ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
ಭಾರತ ಎಐ ಪ್ರಭಾವ ಶೃಂಗಸಭೆ 2026ರಲ್ಲಿ ಭಾಷಿಣಿ ರಾಷ್ಟ್ರೀಯ ಮೂಲಸೌಕರ್ಯದಲ್ಲಿ ವಾಯ್ಸೆರಾವನ್ನು ಪ್ರಾರಂಭಿಸಲಾಯಿತು
ಪ್ರಕಟಣಾ ದಿನಾಂಕ:
18 FEB 2026 6:02PM by PIB Bengaluru
ಡಿಜಿಟಲ್ ಇಂಡಿಯಾ ಕಾರ್ಪೊರೇಷನ್ (ಡಿಐಸಿ) ಸಂಸ್ಥೆಯು, ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಡಿಯಲ್ಲಿ ಡಿಜಿಟಲ್ ಇಂಡಿಯಾ ಭಾಷಿಣಿ ವಿಭಾಗ (ಡಿಐಬಿಡಿ), ಭಾರತ ಎಐ ಪ್ರಭಾವ ಶೃಂಗಸಭೆ 2026ರಲ್ಲಿ ಓಪನ್ ಸೋರ್ಸ್, ಎಂಡ್ ಟು ಎಂಡ್ ವಾಯ್ಸ್ ಎಐ ಸ್ಟ್ಯಾಕ್ ಆಗಿರುವ ವಾಯ್ಸ್ ಇರಾ (VoiceERA) ವನ್ನು ಪ್ರಾರಂಭಿಸುವುದರೊಂದಿಗೆ ಭಾರತದ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ (ಡಿಪಿಐ) ದಲ್ಲಿ ಒಂದು ಪ್ರಮುಖ ಮೈಲಿಗಲ್ಲನು ಸೃಷ್ಟಿಸಿದೆ. ಡಿಜಿಟಲ್ ಇಂಡಿಯಾ ಭಾಷಿಣಿ ವಿಭಾಗದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀ ಅಮಿತಾಭ್ ನಾಗ್, ಎಕ್-ಸ್ಟೆಪ್ (EkStep) ಫೌಂಡೇಶನ್ ಜೊತೆಗೆ ಸಿಒಎಸ್ ಎಸ್,ಐಐಐಟಿ ಬೆಂಗಳೂರು ಮತ್ತು ಎಐ4ಬಿಭಾರತ್ ಸಹಯೋಗದೊಂದಿಗೆ ಇದರ ಚಾಲನೆಯನ್ನು ಮುನ್ನಡೆಸಿದರು.
ಭಾಷಿಣಿ ರಾಷ್ಟ್ರೀಯ ಭಾಷಾ ಮೂಲಸೌಕರ್ಯದಲ್ಲಿ ನಿಯೋಜಿಸಲಾದ ವಾಯ್ಸ್ ಇರಾ (VoiceRA), ಬಹುಭಾಷಾ ಧ್ವನಿ ಮತ್ತು ಭಾಷಾ ಎಐ ಗಾಗಿ ರಾಷ್ಟ್ರೀಯ ಕಾರ್ಯನಿರ್ವಾಹಕ ಪದರವನ್ನು ಸ್ಥಾಪಿಸುತ್ತದೆ. ಮುಕ್ತ, ಪ್ಲಗ್ ಮಾಡಬಹುದಾದ, ಪರಸ್ಪರ ಕಾರ್ಯನಿರ್ವಹಿಸಬಹುದಾದ, ಕ್ಲೌಡ್ ಮೂಲಕನಿಯೋಜಿಸಬಹುದಾದ ಮತ್ತು ಆವರಣದಲ್ಲಿ ಸಿದ್ಧವಾಗುವಂತೆ ವಿನ್ಯಾಸಗೊಳಿಸಲಾದ ಈ ವೇದಿಕೆಯು, ಸರ್ಕಾರ, ಸಂಶೋಧನಾ ಸಂಸ್ಥೆಗಳು ಮತ್ತು ನಾವೀನ್ಯತೆ ಪರಿಸರ ವ್ಯವಸ್ಥೆಗಳಲ್ಲಿ ಧ್ವನಿ ವ್ಯವಸ್ಥೆಗಳ ಸುರಕ್ಷಿತ ಮತ್ತು ಭವಿಷ್ಯಕ್ಕೂ ಉಪಯೋಗಿಸಬಹುದಾದ ನಿಯೋಜನೆಯನ್ನು ಸಕ್ರಿಯಗೊಳಿಸುತ್ತದೆ. ಧ್ವನಿ ಸ್ಟ್ಯಾಕ್ ಅನ್ನು ಮಾಡ್ಯುಲರೈಸ್ ಮಾಡುವ ಮೂಲಕ, ಇದು ಪ್ರಯತ್ನದ ನಕಲು ಮಾಡುವಿಕೆಯನ್ನು ಕಡಿಮೆ ಮಾಡುತ್ತದೆ ಮತ್ತು ಒಂದೇ ಸರಬರಾಜುದಾರರ ಮೇಲಿನ ಅವಲಂಬನೆಯನ್ನು ನಿವಾರಿಸುತ್ತದೆ.
ವಾಯ್ಸ್ ಆರ್ ಎ (VoiceRA) ನ ಸಂಯೋಜನೆಯು ಭಾರತದ ರಾಷ್ಟ್ರೀಯ ಭಾಷಾ ಮೂಲಸೌಕರ್ಯವಾಗಿ ಭಾಷಿಣಿಯ (BHASHINI) ಕಾರ್ಯಕ್ಕೆ ಬಲವನ್ನು ನೀಡುತ್ತದೆ, ಅನುವಾದ ಮತ್ತು ಭಾಷಾ ತಂತ್ರಜ್ಞಾನಗಳಿಂದ ನೈಜ ಸಮಯದ ಭಾಷಣ ವ್ಯವಸ್ಥೆಗಳು, ಸಂವಾದಾತ್ಮಕ ಎಐ ಮತ್ತು ಜನಸಂಖ್ಯಾ ಪ್ರಮಾಣದಲ್ಲಿ ಬಹುಭಾಷಾ ದೂರವಾಣಿಗೆ ಅದರ ಸಾಮರ್ಥ್ಯಗಳನ್ನು ವಿಸ್ತರಿಸುತ್ತದೆ. ಕೃಷಿ ಸಲಹಾ, ಶಿಕ್ಷಣ ಬೆಂಬಲ, ಜೀವನೋಪಾಯ ಸೇವೆಗಳು, ಕುಂದುಕೊರತೆ ಪರಿಹಾರ, ನಾಗರಿಕ ಪ್ರತಿಕ್ರಿಯೆ ಮತ್ತು ಯೋಜನೆ ಅನ್ವೇಷಣೆ ಸೇರಿದಂತೆ ಕ್ಷೇತ್ರಗಳಲ್ಲಿ ಇಲಾಖೆಗಳು ಧ್ವನಿ ಸಕ್ರಿಯಗೊಳಿಸಿದ ನಾಗರಿಕ ಸೇವೆಗಳನ್ನು ತ್ವರಿತವಾಗಿ ಅಳವಡಿಸಿಕೊಳ್ಳಬಹುದು .
"ರಾಷ್ಟ್ರೀಯ ಭಾಷಾ ಮೂಲಸೌಕರ್ಯವಾಗಿ ಭಾಷಿಣಿಮತ್ತು ಮುಕ್ತ ಕಾರ್ಯನಿರ್ವಾಹಕ ಸ್ಟ್ಯಾಕ್ ಆಗಿರುವ ವಾಯ್ಸೆರಾ (VoicERA) ದೊಂದಿಗೆ, ಭಾರತವು ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯದ ಹೊಸ ಹಂತವನ್ನು ಪ್ರವೇಶಿಸುತ್ತಿದೆ, ಅಲ್ಲಿ ಧ್ವನಿಯು ಭಾರತಕ್ಕೆ ಅತ್ಯಂತ ನೈಸರ್ಗಿಕ ಸಂಪರ್ಕ ಸಾಧನವಾಗುತ್ತದೆ. ಈ ಚೌಕಟ್ಟು ಸುರಕ್ಷಿತ, ಭವಿಷ್ಯದಲ್ಲೂ ಉಪಯೋಗಿಸಬಹುದಾದ ಬಹುಭಾಷಾ ವ್ಯವಸ್ಥೆಗಳನ್ನು ಸಕ್ರಿಯಗೊಳಿಸುತ್ತದೆ ಮತ್ತು ಹಂಚಿಕೆಯ ರಾಷ್ಟ್ರೀಯ ಅಡಿಪಾಯದ ಮೇಲೆ ನಿರ್ಮಿಸಲು ನಾವೀನ್ಯಕಾರರಿಗೆ ಅಧಿಕಾರ ನೀಡುತ್ತದೆ. ಇದು ಘನತೆ, ಸುಲಭ ಲಭ್ಯತೆ ಮತ್ತು ಪ್ರತಿಯೊಬ್ಬ ನಾಗರಿಕನು ಸರ್ಕಾರದೊಂದಿಗೆ ಮಾತನಾಡಬಹುದು ಮತ್ತು ಅರ್ಥಮಾಡಿಕೊಳ್ಳಬಹುದು ಎಂದು ಖಚಿತಪಡಿಸಿಕೊಳ್ಳುವುದರ ಬಗ್ಗೆ ಆಗಿದೆ. ಇದು ಹೊಸ ಧ್ವನಿ ಯುಗದ ಆರಂಭವನ್ನು ಸೂಚಿಸುತ್ತದೆ ಮತ್ತು ಈ ಯುಗದಲ್ಲಿ, ಭಾರತವು ತನ್ನ ಅಭಿಪ್ರಾಯವನ್ನು ಹೊಂದಿದೆ."
ಉಪಕ್ರಮದೊಂದಿಗೆ ಸಂಬಂಧಿಸಿದ ವಾಯ್ಸ್ ಎಐ ತಂತ್ರಜ್ಞ ಮತ್ತು ಸಲಹೆಗಾರ ಶ್ರೀ ಸಂತೋಷ್ ಕೆವ್ಲಾನಿ ಅವರು, "ವಾಯ್ಸೆರಾವನ್ನು ಧ್ವನಿಗಾಗಿ ಡಿಜಿಟಲ್ ಸಾರ್ವಜನಿಕ ಒಳಿತಿಗಾಗಿ ವಿನ್ಯಾಸಗೊಳಿಸಲಾಗಿದೆ, ಇದು ಸಂಪೂರ್ಣ ತಂತ್ರಜ್ಞಾನ ಸ್ಟ್ಯಾಕ್ಗಳನ್ನು ಪುನರ್ನಿರ್ಮಿಸದೆ ಪರಸ್ಪರ ಕಾರ್ಯನಿರ್ವಹಿಸಬಹುದಾದ, ಕಾರ್ಯಗತಗೊಳಿಸಲು ಸಿದ್ಧ ನಿಯೋಜನೆಯನ್ನು ಸಕ್ರಿಯಗೊಳಿಸುತ್ತದೆ" ಎಂದು ಹೇಳಿದರು.
"ಕಳೆದ ಮೂರು ವರ್ಷಗಳಲ್ಲಿ, ಭಾಷಿಣಿ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯವಾಗಿ ಭಾಷೆಯ ಶಕ್ತಿಯನ್ನು ಪ್ರದರ್ಶಿಸಿದೆ. ವಾಯ್ಸೆರಾದೊಂದಿಗೆ, ಆ ದೃಷ್ಟಿಕೋನವು ಈಗ ಧ್ವನಿಗೆ ವಿಸ್ತರಿಸುತ್ತದೆ, ರಾಷ್ಟ್ರೀಯ ಮಟ್ಟದಲ್ಲಿ ನಾಗರಿಕರಿಗೆ ಸಮಾನ ಎಟುಕುವಿಕೆಯನ್ನು ಬಲಪಡಿಸುತ್ತದೆ" ಎಂದು ಎಕ್ಸ್ಟೆಪ್ ಫೌಂಡೇಶನ್ನ ಸಹ ಸಂಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀ ಶಂಕರ್ ಮರವಾಡ ಹೇಳಿದರು.
ಐಐಟಿ ಮದ್ರಾಸ್ ನ ಶ್ರೀ ಮಿತೇಶ್ ಕಪ್ರಾ, "ವಾಯ್ಸೆರಾದೊಂದಿಗೆ ಸಂಯೋಜಿಸಲ್ಪಟ್ಟ ಭಾಷಿಣಿಯ ನಿರಂತರ ವಿಸ್ತರಣೆಯು ಸ್ವತಂತ್ರ ಭಾಷೆ ಮತ್ತು ಧ್ವನಿ ಸಾಮರ್ಥ್ಯಗಳನ್ನು ವೇಗಗೊಳಿಸುತ್ತದೆ ಮತ್ತು ಅಂತರ್ಗತ ಎಐ ನಾವೀನ್ಯತೆಯನ್ನು ಮತ್ತಷ್ಟು ಪರಿಣಾಮಕಾರಿಯನ್ನಾಗಿಸುತ್ತದೆ" ಎಂದು ಹೇಳಿದರು.
ವಾಯ್ಸೆರಾ ಭಾರತದ ಜನರ ಪ್ರಮಾಣದ ಭಾಷೆ ಮತ್ತು ಧ್ವನಿ ಮೂಲಸೌಕರ್ಯವಾಗಿ ಭಾಷಿಣಿಯ ಸ್ಥಾನವನ್ನು ಮತ್ತಷ್ಟು ಬಲಪಡಿಸುತ್ತದೆ, ಇದು ವಲಯಗಳು ಮತ್ತು ಭೌಗೋಳಿಕ ಪ್ರದೇಶಗಳಲ್ಲಿ ಮುಂದಿನ ಪೀಳಿಗೆಯ ಸಾರ್ವಜನಿಕ ಸೇವಾ ವಿತರಣೆಗೆ ಶಕ್ತಿ ನೀಡುವ ಸುರಕ್ಷಿತ, ಅಂತರ್ಗತ ಮತ್ತು ಪರಸ್ಪರ ಕಾರ್ಯನಿರ್ವಹಿಸಬಹುದಾದ ಕೃತಕ ಬುದ್ಧಿಮತ್ತೆ ವ್ಯವಸ್ಥೆಗಳನ್ನು ಸಕ್ರಿಯಗೊಳಿಸುತ್ತದೆ.
ಭಾಷಿಣಿ ಪೆವಿಲಿಯನ್ನಲ್ಲಿ ಮತ್ತು ಭಾರತ್ ಮಂಟಪದ ಮೊದಲ ಮಹಡಿಯಲ್ಲಿರುವ ಹಾಲ್ ಸಂಖ್ಯೆ 3 ರಲ್ಲಿರುವ ಭಾಶಿನಿ ಪೆವಿಲಿಯನ್ನಲ್ಲಿ ನೇರ ಪ್ರದರ್ಶನಕ್ಕಾಗಿ ವೊಯ್ಸೆರಾ ಲಭ್ಯವಿದೆ.
ಭಾರತ್ ಮಂಟಪದ ಮೊದಲ ಮಹಡಿಯ ಹಾಲ್ ಸಂಖ್ಯೆ 3 ರ ಭಾಷಿಣಿ ಪೆವಿಲಿಯನ್ ಮತ್ತು ಎಕ್ಸ್ಟೆಪ್ ಪೆವಿಲಿಯನ್ ನಲ್ಲಿ ಪ್ರಾತ್ಯಕ್ಷಿಕೆ ಪ್ರದರ್ಶನಗಳಿಗೆ ವಾಯ್ಸೆರಾ (VoiceERA) ಲಭ್ಯವಿದೆ.
******
(ಪ್ರಕಟಣೆ ಐ.ಡಿ.: 2230148)
ವಿಸಿಟರ್ ಕೌಂಟರ್ : 3