ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav

ಅಸ್ಸಾಂನ ಕಚಾರ್ ಜಿಲ್ಲೆಯ ನಾಥನ್‌ಪುರ ಗ್ರಾಮದಲ್ಲಿ ನಾಳೆ ವೈಬ್ರೆಂಟ್ ವಿಲೇಜಸ್ ಪ್ರೋಗ್ರಾಂ–II (VVP–II) ಗೆ ಚಾಲನೆ ನೀಡಲಿರುವ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ


ವಿಕಸಿತ ಭಾರತ @2047ರ ದೂರದೃಷ್ಟಿಗೆ ಅನುಗುಣವಾಗಿ ಸುರಕ್ಷಿತ, ಸ್ಥಿತಿಸ್ಥಾಪಕ ಮತ್ತು ಸಮೃದ್ಧ ಗಡಿ ಸಮುದಾಯಗಳನ್ನು ಬೆಳೆಸುವತ್ತ ಗಮನಹರಿಸಲಿರುವ ಈ ಉಪಕ್ರಮ

ಗಡಿ ಭದ್ರತೆ, & ಗಡಿಯಾಚೆಗಿನ ಅಪರಾಧಗಳನ್ನು ಜಾಗರೂಕತೆಯ ಮೂಲಕ ತಡೆಗಟ್ಟಲು ಗಣನೀಯವಾಗಿ ಕೊಡುಗೆ ನೀಡಲು ಕಾರ್ಯಕ್ರಮದಿಂದ ಸ್ಥಳೀಯ ನಿವಾಸಿಗಳಿಗೆ ಅಧಿಕಾರ


VVP-II 6,839 ಕೋಟಿ ರೂ. ಮೌಲ್ಯದ ಯೋಜನೆಯಾಗಿದ್ದು, ಅದನ್ನು 15 ರಾಜ್ಯಗಳು ಮತ್ತು 2 ಕೇಂದ್ರಾಡಳಿತ ಪ್ರದೇಶಗಳಲ್ಲಿ ಸ್ಯಾಚುರೇಶನ್ (ಪರಿಪೂರ್ಣ) ಆಧಾರಿತ ಮತ್ತು ಸಮನ್ವಯ ಆಧಾರಿತ ವಿಧಾನದ ಮೂಲಕ ಜಾರಿ

ಪ್ರಕಟಣಾ ದಿನಾಂಕ: 19 FEB 2026 1:31PM by PIB Bengaluru

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಅಸ್ಸಾಂನಲ್ಲಿ ನಾಳೆ ವೈಬ್ರೆಂಟ್ ವಿಲೇಜಸ್ ಪ್ರೋಗ್ರಾಂ–(ಸಕ್ರಿಯ ಗ್ರಾಮಗಳ ಕಾರ್ಯಕ್ರಮ) II (VVP–II) ಗೆ ಚಾಲನೆ ನೀಡಲಿದ್ದಾರೆ, ಇದು ಗಡಿ ಗ್ರಾಮಗಳನ್ನು ಬಲವರ್ಧನೆಗೊಳಿಸಲು ಮತ್ತು ಗಡಿ ಪ್ರದೇಶಗಳಲ್ಲಿ ಸಮಗ್ರ ಅಭಿವೃದ್ಧಿಯನ್ನು ಉತ್ತೇಜಿಸಲು ನಡೆಯುತ್ತಿರುವ ಪ್ರಯತ್ನಗಳಲ್ಲಿ ಮಹತ್ವದ ಮೈಲಿಗಲ್ಲಾಗಿದೆ. ಈ ಕಾರ್ಯಕ್ರಮಕ್ಕೆ 2026ರ ಫೆಬ್ರವರಿ 20 ರ ಶುಕ್ರವಾರದಂದು ಕಚಾರ್‌ ಜಿಲ್ಲೆಯ ನಾಥನ್‌ಪುರ ಗ್ರಾಮದಲ್ಲಿ ಅಧಿಕೃತವಾಗಿ ಚಾಲನೆ ನೀಡಲಾಗುವುದು.

ವೈಬ್ರೆಂಟ್ ವಿಲೇಜಸ್ ಪ್ರೋಗ್ರಾಂ–II ಅನ್ನು ಸ್ಯಾಚುರೇಶನ್ (ಪರಿಪೂರ್ಣ)-ಆಧಾರಿತ ಮತ್ತು ಸಮನ್ವಯ ಆಧಾರಿತ ವಿಧಾನದ ಮೂಲಕ ಗಡಿ ಗ್ರಾಮಗಳ ಸಮಗ್ರ ಮತ್ತು ಸುಸ್ಥಿರ ಅಭಿವೃದ್ಧಿಯನ್ನು ಖಾತ್ರಿಪಡಿಸಿಕೊಳ್ಳಲು ವಿನ್ಯಾಸಗೊಳಿಸಲಾಗಿದೆ. ಇದು ಅಗತ್ಯ ಮೂಲಸೌಕರ್ಯವನ್ನು ಸುಧಾರಿಸುವುದು, ಮೂಲಭೂತ ಸೇವೆಗಳ ಲಭ್ಯತೆಯನ್ನು ಹೆಚ್ಚಿಸುವುದು ಮತ್ತು ಸುಸ್ಥಿರ ಜೀವನೋಪಾಯದ ಅವಕಾಶಗಳನ್ನು ಸೃಷ್ಟಿಸುವುದರ ಮೇಲೆ ಹೆಚ್ಚಿನ ಗಮನ ಕೇಂದ್ರೀಕರಿಸುತ್ತದೆ. ಇದರಿಂದಾಗಿ ವಿಕಸಿತ  ಭಾರತ@2047ರ ದೂರದೃಷ್ಟಿಗೆ ಅನುಗುಣವಾಗಿ ಸುರಕ್ಷಿತ, ಸ್ಥಿತಿಸ್ಥಾಪಕ ಮತ್ತು ಸಮೃದ್ಧ ಗಡಿ ಸಮುದಾಯಗಳನ್ನು ಪೋಷಿಸುತ್ತದೆ.

ಈ ಗ್ರಾಮಗಳನ್ನು ಬಲಪಡಿಸುವ ಮೂಲಕ ಕಾರ್ಯಕ್ರಮವು ಸ್ಥಳೀಯ ನಿವಾಸಿಗಳು ರಾಷ್ಟ್ರದ ಕಣ್ಣು ಮತ್ತು ಕಿವಿಗಳಾಗಿ ಕಾರ್ಯನಿರ್ವಹಿಸಲು ಅನುವು ಮಾಡಿಕೊಡುತ್ತದೆ, ಇದರಿಂದಾಗಿ ಗಡಿ ಭದ್ರತೆ, ಗಡಿಯಾಚೆಗಿನ ಅಪರಾಧಗಳ ನಿಯಂತ್ರಣ ಮತ್ತು ಆಂತರಿಕ ಭದ್ರತೆಯನ್ನು ಬಲಪಡಿಸುವಲ್ಲಿ ಗಮನಾರ್ಹ ಕೊಡುಗೆ ನೀಡುತ್ತವೆ.

ವೈಬ್ರೆಂಟ್ ವಿಲೇಜಸ್ ಪ್ರೋಗ್ರಾಂ-II ಕೇಂದ್ರ ಸರ್ಕಾರ ಪ್ರಯೋಜಿತ ಯೋಜನೆಯಾಗಿದ್ದು, 2028–29ನೇ ಹಣಕಾಸು ವರ್ಷದವರೆಗೆ 6,839 ಕೋಟಿ ರೂ.ವೆಚ್ಚವನ್ನು ಹೊಂದಿದೆ. ವಿವಿಪಿ- II ಅನ್ನು 15 ರಾಜ್ಯಗಳು ಮತ್ತು 2 ಕೇಂದ್ರಾಡಳಿತ ಪ್ರದೇಶಗಳಲ್ಲಿ (ಯುಟಿಗಳಲ್ಲಿ) ಜಾರಿಗೆ ತರಲಾಗುವುದು.

 

******


(ಪ್ರಕಟಣೆ ಐ.ಡಿ.: 2230270) ವಿಸಿಟರ್ ಕೌಂಟರ್ : 7
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , Marathi , हिन्दी , Assamese , Gujarati , Odia , Tamil