ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ದೃಢನಿಶ್ಚಯ ಮತ್ತು ಕಠಿಣ ಪರಿಶ್ರಮದ ಶಕ್ತಿ ವಿವರಿಸುವ ಸಂಸ್ಕೃತ ಸುಭಾಷಿತ ಹಂಚಿಕೊಂಡಿರುವ ಪ್ರಧಾನಮಂತ್ರಿ

ಪ್ರಕಟಣಾ ದಿನಾಂಕ: 06 MAR 2026 9:36AM by PIB Bengaluru

ಭಾರತದ ಜನರು ತಮ್ಮ ದೃಢ ಸಂಕಲ್ಪದ ಮೂಲಕ ಅತ್ಯಂತ ಕ್ಲಿಷ್ಟಕರವಾದ ಕೆಲಸಗಳನ್ನು ಸಹ ಸಾಧ್ಯವಾಗಿಸುವರು ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿಪ್ರಾಯಪಟ್ಟಿದ್ದಾರೆ. ಸರಿಯಾದ ದಿಸೆಯಲ್ಲಿ ಅವಿರತ ಪ್ರಯತ್ನದ ಮೂಲಕ ಜನರು ದೊಡ್ಡ ಗುರಿಗಳನ್ನು ಸಹ ಸಾಧಿಸಬಲ್ಲರು ಎಂದು ಅವರು ಹೇಳಿದ್ದಾರೆ.

ಪ್ರಧಾನಮಂತ್ರಿಯವರು ಈ ಕೆಳಗಿನ ಸಂಸ್ಕೃತ ಸುಭಾಷಿತವನ್ನು ಹಂಚಿಕೊಂಡಿದ್ದಾರೆ :

“यद् दूरं यद् दुराराध्यं यच्च दूरे व्यवस्थितम्। तत् सर्वं तपसा साध्यं तपो हि दुरतिक्रमम्॥”

"ಯಾವುದು ದೂರದಲ್ಲಿದೆಯೋ, ಯಾವುದನ್ನು ಪಡೆಯುವುದು ಕ್ಲಿಷ್ಟಕರವೋ, ಯಾವುದರ ಸಾಧನೆ ನಿಲುಕದ್ದೋ, ಅವೆಲ್ಲವೂ ತಪಸ್ಸಿನಿಂದ ಸಿಗಲಿದೆ; ನಿಜಕ್ಕೂ ತಪಸ್ಸನ್ನು ಸಾಧಿಸುವುದು ಕಷ್ಟ."

ಎಷ್ಟೇ ದೂರವಿರಲಿ, ಕಠಿಣವಿರಲಿ ಅಥವಾ ತಲುಪಲು ಅಸಾಧ್ಯವೆಂದೆನಿಸಲಿ, ದೃಢ ಸಂಕಲ್ಪ ಮತ್ತು ನಿರಂತರ ಕಠಿಣ ಪರಿಶ್ರಮದ ಮೂಲಕ ಅದನ್ನು ಸಾಧಿಸಬಹುದು. ದೃಢಸಂಕಲ್ಪ ಮತ್ತು ತಾಳ್ಮೆಯಿಂದ ಅಸಾಧ್ಯವಾದುದನ್ನು ಸಾಧ್ಯವಾಗಿಸಬಹುದಾಗಿದೆ ಎಂಬುದನ್ನು ಈ ಸುಭಾಷಿತ ತಿಳಿಸುತ್ತದೆ.

ಪ್ರಧಾನಮಂತ್ರಿಗಳ ಎಕ್ಸ್ ಪೋಸ್ಟ್ ಹೀಗಿದೆ :

“भारत के लोग अपने दृढ़ निश्चय से किसी भी कार्य को संभव बना देते हैं। सही दिशा में अपनी अथक मेहनत से वे बड़े से बड़े लक्ष्य को भी हासिल कर दिखाते हैं।

यद् दूरं यद् दुराराध्यं यच्च दूरे व्यवस्थितम्।

तत् सर्वं तपसा साध्यं तपो हि दुरतिक्रमम्॥”

 

*****


(ಪ್ರಕಟಣೆ ಐ.ಡಿ.: 2235826) ವಿಸಿಟರ್ ಕೌಂಟರ್ : 13