ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಒಮನ್‌ ಘನತೆವೆತ್ತ ಸುಲ್ತಾನ್‌ ಅವರೊಂದಿಗೆ ಮಾತುಕತೆ ನಡೆಸಿದ ಪ್ರಧಾನಮಂತ್ರಿ

ಪ್ರಕಟಣಾ ದಿನಾಂಕ: 03 MAR 2026 6:56PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಘನತೆವೆತ್ತ ಸುಲ್ತಾನ್‌ ಹೈಥಮ್‌ ಬಿನ್‌ ತಾರಿಕ್‌ ಅವರೊಂದಿಗೆ ಮಾತನಾಡಿದರು ಮತ್ತು ಪಶ್ಚಿಮ ಏಷ್ಯಾದ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು.

ಮಾತುಕತೆಯ ವೇಳೆ ಪ್ರಧಾನಮಂತ್ರಿ ಅವರು ಒಮನ್‌ನ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯ ಉಲ್ಲಂಘನೆಯನ್ನು ಖಂಡಿಸಿದರು. ಪ್ರಾದೇಶಿಕ ಶಾಂತಿ ಮತ್ತು ಸ್ಥಿರತೆಯ ಶೀಘ್ರ ಮರುಸ್ಥಾಪನೆಗೆ ನಿರಂತರ ರಾಜತಾಂತ್ರಿಕ ಮಾತುಕತೆ ಅತ್ಯಗತ್ಯ ಎಂದು ಉಭಯ ನಾಯಕರು ಒಪ್ಪಿಕೊಂಡರು.

ಭಾರತೀಯ ಸಮುದಾಯಕ್ಕೆ ಒಮನ್‌ ನೀಡುತ್ತಿರುವ ನಿರಂತರ ಬೆಂಬಲವನ್ನು ಪ್ರಧಾನಮಂತ್ರಿ ಶ್ಲಾಘಿಸಿದರು.

ಈ ಸಂಬಂಧ ಪ್ರಧಾನಮಂತ್ರಿ ಅವರು ತಮ್ಮ ಎಕ್ಸ್‌ ಖಾತೆಯಲ್ಲಿ ಹೀಗೆ ಬರೆದಿದ್ದಾರೆ;

‘‘ಘನತೆವೆತ್ತ ಸುಲ್ತಾನ್‌ ಹೈಥಮ್‌ ಬಿನ್‌ ತಾರಿಕ್‌ ಅವರೊಂದಿಗೆ ಮಾತನಾಡಿದ್ದೇನೆ ಮತ್ತು ಪಶ್ಚಿಮ ಏಷ್ಯಾದ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡಿದ್ದೇನೆ. ಒಮನ್‌ನ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯ ಉಲ್ಲಂಘನೆಯನ್ನು ಖಂಡಿಸಿದರು. ಪ್ರಾದೇಶಿಕ ಶಾಂತಿ ಮತ್ತು ಸ್ಥಿರತೆಯ ಶೀಘ್ರ ಪುನಃಸ್ಥಾಪನೆಗೆ ನಿರಂತರ ರಾಜತಾಂತ್ರಿಕ ಮಾತುಕತೆ ಅತ್ಯಗತ್ಯ ಎಂದು ನಾವು ಒಪ್ಪಿದ್ದೇವೆ. ಭಾರತೀಯ ಸಮುದಾಯಕ್ಕೆ ಒಮನ್‌ ನೀಡುತ್ತಿರುವ ನಿರಂತರ ಬೆಂಬಲವನ್ನು ಅಪಾರವಾಗಿ ಪ್ರಶಂಸಿಸಿದ್ದೇನೆ.

@SultanHaithamb1’’  

 

*****


(ಪ್ರಕಟಣೆ ಐ.ಡಿ.: 2235208) ವಿಸಿಟರ್ ಕೌಂಟರ್ : 66