ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav AI Impact Summit 2026

ಲೀಚ್ಟೆನ್‌ಸ್ಟೈನ್‌ ಸಂಸ್ಥಾನದ ವಾರಸುದಾರ ಗೌರವಾನ್ವಿತ ರಾಜಕುಮಾರ ಎಚ್‌ಎಚ್‌ಎಸ್‌ಎಚ್ ಪ್ರಿನ್ಸ್ ಅಲೊಯಿಸ್ ಭಾರತಕ್ಕೆ ಭೇಟಿ ನೀಡಿದ್ದಾರೆ

ಪ್ರಕಟಣಾ ದಿನಾಂಕ: 20 FEB 2026 3:53PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಆಹ್ವಾನದ ಮೇರೆಗೆ, ಲೀಚ್ಟೆನ್‌ಸ್ಟೈನ್‌ ಸಂಸ್ಥಾನದ ವಾರಸುದಾರ ರಾಜಕುಮಾರ ಎಚ್‌ಎಚ್‌ಎಸ್‌ಎಚ್ ಪ್ರಿನ್ಸ್ ಅಲೊಯಿಸ್ ಅವರು ದೆಹಲಿಯಲ್ಲಿ ನಡೆಯುತ್ತಿರುವ ಎಐ ಇಂಪ್ಯಾಕ್ಟ್ ಸಮಿಟ್ 2026ರಲ್ಲಿ ಭಾಗವಹಿಸಲು ಭಾರತಕ್ಕೆ ಭೇಟಿ ನೀಡಿದರು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಸಮಿಟ್‌ನ ಅಂಗವಾಗಿ ಎಚ್‌ಎಚ್‌ಎಸ್‌ಎಚ್ ಪ್ರಿನ್ಸ್ ಅಲೊಯಿಸ್ ಅವರನ್ನು ಭೇಟಿಯಾದರು. ಉಭಯ ನಾಯಕರು ಭಾರತ ಮತ್ತು ಲೀಖ್ಟೆನ್‌ಸ್ಟೈನ್ ನಡುವಿನ ದ್ವಿಪಕ್ಷೀಯ ಸಂಬಂಧಗಳು ಸ್ನೇಹಪೂರ್ಣ ಹಾಗೂ ಆತ್ಮೀಯವಾಗಿವೆ ಎಂದು ಪುನರುಚ್ಚರಿಸಿದರು.

ಕಳೆದ ಅಕ್ಟೋಬರ್ 2025ರಲ್ಲಿ ಭಾರತ–ಟಿಇಪಿಎ, ಯುರೋಪಿಯನ್ ಮುಕ್ತ ವ್ಯಾಪಾರ ಸಹಯೋಗದಲ್ಲಿ (TEPA) ಮುಕ್ತ ವ್ಯಾಪಾರ ಒಪ್ಪಂದ ಜಾರಿಗೆ ಬಂದಿರುವುದನ್ನು ಸ್ವಾಗತಿಸಿದ ನಾಯಕರು, ಈ ಒಪ್ಪಂದವು ದ್ವಿಪಕ್ಷೀಯ ಆರ್ಥಿಕ ಸಹಭಾಗಿತ್ವಕ್ಕೆ ಹೊಸ ಉತ್ತೇಜನ ನೀಡಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.ಮುಂದಿನ 15 ವರ್ಷಗಳಲ್ಲಿ ಟಿಇಪಿಎ ಮೂಲಕ ಭಾರತಕ್ಕೆ 100 ಬಿಲಿಯನ್ ಅಮೆರಿಕನ್ ಡಾಲರ್ ಹೂಡಿಕೆ ಸಾಧ್ಯವಾಗಲಿದೆ ಎಂದು ಇಬ್ಬರು ನಾಯಕರು ಹರ್ಷ ವ್ಯಕ್ತಪಡಿಸಿದರು.

ವಿಶೇಷವಾಗಿ ಉನ್ನತ ಮೌಲ್ಯದ ಉತ್ಪಾದನೆ, ಆಧುನಿಕ ತಂತ್ರಜ್ಞಾನಗಳು ಮತ್ತು ನವೋತ್ಪಾದನೆ ಆಧಾರಿತ ಕ್ಷೇತ್ರಗಳಲ್ಲಿ ಸಹಕಾರವನ್ನು ಮತ್ತಷ್ಟು ಗಾಢಗೊಳಿಸಲು ಅವರು ಒಪ್ಪಿಕೊಂಡರು. ಈ ಭೇಟಿ ಭಾರತ–ಲೀಚ್ಟೆನ್‌ಸ್ಟೈನ್‌ ಸಹಭಾಗಿತ್ವವನ್ನು ಇನ್ನಷ್ಟು ಬಲಪಡಿಸುವ ಮಹತ್ವದ ಹೆಜ್ಜೆಯಾಗಿ ಪರಿಣಮಿಸಿದ್ದು, ಪರಸ್ಪರ ಲಾಭದಾಯಕ ಸಹಕಾರವನ್ನು ವಿಸ್ತರಿಸಲು ಎರಡೂ ದೇಶಗಳ ಹಂಚಿಕೊಂಡ ಬದ್ಧತೆಯನ್ನು ಮತ್ತೊಮ್ಮೆ ದೃಢಪಡಿಸಿದೆ.

 

*****


(ಪ್ರಕಟಣೆ ಐ.ಡಿ.: 2230953) ವಿಸಿಟರ್ ಕೌಂಟರ್ : 2
ಪ್ರಕಟಣೆಯನ್ನು ಇದರಲ್ಲಿ ಓದಿ: Urdu , English , Marathi , हिन्दी , Bengali , Tamil , Malayalam