರೆ ಭೂಮಿಯಲ್ಲಿ ನಿರ್ಮಿಸಲಿರುವ ಶಾಶ್ವತ ಕ್ಯಾಂಪಸ್ ಅನ್ನು ವಿಧಿವಿಜ್ಞಾನ ಮತ್ತು ಸಂಬಂಧಿತ ವಿಜ್ಞಾನಗಳ ಉತ್ಕೃಷ್ಟತಾ ಕೇಂದ್ರವಾಗಿ ಅಭಿವೃದ್ಧಿಪಡಿಸಲಾಗುವುದು. ಎನ್ಎಫ್ಎಸ್ ಯುನ ತಾತ್ಕಾಲಿಕ ಕ್ಯಾಂಪಸ್ ಎಂ.ಎಸ್ಸಿ. ವಿಧಿವಿಜ್ಞಾನ, ಎಂ.ಎಸ್ಸಿ ಡಿಜಿಟಲ್ ವಿಧಿವಿಜ್ಞಾನ ಮತ್ತು ಮಾಹಿತಿ ಭದ್ರತೆ ಮತ್ತು ಸೈಬರ್ ಕಾನೂನು ಮತ್ತು ಸೈಬರ್ ಅಪರಾಧ ತನಿಖೆಯಲ್ಲಿ ಎಲ್ಎಲ್ಎಂ ಸೇರಿದಂತೆ ಮೂರು ವಿಶೇಷ ಶೈಕ್ಷಣಿಕ ಕಾರ್ಯಕ್ರಮಗಳೊಂದಿಗೆ ಕಾರ್ಯಾಚರಣೆಯನ್ನು ಪ್ರಾರಂಭಿಸುತ್ತದೆ.
*****
(ಪ್ರಕಟಣೆ ಐ.ಡಿ.: 2235828)
ವಿಸಿಟರ್ ಕೌಂಟರ್ : 11