ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav AI Impact Summit 2026

ಪ್ರಧಾನಮಂತ್ರಿ ಅವರನ್ನು ಭೇಟಿ ಮಾಡಿದ ಕ್ರೊಯೇಷಿಯಾದ ಪ್ರಧಾನಮಂತ್ರಿ

ಪ್ರಕಟಣಾ ದಿನಾಂಕ: 18 FEB 2026 5:41PM by PIB Bengaluru

ಕ್ರೊಯೇಷಿಯಾದ ಪ್ರಧಾನಮಂತ್ರಿಯವರಾದ ಗೌರವಾನ್ವಿತ ಶ್ರೀ ಆಂಡ್ರೆಜ್ ಪ್ಲೆಂಕೋವಿಕ್ ಅವರು ಇಂದು ನವದೆಹಲಿಯಲ್ಲಿ ಪ್ರಧಾನಿ ಶ್ರೀ ನರೇಂದ್ರ ಮೋದಿಯವರನ್ನು ಭೇಟಿಯಾದರು.

ತಂತ್ರಜ್ಞಾನ, ನಾವೀನ್ಯತೆ, ಹಡಗು ನಿರ್ಮಾಣ, ನೀಲಿ ಆರ್ಥಿಕತೆ ಮತ್ತು IMEEC ಕಾರಿಡಾರ್ ಮೂಲಕ ಸಂಪರ್ಕವನ್ನು ಹೆಚ್ಚಿಸುವಂತಹ ಕ್ಷೇತ್ರಗಳಲ್ಲಿ ತಮ್ಮ ದ್ವಿಪಕ್ಷೀಯ ಪಾಲುದಾರಿಕೆಯ ಮೂಲಕ ಹೇಗೆ ವೇಗವನ್ನು ಹೆಚ್ಚಿಸಬಹುದು ಎಂಬುದರ ಕುರಿತಾಗಿ ಇಬ್ಬರೂ ನಾಯಕರು ಚರ್ಚಿಸಿದರು.

Xನ ಪ್ರತ್ಯೇಕ ಪೋಸ್ಟ್‌ ಗಳಲ್ಲಿ ಶ್ರೀ ಮೋದಿಯವರು ಹೀಗೆ ಹೇಳಿದ್ದಾರೆ:

"ಕ್ರೊಯೇಷಿಯಾ ಗಣರಾಜ್ಯದ ಪ್ರಧಾನಮಂತ್ರಿ ಶ್ರೀ ಆಂಡ್ರೆಜ್ ಪ್ಲೆಂಕೋವಿಕ್ ಅವರೊಂದಿಗೆ ಫಲಪ್ರದ ಸಂಭಾಷಣೆಯನ್ನು ನಡೆಸಲಾಯಿತು. ತಂತ್ರಜ್ಞಾನ, ನಾವೀನ್ಯತೆ, ಹಡಗು ನಿರ್ಮಾಣ ಮತ್ತು ನೀಲಿ ಆರ್ಥಿಕತೆಯ ಅಭಿವೃದ್ಧಿ ಕ್ಷೇತ್ರಗಳಲ್ಲಿ ಸಹಕಾರವನ್ನು ಹೆಚ್ಚಿಸುವುದರ ಜೊತೆಗೆ IMEEC ಕಾರಿಡಾರ್ ಮೂಲಕ ಸಂಪರ್ಕವನ್ನು ಸುಧಾರಿಸುವ ಬಗ್ಗೆ ನಿರ್ದಿಷ್ಟವಾಗಿ ಒತ್ತು ನೀಡುವ ಮೂಲಕ ನಮ್ಮ ದ್ವಿಪಕ್ಷೀಯ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸುವ ಅವಕಾಶಗಳ ಕುರಿತು ನಾವು ಚರ್ಚಿಸಿದ್ದೇವೆ. ಭಾರತ ಮತ್ತು ಯುರೋಪಿನ ನಾಗರಿಕರಿಗೆ ಮತ್ತಷ್ಟು ಅಭಿವೃದ್ಧಿಯನ್ನು ಸಕ್ರಿಯಗೊಳಿಸುವ ಭಾರತ-EU ಮುಕ್ತ ವ್ಯಾಪಾರ ಒಪ್ಪಂದ (ಭಾರತ-EU FTA) ದ ತೀರ್ಮಾನಕ್ಕೆ ಅವರ ವೈಯಕ್ತಿಕ ಬೆಂಬಲಕ್ಕಾಗಿ ನಾನು ವಿಶೇಷವಾಗಿ ನನ್ನ ಕೃತಜ್ಞತೆಯನ್ನು ವ್ಯಕ್ತಪಡಿಸಿದೆ.

@AndrejPlenkovic”

“Održao sam produktivan razgovor s predsjednikom Vlade Republike Hrvatske, g. Andrejem Plenkovićem. Razmotrili smo mogućnosti dodatnog osnaživanja našeg bilateralnog partnerstva, s posebnim naglaskom na produbljivanje suradnje u područjima tehnologije, inovacija, brodogradnje te razvoja plavog gospodarstva, kao i na unapređenje povezanosti kroz koridor IMEEC. Posebno sam izrazio zahvalnost na njegovoj osobnoj potpori sklapanju Sporazuma o slobodnoj trgovini između Indije i Europske unije (India–EU FTA), koji će omogućiti daljnji razvoj za građane Indije i Europe.

@AndrejPlenkovic”

 

*****

 


(ಪ್ರಕಟಣೆ ಐ.ಡಿ.: 2230070) ವಿಸಿಟರ್ ಕೌಂಟರ್ : 4
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Marathi , Bengali , Assamese , Punjabi , Gujarati , Odia , Tamil , Telugu , Malayalam