ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ನವದೆಹಲಿಯಲ್ಲಿ ಸೇವಾ ತೀರ್ಥ ಮತ್ತು ಕರ್ತವ್ಯ ಭವನ-1 ಮತ್ತು 2ರ ಉದ್ಘಾಟನಾ ಕಾರ್ಯಕ್ರಮದ ತುಣುಕುಗಳನ್ನು ಹಂಚಿಕೊಂಡ ಪ್ರಧಾನಮಂತ್ರಿ

ಪ್ರಕಟಣಾ ದಿನಾಂಕ: 14 FEB 2026 7:46AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನವದೆಹಲಿಯಲ್ಲಿ ಸೇವಾ ತೀರ್ಥ ಮತ್ತು ಕರ್ತವ್ಯ ಭವನ-1 ಮತ್ತು 2ರ ಉದ್ಘಾಟನಾ ಸಮಾರಂಭವನ್ನುದ್ದೇಶಿಸಿ ಭಾಷಣ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿ ಅವರು, ಇಂದು ಎಲ್ಲರೂ ಹೊಸ ಇತಿಹಾಸ ನಿರ್ಮಾಣಕ್ಕೆ ಸಾಕ್ಷಿಯಾಗುತ್ತಿದ್ದಾರೆ ಎಂದು ಹೇಳಿದರು. ಸೇವಾ ತೀರ್ಥ ಮತ್ತು ಹೊಸ ಕಟ್ಟಡಗಳ ಸಂದರ್ಭದಲ್ಲಿ ಪ್ರಧಾನಮಂತ್ರಿಗಳ ಕಾರ್ಯಾಲಯ ತಂಡ, ಸಂಪುಟ ಸಚಿವಾಲಯ ಮತ್ತು ವಿವಿಧ ಇಲಾಖೆಗಳ ನೌಕರರು ಸೇರಿದಂತೆ ಎಲ್ಲರಿಗೂ ಅವರು ಅಭಿನಂದನೆಗಳನ್ನು ಸಲ್ಲಿಸಿದರು. ಅವುಗಳ ನಿರ್ಮಾಣಕ್ಕೆ ಸಂಬಂಧಿಸಿದ ಎಲ್ಲಾ ಎಂಜಿನಿಯರ್ ಗಳು ಮತ್ತು ಕಾರ್ಮಿಕ ಸಹೋದ್ಯೋಗಿಗಳಿಗೆ ಅವರು ಕೃತಜ್ಞತೆ ಸಲ್ಲಿಸಿದರು.

ಈ ಸಂಬಂಧ ಎಕ್ಸ್ ಖಾತೆಯಲ್ಲಿ ಸರಣಿ ಪೋಸ್ಟ್ ಗಳಲ್ಲಿ ಶ್ರೀ ನರೇಂದ್ರ ಮೋದಿ ಅವರು ಹೀಗೆ ಹೇಳಿದ್ದಾರೆ:

"ಭಾರತದ ಜನರಿಗೆ ಸೇವೆ ಸಲ್ಲಿಸುವ ಅಚಲ ಸಂಕಲ್ಪದೊಂದಿಗೆ ಮತ್ತು ನಾಗರಿಕ ದೇವೋ ಭವದ ಪವಿತ್ರ ಚೈತನ್ಯದಿಂದ ಮಾರ್ಗದರ್ಶಿಸಲ್ಪಟ್ಟ ಸೇವಾ ತೀರ್ಥವನ್ನು ವಿನಮ್ರತೆಯಿಂದ ರಾಷ್ಟ್ರಕ್ಕೆ ಸಮರ್ಪಿಸಲಾಗಿದೆ.

ಸೇವಾ ತೀರ್ಥವು ಯಾವಾಗಲೂ ಕರ್ತವ್ಯ, ಸಹಾನುಭೂತಿ, ಭಾರತ ಮೊದಲು ತತ್ವದ ಬದ್ಧತೆಯ ಪ್ರಕಾಶಮಾನವಾದ ಸಂಕೇತವಾಗಿ ನಿಲ್ಲಲಿ. ಎಲ್ಲರ ಕಲ್ಯಾಣಕ್ಕಾಗಿ ನಿಸ್ವಾರ್ಥ ಸೇವೆ ಮತ್ತು ದಣಿವರಿಯದ ಸಮರ್ಪಣೆಯ ಹಾದಿಯಲ್ಲಿ ನಡೆಯಲು ತಲೆಮಾರುಗಳಿಗೆ ಸ್ಫೂರ್ತಿ ನೀಡಲಿ." ಎಂದು ಹೇಳಿದ್ದಾರೆ.

"ಇಂದು ಮುಂಜಾನೆ ಸೇವಾ ತೀರ್ಥದಲ್ಲಿ, ಬಡವರು, ದೀನದಲಿತರು, ನಮ್ಮ ಕಷ್ಟಪಟ್ಟು ದುಡಿಯುವ ರೈತರು, ಯುವ ಶಕ್ತಿ ಮತ್ತು ನಾರಿ ಶಕ್ತಿಯ ಸಬಲೀಕರಣಕ್ಕೆ ಸಂಬಂಧಿಸಿದ ಕಡತಗಳಿಗೆ ಸಹಿ ಹಾಕಲಾಗಿದೆ. ಪ್ರಮುಖ ನಿರ್ಧಾರಗಳು ಈ ಕೆಳಗಿನಂತಿವೆ:

ಪಿ.ಎಂ. ರಾಹತ್ ಯೋಜನೆ ಆರಂಭಕ್ಕೆ ಅನುಮೋದನೆ, ಅಪಘಾತದ ಸಂತ್ರಸ್ತರಿಗೆ 1.5 ಲಕ್ಷ ರೂಪಾಯಿಗಳವರೆಗೆ ನಗದು ರಹಿತ ಚಿಕಿತ್ಸೆ ಲಭ್ಯವಾಗಲಿದೆ. ಇದು ಸಂತ್ರಸ್ತರಿಗೆ ತಕ್ಷಣದ ವೈದ್ಯಕೀಯ ಸಹಾಯವನ್ನು ಒದಗಿಸುವುದನ್ನು ಖಚಿತಪಡಿಸುತ್ತದೆ.

ಲಕ್ಷಾಧಿಪತಿ ದೀದಿ ಯೋಜನೆಯ ಗುರಿಯನ್ನು 6 ಕೋಟಿಗೆ ದ್ವಿಗುಣಗೊಳಿಸುವುದು. ಇದು ಮಹಿಳಾ ಸಬಲೀಕರಣ ಮತ್ತು ಸ್ವಾವಲಂಬನೆಯನ್ನು ಹೆಚ್ಚಿಸುತ್ತದೆ.
ಕೃಷಿ ಮೂಲಸೌಕರ್ಯ ನಿಧಿಯ ಗುರಿಯನ್ನು 1 ಲಕ್ಷ ಕೋಟಿ ರೂ.ಗಳಿಂದ 2 ಲಕ್ಷ ಕೋಟಿ ರೂ.ಗೆ ದ್ವಿಗುಣಗೊಳಿಸಲಾಗಿದೆ. ಇದು ನಮ್ಮ ರೈತರಿಗೆ ಅಪಾರ ಸಹಾಯಕವಾಗಲಿದೆ ಮತ್ತು ಅವರ ಆದಾಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

10,000 ಕೋಟಿ ರೂ.ಗಳ ಮೂಲಧನದೊಂದಿಗೆ ಸ್ಟಾರ್ಟ್ಅಪ್ ಇಂಡಿಯಾ ಫಂಡ್ ಆಫ್ ಫಂಡ್ಸ್ 2.0 ಗೆ ಅನುಮೋದನೆ. ಇದು ಆರಂಭಿಕ ಹಂತಗಳಲ್ಲಿ ಸ್ಟಾರ್ಟ್ಅಪ್ ಗಳು ಮತ್ತು ಡೀಪ್-ಟೆಕ್ ಸಂಶೋಧನೆಯನ್ನು ಉತ್ತೇಜಿಸುತ್ತದೆ.

"ದೇಶವಾಸಿಗಳಿಗೆ ಸೇವೆ ಸಲ್ಲಿಸುವ ಅಚಲ ಸಂಕಲ್ಪ ಮತ್ತು ' ನಾಗರಿಕ ದೇವೋ ಭವ ' ದ ಧಾರ್ಮಿಕ ಮನೋಭಾವದೊಂದಿಗೆ ಇಂದು 'ಸೇವಾ ತೀರ್ಥ'ವನ್ನು ರಾಷ್ಟ್ರಕ್ಕೆ ಸಮರ್ಪಿಸಲು ಆಶೀರ್ವದಿಸಲ್ಪಟ್ಟಿದ್ದೇನೆ.
'ಸೇವಾ ತೀರ್ಥ' ಕರ್ತವ್ಯ, ಸಹಾನುಭೂತಿ ಮತ್ತು 'ರಾಷ್ಟ್ರ ಮೊದಲು' ಎಂಬ ನಮ್ಮ ಬದ್ಧತೆಯ ಪ್ರಬಲ ಸಂಕೇತವಾಗಿದೆ.

 

"देशवासियों की सेवा के अटूट संकल्प और 'नागरिक देवो भव' की पावन भावना को साथ लेकर, आज ‘सेवा तीर्थ’ को राष्ट्र को समर्पित करने का सौभाग्य मिला।

‘सेवा तीर्थ’ कर्तव्य, करुणा और ‘राष्ट्र प्रथम’ के लिए हमारी प्रतिबद्धता का सशक्त प्रतीक है।

मेरी कामना है कि यह आने वाली पीढ़ियों को निःस्वार्थ सेवा और जन-जन के कल्याण के लिए समर्पित होकर आगे बढ़ने को प्रेरित करता रहे।"

 

"दिल्ली में आज 'सेवा तीर्थ' और कर्तव्य भवन के लोकार्पण के अवसर पर सेवा तीर्थ स्मारक डाक टिकट और सिक्का जारी कर गौरवान्वित हूं।"

 

"आज मैंने जिस अमृत भावना के साथ 'सेवा तीर्थ' और कर्तव्य भवन को राष्ट्र को समर्पित किया है, वो 140 करोड़ देशवासियों की आकांक्षाओं और अपेक्षाओं को पूरा करने का सशक्त आधार बनेंगे।"

 

"बीते 11 वर्षों से हम गुलामी की मानसिकता को बदलने के अभियान में जुटे हैं। हमारा मंत्र है- स्वतंत्र भारत की स्वतंत्र पहचान, गुलामी से मुक्त निशान!"

 

 

"'सेवा तीर्थ' के नाम में ही एक बड़ा संदेश है- देशवासियों की सेवा के संकल्प को सिद्धि तक ले जाने का एक पावन स्थल!"

 

 

"कर्तव्य इस जीवंत राष्ट्र की प्राण वायु है। यह कोटि-कोटि देशवासियों के सपनों को साकार करने के हमारे संकल्प को नई ऊर्जा दे रहा है।"

 

 

"‘नागरिकदेवो भव’ हमारी कार्य-संस्कृति है। 'सेवा तीर्थ' में लिया गया हर निर्णय 140 करोड़ देशवासियों के जीवन को और बेहतर बनाएगा।"

 

 

******

 

 


(ಪ್ರಕಟಣೆ ಐ.ಡಿ.: 2228288) ವಿಸಿಟರ್ ಕೌಂಟರ್ : 4
ಪ್ರಕಟಣೆಯನ್ನು ಇದರಲ್ಲಿ ಓದಿ: Malayalam , English , Urdu , Marathi , हिन्दी , Assamese , Manipuri , Bengali , Punjabi , Gujarati , Tamil , Telugu