ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಅಸ್ಸಾಂನ ದಿಬ್ರುಗಢದಲ್ಲಿ ಈಶಾನ್ಯ ಭಾರತದ ಮೊದಲ ತುರ್ತು ಲ್ಯಾಂಡಿಂಗ್ ಸೌಲಭ್ಯ (ELF) ಉದ್ಘಾಟಿಸಿದ ಪ್ರಧಾನಮಂತ್ರಿ  

ಪ್ರಕಟಣಾ ದಿನಾಂಕ: 14 FEB 2026 7:29PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಸ್ಸಾಂನ ದಿಬ್ರುಗಢದಲ್ಲಿ ಈಶಾನ್ಯ ಭಾರತದ ಮೊಟ್ಟಮೊದಲ ತುರ್ತು ಲ್ಯಾಂಡಿಂಗ್ ಸೌಲಭ್ಯ (Emergency Landing Facility - ELF) ವನ್ನು ಉದ್ಘಾಟಿಸಿದರು. ಈಶಾನ್ಯ ಭಾರತ ಪ್ರದೇಶಕ್ಕೆ ತುರ್ತು ಲ್ಯಾಂಡಿಂಗ್ ಸೌಲಭ್ಯ ದೊರೆತಿರುವುದು ಅಪಾರ ಹೆಮ್ಮೆಯ ವಿಷಯವಾಗಿದ್ದು, ತಂತ್ರಾತ್ಮಕ ದೃಷ್ಟಿಯಿಂದ ಹಾಗೂ ಪ್ರಕೃತಿ ವಿಕೋಪಗಳ ಸಂದರ್ಭಗಳಲ್ಲಿ ಈ ಸೌಲಭ್ಯ ಅತ್ಯಂತ ಮಹತ್ವದ್ದಾಗಿದೆ ಎಂದು ಪ್ರಧಾನ ಮಂತ್ರಿ ಶ್ರೀ ಮೋದಿ ತಿಳಿಸಿದ್ದಾರೆ.

ಪ್ರಧಾನಮಂತ್ರಿಯವರು ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿ ಹೀಗೆ ಬರೆದುಕೊಂಡಿದ್ದಾರೆ:

“ಈಶಾನ್ಯ ಭಾರತಕ್ಕೆ ತುರ್ತು ಲ್ಯಾಂಡಿಂಗ್ ಸೌಲಭ್ಯ ದೊರೆತಿರುವುದು ಅಪಾರ ಹೆಮ್ಮೆಯ ವಿಷಯ. ತಂತ್ರಾತ್ಮಕ ದೃಷ್ಟಿಯಿಂದ ಹಾಗೂ ಪ್ರಕೃತಿ ವಿಕೋಪಗಳ ಸಮಯದಲ್ಲಿ ಈ ಸೌಲಭ್ಯ ಬಹಳ ಮಹತ್ವದ್ದಾಗಿದೆ.”

"উত্তৰ-পূৰ্বাঞ্চলে ইমাৰ্জেঞ্চি লেণ্ডিং ফেচিলিটি লাভ কৰাটো অপৰিসীম গৌৰৱৰ বিষয়।  কৌশলগত দৃষ্টিকোণৰ পৰা আৰু প্ৰাকৃতিক দুৰ্যোগৰ সময়ত এই সুবিধাৰ গুৰুত্ব অতিশয় বেছি।"

 

*****


(ಪ್ರಕಟಣೆ ಐ.ಡಿ.: 2228383) ವಿಸಿಟರ್ ಕೌಂಟರ್ : 8