ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav

ಅಹಮದಾಬಾದ್ ಮೆಟ್ರೋ ಹಂತ-2 ವಿಸ್ತರಣೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದ್ದಕ್ಕಾಗಿ ಆ ಪ್ರದೇಶದ ನಿವಾಸಿಗಳನ್ನು ಅಭಿನಂದಿಸಿದ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ​​​​​​​ ಶ್ರೀ ಅಮಿತ್ ಶಾ


1,067 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುವ ಗಿಫ್ಟ್ ಸಿಟಿಯಿಂದ ಶಹಪುರ್ ವರೆಗಿನ ಹೊಸ ಮೆಟ್ರೋ ಮಾರ್ಗದಿಂದ ಆ ಪ್ರದೇಶದ ನಿವಾಸಿಗಳಿಗೆ ಕೈಗೆಟುಕುವ, ಅನುಕೂಲಕರ ಮತ್ತು ಹೆಚ್ಚಿನ ವೇಗದ ಸಂಪರ್ಕ ಲಭ್ಯ

ನರೇಂದ್ರ ಮೋದಿ ಅವರಿಂದ ರಾಷ್ಟ್ರಕ್ಕೆ 9,072 ಕೋಟಿ ರೂ. ಮೌಲ್ಯದ ನಾಲ್ಕು ಮಲ್ಟಿ-ಟ್ರ್ಯಾಕಿಂಗ್ ರೈಲ್ವೆ ಯೋಜನೆಗಳ ಉಡುಗೊರೆ

ಗೊಂಡಿಯಾ-ಜಬಲ್ಪುರ್ ರೈಲು ಮಾರ್ಗದ ಜೋಡಿ ಮಾರ್ಗದಿಂದ ಮಹಾರಾಷ್ಟ್ರ, ಮಧ್ಯಪ್ರದೇಶ, ಜಾರ್ಖಂಡ್ ಮತ್ತು ಬಿಹಾರದಲ್ಲಿ ಕೈಗಾರಿಕಾ ಮತ್ತು ಪ್ರವಾಸೋದ್ಯಮ ಚಟುವಟಿಕೆಗಳಿಗೆ ಮತ್ತಷ್ಟು ವೇಗ

ಪುಂಡ್ರಕ್ ನಿಂದ ಕಿಯುಲ್ ಮತ್ತು ಗಮ್ಹರಿಯಾದಿಂದ ಚಾಂಡಿಲ್ ವರೆಗಿನ ಮೂರನೇ ಮತ್ತು ನಾಲ್ಕನೇ ರೈಲು ಮಾರ್ಗಗಳ ನಿರ್ಮಾಣದಿಂದ ಮಹಾರಾಷ್ಟ್ರ, ಮಧ್ಯಪ್ರದೇಶ, ಜಾರ್ಖಂಡ್ ಮತ್ತು ಬಿಹಾರದಲ್ಲಿ ಕೈಗಾರಿಕಾ ಮತ್ತು ಪ್ರವಾಸೋದ್ಯಮ ಚಟುವಟಿಕೆಗಳು ಚುರುಕು 

ನರೇಂದ್ರ ಮೋದಿ ಜಿ ಅವರ ನೇತೃತ್ವದಲ್ಲಿ ಕೇಂದ್ರ ಸಚಿವ ಸಂಪುಟವು ಶ್ರೀನಗರ ವಿಮಾನ ನಿಲ್ದಾಣದಲ್ಲಿ 1,667 ಕೋಟಿ ರೂ. ವೆಚ್ಚದಲ್ಲಿ ಹೊಸ ಇಂಟಿಗ್ರೇಟೆಡ್ ಟರ್ಮಿನಲ್ ಕಟ್ಟಡ ಅಭಿವೃದ್ಧಿಗೆ ಅನುಮೋದನೆ

ಬಹುಮಹಡಿ ಕಾರು ಪಾರ್ಕಿಂಗ್‌ನೊಂದಿಗೆ 71,500 ಚದರ ಮೀಟರ್‌ಗಿಂತಲೂ ಹೆಚ್ಚು ವಿಸ್ತೀರ್ಣದಲ್ಲಿ ಅಭಿವೃದ್ಧಿಪಡಿಸಲಾದ ಮತ್ತು ಅತ್ಯಾಧುನಿಕ ಭದ್ರತೆಯನ್ನು ಹೊಂದಿರುವ ಈ ಟರ್ಮಿನಲ್ ನಿಂದ ಕಾಶ್ಮೀರದಲ್ಲಿ ಉದ್ಯೋಗ ಮತ್ತು ವ್ಯಾಪಾರ ವೃದ್ಧಿ

ಪವರ್‌ಗ್ರಿಡ್‌ನ ಹೂಡಿಕೆ ಮಿತಿಯನ್ನು 7,500 ಕೋಟಿ ರೂ.ಗೆ ಹೆಚ್ಚಿಸುವ ನಿರ್ಧಾರದಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನವೀಕರಿಸಬಹುದಾದ ಇಂಧನದ ದೂರದೃಷ್ಟಿಯನ್ನು ಸಾಕಾರಗೊಳಿಸುವ ಭಾರತದ ಪ್ರಯತ್ನಗಳಿಗೆ  ವೇಗ

ಪ್ರಕಟಣಾ ದಿನಾಂಕ: 24 FEB 2026 8:10PM by PIB Bengaluru

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು, ಅಹಮದಾಬಾದ್ ಮೆಟ್ರೋ ಹಂತ-2 ವಿಸ್ತರಣೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದ್ದಕ್ಕಾಗಿ ಆ ಪ್ರದೇಶದ ನಿವಾಸಿಗಳನ್ನು ಅಭಿನಂದಿಸಿದ್ದಾರೆ.

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ತಮ್ಮ ಸಾಮಾಜಿಕ ಜಾಲತಾಣದ ಸರಣಿ X ಪೋಸ್ಟ್‌ಗಳಲ್ಲಿ “ಅಹಮದಾಬಾದ್ ಮೆಟ್ರೋ ಹಂತ-2 ವಿಸ್ತರಣೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದ್ದಕ್ಕಾಗಿ ಆ ಪ್ರದೇಶದ ನಿವಾಸಿಗಳಿಗೆ ಅಭಿನಂದನೆಗಳು. 1,067 ಕೋಟಿ ರೂ. ವೆಚ್ಚದಲ್ಲಿ ಗಿಫ್ಟ್ ಸಿಟಿಯಿಂದ ಶಹಪುರದವರೆಗೆ ನಿರ್ಮಿಸಲಾಗುವ ಈ ಹೊಸ ಮೆಟ್ರೋ ಮಾರ್ಗವು ಆ ಪ್ರದೇಶದ ಜನರಿಗೆ ಕೈಗೆಟುಕುವ, ಅನುಕೂಲಕರ ಮತ್ತು ಹೆಚ್ಚಿನ ವೇಗದ ಸಂಪರ್ಕವನ್ನು ಒದಗಿಸುತ್ತದೆ ಮತ್ತು ಶೈಕ್ಷಣಿಕ, ಕಾರ್ಪೊರೇಟ್ ಮತ್ತು ವಾಣಿಜ್ಯ ಚಟುವಟಿಕೆಗಳಿಗೆ ಹೊಸ ಆವೇಗವನ್ನು ನೀಡುತ್ತದೆ’’ ಎಂದು ಹೇಳಿದ್ದಾರೆ.

"ನರೇಂದ್ರ ಮೋದಿ ಅವರು ಇಂದು ರಾಷ್ಟ್ರಕ್ಕೆ 9,072 ಕೋಟಿ ರೂ. ಮೌಲ್ಯದ ನಾಲ್ಕು ಮಲ್ಟಿ-ಟ್ರ್ಯಾಕಿಂಗ್ ರೈಲ್ವೆ ಯೋಜನೆಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ಗೊಂಡಿಯಾ-ಜಬಲ್ಪುರ ರೈಲು ಮಾರ್ಗದ ಡಬ್ಲಿಂಗ್ ನಿಂದ ಮತ್ತು ಪುಂಡ್ರಕ್ ನಿಂದ ಕಿಯುಲ್ ಮತ್ತು ಗಮ್ಹರಿಯಾದಿಂದ ಚಾಂಡಿಲ್ ವರೆಗಿನ ಮೂರನೇ ಮತ್ತು ನಾಲ್ಕನೇ ರೈಲು ಮಾರ್ಗಗಳ ನಿರ್ಮಾಣವು ಮಹಾರಾಷ್ಟ್ರ, ಮಧ್ಯಪ್ರದೇಶ, ಜಾರ್ಖಂಡ್ ಮತ್ತು ಬಿಹಾರದಲ್ಲಿ ಕೈಗಾರಿಕಾ ಮತ್ತು ಪ್ರವಾಸೋದ್ಯಮ ಚಟುವಟಿಕೆಗಳಿಗೆ ಮತ್ತಷ್ಟು ವೇಗವನ್ನು ನೀಡುತ್ತದೆ’’ ಎಂದು ಶ್ರೀ ಅಮಿತ್ ಶಾ ಹೇಳಿದರು.

ಕೇಂದ್ರ ಗೃಹ ಸಚಿವರು ‘’ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಕೇಂದ್ರ ಸಚಿವ ಸಂಪುಟ ಇಂದು ಶ್ರೀನಗರ ವಿಮಾನ ನಿಲ್ದಾಣದಲ್ಲಿ ಹೊಸ ಇಂಟಿಗ್ರೇಟೆಡ್ ಟರ್ಮಿನಲ್ ಕಟ್ಟಡ ನಿರ್ಮಾಣಕ್ಕೆ ಅನುಮೋದನೆ ನೀಡಿದೆ. 1,667 ಕೋಟಿ ರೂ. ವೆಚ್ಚದಲ್ಲಿ 71,500 ಚದರ ಮೀಟರ್‌ಗಳಲ್ಲಿ ಹರಡಿರುವ ಬಹು-ಹಂತದ ಕಾರು ಪಾರ್ಕಿಂಗ್ ಸೌಲಭ್ಯದೊಂದಿಗೆ ಅಭಿವೃದ್ಧಿಪಡಿಸಲಾಗಿದೆ ಮತ್ತು ಅತ್ಯಾಧುನಿಕ ಭದ್ರತೆಯನ್ನು ಹೊಂದಿರಲಿದೆ, ಈ ಟರ್ಮಿನಲ್ ಕಾಶ್ಮೀರದಲ್ಲಿ ಉದ್ಯೋಗ ಮತ್ತು ವ್ಯಾಪಾರವನ್ನು ವೃದ್ಧಿಸುತ್ತದೆ’’ ಎಂದು ಶ್ರೀ ಅಮಿತ್ ಶಾ ಹೇಳಿದರು.

‘’ನರೇಂದ್ರ ಮೋದಿ ಅವರ ನವೀಕರಿಸಬಹುದಾದ ಇಂಧನ ಸಮೃದ್ಧಿಯ ದೂರದೃಷ್ಟಿಯನ್ನು ಸಾಕಾರಗೊಳಿಸುವತ್ತ ಭಾರತದ ಟಾರ್ಕ್ ಇಂದು ಕೇಂದ್ರ ಸಚಿವ ಸಂಪುಟದ ಪವರ್‌ಗ್ರಿಡ್‌ನ ಹೂಡಿಕೆ ಮಿತಿಯನ್ನು 7,500 ಕೋಟಿ ರೂ.ಗೆ ಹೆಚ್ಚಿಸುವ ನಿರ್ಧಾರದೊಂದಿಗೆ ಹೊಸ ಪ್ರೋತ್ಸಾಹವನ್ನು ಪಡೆಯಿತು. ಇದು ಜನರ ಬೆಳವಣಿಗೆಯ ಆಕಾಂಕ್ಷೆಗಳನ್ನು ಪೂರೈಸಲು ನಮ್ಮ ಹೂಡಿಕೆ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ’’ ಎಂದು ಶ್ರೀ ಅಮಿತ್ ಶಾ ತಿಳಿಸಿದರು.

 

*****


(ಪ್ರಕಟಣೆ ಐ.ಡಿ.: 2232460) ವಿಸಿಟರ್ ಕೌಂಟರ್ : 4
ಪ್ರಕಟಣೆಯನ್ನು ಇದರಲ್ಲಿ ಓದಿ: English , हिन्दी , Gujarati