ಪ್ರಧಾನ ಮಂತ್ರಿಯವರ ಕಛೇರಿ
ಪ್ರಧಾನಮಂತ್ರಿ ಅವರನ್ನು ಭೇಟಿ ಮಾಡಿದ ಸನ್ ಮೈಕ್ರೋಸಿಸ್ಟಮ್ ಸಂಸ್ಥಾಪಕ ಶ್ರೀ ವಿನೋದ್ ಖೋಸ್ಲಾ
प्रविष्टि तिथि:
18 FEB 2026 10:50PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಸನ್ ಮೈಕ್ರೋಸಿಸ್ಟಮ್ ಸಂಸ್ಥಾಪಕ ಶ್ರೀ ವಿನೋದ್ ಖೋಸ್ಲಾ ಅವರೊಂದಿಗೆ ಸಂವಾದ ನಡೆಸಿದರು.
ಈ ಸಭೆಯ ಸಂದರ್ಭದಲ್ಲಿ ಪ್ರಧಾನಮಂತ್ರಿ ಮತ್ತು ಶ್ರೀ ಖೋಸ್ಲಾ ಅವರು ಕೃತಕ ಬುದ್ಧಿಮತ್ತೆ ಮತ್ತು ಭಾರತದ ಸಕ್ರಿಯ ನವೋದ್ಯಮ ಪೂರಕ ವ್ಯವಸ್ಥೆಗೆ ಸಂಬಂಧಿಸಿದ ವಿವಿಧ ಅಂಶಗಳ ಬಗ್ಗೆ ಚರ್ಚೆ ನಡೆಸಿದರು.
ಶ್ರೀ ನರೇಂದ್ರ ಮೋದಿ ಅವರು ತಮ್ಮ ಸಾಮಾಜಿಕ ಜಾಲತಾಣ ಎಕ್ಸ್ ಪೋಸ್ಟ್ ನಲ್ಲಿ ಹೀಗೆ ಹೇಳಿದ್ದಾರೆ:
“ವಿನೋದ್ ಖೋಸ್ಲಾ ಅವರೊಂದಿಗೆ ಇಂದು ನಡೆಸಿದ ಸಂವಾದ್ ಅದ್ಭುತವಾಗಿತ್ತು. ನಾವು ಎಐ ಮತ್ತು ಭಾರತದ ಕ್ರಿಯಾಶೀಲ ನವೋದ್ಯಮ ಪೂರಕ ವ್ಯವಸ್ಥೆಗೆ ಸಂಬಂಧಿಸಿದ ಅಂಶಗಳ ಬಗ್ಗೆ ಚರ್ಚಿಸಿದ್ದೇವೆ. @vkhosla”
******
(रिलीज़ आईडी: 2230209)
आगंतुक पटल : 68
इस विज्ञप्ति को इन भाषाओं में पढ़ें:
English
,
Urdu
,
हिन्दी
,
Assamese
,
Manipuri
,
Bengali
,
Punjabi
,
Gujarati
,
Odia
,
Tamil
,
Telugu
,
Malayalam