ಪರಿಸರ ಮತ್ತು ಅರಣ್ಯ ಸಚಿವಾಲಯ
azadi ka amrit mahotsav

2026ರ ವಿಶ್ವ ವನ್ಯಜೀವಿ ದಿನದಂದು, ವನ್ಯಜೀವಿ ಸಂರಕ್ಷಣೆಗೆ ಬದ್ಧತೆಯನ್ನು ಪುನರುಚ್ಚರಿಸಿದ ಪ್ರಧಾನಮಂತ್ರಿ


ಹಂಚಿಕೆಯ ಜವಾಬ್ದಾರಿಯನ್ನು ಪ್ರಮುಖವಾಗಿ ಪ್ರಸ್ತಾಪಿಸಿದ ಕೇಂದ್ರ ಪರಿಸರ ಸಚಿವರು ಮತ್ತು ಭೂಮಿಯ ನೈಸರ್ಗಿಕ ಪರಂಪರೆಯನ್ನು ರಕ್ಷಿಸಲು ಸಮಾಜದಾದ್ಯಂತ ನಿರಂತರ ಪ್ರಯತ್ನಗಳಿಗೆ ಕರೆ

ಪ್ರಕಟಣಾ ದಿನಾಂಕ: 03 MAR 2026 12:25PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳ ಸರಣಿಯಲ್ಲಿ, ವಿಶ್ವ ವನ್ಯಜೀವಿ ದಿನದಂದು ತಮ್ಮ ಶುಭಾಶಯಗಳನ್ನು ತಿಳಿಸಿದ್ದಾರೆ. ನಮ್ಮ ಭೂಮಿಯನ್ನು ಶ್ರೀಮಂತಗೊಳಿಸುವ ಮತ್ತು ನಮ್ಮ ಪರಿಸರ ವ್ಯವಸ್ಥೆಗಳನ್ನು ಉಳಿಸಿಕೊಳ್ಳುವ ಭೂಮಿಯ ಮೇಲಿನ ಶ್ರೀಮಂತ ಪ್ರಾಣಿ ವೈವಿಧ್ಯತೆಯನ್ನು ರಕ್ಷಿಸುವ ಮಹತ್ವವನ್ನು ಪುನರುಚ್ಚರಿಸಿದ್ದಾರೆ.  ಭಾರತದ ಸಾಂಸ್ಕೃತಿಕ ನೀತಿಯನ್ನು ಒತ್ತಿ ಹೇಳಿರುವ ಪ್ರಧಾನಮಂತ್ರಿ, ನಮ್ಮ ಧರ್ಮಗ್ರಂಥಗಳು ಎಲ್ಲಾ ಜೀವಿಗಳ ಕಲ್ಯಾಣಕ್ಕಾಗಿ ಪ್ರಾರ್ಥಿಸುತ್ತವೆ ಮತ್ತು ಸಂರಕ್ಷಣೆಯೊಂದಿಗೆ ವನ್ಯಜೀವಿಗಳ ಬಗ್ಗೆ ಸೂಕ್ಷ್ಮವಾಗಿರುವುದನ್ನು ಉತ್ತೇಜಿಸುತ್ತವೆ ಎಂದು ಹೇಳಿದರು. 

(ವಿವರವಾದ ಪತ್ರಿಕಾ ಪ್ರಕಟಣೆ: : https://www.pib.gov.in/PressReleasePage.aspx?PRID=2234819&reg=3&lang=1)

ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ವೈಪರೀತ್ಯ ಸಚಿವರಾದ ಶ್ರೀ ಭೂಪೇಂದರ್ ಯಾದವ್ ಅವರು ವಿಶ್ವ ವನ್ಯಜೀವಿ ದಿನವನ್ನು ಭೂಮಿಯ ಅದ್ಭುತ ಜೀವವೈವಿಧ್ಯದ ಆಚರಣೆ ಎಂದು ಬಣ್ಣಿಸುವ ಸಂದೇಶದೊಂದಿಗೆ ಆಚರಿಸಿದ್ದಾರೆ. ವನ್ಯಜೀವಿಗಳನ್ನು ಸಂರಕ್ಷಿಸುವುದು ಪರಿಸರ ಸಮತೋಲನಕ್ಕೆ ಅತ್ಯಗತ್ಯ ಮಾತ್ರವಲ್ಲದೆ, ಭೂಮಿಯ ಮೇಲಿನ ನೈಸರ್ಗಿಕ ಪರಂಪರೆಯನ್ನು ರಕ್ಷಿಸಲು ಸಮಾಜದಾದ್ಯಂತ ನಿರಂತರ ಪ್ರಯತ್ನಗಳ ಅಗತ್ಯವಿರುವ ಹಂಚಿಕೆಯ ಜವಾಬ್ದಾರಿಯೂ ಆಗಿದೆ ಎಂದು ಅವರು ಬಲವಾಗಿ ಪ್ರತಿಪಾದಿಸಿದ್ದಾರೆ.

ಸಾಮಾಜಿಕ ಮಾಧ್ಯಮ ವೇದಿಕೆ 'X' ಪೋಸ್ಟ್ ನಲ್ಲಿ  ಶ್ರೀ ಯಾದವ್ ಅವರು, ನಮ್ಮ ಶ್ರೀಮಂತ ಪರಿಸರ ವ್ಯವಸ್ಥೆಗೆ ಬೆದರಿಕೆಯನ್ನುಂಟು ಮಾಡುವ ಅನೇಕ ಅಪಾಯಗಳ ಬಗ್ಗೆ ಭಾರತವು ಎಚ್ಚರದಿಂದಿದೆ ಎಂದು ಪ್ರಮುಖವಾಗಿ ಪ್ರಸ್ತಾಪಿಸಿದ್ದಾರೆ. ”ಆದ್ದರಿಂದ ನಾವು ನಮ್ಮಲ್ಲಿರುವುದನ್ನು ಸಂರಕ್ಷಿಸುವುದು ಮಾತ್ರವಲ್ಲದೆ, ಪರಿಸರ ವ್ಯವಸ್ಥೆಯ ಪುನಃಸ್ಥಾಪನೆಗಾಗಿ ಪ್ರಮುಖ ಪ್ರಭೇದಗಳನ್ನು ಮತ್ತೆ ಪಡೆಯಲು ಸಹ ಬದ್ಧರಾಗಿದ್ದೇವೆ’’ ಎಂದು ಅವರು ಹೇಳಿದರು.

ವನ್ಯಜೀವಿಗಳು ಮತ್ತು ಸಸ್ಯಗಳನ್ನು ಸಂಭ್ರಮಿಸಲು ಪ್ರತಿ ವರ್ಷ ಮಾರ್ಚ್ 3 ರಂದು ವಿಶ್ವ ವನ್ಯಜೀವಿ ದಿನವನ್ನು ಆಚರಿಸಲಾಗುತ್ತದೆ. ಪ್ರತಿ ವರ್ಷ, ಜನರು ಮತ್ತು ಭೂಮಿಗೆ ವನ್ಯಜೀವಿಗಳ ವಿಶಿಷ್ಟ ಪಾತ್ರಗಳು ಮತ್ತು ಕೊಡುಗೆಗಳನ್ನು ನಾವು ಗುರುತಿಸುತ್ತೇವೆ. ಈ ದಿನವು ಕಾಡು ಪ್ರಾಣಿಗಳು ಮತ್ತು ಸಸ್ಯಗಳ ಮಹತ್ವವನ್ನು ಉಲ್ಲೇಖಿಸುತ್ತದೆ ಮತ್ತು ಪರಿಸರ ಸಮತೋಲನ ಮತ್ತು ಮನುಕುಲದ ಯೋಗಕ್ಷೇಮಕ್ಕಾಗಿ ಜೀವವೈವಿಧ್ಯತೆಯನ್ನು ಸಂರಕ್ಷಿಸುವ ನಮ್ಮ ಸಾಮೂಹಿಕ ಜವಾಬ್ದಾರಿಯನ್ನು ಒತ್ತಿಹೇಳುತ್ತದೆ.

 

*****


(ಪ್ರಕಟಣೆ ಐ.ಡಿ.: 2235013) ವಿಸಿಟರ್ ಕೌಂಟರ್ : 72
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , Marathi , हिन्दी , Bengali , Bengali-TR , Punjabi , Gujarati