ಪ್ರಧಾನ ಮಂತ್ರಿಯವರ ಕಛೇರಿ
ತಿರು ಆರ್. ನಲ್ಲಕಣ್ಣು ಅವರ ನಿಧನಕ್ಕೆ ಪ್ರಧಾನಮಂತ್ರಿ ಸಂತಾಪ
ಪ್ರಕಟಣಾ ದಿನಾಂಕ:
25 FEB 2026 8:50PM by PIB Bengaluru
ತಿರು ಆರ್. ನಲ್ಲಕಣ್ಣು ಅವರ ನಿಧನ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಸಂತಾಪ ವ್ಯಕ್ತಪಡಿಸಿದ್ದಾರೆ. ನಲ್ಲಕಣ್ಣು ಅವರು ತಳಮಟ್ಟದ ಜನರೊಂದಿಗೆ ಹೊಂದಿದ್ದ ಸಂಪರ್ಕ ಮತ್ತು ಹಿಂದುಳಿದ ವರ್ಗಗಳಿಗೆ ಧ್ವನಿಯಾಗಿ ನಿಂತು ಅವರು ಮಾಡಿದ ಕೆಲಸಗಳನ್ನು ಉಲ್ಲೇಖಿಸಿದ್ದಾರೆ.
ತಿರು ಆರ್. ನಲ್ಲಕಣ್ಣು ಅವರನ್ನು ಸಮಾಜದ ಪ್ರತಿಯೊಂದು ವರ್ಗದ ಜನರು ವ್ಯಾಪಕವಾಗಿ ಗೌರವಿಸುತ್ತಿದ್ದರು ಮತ್ತು ಅವರ ಸರಳತೆ ಗಮನಾರ್ಹವಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಈ ಸಮಯದಲ್ಲಿ ಅವರ ಆಲೋಚನೆಗಳು ಕುಟುಂಬ ಮತ್ತು ಅಭಿಮಾನಿಗಳೊಂದಿಗೆ ಇವೆ ಎಂದು ಪ್ರಧಾನಮಂತ್ರಿ ಹಂಚಿಕೊಂಡರು.
ಪ್ರಧಾನಮಂತ್ರಿಗಳು ಎಕ್ಸ್ ಖಾತೆಯಲ್ಲಿ ಹೀಗೆ ಬರೆದುಕೊಂಡಿದ್ದಾರೆ:
"ತಿರು ಆರ್. ನಲ್ಲಕಣ್ಣು ಅವರು ತಳಮಟ್ಟದ ಜನರೊಂದಿಗೆ ಹೊಂದಿದ್ದ ಸಂಪರ್ಕ ಮತ್ತು ಹಿಂದುಳಿದವರು, ಕಾರ್ಮಿಕರು ಹಾಗೂ ರೈತರಿಗೆ ಧ್ವನಿಯಾಗಿ ನಿಂತು ಮಾಡಿದ ಸತತ ಪ್ರಯತ್ನಗಳಿಂದ ಸದಾ ಸ್ಮರಣೀಯರಾಗಿರುತ್ತಾರೆ. ಸಮಾಜದ ಎಲ್ಲಾ ವರ್ಗದ ಜನರಿಂದ ಅವರಿಗೆ ಅಪಾರ ಗೌರವ ದೊರಕಿತ್ತು. ಅವರ ಸರಳ ನಡೆ-ನುಡಿಯಿಂದಲೂ ಗುರುತಿಸಿಕೊಂಡಿದ್ದರು. ಈ ದುಃಖದ ಸಂದರ್ಭದಲ್ಲಿ ಅವರ ಕುಟುಂಬ ಮತ್ತು ಅಭಿಮಾನಿಗಳಿಗಳಿಗೆ ಸಂತಾಪಗಳು.''
*****
(ಪ್ರಕಟಣೆ ಐ.ಡಿ.: 2232902)
ವಿಸಿಟರ್ ಕೌಂಟರ್ : 7